ಮೊಬೈಲ್ ಹಾಗೂ ಇಂಟರ್ನೆಟ್ ಸೌಲಭ್ಯ ಸಾರ್ವತ್ತಿಕಗೊಳ್ಳುತ್ತಿದ್ದಂತೆ ಸೆಕ್ಸ್ಟಿಂಗ್ ಪರಿಪಾಠವು ಸುಲಭವಾಗಿದೆ. ಆತ್ಮೀಯರು, ಸಂಗಾತಿಗಳು ಕಾಮ ಪ್ರಚೋದಕ ಚಾಟಿಂಗ್ ನಲ್ಲಿ ತೊಡಗುವುದು, ತಮ್ಮ ನಗ್ನ ಫೋಟೋ-ವಿಡಿಯೋಗಳನ್ನು ಪರಸ್ಪರರಿಗೆ ಕಳುಹಿಸುವುದು ಸಾಮಾನ್ಯವಾಗಿದೆ.
ಮೊಬೈಲ್ ತಂತ್ರಜ್ಞಾನ ಬೆಳೆದಂತೆ ಸೆಕ್ಸ್ಟಿಂಗ್ ಕೂಡಾ ಸುಲಭವಾಗಿದೆ. ಇಂಟರ್ನೆಟ್ ಯುಗದಲ್ಲಿ ಯುವಜನರಲ್ಲಿ ಈ ಚಾಳಿ ಬೆಳೆಯುತ್ತಾ ಹೋಗಿದೆ. ಆದರೆ ‘ಮಜಾ’ ನೀಡುವ ಈ ಸೆಕ್ಸ್ಟಿಂಗ್ ಭಾರೀ ಅನಾಹುತಗಳಿಗೆ ಕಾರಣವಾಗುವುದನ್ನೂ ನೋಡುತ್ತೇವೆ.
ಸೆಕ್ಸ್ಟಿಂಗ್ ನಲ್ಲಿ ಕಾಮಪ್ರಚೋದಕ ಸಂಭಾಷಣೆಗಳು, ಪರಸ್ಪರರು ನಗ್ನ ಫೋಟೋಗಳು ಹಾಗೂ ವಿಡಿಯೋಗಳನ್ನು ಕಳುಹಿಸುವುದು ಸಾಮಾನ್ಯ. ಯುವಕ-ಯುವತಿಯರಲ್ಲಿ ಬೆಳೆಯುತ್ತಿರುವ ಈ ಪ್ರವೃತ್ತಿಯಲ್ಲಿ ಎದುರಿಸಬೇಕಾದ ಅನಾಹುತಗಳೇನು?
undefined
ಇದನ್ನೂ ಓದಿ: 3 ದಿನಗಳ ಕಾಲ 16 ದೇಶದಲ್ಲಿ ಅಶ್ಲೀಲ ಚಿತ್ರ ಬಿತ್ತರಿಸಿದ ಕಾರ್ಟೂನ್ ನೆಟ್ವರ್ಕ್!
ಆತ್ಮೀಯರೆಂದು ಭಾವಿಸಲಾಗುವ ವ್ಯಕ್ತಿ ನಂಬಿಕೆ ದ್ರೋಹವೆಸಗುವ ಸಾಧ್ಯತೆಗಳಿವೆ. ಅವರಿಗೆ ಕಳುಹಿಸಿರುವ ನಗ್ನ ಫೋಟೋ ಆ ವ್ಯಕ್ತಿ ಕಳುಹಿಸಿದವರ ಅನುಮತಿಯಿಲ್ಲದೆ ಅಥವಾ ಅರಿವಿಗೆ ಬಾರದಂತೆ, ಇತರರಿಗೆ ತೋರಿಸುವುದು, ಅಥವಾ ಹಂಚಿಕೊಳ್ಳಲೂ ಬಹುದು.
ಇದೇ ಫೋಟೋ ಮುಂದೆ ಬ್ಲಾಕ್ ಮೇಲ್, ಸೈಬರ್ ಬೆದರಿಕೆಗಳಿಗೂ ಎಡೆಮಾಡಿಕೊಡುವ ಸಾಧ್ಯತೆಯನ್ನು ಅಲ್ಲಗಲೆಯುವಂತಿಲ್ಲ.
ಇದನ್ನೂ ಓದಿ: Facebookನಲ್ಲಿ ಭಾರೀ ಬದಲಾವಣೆ!
ಸೈಬರ್ ತಜ್ಞರ ಪ್ರಕಾರ, ವ್ಯಕ್ತಿಯು ಬಳಸುವ ಆ್ಯಪ್ ಗಳು ಕೂಡಾ ಪ್ರಮುಖ ಪಾತ್ರ ವಹಿಸುತ್ತವೆ. ಕಳುಹಿಸಲಾಗುವ ಫೋಟೋ ಬರೇ ಫೋನ್ ನಲ್ಲಿ ಮಾತ್ರವಲ್ಲ, ಆ ಆ್ಯಪ್ ಸರ್ವರ್ ನಲ್ಲೂ ಸಂಗ್ರಹಿಸಲ್ಪಡುವ ಸೌಲಭ್ಯವೂ ಇರುತ್ತದೆ. ಫೋನ್ ನಲ್ಲಿ ಡಿಲೀಟ್ ಆದರೂ ಕ್ಲೌಡ್ ಸ್ಟೋರೇಜ್ ನಲ್ಲಿ ಫೋಟೋ-ವಿಡಿಯೋ ಡಿಲೀಟ್ ಆಗಲ್ಲ. ಒಂದು ವೇಳೆ ಸರ್ವರ್ ಹ್ಯಾಕ್ ಆದರೆ, ಆ ಫೋಟೋಗಳು ಲೀಕ್ ಆಗೋದು ಖಚಿತ!
2016ರಲ್ಲಿ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮಹಿಳೆ ಜೊತೆಗೆ ಇಂತಹ ಘಟನೆ ಸಂಭವಿಸಿತ್ತು. ಹ್ಯಾಕರ್ ಆಕೆಯ ಫೋಟೋಗಳನ್ನು ಕದ್ದು ಆಕೆಗೆ ಬ್ಲಾಕ್ ಮೇಲ್ ಮಾಡಿದ್ದು ವರದಿಯಾಗಿತ್ತು.
ಸಂಗಾತಿ, ಹ್ಯಾಕರ್ ಹೊರತಾಗಿ ನಿಮ್ಮ ಫೋನ್ ಬಳಸುವ ಇತರರಿಂದಲೂ ಈ ರಿಸ್ಕ್ ತಪ್ಪಿದ್ದಲ್ಲ. ನಿಮ್ಮ ಗೆಳೆಯರು, ಸಂಬಂಧಿಕರೂ ನಿಮ್ಮ ಫೋನ್ ಬಳಸುತ್ತಾರೆಂದರೆ ಸಮಸ್ಯೆ ಮುಂದಾಗಬಹುದು.
ಇವರ ಹೊರತಾಗಿ, ನಿಮ್ಮ ಫೋನ್ ರಿಪೇರಿ ಮಾಡುವವರು ಕೂಡಾ ನಿಮ್ಮ ಖಾಸಗಿ ಫೋಟೋಗಳನ್ನು ಲೀಕ್ ಮಾಡಬಹುದು.