ತಮ್ಮ ಆದ್ರೂ ನನಗೆ ಮಗ ಇದ್ದ ಹಾಗೆ: ಡಿಕೆ ಸುರೇಶ್ ಬಗ್ಗೆ ಮಾತನಾಡಿ ಕಣ್ಣೀರಿಟ್ಟ ಡಿಕೆ ಶಿವಕುಮಾರ್

By Shruthi KrishnaFirst Published Jun 7, 2023, 12:53 PM IST
Highlights

ತಮ್ಮ ಆದ್ರೂ ನನಗೆ ಮಗ ಇದ್ದ ಹಾಗೆ ಎಂದು ಡಿಕೆ ಸುರೇಶ್ ಬಗ್ಗೆ ಮಾತನಾಡುತ್ತಾ ಡಿಕೆ ಶಿವಕುಮಾರ್ ಕಣ್ಣೀರಿಟ್ಟಿದ್ದಾರೆ. 

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರದಲ್ಲಿ ಈ ವಾರದ ಅತಿಥಿಯಾಗಿ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಕೆಂಪು ಕುರ್ಚಿ ಏರಿರುವ ಡಿಕೆ ಶಿವಕುಮಾರ್ ಅವರ ಎಪಿಸೋಡ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ವೀಕೆಂಡ್ ವಿತ್ ರಮೇಶ್‌ ಕುರ್ಚಿ ಮೇಲೆ 99 ಸಾಧಕರು ಕುಳಿತಿದ್ದಾರೆ. ಇದೀಗ ಸಾಧಕರ ಸೀಟಿನಲ್ಲಿ  100ನೇ ಅತಿಥಿಯಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಾಣಿಸಿಕೊಂಡಿದ್ದಾರೆ. 

ಈಗಾಗಲೇ ಜೀ ಕನ್ನಡ ವಾಹಿನಿ ಪ್ರೋಮೋಗಳನ್ನು ಶೇರ್ ಮಾಡುತ್ತಿದೆ. ಸದ್ಯ ಮತ್ತೊಂದು ಪ್ರೋಮೋ ರಿಲೀಸ್ ಆಗಿದ್ದು ಡಿಕೆ ಶಿವಕುಮಾರ್ ತನ್ನ ತಮ್ಮನ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ. ರಾಜಕೀಯದಲ್ಲಿ ಡಿಕೆ ಬ್ರದರ್ಸ್ ಎಂದೆ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಗುರುತಿಸಿಕೊಂಡಿದ್ದಾರೆ. ಇಬ್ಬರೂ ಸಹೋದರು ಎನ್ನುವುದಕ್ಕಿಂತ ಹೆಚ್ಚು ಸ್ನೇಹಿತರಾಗಿದ್ದಾರೆ. ತಮ್ಮನ ಬಗ್ಗೆ ಡಿಕೆ ಶಿವಕುಮಾರ್ ಅವರಿಗೆ ವಿಶೇಷವಾದ ಪ್ರೀತಿ. ಅನೇಕ ಬಾರಿ ಸಾಬೀತಾಗಿದೆ. ಇದೀಗ ವೀಕೆಂಡ್ ಕಾರ್ಯಕ್ರದಲ್ಲೂ ತಮ್ಮನ ಬಗ್ಗೆ ಮಾತನಾಡಿ ಕಣ್ಣೀರಿಟ್ಟಿದ್ದಾರೆ. 

DK Shivakumar: ನನ್ನ ಹೀರೋ ಎಂದು ಅಪ್ಪನನ್ನು ಹೊಗಳಿದ ಪುತ್ರಿ; ಮುಗಿಯಿತು ವೀಕೆಂಡ್ ವಿತ್ ರಮೇಶ್

ತಮ್ಮ ಎನ್ನುವುದಕ್ಕಿಂತ ಮಗ ಎಂದು ಡಿಕೆಶಿ ಹೇಳಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಒಬ್ಬ ಸಹೋದರ ಮತ್ತು ಒಬ್ಬ ಸಹೋದರಿ. ಇವರ ಬಗ್ಗೆ ಮಾತನಾಡಿದ ಡಿಕೆಶಿ, ‘ನಾವು ಮೂರು ಜನರು ಒಟ್ಟಿಗೆ ಇರೋಕೆ ಆಗಲೇ ಇಲ್ಲ. ನನ್ನ ಅಂತರಾಳ ಅನೇಕರಿಗೆ ಗೊತ್ತಿಲ್ಲ. ಅವನು ನನ್ನ ತಮ್ಮ ಆದರೂ ಮಗ ಇದ್ದ ಹಾಗೆ’ ಎಂದು ಹೇಳುತ್ತಾ ಭಾವುಕರಾಗಿದ್ದಾರೆ. ಇನ್ನೂ ಇದೇ ತನ್ನ ಓದಿನ ಬಗ್ಗೆಯೂ ಮಾತನಾಡಿದ್ದಾರೆ. ಪೋಷಕರಿಗೆ ಡಿಕೆ ಶಿವಕುಮಾರ್ ಚೆನ್ನಾಗಿ ಓದಿ ಕೆಲಸ ಹಿಡಿಯಬೇಕು ಎನ್ನುವುದು ಆಸೆ. ಆದರೆ ತಾನು ಓದೇ ಇಲ್ಲ ಎಂದು ಬಹಿರಂಗ ಪಡಿಸಿದ್ದಾರೆ. ಇನ್ನೂ ಡಿಕೆ ಶಿವಕುಮಾರ್ ತಾಯಿ ಮಾತನಾಡಿ, ಎರಡು ವರ್ಷ ಮಕ್ಕಳು ಇರಲಿಲ್ಲ. ಹರಕೆ ಹೊತ್ತುಕೊಂಡ ಬಳಿಕ ನನ್ನ ಮಗ ಹುಟ್ಟಿದ ಎಂದು ತಾಯಿ ಹೇಳಿದರು.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Weekend With Ramesh: ಈ ವಾರ ಸಾಧಕರ ಖುರ್ಚಿಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ವೀಕೆಂಡ್ ಕಾರ್ಯಕ್ರಮದಲ್ಲಿ ರಾಜ್ಯ ಕಂಡ ಪ್ರಚಂಡ ರಾಜಕಾರಣಿ, ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ಅವರ ಬದುಕಿನ ಜರ್ನಿ ನೋಡಲು ಅವರ ಅಭಿಮಾನಿಗಳು ಕಾತರರಾಗಿದ್ದಾರೆ. ಈ ಮೊದಲು ರಿಲೀಸ್ ಆಗಿರುವ ಪ್ರೋಮೋದಲ್ಲಿ ರಾಜಕೀಯ ಹಾಗೂ ಕುಟುಂಬದ ಬಗ್ಗೆ ರಿವೀಲ್ ಮಾಡಲಾಗಿದೆ. ಚಿಕ್ಕ ವಯಸ್ಸಿನಲ್ಲೇ ರಾಜಕೀಯದ ಬಗ್ಗೆ ಒಲವಿತ್ತು ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ. '6-7ನೇ ಕ್ಲಾಸ್‌ನಲ್ಲೇ ಪೊಲಿಟಿಷಿಯನ್ ಆಗಲೇಬೇಕೆಂದು ತೀರ್ಮಾನಿಸಿದ್ದೆ. ನಾನು ಹುಟ್ಟುತ್ತಾ ಕೃಷಿಕ, ನನ್ನ ಪ್ಯಾಷನ್ ಪೊಲಿಟೀಶಿಯನ್ ' ಎಂದು ಡಿಕೆಶಿ ಬಹಿರಂಗ ಪಡಿಸಿದ್ದಾರೆ. ಇನ್ನು ಡಿಕೆಶಿ ಪುತ್ರಿ ಐಶ್ವರ್ಯಾ ಮಾತನಾಡಿ, 'ಹೊರಗೆ ತುಂಬಾ ಟಫ್ ಮ್ಯಾನ್ ಆದರೆ ಮನೆಯಲ್ಲಿ ತುಂಬಾ ಭಾವನಾತ್ಮಕ ವ್ಯಕ್ತಿ, ಇವರೇ ನನ್ನ ಹೀರೋ' ಎಂದು ಹೇಳಿದ್ದಾರೆ. 

click me!