ತುಳಸಿಯ ಮುಖ ನೋಡುತ್ತಿದ್ದಂತೆಯೇ ಬದಲಾಗಿಬಿಟ್ಟ ಅಭಿ: ಇಂಗು ತಿಂದ ಮಂಗನಂತಾದ ದೀಪಿಕಾ, ಶಾರ್ವರಿ!

Published : Feb 23, 2024, 02:06 PM IST
ತುಳಸಿಯ ಮುಖ ನೋಡುತ್ತಿದ್ದಂತೆಯೇ ಬದಲಾಗಿಬಿಟ್ಟ ಅಭಿ: ಇಂಗು ತಿಂದ ಮಂಗನಂತಾದ ದೀಪಿಕಾ, ಶಾರ್ವರಿ!

ಸಾರಾಂಶ

ತುಳಸಿಯ ಮುಖ ನೋಡುತ್ತಿದ್ದಂತೆಯೇ ಆಕೆಯ ಮೇಲಿದ್ದ ಸಿಟ್ಟು ಅಭಿಗೆ ತಗ್ಗಿ ಹೋಗಿದೆ. ವಂಶವೃಕ್ಷದಲ್ಲಿ ಹೆಸರು ಸೇರಿಸಲು ಓಕೆ ಎಂದಿದ್ದಾನೆ. ಮುಂದೇನು?   

ಮಧ್ಯ ವಯಸ್ಕರ ಮದುವೆ ಕುರಿತ ಧಾರಾವಾಹಿಯಾಗಿರುವ ಶ್ರೀರಸ್ತು ಶುಭಮಸ್ತು ಒಂದು ಕುತೂಹಲ ಹಂತಕ್ಕೆ ಬಂದಿತ್ತು ಎನ್ನುವಾಗಲೇ ಇನ್ನೋರ್ವ ವಿಲನ್​ ಎಂಟ್ರಿಯಾಗಿ ವೀಕ್ಷಕರು ಬೇಸರಪಟ್ಟುಕೊಂಡಿದ್ದರು. ಶಾರ್ವರಿಯೊಬ್ಬಳು ಸಾಲದು ಎಂದು ದೀಪಿಕಾ ಎನ್ನುವ ಇನ್ನೋರ್ವ  ವಿಲನ್​ ತಂದಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಒಬ್ಬಳು ಸಾಲುವುದಿಲ್ಲ ಎಂದು ಹಲವು ಮಹಿಳೆಯರನ್ನು ವಿಲನ್​ ಮಾಡುವ ಎಲ್ಲಾ ಸೀರಿಯಲ್​ಗಳಂತೆಯೇ ಇದು ಕೂಡ ದಾರಿ ತಪ್ಪುತ್ತಿದೆಯೇ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಮಹಿಳೆಯರು ತುಂಬಾ ಒಳ್ಳೆಯವರಾಗಿದ್ದರೆ ಕಷ್ಟ ಎನ್ನುವುದನ್ನೇ ಬಹುತೇಕ ಸೀರಿಯಲ್​ಗಳು ತೋರಿಸುವ ಹೊತ್ತಿನಲ್ಲಿ, ಈ ಸೀರಿಯಲ್​ ಕೂಡ ತುಳಸಿ ಎನ್ನುವ ಒಳ್ಳೆಯ ಹೆಣ್ಣನ್ನು ಟಾರ್ಗೆಟ್​ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. ವರ್ಷಾನುಗಟ್ಟಲೆ ಸೀರಿಯಲ್​ ಅನ್ನು ಎಳೆದು ಕೊನೆಗೆ ಒಳ್ಳೆಯವರೇ ಒಳ್ಳೆಯದಾಗುತ್ತದೆ ಎನ್ನುವ ಸಿದ್ಧ ಮಂತ್ರ ಇಟ್ಟುಕೊಂಡರೂ ಅತಿ ಎನಿಸುವಷ್ಟು ವಿಲನ್​ಗಳನ್ನು ತುರುಕಿ ಸುಂದರ ಧಾರಾವಾಹಿಯನ್ನು ಹಾಳು ಮಾಡಬೇಡಿ ಎನ್ನುತ್ತಿದ್ದಾರೆ. 

ತುಳಸಿಯೆಂಬ ಒಳ್ಳೆಯ ಹೆಣ್ಣುಮಗಳು ಇಷ್ಟೆಲ್ಲಾ ತೊಂದರೆ ಅನುಭವಿಸುವುದು ನೋಡಲು ಸಾಧ್ಯವಿಲ್ಲ. ಆಕೆ ಎಷ್ಟೇ ಒಳ್ಳೆಯದ್ದನ್ನೇ ಮಾಡಿದರೂ ಆಕೆಗೆ ತೊಂದರೆಯೇ ಸಿಗುವುದು ಸರಿಯಲ್ಲ ಎನ್ನುವ ಮಧ್ಯೆಯೇ ತುಸು ಸಮಾಧಾನ ಎನ್ನುವಂಥ ಪ್ರೊಮೋ ಇದೀಗ ರಿಲೀಸ್​ ಆಗಿದೆ. ಶ್ರೀರಸ್ತು ಶುಭಮಸ್ತು ಸೀರಿಯಲ್​ ಒಂದು ಹಂತಕ್ಕೆ ಬಂದು ನಿಂತಿದೆ. ಅದೇನೆಂದರೆ ತುಳಸಿ ಎಂದರೆ ಇಲ್ಲಿಯವರೆಗೆ ಉರಿದು ಬೀಳುತ್ತಿದ್ದ ಅಭಿಗೆ ಅದೇನೋ ತುಳಸಿ ಮೇಲೆ ಸಾಫ್ಟ್​ ಕಾರ್ನರ್​ ಬಂದಿದೆ. ಮನೆಯ ವಂಶವೃಕ್ಷ ಮಾಡುವ ಸಮಯದಲ್ಲಿ ತುಳಸಿಯ ಹೆಸರನ್ನೂ ಆ ಮನೆಯವಳೇ ಎಂದು ತೋರಿಸಲು ಮಾಧವ್​ ಇಚ್ಛೆ ಪಟ್ಟಿದ್ದರೆ, ಆ ಪ್ರಯತ್ನವನ್ನು ತಪ್ಪಿಸಲು ದೀಪಿಕಾ ಮತ್ತು ಶಾರ್ವರಿ ಹೊಂಚು ಹಾಕಿದ್ದರು. ತುಳಸಿಯ ಹೆಸರನ್ನು ಸೇರಿಸಿದರೆ ಅವರ ಮಕ್ಕಳು ಬಂದು ಆಸ್ತಿಯಲ್ಲಿ ಪಾಲು ಕೇಳುತ್ತಾರೆ ಎಂದು ತಲೆ ತುಂಬಿದ್ದರು. ಅವರ ಮಾತಿನಂತೆಯೇ ಅಭಿ ತಾನು ತುಳಸಿಯನ್ನು ಸೇರಿಸಲು ಒಪ್ಪುವುದಿಲ್ಲ ಎಂದು ಹಠ ಹಿಡಿದು ಕುಳಿತಿದ್ದ.

ಐಶ್ವರ್ಯ ರೈ ಬಗ್ಗೆ ರಾಹುಲ್​ ಗಾಂಧಿ ಟೀಕೆ: ಅಮಿತಾಭ್​ ಟ್ವೀಟ್​- ಭಲೇ ಎಂಥ ಉತ್ತರ ಎಂದ ಫ್ಯಾನ್ಸ್​!

ಅದೇ ಸಮಯದಲ್ಲಿ ಮಹೇಶ್​ ಎಂಟ್ರಿ ಕೊಟ್ಟು, ಅಭಿಗೆ ನೀನು ತುಳಸಿ ಅವರ ಮುಖ ಒಮ್ಮೆ ನೋಡು. ಅವರನ್ನು ವಂಶವೃಕ್ಷದಲ್ಲಿ ಸೇರಿಸಬಾರದು ಎಂದು ಏಕೆ ಅನ್ನಿಸಿತು ಎಂದು ಒಂದೇ ಒಂದು ಕಾರಣ ಹೇಳು, ಸಾಕು. ಆಗ ನಿನ್ನ ಮಾತನ್ನು ಎಲ್ಲರೂ ಕೇಳುತ್ತೇವೆ ಎಂದಾಗ ಅಭಿ ಸಿಟ್ಟಿನಿಂದಲೇ ತುಳಸಿಯ ಮುಖ ನೋಡುತ್ತಾನೆ.  ಆಗ ಆತನಿಗೆ ತುಳಸಿ ತನ್ನನ್ನು ಈ ಹಿಂದೆ ಪ್ರಾಣಾಪಾಯದಿಂದ ರಕ್ಷಿಸಿದ್ದು, ಮದುವೆ ಮಾಡಿಸಿದ್ದು ಎಲ್ಲಾ ನೆನಪಾಗುತ್ತದೆ. ಒಂದು ಕ್ಷಣ ವಿಚಲಿತನಾಗಿ ಇವರಿಂದ ನನಗೆ ಏನೂ ಸಮಸ್ಯೆಯಿಲ್ಲ. ಇವರ ಮಕ್ಕಳ ಮೇಲೆ ಕೋಪ ಅಷ್ಟೇ ಎನ್ನುತ್ತಾನೆ. ಆಗ ಎಲ್ಲರಿಗೂ ಖುಷಿಯಾಗುತ್ತದೆ. ಆದರೆ ತಮ್ಮ ಪ್ಲ್ಯಾನ್​ ಠುಸ್​ ಆಗಿದ್ದು ನೋಡಿ ಶಾರ್ವರಿ ಮತ್ತು ದೀಪಿಕಾಗೆ ಶಾಕ್​ ಆಗುತ್ತದೆ. ಇದರಿಂದ ಅಭಿಮಾನಿಗಳಿಗೆ ತುಸು ನೆಮ್ಮದಿ ಸಿಕ್ಕಿದೆ. ತುಳಸಿಯನ್ನು ಹಿಂಸಿಸುವುದು ತಮ್ಮ ಕೈಯಿಂದ ನೋಡಲು ಆಗುತ್ತಿಲ್ಲ, ಆಕೆಗೆ ಸದಾ ಪ್ರೀತಿ, ಜಯವೇ ಸಿಗಬೇಕು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. 

ಅಷ್ಟಕ್ಕೂ ಅಭಿಯ ಮದುವೆಯನ್ನು ದೀಪಿಕಾ ಜೊತೆ ಮಾಡಿಸಲು ತುಳಸಿ ಸಾಕಷ್ಟು ಶ್ರಮ ಪಟ್ಟಿದ್ದಳು. ತುಳಸಿ ಅಮ್ಮಾ ಅಮ್ಮಾ ಎನ್ನುತ್ತಾ  ಎಲ್ಲರ ಕಣ್ಣಲ್ಲಿ ದೀಪಿಕಾ ಹೀರೋ ಆಗಿದ್ದಾಳೆ. ಆದರೆ ನಿಜಕ್ಕೂ ಆಕೆಯ ಬಣ್ಣವೇ ಬೇರೆ. ಇದಾಗಲೇ ಇರುವ ವಿಲನ್​ ಶಾರ್ವರಿಯನ್ನೂ ಮೀರಿಸಿ ಒಂದು ಹೆಜ್ಜೆ ಮುಂದೆ ಪ್ಲ್ಯಾನ್​ ಮಾಡಿದ್ದಾಳೆ ದೀಪಿಕಾ. ಮನೆಯ ನೆಮ್ಮದಿ ಹಾಳು ಮಾಡುವುದೇ ತನ್ನ ಉದ್ದೇಶ ಎಂದುಕೊಂಡು ಶಾರ್ವರಿಯ ಜೊತೆ ಕೈಜೋಡಿಸಿದ್ದಾಳೆ. ಆದರೆ ಮಾಮೂಲು ಸೀರಿಯಲ್​ನಂತೆ ಇವರಿಬ್ಬರ ಕುತಂತ್ರ ಸದ್ಯ ಯಾರಿಗೂ ತಿಳಿದಿಲ್ಲ. 

25 ಲಕ್ಷಕ್ಕೆ ಶಾಸಕನ ಜೊತೆ ರೆಸಾರ್ಟ್​ನಲ್ಲಿ! ರಾಜಕಾರಣಿ ವಿರುದ್ಧ ನಟಿ ತ್ರಿಷಾ ಕೇಸ್​- ನೆಟ್ಟಿಗರಿಗೂ ಎಚ್ಚರಿಕೆ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?