Latest Videos

ಪುಟ್ಟಕ್ಕನ ಮನೆಯಲ್ಲಿ ಶ್ರಾದ್ಧ ಮಾಡುವ ಹೊತ್ತಲ್ಲೇ ಸಹನಾ ಪ್ರತ್ಯಕ್ಷ! ಆದರೆ ಇವಳು ಅವಳಲ್ಲ?

By Suchethana DFirst Published May 24, 2024, 12:06 PM IST
Highlights

ಪುಟ್ಟಕ್ಕನ ಮನೆಯಲ್ಲಿ ಸಹನಾಳ ಶ್ರಾದ್ಧ ಕಾರ್ಯ ನಡೆಯುತ್ತಿದೆ. ಅದೇ ಹೊತ್ತಿನಲ್ಲಿ ಸಹನಾ ಬಂದು ನಾನು ಬದುಕಿದ್ದೇನೆ ಎಂದಿದ್ದಾಳೆ. ಏನಿದು ಟ್ವಿಸ್ಟ್​? 
 

ಸಹನಾ ಬದುಕಿದ್ದಾಳೆ.  ಆದರೆ ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. ಆಕೆ ಸತ್ತೇ ಹೋಗಿದ್ದಾಳೆ ಎಂದುಕೊಂಡಿದ್ದಾರೆ. ಆದರೆ ಸಹನಾ ದೇವಸ್ಥಾನ ಒಂದರಲ್ಲಿ ಕೆಲಸಕ್ಕಿದ್ದುಕೊಂಡು ಅಲ್ಲಿ ಸೇವೆ ಸಲ್ಲಿಸುತ್ತಿದ್ದಾಳೆ. ಸತ್ತಿದ್ದು ಸಹನಾ ಅಲ್ಲ, ಆದರೆ ಅವಳ ಬ್ಯಾಗ್​ ಕದ್ದುಕೊಂಡು ಹೋಗಿದ್ದ ಕಳ್ಳಿ. ಮನೆ ಬಿಟ್ಟ ಸಹನಾ ಬಸ್​ನಲ್ಲಿ ಹೋಗುವಾಗ ಪಕ್ಕದಲ್ಲಿಯೇ ಇದ್ದಳು ಈ ಕಳ್ಳಿ. ಸಹನಾ ನಿದ್ದೆಗೆ ಜಾರಿದಾಗ ಅವಳ ಎಲ್ಲಾ ಬ್ಯಾಗ್​ ಸೇರಿದಂತೆ ಎಲ್ಲಾ ಸಾಮಾನು ತೆಗೆದುಕೊಂಡು ಓಡಿ ಹೋಗಿದ್ದಾಳೆ. ಓಡಿ ಹೋಗುವ ಸಮಯದಲ್ಲಿ ಅಪಘಾತವಾಗಿ ಅವಳು ಸತ್ತುಹೋಗಿದ್ದಾಳೆ. ಮುಖ ಚಚ್ಚಿದ್ದರಿಂದ ಅವಳ ಗುರುತು ಹಿಡಿಯಲು ಯಾರಿಗೂ ಸಾಧ್ಯವಾಗಲಿಲ್ಲ. ಅವಳ ಬಳಿ ಸಹನಾಗೆ ಸೇರಿದ ಎಲ್ಲಾ ವಸ್ತುಗಳು ಇದ್ದುದರಿಂದ ಪೊಲೀಸರು ಇದು ಸಹನಾ ಇರಬಹುದು ಎಂದಾಗ, ಖುದ್ದು ಪುಟ್ಟಕ್ಕನೇ ಸಹನಾ ಎಂದು ಗುರುತಿಸಿ, ಅಂತ್ಯಕ್ರಿಯೆ ಮಾಡಲಾಗಿದೆ.

ಇದೀಗ ಮನೆಯಲ್ಲಿ ಸಹನಾಳ ಶ್ರಾದ್ಧಕಾರ್ಯ ನಡೆಯುತ್ತಿದೆ. ತನ್ನ ತಪ್ಪಿನ ಅರಿವಾಗಿ ಮುರುಳಿ ಪುಟ್ಟಕ್ಕನ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ. ಆದರೆ ಮಗಳು ಸಹನಾ ಬದುಕಿರಬಹುದು ಎನ್ನುವ ಸುಳಿವು ಪುಟ್ಟಕ್ಕನಿಗೆ ಸಿಗುತ್ತಿದೆ. ಎಷ್ಟೆಂದರೂ ಹೆತ್ತ ಕರುಳಲ್ಲವೆ? ಮಗಳು ಸಹನಾ ಅವ್ವಾ ಎಂದು ಕರೆಯುವಂತೆ ಕೇಳಿಸುತ್ತದೆ. ಒಮ್ಮೆ ಅಡುಗೆ ಮಾಡುವಾಗ ಸಹನಾ ಕೈಸುಟ್ಟುಕೊಂಡು ಅವ್ವಾ ಎಂದಾಗ ಪುಟ್ಟಕ್ಕನ ಕರುಳು ಚುರುಕ್​ ಎಂದಿರುತ್ತದೆ. ಸಹನಾ ಸತ್ತಿಲ್ಲ, ಬದುಕಿದ್ದಾಳೆ ಎನ್ನುತ್ತಿದೆ ಮನಸ್ಸು.

ಸಪ್ತಮಿ ಗೌಡ v/s ಸಪ್ತಮ್ಮಿ ಗೌಡ: ನನ್ನಮ್ಮ ಸೂಪರ್​ಸ್ಟಾರ್​ ವೇದಿಕೆಯಲ್ಲಿ ಇಬ್ಬಿಬ್ರು! ಗ್ರ್ಯಾಂಡ್ ಫಿನಾಲೆ ಟ್ವಿಸ್ಸ್​...

ಈ ಹೊತ್ತಿನಲ್ಲಿಯೇ ಶ್ರಾದ್ಧಕ್ಕೆ ತಯಾರಿ ನಡೆಸಲಾಗಿದೆ. ಅಷ್ಟರಲ್ಲಿಯೇ ಸಹನಾ ಇರುವಲ್ಲಿ ಪುಟ್ಟಕ್ಕ ಬಂದಿದ್ದಾಳೆ. ಸಹನಾ ರಂಗೋಲಿ ಹಾಕುತ್ತಿದ್ದಾಳೆ. ನಿನಗೋಸ್ಕರ ನಿಮ್ಮವ್ವ ಎಷ್ಟು ಅಂತ ಕಣ್ಣೀರು ಹಾಕಬೇಕು, ಬಂದು ಬಿಡು ಅನ್ನುತ್ತಾಳೆ. ಅದಕ್ಕೆ ಸಹನಾ, ನೀನ್ಯಾಕವ್ವಾ ಕಣ್ಣೀರು ಹಾಕ್ತಾ ಇದ್ದಿಯಾ? ಇಲ್ಲೇ ಇರೋ ನನ್ನನ್ನು ನೀನು ಯಾಕೆ ಹುಡುಕುತ್ತಾ ಇದ್ದಿಯಾ ಎಂದು ತಿಳೀತಿಲ್ಲ ಎನ್ನುತ್ತಾಳೆ. ಅದಕ್ಕೆ ಪುಟ್ಟಕ್ಕ ನೀನು ನಮ್ಮನ್ನೆಲ್ಲಾ ಬಿಟ್ಟುಹೋಗಿದ್ಯಾ ಅಂತ ಮನೆಯಲ್ಲಿ ಇವತ್ತು ಶ್ರಾದ್ಧಾ... ಅಷ್ಟೇ ಹೇಳುವಾಗ ಸಹನಾ, ಇಷ್ಟು ದಿನ ನಾನು ಕಾಣಲಿಲ್ಲ ಎಂದು ನನ್ನನ್ನು ಸಾಯಿಸಿಬಿಟ್ರಾ ಅವ್ವಾ ಎನ್ನುತ್ತಾಳೆ.

ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಪ್ರಸಾರ ಆಗಿದೆ. ಸಹನಾ ಪ್ರತ್ಯಕ್ಷಳಾಗಿದ್ದಾಳೆ ಎನ್ನಲಾಗಿದೆ. ಆದರೆ ಇದು ನನಸಲ್ಲ, ಕನಸು ಎನ್ನುವುದು ಸೀರಿಯಲ್​ ವೀಕ್ಷಕರ ಅಭಿಮತ. ಸಹನಾ ಬದುಕಿದ್ದಾಳೆ ಎಂದು ಈ ಅವ್ವನ ಒಳ ಮನಸ್ಸು ಹೇಳುತ್ತಿದೆ. ಅದಕ್ಕಾಗಿ  ಶ್ರಾದ್ಧ ಮಾಡಲು ಮನಸ್ಸು ಒಪ್ಪುತ್ತಿಲ್ಲ. ಸಹನಾನೇ ತಾನು ಬದುಕಿರುವುದಾಗಿ ಹೇಳುತ್ತಿದ್ದಾಳೆ ಎಂದು ಕನಸು ಕಂಡಿದ್ದಾಳೆ ಪುಟ್ಟಕ್ಕ ಎನ್ನುತ್ತಿದ್ದಾರೆ ಕಮೆಂಟಿಗರು. ಹಾಗಿದ್ದರೆ ಶ್ರಾದ್ಧದ ದಿನ ಬಂದವಳು ಇವಳಲ್ಲ, ಅವಳಾ? 

ಅಪರಿಚಿತ ಕೊಟ್ಟ ಪೆನ್​ಡ್ರೈವ್​ ನೋಡಿ ನಟ ರಮೇಶ್​ ಅರವಿಂದ್​ಗೆ ಫುಲ್​ ಶಾಕ್​- ಮುಂದೇನಾಯ್ತು ನೋಡಿ...

click me!