ಬಿಡುಗಡೆಗೆ ಬರೇ ನಾಲ್ಕೇ ದಿನ ಬಾಕಿ; ಮೊಬೈಲ್ ಪ್ರಿಯರ ದಿಲ್ ಧಕ್ ಧಕ್!

By Web Desk  |  First Published May 10, 2019, 7:55 PM IST
  • ಮೇ 14ರಂದು ಬೆಂಗಳೂರಿನಲ್ಲಿ Oneplus 7 ಬಿಡುಗಡೆ
  • ಅಮೆರಿಕಾ, ಯುರೋಪ್‌ ಮತ್ತು ಭಾರತದಲ್ಲಿ ಏಕಕಾಲಕ್ಕೆ ಫೋನ್‌ ಬಿಡುಗಡೆ

ಅತಿ ಕಡಿಮೆ ಅವಧಿಯಲ್ಲಿ ಮೊಬೈಲ್‌ ಪ್ರಿಯರ ಮನಸ್ಸು ಕದ್ದ ಮೊಬೈಲ್‌ ಅಂದ್ರೆ Oneplus ಕಂಪನಿಯ ಮೊಬೈಲ್‌ಗಳು. ಈ ಕಂಪನಿಯ ಹೊಸ ಮೊಬೈಲ್‌ಗಳು ಬರುವುದನ್ನೇ ಜನ ಕಾಯುತ್ತಿರುತ್ತಾರೆ. ಹೊಸ ಫೀಚರ್‌ ಏನಿದು ಎಂದು ತಿಳಿದುಕೊಳ್ಳಲು ಕಾತರಿಸುತ್ತಾರೆ. ಅಷ್ಟು ಹವಾ ಮೆಂಟೇನ್‌ ಮಾಡಿರುವ Oneplusನ ಹೊಸ ಮೊಬೈಲ್‌ Oneplus 7 ಬಿಡುಗಡೆಯಾಗುವ ಕ್ಷಣ ಹತ್ತಿರಕ್ಕೆ ಬರುತ್ತಿದೆ.

ಮೇ 14ರಂದು 8 ಗಂಟೆ 15 ನಿಮಿಷಕ್ಕೆ ಸರಿಯಾಗಿ ಬೆಂಗಳೂರಿನ ಎಕ್ಸಿಬಿಷನ್‌ ಸೆಂಟರ್‌ನಲ್ಲಿ Oneplus 7 ಬಿಡುಗಡೆಯಾಗಲಿದೆ. ಇಂಟರೆಸ್ಟಿಂಗ್‌ ಅಂದ್ರೆ ಅಮೆರಿಕಾ, ಯುರೋಪ್‌ ಮತ್ತು ಭಾರತದಲ್ಲಿ ಏಕಕಾಲಕ್ಕೆ ಈ ಫೋನ್‌ ಬಿಡುಗಡೆಯಾಗಲಿದೆ ಮತ್ತು 8000 ಮಂದಿ ಈ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.

Tap to resize

Latest Videos

ಇದನ್ನೂ ಓದಿ: ಹೊಸ ಕೊಡುಗೆ ಹೊತ್ತು ತಂದಿದೆ Airtel; ಗ್ರಾಹಕರಿಗೆ ಡಬಲ್‌ ಬಂಪರ್!

ಜಗತ್ತಿನಾದ್ಯಂತ ಇರುವ Oneplus ಅಭಿಮಾನಿಗಳು ಖುಷಿ ಪಡುವ ವಿಷಯವೊಂದಿದೆ. ಯಾರಿಗೆಲ್ಲಾ Oneplus 7 ಬಿಡುಗಡೆಯಾಗುವುದನ್ನು ಕಣ್ಣಾರೆ ನೋಡುವ ಆಸೆ ಇದೆಯೋ ಅವರೆಲ್ಲಾ ಟಿಕೆಟ್‌ ಪಡೆದುಕೊಂಡು ಆ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಏಪ್ರಿಲ್‌ 25ರಂದು ಬೆಳಿಗ್ಗೆ 10 ಗಂಟೆಯ ನಂತರ oneplus.in ವೆಬ್‌ಸೈಟ್‌ನಲ್ಲಿ ಟಿಕೆಟ್‌ ಪಡೆಯಬಹುದು. ಭಾಗವಹಿಸಲು ಸಾಧ್ಯವಾಗದೇ ಇರುವವರು ಒನ್‌ ಪ್ಲಸ್‌ ವೆಬ್‌ಸೈಟ್‌ನಲ್ಲಿ ಮತ್ತು ಅಮೆಜಾನ್‌ನಲ್ಲಿ ನೇರ ಪ್ರಸಾರ ನೋಡಬಹುದು.

(ಸಾಂದರ್ಭಿಕ ಚಿತ್ರ)

click me!