ಗಾಸಿಪ್‌ ನಿಜವಾಯ್ತು; ಸದ್ದಿಲ್ಲದೆ ಮದುವೆಯಾದ Amruthavarshini Serial ನಟಿ ರಜಿನಿ

Published : Nov 10, 2025, 11:27 AM ISTUpdated : Nov 10, 2025, 11:49 AM IST
amruthadhaare serial rajini

ಸಾರಾಂಶ

Amruthavarshini Serial Actress Rajini Marriage: 'ಅಮೃತವರ್ಷಿಣಿ', ‘ನೀ ಇರಲು ಜೊತೆಯಲಿ’ ಧಾರಾವಾಹಿ ನಟಿ ರಜಿನಿ ಅವರು ಸದ್ದಿಲ್ಲದೆ ಮದುವೆಯಾಗಿದ್ದಾರೆ. ಅರುಣ್‌ ಗೌಡ ಹಾಗೂ ರಜಿನಿ ಅವರು ಮದುವೆಯಾಗಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

'ಅಮೃತವರ್ಷಿಣಿ' ಧಾರಾವಾಹಿ ಖ್ಯಾತಿಯ ನಟಿ ರಜಿನಿ ಅವರೀಗ ‘ನೀ ಇರಲು ಜೊತೆಯಲಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಈಗ ಅವರು ಸದ್ದಿಲ್ಲದೆ ಮದುವೆಯಾಗಿದ್ದಾರೆ.

ಇಂದು ರಜಿನಿ ಅವರು ಅರುಣ್‌ ಗೌಡ ಎನ್ನುವವರ ಜೊತೆ ( ನವೆಂಬರ್‌ 10 ) ಮದುವೆಯಾಗಿದ್ದಾರೆ. ಇಂದು ಬೆಳಗ್ಗೆ 9.30-10.30 ಒಳಗಿನ ಮುಹೂರ್ತದಲ್ಲಿ ಮದುವೆ ನಡೆದಿದೆ. ಈ ಮದುವೆಯು ಬೆಂಗಳೂರಿನಲ್ಲಿ ನಡೆದಿದೆ ಎನ್ನಲಾಗಿದೆ. ಆಪ್ತರ ಸಮ್ಮುಖದಲ್ಲಿ ಮದುವೆ ನಡೆದಿದೆ.

ಎರಡು ವರ್ಷಗಳಿಂದ ಅಧಿಕ ಸಮಯದಿಂದ ರಜಿನಿ, ಹಾಗೂ ಅರುಣ್‌ ಗೌಡ ಅವರು ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋಗಳನ್ನು ಅಪ್‌ಲೋಡ್‌ ಮಾಡುತ್ತಿದ್ದರು. ಆಗಲೇ ಇವರಿಬ್ಬರು ಲವ್‌ನಲ್ಲಿದ್ದಾರೆ ಎಂಬ ಡೌಟ್‌ ಇತ್ತು. ಈ ಬಗ್ಗೆ ಪ್ರಶ್ನೆ ಮಾಡಿದಾಗ ರಜಿನಿ ಅವರು “ನಾವು ಸ್ನೇಹಿತರು” ಎಂದು ಹೇಳಿದ್ದಾರೆ.

ಪ್ರವಾಸ ಇರಲೀ, ದೇವಸ್ಥಾನಕ್ಕೆ ಹೋಗಲಿ ರಜಿನಿ ಅವರ ಜೊತೆಗೆ ಅರುಣ್‌ ಗೌಡ ಇರುತ್ತಿದ್ದರು. ಆಗಲೇ ಈ ಜೋಡಿ ಬಗ್ಗೆ ಅನುಮಾನ ಮೂಡಿತ್ತು. ಈಗ ಕುಟುಂಬಸ್ಥರ ಒಪ್ಪಿಗೆ ಪಡೆದು ಈ ಜೋಡಿ ಸಪ್ತಪದಿ ತುಳಿದಿದೆ. ಅಂದಹಾಗೆ ಅರುಣ್‌ ಗೌಡ ಅವರು ಜಿಮ್‌ ಟ್ರೇನರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ಖ್ಯಾತ ಸೀರಿಯಲ್

ಅಮೃತವರ್ಷಿಣಿ ಧಾರಾವಾಹಿ ಪ್ರಸಾರ ಆಗಿ ಹನ್ನೆರಡು ವರ್ಷಗಳಾಯ್ತು. ಈ ಸೀರಿಯಲ್‌ನಲ್ಲಿ ಅಮೃತಾ ಆಗಿ ನಟಿಸಿದ್ದ ರಜಿನಿ ಈಗ ‘ನೀ ಇರಲು ಜೊತೆಯಲಿ’ ಧಾರಾವಾಹಿಯಲ್ಲಿ ವಿಲನ್‌ ಆಗಿ ನಟಿಸುತ್ತಿದ್ದಾರೆ. 'ನೀ ಇರಲು ಜೊತೆಯಲಿ' ಧಾರಾವಾಹಿಯಲ್ಲಿ ಹೀರೋ ಅತ್ತಿಗೆ ವಿಲನ್‌ ಊರ್ಮಿಳಾ ದಿವಾನ್‌ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ.

ಅಂದಹಾಗೆ 'ಹಿಟ್ಲರ್‌ ಕಲ್ಯಾಣ' ಧಾರಾವಾಹಿಯಲ್ಲಿ ಕೆಲ ದಿನಗಳ ಕಾಲ ಅತಿಥಿ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದರು.

ಬಾಡಿ ಬಿಲ್ಡರ್‌ ಅರುಣ್‌ ವೆಂಕಟೇಶ್‌, ರಜಿನಿ ಅವರು ರೀಲ್ಸ್‌ ಮಾಡುತ್ತ, ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುತ್ತಿದ್ದರು.

ಈ ಹಿಂದೆಯೇ ಇವರಿಬ್ಬರು ಮದುವೆ ಆಗಿದ್ದಾರೆ ಎಂಬ ವದಂತಿ ಕೇಳಿ ಬಂದಿತ್ತು. ಈ ಬಗ್ಗೆ ಮಾತನಾಡಿದ್ದ ರಜಿನಿ ಅವರು “ನನಗೆ ನಿಜವಾಗಿಯೂ ಮದುವೆ ಆಗಿಲ್ಲ, ನಾನು ಮದುವೆ ಆದರೆ ಮಾತ್ರ ಎಲ್ಲರನ್ನು ಕರೆದು ಮದುವೆ ಆಗುವೆ. ನನ್ನ ಜೊತೆ ವಿಡಿಯೋ ಮಾಡುವವ ಅರುಣ್‌ ಗೌಡ ವಿಡಿಯೋ ಪಾರ್ಟ್ನರ್‌, ನನ್ನ ಒಳ್ಳೆಯ ಸ್ನೇಹಿತ ಅಷ್ಟೇ. ಸ್ನೇಹಿತರಾಗಿದ್ದವರು ಮದುವೆ ಆದರೆ ತಪ್ಪಿಲ್ಲ. ಅದೆಲ್ಲ ಅವರವರಿಗೆ ಬಿಟ್ಟಿದ್ದು” ಎಂದು ಹೇಳಿದ್ದಾರೆ.

ಫಿಟ್‌ನೆಸ್‌ ಕಡೆಗೆ ರಜಿನಿ ಚಿತ್ತ!

“ಧಾರಾವಾಹಿಯಲ್ಲಿ ನಟಿಸುವ ಮುಂಚೆ, ನಾನು ದಿನಕ್ಕೆ 2-3 ಗಂಟೆ ವರ್ಕೌಟ್‌ ಮಾಡುತ್ತಿದ್ದೆನು. ಈಗ ಬೆಳಗ್ಗೆ ಶೂಟಿಂಗ್‌ಗೆ ಬರುವ ಮುನ್ನ ಯೋಗ ಮಾಡುವೆ. ನಾನು ಫಿಟ್‌ನೆಸ್‌, ತೂಕ ಮೆಂಟೇನ್‌ ಮಾಡಲು ಟ್ರೈ ಮಾಡುತ್ತಿರುವೆ” ಎಂದು ರಜಿನಿ ಹೇಳಿದ್ದಾರೆ.

“ನಾನು ಜಿಮ್‌ನಲ್ಲಿ ವರ್ಕೌಟ್‌ ಮಾಡ್ತೀನಿ, ಅದಕ್ಕೂ ಕೆಲವರು ನೆಗೆಟಿವ್‌ ಮಾತನಾಡಿದ್ದುಂಟು. ನಮಗೆ ನೆಗೆಟಿವ್ ಕಾಮೆಂಟ್ಸ್‌ ಬಂದಾಗ ನಾನು ಸೋಶಿಯಲ್‌ ಮೀಡಿಯಾದಲ್ಲಿ ಅವರ ಅಕೌಂಟ್‌ನ್ನು ಬ್ಲಾಕ್‌ ಮಾಡ್ತೀನಿ. ನಮಗೆ ವಯಸ್ಸಾಗಿದೆ, ಅಜ್ಜಿ ಆಂಟಿ ಅಂತೆಲ್ಲ ಕಾಮೆಂಟ್‌ ಮಾಡೋದು ತಪ್ಪಾಗುತ್ತದೆ. ‌ನೆಗೆಟಿವ್‌ ಕಾಮೆಂಟ್ಸ್‌ ಮಾಡಿದವರನ್ನು ಬ್ಲಾಕ್‌ ಮಾಡಿ ಸುಮ್ಮನಾಗುತ್ತಾನೆ. ಅದಕ್ಕೆ ತಕ್ಕ ಪ್ರತಿಕ್ರಿಯೆ ಕೊಟ್ಟು ಡ್ರ್ಯಾಗ್‌ ಮಾಡಲು ನನಗೆ ಇಷ್ಟ ಇಲ್ಲ, ಟೈಮ್‌ ಇಲ್ಲ” ಎಂದು ರಜಿನಿ ಹೇಳಿದ್ದಾರೆ.

ಡ್ಯಾನ್ಸ್‌ ರಿಯಾಲಿಟಿ ಶೋ, 'ಮಜಾ ಟಾಕೀಸ್'‌ ಶೋನಲ್ಲಿಯೂ ರಜಿನಿ ಭಾಗವಹಿಸಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!