ಸತ್ಯ ಸೀರಿಯಲ್ನಲ್ಲಿ ಪೊಲೀಸ್ ಪಾತ್ರಕ್ಕೆ ಇಷ್ಟು ಕಷ್ಟಪಟ್ಟಿದ್ದಾರಾ ನಟಿ ಗೌತಮಿ ಜಾಧವ್? ತೆರೆಯ ಹಿಂದಿನ ವಿಡಿಯೋ ರಿಲೀಸ್
ತೆರೆಯ ಮೇಲೆ ಒಂದು ದೃಶ್ಯವನ್ನು ತೋರಿಸುವಾಗ ಅದರ ಹಿಂದೆ ನಟ-ನಟಿಯರು ಎಷ್ಟೆಲ್ಲಾ ಸರ್ಕಸ್ ಮಾಡಿರುತ್ತಾರೆ. ಎಷ್ಟೋ ಸಂದರ್ಭದಲ್ಲಿ ಜೀವಕ್ಕೆ ಅಪಾಯ ತಂದುಕೊಂಡಿರುವ ಉದಾಹರಣೆಗಳೂ ಸಾಕಷ್ಟು ಇವೆ. ಅದರಲ್ಲಿಯೂ ಆ್ಯಕ್ಷನ್ ದೃಶ್ಯಗಳನ್ನು ಮಾಡುವಾಗ ನಟ-ನಟಿಯರಿಗೆ ಗಂಭೀರ ಸ್ವರೂಪದ ಗಾಯಗಳಾಗುವ ಸುದ್ದಿಗಳೂ ಆಗ್ಗಾಗ್ಗೆ ಬರುತ್ತಲೇ ಇರುತ್ತವೆ. ಆದರೆ ಒಂದು ಚಿತ್ರ ಯಶಸ್ಸು ಆಗಬೇಕಾದರೆ ನಟರು ಇವೆಲ್ಲಾ ಮಾಡುವುದು ಅನಿವಾರ್ಯವೇ. ಇಷ್ಟು ಮಾಡಿದ ಮೇಲೂ ಚಿತ್ರ ಯಶಸ್ವಿ ಆಗಿಯೇ ಆಗುತ್ತದೆ ಎಂದೂ ಹೇಳುವುದು ಕಷ್ಟ. ಇದು ಸಿನಿಮಾದ ಮಾತಾದರೆ, ಇಂದು ಸೀರಿಯಲ್ಗಳೂ ಯಾವ ಸಿನಿಮಾಕ್ಕೂ ಕಮ್ಮಿ ಏನಿಲ್ಲ. ಸಿನಿಮಾಗಳ ಮಾದರಿಯಲ್ಲಿಯೇ ದೃಶ್ಯಗಳ ಶೂಟಿಂಗ್ ನಡೆಯುತ್ತದೆ.
ಅಂಥದ್ದೇ ಒಂದು ಶೂಟಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಸತ್ಯ ಸೀರಿಯಲ್ನ ಶೂಟಿಂಗ್ ದೃಶ್ಯವಾಗಿದೆ. ಸತ್ಯ ಪೊಲೀಸ್ ಅಧಿಕಾರಿಯಾಗಲು ಹೊರಟಿದ್ದು, ನಿಜಕ್ಕೂ ಅವರು ಹೇಗೆ ಟ್ರೇನಿಂಗ್ ಪಡೆದಿದ್ದಾರೆ, ಇದರ ಚಿತ್ರೀಕರಣವನ್ನು ಯಾವ ರೀತಿಯಲ್ಲಿ ಮಾಡಲಾಗಿದೆ ಎಂಬ ಬಗ್ಗೆ ಈ ವಿಡಿಯೋದಲ್ಲಿ ಶೇರ್ ಮಾಡಲಾಗಿದೆ. ಇದನ್ನು ನೋಡಿದರೆ ನಿಜಕ್ಕೂ ಮೈ ಜುಂ ಎನ್ನುವುದು ಗ್ಯಾರೆಂಟಿ. ಎಲ್ಲಾ ಅಡೆತಡೆಗಳನ್ನು ಎದುರಿಸಿ ಸತ್ಯ ಪೊಲೀಸ್ ಅಧಿಕಾರಿಯಾಗುತ್ತಿದ್ದಾಳೆ. ಈಕೆ ಪೊಲೀಸ್ ಪರೀಕ್ಷೆ ಬರೆದು ಪಾಸಾದರೂ ಅತ್ತ ಸೀತಮ್ಮನಿಗೆ ಯಾಕೋ ಪೊಲೀಸ್ ಕೆಲಸಕ್ಕೆ ಸೊಸೆಯನ್ನು ಸೇರಿಸುವ ಮನಸ್ಸು ಇಲ್ಲ. ಆದರೂ ಎಲ್ಲರನ್ನೂ ಒಪ್ಪಿಸಿ ಸತ್ಯ ಇದನ್ನು ಚಾಲೆಂಜ್ ಆಗಿ ತೆಗೆದುಕೊಂಡಿದ್ದಾಳೆ. ತನ್ನ ತಂದೆಗೆ ಕೊಟ್ಟ ಮಾತನ್ನು ಉಳಿಸಿಕೊಂಡು ಪೊಲೀಸ್ ಅಧಿಕಾರಿಯಾಗುವ ಪಣ ತೊಟ್ಟಿದ್ದಾಳೆ.
ಪ್ರತಿ ನಿಮಿಷದ ದೃಶ್ಯಕ್ಕೆ ನಾಲ್ಕೂವರೆ ಕೋಟಿ ರೂ. ಪಡೆದ ಬಾಲಿವುಡ್ ಸ್ಟಾರ್ ಯಾರು ಗೊತ್ತಾ?
ಇದರ ಶೂಟಿಂಗ್ ಹೇಗೆ ನಡೆದಿದೆ ಎಂಬ ಬಗ್ಗೆ ವಿಡಿಯೋ ಶೇರ್ ಮಾಡಲಾಗಿದೆ. ಇದು ಸೀರಿಯಲ್ ಆದರೂ ನಿಜವಾದ ಪೊಲೀಸ್ ಟ್ರೇನಿಂಗ್ ರೀತಿಯಲ್ಲಿ ಸತ್ಯಳಿಗೆ ತರಬೇತಿ ನೀಡಲಾಗಿದೆ. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಶೇರ್ ಮಾಡಿದ್ದು, ಫ್ಯಾನ್ಸ್ ಅಚ್ಚರಿಗೊಂಡಿದ್ದಾರೆ. ಒಂದು ಸೀರಿಯಲ್ಗೂ ಇಷ್ಟೆಲ್ಲಾ ಕಷ್ಟಪಡಬೇಕಾ? ತಮ್ಮ ಪಾತ್ರಕ್ಕೆ ಜೀವ ತುಂಬಲು ಇಷ್ಟೊಂದು ಶ್ರಮ ವಹಿಸಬೇಕಾ ಎಂದು ಕೇಳುತ್ತಿದ್ದಾರೆ.
ಅಂದಹಾಗೆ, ಸತ್ಯ ಸೀರಿಯಲ್ನಲ್ಲಿ ಸತ್ಯಾ ಆಗಿ ನಟಿಸುತ್ತಿರುವ ನಟಿಯ ನಿಜವಾದ ಹೆಸರು ಗೌತಮಿ ಜಾಧವ್. ಗೌತಮಿ ಜಾಧವ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಜೀ ಕನ್ನಡದ ಸತ್ಯ ಧಾರಾವಾಹಿಯ ಟಾಮ್ ಬಾಯ್ ಪಾತ್ರದ ಮೂಲಕ ಗೌತಮಿ ಕರ್ನಾಟಕದ ಮನೆಮಾತಾಗಿದ್ದಾರೆ. ಬೆಂಗಳೂರಿನಲ್ಲಿ 1993 ಆಗಸ್ಟ್ 22 ರಂದು ಜನಿಸಿದ ಗೌತಮಿ ಅವರು, ಕನ್ನಡದ ಖ್ಯಾತ ಸಿನಿಮಾ ಛಾಯಾಗ್ರಾಹಕ ಅಭಿಷೇಕ್ ಕಾಸರಗೋಡ್ ಅವರನ್ನು ವಿವಾಹವಾಗಿದ್ದಾರೆ. ಗೌತಮಿ ನಟಿಸಿದ ಮೊದಲ ಚಿತ್ರ 2018 ರಲ್ಲಿ ತೆರೆಕಂಡ ಕಿನಾರೆ. ನಂತರ ಆದ್ಯ ಚಿತ್ರದಲ್ಲಿ ನಟಿಸಿದ್ದಾರೆ. ಕೆಲ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.
ಸಂಗೀತಾ ಮದ್ವೆಯಾಗೋ ಹುಡ್ಗ ಹೊಸಪೇಟೆಯಲ್ಲೇ ಇದ್ದಾನೆ ಅಂದಾಗ ಹೇಗಿತ್ತು ರಿಯಾಕ್ಷನ್?