ದೇಸಿ ಟಿಕ್‌ಟಾಕ್ 'ರೊಪೋಸೋ': ಎರಡೇ ದಿನದಲ್ಲಿ 2.2 ಕೋಟಿ ಡೌನ್‌ಲೋಡ್‌!

By Suvarna NewsFirst Published Jul 6, 2020, 12:18 PM IST
Highlights

ಚೀನಾದ 59 ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧ| ಎರಡೇ ದಿನದಲ್ಲಿ 2.2 ಕೋಟಿ ರೊಪೋಸೋ ಡೌನ್‌ಲೋಡ್‌|  ಗುರುಗ್ರಾಮ ಮೂಲದ ರೊಪೋಸೋ ಆ್ಯಪ್‌ ಭಾರಿ ಜನಮೆಚ್ಚುಗೆ

ನವದೆಹಲಿ: ಚೀನಾದ 59 ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ ಬೆನ್ನಲ್ಲೇ ‘ಟಿಕ್‌ಟಾಕ್‌’ ಆ್ಯಪ್‌ಗೆ ಪರ್ಯಾಯ ಎಂದೇ ಕರೆಯಲ್ಪಡುತ್ತಿರುವ ಗುರುಗ್ರಾಮ ಮೂಲದ ರೊಪೋಸೋ ಆ್ಯಪ್‌ ಭಾರಿ ಜನಮೆಚ್ಚುಗೆ ಪಡೆಯುತ್ತಿದೆ. ಕೇವಲ ಎರಡೇ ದಿನದಲ್ಲಿ 2.2 ಕೋಟಿ ಜನರು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ ಎಂದು ಕಂಪನಿ ತಿಳಿಸಿದೆ.

ಟಿಕ್‌ಟಾಕ್‌ ನಿಷೇಧ: ಭಾರತ ಕೊಟ್ಟ ಈ ಒಂದೇ ಏಟಿಗೆ ಚೀನಾ ಕಂಪನಿಗೆ ಕೋಟ್ಯಾನುಗಟ್ಟಲೇ ಲಾಸ್

2014ರಂದು ಆರಂಭವಾದ ರೊಪೋಸೋ ಆ್ಯಪ್‌ 12 ಭಾಷೆಗಳಲ್ಲಿ ಲಭ್ಯವಿದ್ದು, ಪ್ರತಿ ತಿಂಗಳು 8 ಕೋಟಿಗೂ ಅಧಿಕ ವಿಡಿಯೋಗಳನ್ನು ರಚಿಸುತ್ತಿದೆ. ಟಿಕ್‌ಟಾಕ್‌ ನಿಷೇಧದ ಬಳಿಕ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಇದು ಪ್ರಮುಖ ಅಪ್ಲಿಕೇಶನ್‌ ಆಗಿ ಮಾರ್ಪಟ್ಟಿದೆ.

ಬ್ಯಾನ್ ನಂತರ ಟಿಕ್ ಟಾಕ್ ಮೊದಲ ಪ್ರತಿಕ್ರಿಯೆ, ಅಯ್ಯಪ್ಪಾ!

‘ಕಳೆದ ಮೂರು ವಾರಗಳಲ್ಲಿ ಪ್ರತಿ ದಿನ 7 ಲಕ್ಷ ಜನರು ರೊಪೋಸೋ ಆ್ಯಪ್‌ ಅನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುತ್ತಿದ್ದರು. ಆದರೆ ಕಳೆದ ಮೂರು ದಿನಗಳಲ್ಲಿ ಗಂಟೆಗೆ 6 ಲಕ್ಷ ಜನರು ಆ್ಯಪ್‌ ಅನ್ನು ಇನ್‌ಸ್ಟಾಲ್‌ ಮಾಡಿಕೊಂಡಿದ್ದಾರೆ’ ಎಂದು ರೊಪೋಸೋ ಸಹ ಸಂಸ್ಥಾಪಕ ಮತ್ತು ಸಿಇಒ ಮಯಾಂಕ್‌ ಭಂಗಾಡಿಯಾ ತಿಳಿಸಿದ್ದಾರೆ.

click me!