ALERT: ಬಂದಿದೆ ‘ವಾಟ್ಸಪ್ ಗೋಲ್ಡ್’? ಏನಿದರ ಒಳಗುಟ್ಟು?

Published : Jan 09, 2019, 01:42 PM IST
ALERT: ಬಂದಿದೆ ‘ವಾಟ್ಸಪ್ ಗೋಲ್ಡ್’? ಏನಿದರ ಒಳಗುಟ್ಟು?

ಸಾರಾಂಶ

‘WhatsApp Gold’ ಆವೃತ್ತಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಸಂದೇಶಗಳು; ಇದನ್ನು ಇನ್ಸ್ಟಾಲ್ ಮಾಡಿಕೊಂಡರೆ ಸಿಗಲಿದೆಯಂತೆ ಹೆಚ್ಚಿನ ಫೀಚರ್‌ಗಳು?; ಏನಿದರ ಒಳಗುಟ್ಟು?

ಜನಪ್ರಿಯ ಮೆಸೇಜಿಂಗ್ ಸೇವೆ  ವಾಟ್ಸಪ್, WhatsApp Gold ಆವೃತ್ತಿಯನ್ನು ಬಿಡುಗಡೆ ಮಾಡಿದೆ ಎಂಬ ಸಂದೇಶ ನಿಮಗೂ ಬಂದಿರಬಹುದು.  

WhatsApp Gold ಆವೃತ್ತಿಯನ್ನು ಡೌನ್‌ಲೋಡ್ ಮಾಡಿ ಫೋನ್‌ನಲ್ಲಿ ಇನ್ಸ್ಟಾಲ್ ಮಾಡಿಕೊಂಡರೆ, ಬಳಕೆದಾರರಿಗೆ  ವಿಶಿಷ್ಟವಾದ ಫೀಚರ್‌ಗಳು ಲಭ್ಯವಾಗಲಿದೆ ಎಂದು ಆ ಸಂದೇಶದಲ್ಲಿ ತಿಳಿಸಲಾಗಿರಬಹುದು.

ಬಳಕೆದಾರರು ಒಂದೇ ಬಾರಿ 100 ಮಂದಿಗೆ ಪೋಟೋಗಳನ್ನು ಕಳುಹಿಸಬಹುದು, ಹಾಗೂ ಕಳುಹಿಸಿದ ಸಂದೇಶಗಳನ್ನು ಯಾವಾಗಲೂ ಬೇಕಾದರೂ ಡಿಲೀಟ್ ಮಾಡಬಹುದು ಎಂಬಿತ್ಯಾದಿ ವಿಷಯಗಳನ್ನು ಪಟ್ಟಿಮಾಡಲಾಗಿರಬಹುದು....

ಇದನ್ನೂ ಓದಿ: ಅಮೆರಿಕಾದಲ್ಲಿ ಮಿಂಚುತ್ತಿದ್ದಾನೆ ಮಂಡ್ಯದ ಹುಡುಗ ಸುಹೇಲ್

ಆದರೆ ಬಳಕೆದಾರರೇ... ಎಚ್ಚರ! ಇದೊಂದು ನಕಲಿ ಹಾಗೂ ಆಧಾರರಹಿತ ಮೆಸೇಜ್ ಆಗಿದೆ.  ತಾನು ಇಂತಹ ಸೇವೆಯನ್ನು ಪರಿಚಯಿಸಿಲ್ಲವೆಂದು ವಾಟ್ಸಪ್ ಸ್ಪಷ್ಟಪಡಿಸಿದೆ.  ಅಂತಹ ಸಂದೇಶಗಳು ಬಳಕೆದಾರರಿಗೆ ಹಾನಿಯನ್ನುಂಟು ಮಾಡಬಲ್ಲುವು. ಇದು ಹ್ಯಾಕರ್ಸ್ ಕೃತ್ಯವೂ ಆಗಿರಬಹುದು. ಆ ನಕಲಿ ಆ್ಯಪನ್ನು ಫೋನಿಗೆ ಇನ್ಸ್ಟಾಲ್ ಮಾಡಿಸುವ ಮೂಲಕ, ನಿಮ್ಮ ಫೋನ್‌ಗೆ ವೈರಸ್ ಹರಡುವ ಸಾಧ್ಯತೆಗಳೂ ಇವೆ, ಅಥವಾ ಫೋನ್‌ನಲ್ಲಿರುವ ಅಮೂಲ್ಯವಾದ/ ವೈಯುಕ್ತಿಕ ಮಾಹಿತಿ ಕಳವಾಗುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಇನ್ಮುಂದೆ ಈ ವೆಬ್‌ಸೈಟ್‌ಗಳ ಆಟ ನಡೆಯಲ್ಲ! ಮಾಸ್ಟರ್ ಸ್ಟ್ರೋಕ್‌ಗೆ ಮುಂದಾಗಿದೆ ಮೋದಿ ಸರ್ಕಾರ

ಇಂತಹ ಸಂದೇಶಗಳು ಹರಿದಾಡುತ್ತಿರುವುದು ಮೊದಲೇನಲ್ಲ. ಒಂದೆರಡು ವರ್ಷಗಳ ಹಿಂದೆಯೂ ‘WhatsApp Gold’  ಬಗ್ಗೆ ವದಂತಿಗಳು ಹರಿದಾಡಿತ್ತು. ಸೆಲೆಬ್ರಿಟಿಗಳಿಗಾಗಿ ಇರುವ ಈ ಪ್ರೀಮಿಯಂ ವರ್ಶನ್ ಜನಸಾಮಾನ್ಯರಿಗೂ ಲಭ್ಯವಿದೆ ಎಂದು ಬಳಕೆದಾರರನ್ನು ಯಾಮಾರಿಸಲಾಗಿತ್ತು.

ಆದುದರಿಂದ, ಇಂತಹ ಮೇಸೇಜ್‌ಗಳು ಬಂದರೆ ಕಿವಿಗೊಡಬೇಡಿ, ಹಾಗೂ ಇತತರಿಗೂ ಫಾರ್ವರ್ಡ್‌ ಮಾಡಲೂಬೇಡಿ. ಎಚ್ಚರವಾಗಿರಿ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ
'AI ನಿಮ್ಮ ಉದ್ಯೋಗ ಕಸಿದುಕೊಳ್ಳಲ್ಲ, ಆದರೆ..'; OPPO ತಜ್ಞರ ಆಘಾತಕಾರಿ ಹೇಳಿಕೆ ವೈರಲ್