16 ದೇಶದಲ್ಲಿ ಇದ್ದಕ್ಕಿದ್ದಂತೆ ಅಶ್ಲೀಲ ಚಿತ್ರ ಬಿತ್ತರಿಸಿದ ಕಾರ್ಟೂನ್ ನೆಟ್ವರ್ಕ್!| ಮೂರು ದಿನಗಳ ಕಾಲ ನಿರಂತರ ಅಡಲ್ಟ್ ವಿಡಿಯೋಗಳು ಪ್ರಸಾರ| ಪೋಷಕರು ಕುಪಿತ, ಮಕ್ಕಳಿಗೆ ಕಾರ್ಟೂನ್ ನೋಡಲು ಅವಕಾಶವಿಲ್ಲ
ನವದೆಹಲಿ[ಮೇ.10]: ಕಾರ್ಟೂನ್ ನೆಟ್ವರ್ಕ್ ವೆಬ್ಸೈಟ್ ಹಲವಾರು ದೇಶಗಳಲ್ಲಿ ಏಕಕಾಲಕ್ಕೆ ಹ್ಯಾಕ್ ಆಗಿ, ಅವಾಂತರ ಸೃಷ್ಟಿಯಾಗಿದೆ. ಇದರ ಪರಿಣಾಮವಾಗಿ ಮಕ್ಕಳು ನೋಡುವ ಈ ಚಾನೆಲ್ ನಲ್ಲಿ ಬರೋಬ್ಬರಿ ಮೂರು ದಿನಗಳವರೆಗೆ ಪೋರ್ನ್ ವಿಡಿಯೋಗಳೇ ಪ್ರಸರವಾಗಿವೆ.
ಹೌದು ಬ್ರೆಜಿಲ್ ಮೂಲದ ಇಬ್ಬರು 16 ದೇಶಗಳಲ್ಲಿ ಕಾರ್ಟೂನ್ ನೆಟ್ವರ್ಕ್ ನ ವೆಬ್ ಸೈಟ್ ಹ್ಯಾಕ್ ಮಾಡಿದ್ದಾರೆ. ಬಳಿಕ ಕಾರ್ಟೂನ್ ಬದಲು ಅರೇಬಿಕ್ ಮೀಮ್ಸ್, ಬ್ರೆಜಿಲಿಯನ್ ಹಿಪ್ ಹಾಪ್ ಹಾಗೂ ಬ್ರೆಜಿಲಿಯನ್ ಸ್ಟ್ರಿಪರ್ಸ್ ವಿಡಿಯೋಗಳನ್ನು ಪ್ರಸಾರ ಮಾಡಿದ್ದಾರೆ. ಕರ್ಟೂನ್ ನೆಟ್ವರ್ಕ್ ನಲ್ಲಿ ಈ ಅಶ್ಲೀಲ ವಿಡಿಯೋಗಳನ್ನು ಗಮನಿಸಿದ ಪೋಷಕರು ಮಾತ್ರ ಕುಪಿತರಾಗಿದ್ದಾರೆ. ವಾರಾಂತ್ಯವಿಡೀ ಈ ಚಾನೆಲ್ ಹ್ಯಾಕ್ ಆಗಿತ್ತು. ಹೀಗಿದ್ದರೂ ಚಾನೆಲ್ ಮತ್ರ ಈ ಕುರಿತಾಗಿ ಯವುದೇ ಸ್ಪಷ್ಟೀಕರಣ ನೀಡಿಲ್ಲ.
Why in god's name there's a video with an almost naked dancing man from XVideos on Cartoon Network Hungary's website :Ohttps://t.co/tLKrbYXo6s
— RegularCapital: Cartoon Network News (@RegularTweetsUK)ವರದಿಗಳನ್ವಯ ಇಬ್ಬರು ಹ್ಯಾಕರ್ಸ್ ಆಫ್ರಿಕಾ, ಅಮೆರಿಕಾ, ಅರಬ್, ಬ್ರೆಜಿಲ್, ಚೆಕ್ ರಿಪಬ್ಲಿಕ್, ಡೆನ್ಮರ್ಕ್, ಜರ್ಮನಿ, ಹಂಗ್ರಿ, ಇಟಲಿ, ಮೆಕ್ಸಿಕೋ, ನೆದರ್ಲ್ಯಾಂಡ್, ಪೋಲ್ಯಾಂಡ್, ರೊಮಾನಿಯಾ, ರಷ್ಯಾ ಹಾಗೂ ಟರ್ಕಿಯಲ್ಲಿ ಕಾರ್ಟೂನ್ ನೆಟ್ವರ್ಕ್ ಹ್ಯಾಕ್ ಮಾಡಿದ್ದು, ಏಪ್ರಿಲ್ 25ರಂದು ಈ ವಿಚಾರ ಬಯಲಾಗಿದೆ. ಇದಾದ ಬಳಿಕ ಕಾರ್ಟೂನ್ ನೆಟ್ವರ್ಕ್ ತನ್ನ ವೆಬ್ಸೈಟ್ ಸ್ಥಗಿತಗೊಳಿಸಿ, ನೂತನ ವರ್ಶನ್ ಅಪ್ಲೋಡ್ ಮಾಡಿದೆ. ಬೇಸತ್ತ ಜನರು ಟ್ವಿಟರ್ ನಲ್ಲಿ ಸ್ಕ್ರೀನ್ ಶಾಟ್ ಶೇರ್ ಮಾಡಿ ಈ ವಿಚಾರದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
THE CARTOON NETWORK UK SITE GOT HACKED AND ITS SOME OF THE MOST FUNNIEST SHIT I'VE EVER SEEN pic.twitter.com/ycNBj4BBMb
— Ethan Nunn (@EthanNunn)ಟ್ವೀಟ್ ನಲ್ಲಿ ಹ್ಯಾಕರ್ಸ್ ಕಾರ್ಟೂನ್ ನೆಟ್ವರ್ಕ್ ನ ಇನ್ನಿತರ ವೆಬ್ ಸೈಟ್ ಗಳ ಮಾಹಿತಿಯೂ ತಮ್ಮ ಬಳಿ ಇದೆ ಎಂದು ಹೇಳಿಕೊಂಡಿದ್ದಾರೆ.