ಲಕ್ಷ್ಮೀಬಾರಮ್ಮ ಸೀರಿಯಲ್ ಇನ್ನೇನು ಮುಗಿಯುವ ಹಂತದಲ್ಲಿದೆ. ಈ ಸಂದರ್ಭದಲ್ಲಿ ಸೀರಿಯಲ್ನ ಲಕ್ಷ್ಮಿ ಮತ್ತು ಕೀರ್ತಿ ಜೋಡಿ ವೇದಿಕೆಗೆ ಕಿಚ್ಚು ಹೊತ್ತಿಸಿದೆ. ವಿಡಿಯೋ ನೋಡಿ...
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಲಕ್ಷ್ಮೀ ಬಾರಮ್ಮ ಸೀರಿಯಲ್ (Lakshmi Baramma Serial) ಶೀಘ್ರದಲ್ಲಿ ಮುಕ್ತಾಯ ಕಾಣಲಿದೆ. ಅಂತಿಮ ಹಂತದ ಸಂಚಿಕೆಗಳು ಪ್ರಸಾರವಾಗುತ್ತಿವೆ. ಈಗಾಗಲೇ ತಂಡ ಶೂಟಿಂಗ್ ಸಹ ಮುಗಿಸಿದೆ. ಟಿಆರ್ಪಿಯಲ್ಲಿ ಸದಾ ಮುಂದಿದ್ದ ಸೀರಿಯಲ್ ಮುಗಿಯುತ್ತಿರುವುದಕ್ಕೆ ಒಂದೆಡೆ ಅಭಿಮಾನಿಗಳು ತುಂಬಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ಸೀರಿಯಲ್ಗಳು ಎಳೆಯುತ್ತಿದ್ದರೆ, ಬೈದುಕೊಳ್ಳುವ ಸೀರಿಯಲ್ ಪ್ರೇಮಿಗಳೇ, ಅದು ಮುಕ್ತಾಯ ಹಂತಕ್ಕೆ ಬಂದಾಗ ನೋವುಣ್ಣುವುದು ಸಾಮಾನ್ಯವಾಗಿರುತ್ತದೆ. ಬಹುತೇಕ ಇದು ಎಲ್ಲಾ ಸೀರಿಯಲ್ಗಳಿಗೂ ಅನ್ವಯಿಸುತ್ತದೆ. ಐದಾರು ವರ್ಷಗಳವರೆಗೆ ತಾವೂ ಆ ಸೀರಿಯಲ್ ಭಾಗವಾಗಿ, ಅಲ್ಲಿರುವ ಪಾತ್ರಗಳನ್ನೆಲ್ಲಾ ತಮ್ಮ ಮೇಲೆ ಆಹ್ವಾನಿಸಿಕೊಂಡು ಆಸ್ವಾದಿಸುವ ಮನಸುಗಳಿಗೆ ತುಸು ನೋವಾಗುವುದು ಸಹಜವೇ.
ಇದೀಗ ಸೀರಿಯಲ್ ಶೂಟಿಂಗ್ ಮುಗಿಯುತ್ತಿದ್ದಂತೆಯೇ ಲಕ್ಷ್ಮಿಮತ್ತು ಕೀರ್ತಿ ಜೋಡಿ ಅದ್ಭುತ ನೃತ್ಯದಿಂದ ವೇದಿಕೆಗೆ ಕಿಚ್ಚು ಹೊತ್ತಿಸಿದ್ದಾರೆ. ಭಗವತಿ ಹೇ ಶಿತಿ ಹಾಡಿಗೆ ಇಬ್ಬರೂ ಒಬ್ಬರಿಗೊಬ್ಬರು ಮೀರಿಸುವ ರೀತಿಯಲ್ಲಿ ಅತ್ಯದ್ಭುತವಾಗಿ ನರ್ತಿಸಿದ್ದಾರೆ. ಕಮೆಂಟ್ಗಳ ತುಂಬೆಲ್ಲಾ ಹಾರ್ಟ್ ಎಮೋಜಿಗಳೇ ತುಂಬಿಕೊಂಡಿದ್ದರೆ, ಲಕ್ಷ್ಮೀ ಬಾರಮ್ಮ ಸೀರಿಯಲ್ ಮುಗಿಯುತ್ತಿರುವುದಕ್ಕೆ ಅಭಿಮಾನಿಗಳು ಕಮೆಂಟ್ ಮೂಲಕ ಬೇಸರವನ್ನೂ ಹೊರ ಹಾಕುತ್ತಿದ್ದಾರೆ. ಕೀರ್ತಿ ಪಾತ್ರಧಾರಿಯ ಹೆಸರು ತನ್ವಿ ರಾವ್ ಹಾಗೂ ಲಕ್ಷ್ಮೀ ಪಾತ್ರಧಾರಿಯ ಹೆಸರು ಭೂಮಿಕಾ ರಮೇಶ್. ಇನ್ನು ತನ್ವಿ ರಾವ್ ಬಗ್ಗೆ ಹೇಳಬೇಕಾದರೆ ಈಕೆ ಸಕಲಕಲಾ ವಲ್ಲಭೆ. ಲಕ್ಷ್ಮೀ ಬಾರಮ್ಮ (Lakshmi Baramma) ಮೊದಲ ಸೀರಿಯಲ್ ಅಲ್ಲ, ಅವರು ಈಗಾಗಲೇ ಆಕೃತಿ, ರಾಧೆ ಶ್ಯಾಮ ಮತ್ತು ತಮಿಳು ಸೀರಿಯಲ್ ಜಮೀಲದಲ್ಲಿ ನಟಿಸಿದ್ದಾರೆ. ಅಲ್ಲದೇ ಸಿನಿಮಾಗಳಾದ ಕನ್ನಡದ ರಂಗ್ ಬಿರಂಗಿ, ಹಿಂದಿಯ ಗುಲಾಬ್ ಗ್ಯಾಂಗ್, ಗನ್ಸ್ ಆಫ್ ಬನಾರಸ್, ಗುಲ್ ಮೊಹರ್ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. 2014 ರಲ್ಲಿ ಬಿಡುಗಡೆಯಾದ ಸೌಮಿಕ್ ಸೇನ್ ನಿರ್ದೇಶನದ ಭಾರತದಲ್ಲಿನ ಮಹಿಳೆಯರ ಹೋರಾಟದ ಕಥೆಯಾದ ಗುಲಾಬ್ ಗ್ಯಾಂಗ್ (Gulaab Gang) ನಲ್ಲಿ ಜನಪ್ರಿಯ ತಾರೆಯರಾದ ಮಾಧುರಿ ದೀಕ್ಷಿತ್ ಮತ್ತು ಜೂಹಿ ಚಾವ್ಲಾ ಜೊತೆ ತೆರೆ ಹಂಚಿಕೊಂಡಿದ್ದರು ತನ್ವಿ ರಾವ್.
ಲಕ್ಷ್ಮೀ ಬಾರಮ್ಮ ಶೂಟಿಂಗ್ ಸೆಟ್ನಲ್ಲೇ ಕಣ್ಣಿನಿಂದ ರಕ್ತ ಸುರೀತು: ಶಾಕಿಂಗ್ ವಿಷ್ಯ ರಿವೀಲ್ ಮಾಡಿದ ನಟಿ ಭೂಮಿಕಾ
ಇವರು ಹುಟ್ಟು ಕಲಾವಿದೆ. ತಮ್ಮ 4ನೇ ವಯಸ್ಸಿನಲ್ಲಿಯೇ ಮಂಗಳೂರಿನ ಗುರು ಶ್ರೀಮತಿ ಗೀತಾ ಸರಳಾಯ ಮತ್ತು ಶ್ರೀಮತಿ ರಶ್ಮಿ ಚಿದಾನಂದ್ ಅವರ ಬಳಿ ಭರತನಾಟ್ಯ ಕಲಿಯಲು ಪ್ರಾರಂಭಿಸಿದರು. ಕೇವಲ 6ನೇ ವಯಸ್ಸಿನಲ್ಲಿ, ದೆಹಲಿ ದೂರದರ್ಶನ ಆಯೋಜಿಸಿದ್ದ , ಪಂಡಿತ್ ಜೈ ಕಿಶನ್ ಮಹಾರಾಜ್ ತೀರ್ಪುಗಾರರಾಗಿದ್ದ ತಧಿನಕ್ ಧಿನ್ ಧಾಟ ದಲ್ಲಿ ಭಾಗಿಯಾಗಿದ್ದರು. 8ನೇ ವಯಸ್ಸಿನಲ್ಲಿ ಪಾರ್ಲೆ ಜಿ 'ದಮ್ ದಮ್ ದಮ್'ನಂತಹ ವಿವಿಧ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದರು. ತಮ್ಮ 9 ವಯಸ್ಸಿನಲ್ಲಿ ಪದ್ಮವಿಭೂಷಣ ಡಾ.ವೀರೇಂದ್ರ ಹೆಗ್ಗಡೆ ಅವರಿಂದ 'ಅಪೂರ್ವ ಬಾಲ ಪ್ರತಿಭಾ' ಪ್ರಶಸ್ತಿಯನ್ನು ಪಡೆದರು. 10ನೇ ವಯಸ್ಸಿನಲ್ಲಿ ಕರ್ನಾಟಕದ ರಾಜ್ಯಪಾಲರು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು (Karnataka State Award) ನೀಡಿದ್ದರು.ಭರತನಾಟ್ಯ ಕಲಾವಿದೆ, ಜೊತೆಗೆ ಥಿಯೇಟರ್ ಆರ್ಟಿಸ್ಟ್ ಆಗಿರುವ ತನ್ವಿ ರಾವ್ ಇದುವರೆಗೆ ಭಾರತದ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಮತ್ತು ಮಲೇಷಿಯಾ, ಸಿಂಗಪುರ, ಸ್ಕಾಟ್ಲೆಂಡ್ ಮತ್ತು ಅಮೆರಿಕದಂಥ ದೇಶಗಳಲ್ಲಿ ನೃತ್ಯ ಮತ್ತು ನಾಟಕ ಪ್ರದರ್ಶನಗಳನ್ನು ನೀಡಿದ್ದಾರೆ. ಇವರ ಅದ್ಭುತ ಅಭಿನಯಕ್ಕೆ ಸ್ವತಃ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಸಹ ಬೆನ್ನು ತಟ್ಟಿದ್ದರು.
ಇನ್ನು ನಟಿ ಭೂಮಿಕಾ ರಮೇಶ್ ಕುರಿತು ಹೇಳುವುದಾದರೆ, ಅವರು ಕನ್ನಡ ಸೀರಿಯಲ್, ತೆಲುಗು ಸೀರಿಯಲ್ ಜೊತೆಗೆ ಕನ್ನಡ ಸಿನಿಮಾದಲ್ಲೂ ಬ್ಯುಸಿ. ಇನ್ನೂ ಇಪ್ಪತ್ತೊಂದು ವರ್ಷ ವಯಸ್ಸಿನ ಈ ಪ್ರತಿಭಾವಂತ ನಟಿ ಭರತನಾಟ್ಯದಲ್ಲೂ ಎಕ್ಸ್‌ಪರ್ಟ್. 'ಲಕ್ಷ್ಮಿ ಬಾರಮ್ಮ' ಸೀರಿಯಲ್‌ನಲ್ಲಿ ನಾಯಕಿ ಲಕ್ಷ್ಮಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದಿರುವ ಈಕೆ ಸದ್ಯ ಕೈತುಂಬ ಅವಕಾಶಗಳನ್ನು ಹಿಡಿದು ನಿಂತಿದ್ದಾರೆ. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಭೂಮಿಕಾ ರಮೇಶ್ ಕಳೆದ ವರ್ಷದ ಅನುಬಂಧ ಅವಾರ್ಡ್ಸ್‌ನಲ್ಲಿ ಜನ ಮೆಚ್ಚಿದ ಹೊಸ ಪರಿಚಯ ಪ್ರಶಸ್ತಿಯನ್ನು ಕೂಡಾ ಪಡೆದುಕೊಂಡಿದ್ದರು. ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲಿಯೂ ನಟಿಸಬೇಕು ಎಂಬುದು ಈಕೆಯ ಬಹುದಿನದ ಕನಸಾಗಿತ್ತು. ಆಕೆಯ ಕನಸು ಕೂಡಾ ಇದೀಗ ನನಸಾಗಿದೆ. ನಾಗರಾಜ್ ಎಂ. ಜಿ ಗೌಡ ನಿರ್ದೇಶನದ 'ಡಿಸೆಂಬರ್ 24' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ಗೂ ಕಾಲಿಟ್ಟಿದ್ದಾರೆ ಭೂಮಿಕಾ ರಮೇಶ್.
ಭಾವಿ ಪತಿಯ ಬಗ್ಗೆ ಲಕ್ಷ್ಮೀ ಬಾರಮ್ಮ ನಟಿಯ ಕನಸು ಕೇಳಿ ಫ್ಯಾನ್ಸ್ ಶಾಕ್! ಈಗಿನ ಕಾಲದವ್ರು ಹೀಗೂ ಯೋಚಿಸ್ತಾರಾ?