Latest Videos

ಮೆಟ್ಟಿಲ ಮೇಲಿನಿಂದ ಸೀರಿಯಲ್​ ತಾರೆಯರು ಉರುಳಿ ಉರುಳಿ ಬೀಳುವ ದೃಶ್ಯ ಶೂಟ್​ ಮಾಡೋದು ಹೀಗೆ ನೋಡಿ...

By Suchethana DFirst Published May 24, 2024, 3:08 PM IST
Highlights

ಸೀರಿಯಲ್​ಗಳ ಶೂಟಿಂಗ್​ ಸಮಯದಲ್ಲಿ ಸ್ಟಂಟ್​ ದೃಶ್ಯಗಳನ್ನು ಹೇಗೆ ಚಿತ್ರೀಕರಿಸಲಾಗುತ್ತದೆ ಎನ್ನುವ ವಿಡಿಯೋ ಒಂದು ವೈರಲ್​ ಆಗಿದೆ. 
 

ತೆರೆಯ ಮೇಲೆ ಒಂದು ದೃಶ್ಯವನ್ನು ತೋರಿಸುವಾಗ ಅದರ ಹಿಂದೆ ನಟ-ನಟಿಯರು ಎಷ್ಟೆಲ್ಲಾ ಸರ್ಕಸ್​ ಮಾಡಿರುತ್ತಾರೆ. ಎಷ್ಟೋ ಸಂದರ್ಭದಲ್ಲಿ ಜೀವಕ್ಕೆ ಅಪಾಯ ತಂದುಕೊಂಡಿರುವ ಉದಾಹರಣೆಗಳೂ ಸಾಕಷ್ಟು ಇವೆ. ಅದರಲ್ಲಿಯೂ ಆ್ಯಕ್ಷನ್​ ದೃಶ್ಯಗಳನ್ನು ಮಾಡುವಾಗ ನಟ-ನಟಿಯರಿಗೆ ಗಂಭೀರ ಸ್ವರೂಪದ ಗಾಯಗಳಾಗುವ ಸುದ್ದಿಗಳೂ ಆಗ್ಗಾಗ್ಗೆ ಬರುತ್ತಲೇ ಇರುತ್ತವೆ. ಆದರೆ ಒಂದು ಚಿತ್ರ ಯಶಸ್ಸು ಆಗಬೇಕಾದರೆ ನಟರು ಇವೆಲ್ಲಾ ಮಾಡುವುದು ಅನಿವಾರ್ಯವೇ. ಇಷ್ಟು ಮಾಡಿದ ಮೇಲೂ ಚಿತ್ರ ಯಶಸ್ವಿ ಆಗಿಯೇ ಆಗುತ್ತದೆ ಎಂದೂ ಹೇಳುವುದು ಕಷ್ಟ. ಇದು ಸಿನಿಮಾದ ಮಾತಾದರೆ, ಇಂದು ಸೀರಿಯಲ್​ಗಳೂ ಯಾವ ಸಿನಿಮಾಕ್ಕೂ ಕಮ್ಮಿ ಏನಿಲ್ಲ. ಸಿನಿಮಾಗಳ ಮಾದರಿಯಲ್ಲಿಯೇ ದೃಶ್ಯಗಳ ಶೂಟಿಂಗ್​ ನಡೆಯುತ್ತದೆ.

ಅಂಥದ್ದೇ ಒಂದು ಶೂಟಿಂಗ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಬಹುತೇಕ ಸೀರಿಯಲ್​ಗಳಲ್ಲಿ ಮೆಟ್ಟಿಲ ಮೇಲಿನಿಂದ ನೂಕುವ ದೃಶ್ಯವಿರುತ್ತದೆ. ಆಗ ನಾಯಕಿಯೋ, ನಾಯಕನೋ ಇಲ್ಲವೇ ಇನ್ನಾರೋ ಪಾತ್ರಧಾರಿಗಳು ಉರುಳಿ ಉರುಳಿ ಅಲ್ಲಿಂದ ಬೀಳುತ್ತಾರೆ. ಕೊನೆಯಲ್ಲಿ ಅವರ ಮುಖ ತೋರಿಸಲಾಗುತ್ತದೆ. ಆದರೆ ಅಸಲಿಗೆ ಉರುಳುವುದು ನಿಜವೇ. ಆದರೆ ಆ ರೀತಿ ಪಾತ್ರಧಾರಿಗಳು ಉರುಳಿರುವುದಿಲ್ಲ. ಡ್ಯೂಪ್​ಗಳನ್ನು ಬಳಸಲಾಗುತ್ತದೆ. ಸಿನಿಮಾಗಳಲ್ಲಿ ಸ್ಟಂಟ್​ ಮಾಡುವ ಸಂದರ್ಭದಲ್ಲಿ ಡ್ಯೂಪ್​ಗಳನ್ನು ಬಳಸುವಂತೆ ಸೀರಿಯಲ್​ಗಳಲ್ಲಿಯೂ ಹಲವು ಸಾಹಸ ದೃಶ್ಯಗಳಲ್ಲಿ ನುರಿತ ಕಲಾವಿದರನ್ನು ಬಳಸಿಕೊಳ್ಳಲಾಗುತ್ತದೆ. ಅಂಥದ್ದೊಂದು ವಿಡಿಯೋ ಈಗ ಸೋಷಿಯಲ್​  ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಆ್ಯಕ್ಸಿಡೆಂಟ್​ ಶೂಟಿಂಗ್​ನಲ್ಲಿ ಸೀರಿಯಲ್​ ನಟರಿಗೂ ಈ ಪರಿ ರಿಸ್ಕಾ? ಮೈ ಜುಂ ಎನ್ನಿಸುವ ವಿಡಿಯೋ ವೈರಲ್

ಕೆಲ ದಿನಗಳ ಹಿಂದೆ  ಕಾಯಲ್​ ಎನ್ನುವ ತಮಿಳು ಸೀರಿಯಲ್​ನ ಶೂಟಿಂಗ್​ ದೃಶ್ಯದಲ್ಲಿ ನಟಿಯೇ ಖುದ್ದಾಗಿ  . ಅಪಘಾತವೊಂದರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು ಅದರ ವಿಡಿಯೋ  ವೈರಲ್​ ಆಗಿತ್ತು.  ಇದನ್ನು ನೋಡಿದರೆ ನಿಜಕ್ಕೂ ಮೈ ಜುಂ ಎನ್ನುವುದು ಗ್ಯಾರೆಂಟಿ. ಇದರಲ್ಲಿ ನಟಿ ಅಪಘಾತಗೊಳ್ಳುವ ದೃಶ್ಯವಿದ್ದು, ಅದನ್ನುಯಾವ ರೀತಿ ಶೂಟ್​ ಮಾಡಲಾಗಿದೆ ಎನ್ನುವುದನ್ನು ನೋಡಬಹುದು. ನಟಿಗೆ ಹಗ್ಗ ಕಟ್ಟಿ ಹೇಗೆ ನೇತು ಹಾಕಲಾಗಿದೆ ಎನ್ನುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ನಂತರ ಆ ಹಗ್ಗವನ್ನು ಕಾಣದಂತೆ ಮಾಡಲಾಗುತ್ತದೆ. ಅಪಘಾತವಾದಾಗ ಡಿಕ್ಕಿಯ ರಭಸಕ್ಕೆ ಗಾಳಿಯಲ್ಲಿ ತೇಲಿಹೋಗಿ ಬೀಳುವ ದೃಶ್ಯವನ್ನು ಹೇಗೆ ಮಾಡಲಾಗುತ್ತದೆ ಎನ್ನುವುದನ್ನು ಇದರಲ್ಲಿ ತೋರಿಸಲಾಗಿದೆ.

ಈ ಅಪಘಾತದ ಶೂಟಿಂಗ್​ ನೋಡಿದರೆ ತೆರೆಯ ಹಿಂದೆ ನಟ-ನಟಿಯರು ಎಷ್ಟೊಂದು ಸರ್ಕಸ್​ ಮಾಡುತ್ತಾರೆ ಎನ್ನುವುದನ್ನು ನೋಡಬಹುದು. ಒಂದು ಸಿನಿಮಾ ಅಥವಾ ಸೀರಿಯಲ್​ ಎಷ್ಟರಮಟ್ಟಿಗೆ ಸಕ್ಸಸ್​ ಆಗುತ್ತದೆಯೆಂದು ಹೇಳುವುದು ಕಷ್ಟ. ಹಾಗೆಂದು ಯಾವುದೇ ನಿರ್ದೇಶಕರು ತಮ್ಮ ಸರ್ವ ಪ್ರಯತ್ನವನ್ನೂ ಮಾಡಲೇಬೇಕು. ಅದಕ್ಕಾಗಿಯೇ ವೀಕ್ಷಕರಿಗೆ ಇಷ್ಟವಾಗುವಂಥ ಹೊಸ ಹೊಸ ರೋಚಕತನವನ್ನು ತೋರಿಸಲಾಗುತ್ತದೆ. ವೀಕ್ಷಕರಿಗೆ ರೋಚಕತೆ ಮುಂದಿಡಲು ಇಂಥ ಕೆಲವು ಕಠಿಣ ದೃಶ್ಯಗಳಿಗೆ ನಟ-ನಟಿಯರು ಒಗ್ಗಿಕೊಳ್ಳಲೇಬೇಕು. ಅವರಿಗೆ ಈ ರೀತಿಯ ಶೂಟಿಂಗ್​ ಮಾಡುವಾಗ ಎಲ್ಲ ರೀತಿಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆಯಾದರೂ ಇಂಥ ಆ್ಯಕ್ಷನ್​ ಶೂಟಿಂಗ್​ ಮಾಡುವುದು ಸುಲಭದ ಮಾತಲ್ಲ ಎನ್ನುವುದೂ ಅಷ್ಟೇ ದಿಟ.

ನೋಡಿ ಫ್ರೆಂಡ್ಸ್​... ರಾತ್ರಿ ನಿದ್ದೆ ಮಾಡಲೂ ಬಿಡಲಿಲ್ಲ... ಸೀತಾರಾಮ ಸಿಹಿಯಿಂದ ಹೀಗೊಂದು ಕಂಪ್ಲೇಂಟ್​...

 

click me!