ನಿಮ್ಮ ಫೇಸ್ಬುಕ್ ಲಾಗಿನ್ ವಿವರ ಕದಿಯುವ ಈ ಆ್ಯಪ್ ಡಿಲೀಟ್ ಮಾಡಿ..!

By Suvarna News  |  First Published Jul 5, 2020, 4:09 PM IST

ನಿಮ್ಮ ಮೊಬೈಲ್‌ನಲ್ಲಿರುವ ಆ್ಯಪ್‌ಗಳೇ ನಿಮ್ಮ ಮಾಹಿತಿಯನ್ನು ಕದಿಯುತ್ತವೆ. ಸ್ವಲ್ಪ ಗೊತ್ತಿಲ್ಲದೆ ನೀವು ಈ  ಆ್ಯಪ್‌ಗಳನ್ನು ಬಳಸುತ್ತಿದ್ದೀರೆಂದಾದರೆ ಈಗಲೇ ಎಚ್ಚೆತ್ತುಕೊಳ್ಳಿ. ಈ  ಆ್ಯಪ್‌ಗಳನ್ನು ಡೌನ್ಲೋಡ್ ಮಾಡಿಕೊಳ್ಳುತ್ತಿದ್ದಂತೆಯೆ ನಿಮ್ಮ ಫೇಸ್ಬುಕ್ ಲಾಗಿನ್ ಮಾಹಿತಿಯನ್ನು ಕಬಳಿಸುತ್ತವೆ ಎಂಬ ಆತಂಕಕಾರಿ ವಿಷಯ ಇದೀಗ ಬೆಳಕಿಗೆ ಬಂದಿದೆ. ಹಾಗಾಗಿ ಸೆಕ್ಯುರಿಟಿ ವಿಷಯಕ್ಕೆ ಸಂಬಂಧಿಸಿದ್ದಾದ್ದರಿಂದ ಗೂಗಲ್ ಪ್ಲೇಸ್ಟೋರ್‌ನಿಂದ ಆ 25 ಆ್ಯಪ್‌ಗಳನ್ನು ಡಿಲೀಟ್ ಮಾಡಿದೆ. ಹಾಗಾದರೆ, ಅವು ಯಾವುವು ಎಂಬುದರ ಬಗ್ಗೆ ನೋಡೋಣ…


ಗೂಗಲ್ ಪ್ಲೇ ಸ್ಟೋರ್ ಈಗ ಕಸ ವಿಲೇವಾರಿ ಕೆಲಸವನ್ನು ಶುರುವಿಟ್ಟುಕೊಂಡಿದೆ. ಇತ್ತೀಚೆಗಷ್ಟೇ 36 ಕ್ಯಾಮೆರಾ ಆ್ಯಪ್‌ಗಳನ್ನು ರಕ್ಷಣೆಯ ಕಾರಣದಿಂದ ಡಿಲೀಟ್ ಮಾಡಿದ್ದ ಗೂಗಲ್ ಈಗ ಮತ್ತೆ 25 ಆ್ಯಪ್‌ಗಳಿಗೆ ಕತ್ತರಿ ಪ್ರಯೋಗಿಸಿದೆ. ಈ ಮೂಲಕ ಬಳಕೆದಾರರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತದೆ.

ಸೋಷಿಯಲ್ ಮೀಡಿಯಾ ಜಮಾನ ಇದಾಗಿರುವುದರಿಂದ ಫೇಸ್ಬುಕ್ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಸ್ಮಾರ್ಟ್ ಫೋನ್ ಹೊಂದಿರುವ ಬಹುತೇಕರು ಫೇಸ್ಬುಕ್ ಖಾತೆಯನ್ನು ಹೊಂದಿರುವವರೇ ಆಗಿದ್ದಾರೆ. ಆದರೆ, ಈಗ ಫೇಸ್ಬುಕ್ ಲಾಗಿನ್ ವಿವರಗಳು ನಮಗೆ ಗೊತ್ತಿಲ್ಲದಂತೆ ಕಳ್ಳತನವಾಗುತ್ತಿದೆ ಎಂಬ ವಿಷಯ ಗಮನಕ್ಕೆ ಬಂದಿದೆ.



ಅದೂ ಸಹ ಸದಾ ಇಂಥ ಕೃತ್ಯಗಳ ಮೇಲೆ ಕಣ್ಣಿಟ್ಟಿರುವ ಗೂಗಲ್ ಗಮನಕ್ಕೆ ಬಂದಿದ್ದೇ ತಡ ಆ್ಯಂಡ್ರಾಯ್ಡ್ ಸೇವೆಯಲ್ಲಿ ನಿರತವಾಗಿದ್ದ ಆ 25 ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ಕಿತ್ತು ಬಿಸಾಡಿದೆ. ಮಾಲ್ವೇರ್ ಜೊತೆ ಸಂಪರ್ಕ ಹೊಂದಿದ್ದ ಈ ಆ್ಯಪ್‌ಗಳನ್ನು ನೀವು ಬಳಕೆ ಮಾಡಲು ಶುರು ಮಾಡಿದ ತಕ್ಷಣ ಅವು ತಮ್ಮ ಕೆಲಸಗಳನ್ನು ಪ್ರಾರಂಭಿಸಿಬಿಡುತ್ತವೆ. ನಿಮ್ಮ ಫೇಸ್ಬುಕ್ ವಿವರವನ್ನು ಕದ್ದುಬಿಡುತ್ತದೆ. ಇನ್ನೊಂದು ಆತಂಕಕಾರಿ ವಿಷಯವೆಂದರೆ ಈ 25 ಆ್ಯಪ್‌ಗಳು ಈಗಾಗಲೇ ಒಟ್ಟಾರೆಯಾಗಿ 2 ಮಿಲಿಯನ್ ಅಂದರೆ 20 ಲಕ್ಷ ಡೌನ್‌ಲೋಡ್ ಗಳನ್ನು ಕಂಡಿದೆ.

ಇದನ್ನು ಓದಿ: ಸಣ್ಣ ಉದ್ದಿಮೆಗಳಿಗೆ ಡಿಜಿಟಲ್ ಟಚ್ ಕೊಡಲಿದೆ ಗೂಗಲ್!
 
ಇವು ಹೆಚ್ಚಾಗಿ ಫೈಲ್ ಮ್ಯಾನೇಜರ್, ಫ್ಲಾಶ್ ಲೈಟ್, ವಾಲ್ ಪೇಪರ್ ಮ್ಯಾನೇಜ್ ಮೆಂಟ್, ಸ್ಕ್ರೀನ್ ಶಾಟ್ ಎಡಿಟರ್ ಹಾಗೂ ವೆದರ್‌ಗಳಿಗೆ ಸಂಬಂಧಿಸಿದ ಸೇವೆಗಳನ್ನು ನೀಡುವ ಆ್ಯಪ್‌ಗಳಾಗಿವೆ. ಹೀಗಾಗಿ ಇಂಥ ವಿಷಯಗಳ ಬಗ್ಗೆ ಆಸಕ್ತಿ ಹೆಚ್ಚಿರುವವರು ಸಹಜವಾಗಿ ಇವುಗಳನ್ನು ಡೌನ್‌ಲೋಡ್ ಮಾಡಿಕೊಂಡಿರುತ್ತಾರೆ. ಈ 20 ಲಕ್ಷ ಬಳಕೆದಾರರಲ್ಲಿ ನೀವೂ ಒಬ್ಬರಾಗಿದ್ದೀರಾ ಎಂಬುದನ್ನು ನೋಡಿಕೊಳ್ಳಿ, ಆಗಿದ್ದರೆ ತಕ್ಷಣ ಆ್ಯಪ್‌ಗಳನ್ನು ಡಿಲೀಟ್ ಮಾಡಿಬಿಡಿ. ಗೂಗಲ್ ಈಗಾಗಲೇ ಡಿಲೀಟ್ ಮಾಡಿಯಾಗಿದೆ. ಇಲ್ಲಿವೆ ಆ 25 ಆ್ಯಪ್‌ಗಳ ವಿವರಗಳು. 

1. ಸೂಪರ್ ವಾಲ್ ಪೇಪರ್ ಫ್ಲಾಶ್ ಲೈಟ್ ಆ್ಯಪ್- ಈಗಾಗಲೇ 5 ಲಕ್ಷ ಡೌನ್ಲೋಡ್ ಗಳನ್ನು ಕಂಡಿದೆ. 

2. ಪ್ಯಾಡೆಂಟಫ್- ಈಗಾಗಲೇ 5 ಲಕ್ಷ ಬಳಕೆದಾರರು ಡೌನ್ಲೋಡ್ ಮಾಡಿಕೊಂಡಿದ್ದಾರೆ.

3. ವಾಲ್ ಪೇಪರ್ ಲೆವೆಲ್- 1 ಲಕ್ಷಕ್ಕೂ ಹೆಚ್ಚು ಡೌನ್ಲೋಡ್ ಆಗಿವೆ

 4. ಕಂಟೌರ್ ಲೆವೆಲ್ ವಾಲ್ ಪೇಪರ್- 1 ಲಕ್ಷಕ್ಕೂ ಹೆಚ್ಚು ಮಂದಿ ಡೌನ್ಲೋಡ್ ಮಾಡಿಕೊಂಡಿದ್ದಾರೆ.

5. ಐಪ್ಲೇಯರ್ & ಐವಾಲ್ ಪೇಪರ್- 1 ಲಕ್ಷಕ್ಕೂ ಹೆಚ್ಚು ಬಳಕೆದಾರರು ಡೌನ್ಲೋಡ್ ಮಾಡಿಕೊಂಡಿದ್ದಾರೆ.

6. ವಿಡಿಯೋ ಮೇಕರ್- 1 ಲಕ್ಷಕ್ಕೂ ಹೆಚ್ಚು ಮಂದಿಯಿಂದ ಡೌನ್ಲೋಡ್ ಆಗಿದೆ.

ಇದನ್ನು ಓದಿ: ಆ್ಯಂಡ್ರಾಯ್ಡ್ ಫೋನ್‌ನಲ್ಲಿ 10 ಫನ್ನಿ ಕೀಬೋರ್ಡ್ ಆ್ಯಪ್‌ಗಳು...

7. ಕಲರ್ ವಾಲ್ ಪೇಪರ್- 1 ಲಕ್ಷಕ್ಕೂ ಹೆಚ್ಚು ಮಂದಿ ಡೌನ್ಲೋಡ್ ಮಾಡಿಕೊಂಡಿದ್ದಾರೆ.

8. ಪೆಡೋಮೀಟರ್ - 1 ಲಕ್ಷಕ್ಕೂ ಹೆಚ್ಚು ಬಳಕೆದಾರರು ಡೌನ್ಲೋಡ್ ಮಾಡಿಕೊಂಡಿದ್ದಾರೆ.

9. ಪವರ್ ಫುಲ್ ಫ್ಲಾಶ್ ಲೈಟ್- 1 ಲಕ್ಷಕ್ಕೂ ಹೆಚ್ಚು ಬಳಕೆದಾರರು ಡೌನ್ಲೋಡ್ ಮಾಡಿಕೊಂಡಿದ್ದಾರೆ.

10. ಸೂಪರ್ ಬ್ರೈಟ್ ಫ್ಲಾಶ್ ಲೈಟ್- 1 ಲಕ್ಷಕ್ಕೂ ಹೆಚ್ಚು ಬಳಕೆದಾರರು ಡೌನ್ಲೋಡ್ ಮಾಡಿಕೊಂಡಿದ್ದಾರೆ.

Tap to resize

Latest Videos

11. ಸೂಪರ್ ಫ್ಲಾಶ್ ಲೈಟ್- 1 ಲಕ್ಷಕ್ಕೂ ಹೆಚ್ಚು ಮಂದಿ ಡೌನ್ಲೋಡ್ ಮಾಡಿಕೊಂಡಿದ್ದಾರೆ.

12. ಸಾಲಿಟೈರ್ ಗೇಮ್- 1 ಲಕ್ಷಕ್ಕೂ ಹೆಚ್ಚು ಮಂದಿ ಡೌನ್ಲೋಡ್ ಮಾಡಿಕೊಂಡಿದ್ದಾರೆ.

13. ಅಕ್ಯುರೇಟ್ ಸ್ಕ್ಯಾನಿಂಗ್ ಆಫ್ ಕ್ಯೂಆರ್ ಕೋಡ್- 50 ಸಾವಿರಕ್ಕೂ ಹೆಚ್ಚು ಡೌನ್ಲೋಡ್ ಗಳಾಗಿವೆ.

14. ಕ್ಲಾಸಿಕ್ ಕಾರ್ಡ್ ಗೇಮ್- 50 ಸಾವಿರಕ್ಕೂ ಹೆಚ್ಚು ಡೌನ್ಲೋಡ್ ಗಳಾಗಿವೆ.

15. ಜಂಕ್ ಫೈಲ್ ಕ್ಲೀನಿಂಗ್ - 50 ಸಾವಿರಕ್ಕೂ ಹೆಚ್ಚು ಬಳಕೆದಾರರು ಡೌನ್ಲೋಡ್ ಮಾಡಿಕೊಂಡಿದ್ದಾರೆ.

16. ಸಿಂಥೆಟಿಕ್ ಝಡ್ - 50 ಸಾವಿರಕ್ಕೂ ಹೆಚ್ಚು ಡೌನ್ಲೋಡ್ ಗಳಾಗಿವೆ.

17. ಫೈಲ್ ಮ್ಯಾನೇಜರ್- 50 ಸಾವಿರಕ್ಕೂ ಹೆಚ್ಚು ಬಳಕೆದಾರರು ಡೌನ್ಲೋಡ್ ಮಾಡಿಕೊಂಡಿದ್ದಾರೆ.

18. ಕಂಪೋಸೈಟ್ ಝಡ್- 50 ಸಾವಿರಕ್ಕೂ ಹೆಚ್ಚು ಡೌನ್ಲೋಡ್ ಗಳನ್ನು ಈ ಆ್ಯಪ್ ಕಂಡಿದೆ.

19. ಸ್ಕ್ರೀನ್ ಶಾಟ್ ಕ್ಯಾಪ್ಚರ್- ಸುಮಾರು 10 ಸಾವಿರಕ್ಕೂ ಹೆಚ್ಚು ಬಳಕೆದಾರರು ಈ ಆ್ಯಪ್ ಅನ್ನು ಉಪಯೋಗಿಸುತ್ತಿದ್ದಾರೆ.

20. ಡೈಲಿ ಹಾರೋಸ್ಕೋಪ್ ವಾಲ್ ಪೇಪರ್- 10 ಸಾವಿರಕ್ಕೂ ಹೆಚ್ಚು ಡೌನ್ಲೋಡ್ ಗಳನ್ನು ಈ ಆ್ಯಪ್ ಕಂಡಿದೆ.

21. ವುಕ್ಸಿಯಾ ರೀಡರ್- ಸುಮಾರು 10 ಸಾವಿರಕ್ಕೂ ಹೆಚ್ಚು ಬಳಕೆದಾರರು ಈ ಆ್ಯಪ್ ಅನ್ನು ಉಪಯೋಗಿಸುತ್ತಿದ್ದಾರೆ.

ಇದನ್ನು ಓದಿ: ಆ್ಯಂಡ್ರಾಯ್ಡ್, ಐಫೋನ್‌ನಲ್ಲಿ ಅನಿಮೇಟೆಡ್ ಸ್ಟಿಕ್ಕರ್ ಪೀಚರ್ ಕೊಡ್ತಿರೋ ವಾಟ್ಸಪ್...

22. ಪ್ಲಸ್ ವೆದರ್ - 10 ಸಾವಿರಕ್ಕೂ ಹೆಚ್ಚು ಡೌನ್ಲೋಡ್ ಗಳನ್ನು ಈ ಆ್ಯಪ್ ಕಂಡಿದೆ.

23. ಅನಿಮೆ ಲೈವ್ ವಾಲ್ ಪೇಪರ್- ಇದು ಕೇವಲ ನೂರಕ್ಕೂ ಹೆಚ್ಚು ಡೌನ್ಲೋಡ್ ಗಳನ್ನು ಮಾತ್ರ ಕಂಡಿದೆ.

24. ಐಹೆಲ್ತ್ ಸ್ಟೆಪ್ ಕೌಂಟರ್- ಇದರ ಡೌನ್ಲೋಡ್ ವಿವರ ಲಭ್ಯವಾಗಿಲ್ಲ

25. ಕಾಮ್.ಟೈಪ್.ಫಿಕ್ಷನ್- ಇದರ ಡೌನ್ಲೋಡ್ ವಿವರ ಲಭ್ಯವಾಗಿಲ್ಲ

click me!