ಮಂಗಳ ಗ್ರಹದ ಚಂದ್ರನ ಚಿತ್ರ ಸೆರೆಹಿಡಿದ ಇಸ್ರೋ ಮಂಗಳಯಾನ ನೌಕೆ!

By Suvarna News  |  First Published Jul 5, 2020, 6:01 PM IST

ಮಂಗಳ ಗ್ರಹದ ಚಂದ್ರನ ಚಿತ್ರ ಸೆರೆಹಿಡಿದ ಇಸ್ರೋ ಮಂಗಳಯಾನ ನೌಕೆ!| ಮಂಗಳ ಗ್ರಹದಿಂದ ಸುಮಾರು 7,200 ಕಿ.ಮೀ. ಮತ್ತು ಫೋಬೋಸ್‌ನಿಂದ 4,200 ಕಿ.ಮೀ. ದೂರ ಇದ್ದಸೆರೆ ಹಿಡಿದ ಚಿತ್ರ


ಬೆಂಗಳೂರು(ಜು.05): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಂಗಳಯಾನ ನೌಕೆ ಮಂಗಳ ಗ್ರಹದ ಸಮೀಪ ಇರುವ ಮತ್ತು ಅದರ ಅತಿದೊಡ್ಡ ‘ಚಂದ್ರ’(ಫೋಬೋಸ್‌)ನ ಚಿತ್ರವನ್ನು ಸೆರೆ ಹಿಡಿದಿದೆ.

ವಾಸ್ತವ್ಯದ ಆಸೆಗೆ ತಣ್ಣೀರು?: ಮಂಗಳ ಗ್ರಹ ವೇಗವಾಗಿ ಕಳೆದುಕೊಳ್ಳುತ್ತದೆ ನೀರು!

Tap to resize

Latest Videos

undefined

ಮಂಗಳಯಾನ ನೌಕೆ ಮಂಗಳ ಗ್ರಹದಿಂದ ಸುಮಾರು 7,200 ಕಿ.ಮೀ. ಮತ್ತು ಫೋಬೋಸ್‌ನಿಂದ 4,200 ಕಿ.ಮೀ. ದೂರ ಇದ್ದ ವೇಳೆ ಜುಲೈ 1ರಂದು ಈ ಚಿತ್ರವನ್ನು ಸೆರೆಹಿಡಿಯಲಾಗಿದೆ. ಫೋಬೋಸ್‌ನಲ್ಲಿ ಅತಿ ಹೆಚ್ಚು ಕುಳಿಗಳು ಇರುವ ಭಾಗವನ್ನು ಮಂಗಳಯಾನ ನೌಕೆ ಸೆರೆ ಹಿಡಿದಿದೆ. ಈ ಚಿತ್ರದಲ್ಲಿ ಅತಿದೊಡ್ಡ ಕುಳಿಯಾದ ಸ್ಟಿಕ್ನಿ, ಇತರ ಕುಳಿಗಳಾದ ರೋಚೆ ಮತ್ತು ಗ್ರಿಲ್ಡಿ್ರಗ್‌ಗಳನ್ನು ಕಾಣಬಹುದಾಗಿದೆ.

A recent image of the mysterious moon of Mars, Phobos, as captured by India's Mars Orbiter Mission

For more details visit https://t.co/oFMxLxdign pic.twitter.com/5IJuSDBggx

— ISRO (@isro)

ಆರಂಭದಲ್ಲಿ 6 ತಿಂಗಳ ಅವಧಿಗಾಗಿ ಮಂಗಳಯಾನ ನೌಕೆಯನ್ನು 2014ರಲ್ಲಿ ಮಂಗಳ ಗ್ರಹದ ಕಕ್ಷೆಗೆ ಕಳುಹಿಸಲಾಗಿತ್ತು. ಇಂಧನ ಇದ್ದ ಕಾರಣ ಇನ್ನೂ ಅದು ಸುತ್ತುತ್ತಿದೆ.

click me!