ಮೊಬೈಲ್ ಖರೀದಿಸಬೇಕು... ಆದ್ರೆ ಕೈಯಲ್ಲಿ ದುಡ್ಡಿಲ್ಲ. ಏನ್ಮಾಡೋದು ಅಂತ ಚಿಂತೆಯೇ? ಹಾಗಾದ್ರೆ ವಿವೋ ಮೊಬೈಲ್ ಕಂಪನಿಯ ಈ ಯೋಜನೆಯಿಂದ ಪ್ರಯೋಜನ ಪಡೆಯಬಹುದು!
ಬೆಂಗಳೂರು: ಹೌದು, ನೀವು ಸರಿಯಾಗಿಯೇ ಓದಿದ್ದೀರಿ. Vivo ಇಂಡಿಯಾ ಮೊಬೈಲ್ ಕಂಪನಿಯು ಕ್ರಿಸ್ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ‘New Phone, New You’ ಆಫರ್ ಗೆ ಚಾಲನೆ ನೀಡಿದೆ. ಡಿ. 20ಕ್ಕೆ ಆರಂಭವಾಗಿರುವ ಈ ಆಫರ್ ಜ.31ರವರೆಗೆ [41 ದಿನಗಳ] ಮುಂದುವರೆಯಲಿದೆ.
ಈ ಸ್ಕೀಮ್ ಪ್ರಕಾರ ₹10,000 ಮೇಲ್ಪಟ್ಟ ಫೋನ್ ಖರೀದಿಸಿದರೆ, ಕೇವಲ ₹101 ಪಾವತಿಸಿದರೆ ಸಾಕು. ಬಳಿಕ 6 ತಿಂಗಳುಗಳ ಕಂತುಗಲ್ಲಿ ಉಳಿದ ಮೊತ್ತವನ್ನು ಪಾವತಿಸಬೇಕು. ಬಜಾಜ್ ಫೈನಾನ್ಸ್ ಮೂಲಕ ಉಳಿದ ಮೊತ್ತವನ್ನು ಸಮಾನ ಕಂತುಗಳಲ್ಲಿ ಪಾವತಿಸುವ ಸೌಲಭ್ಯವಿದೆ.
ಇದನ್ನೂ ಓದಿ: Goodbye 2018: ಈ ವರ್ಷದ ಅಗ್ಗದ 10 ಸ್ಮಾರ್ಟ್‌ಫೋನ್‌ಗಳು
ದೇಶಾದ್ಯಂತ ಇರುವ 45000, Vivo BFO ಮಾನ್ಯತೆ ಸ್ಟೋರ್‌ಗಳಲ್ಲಿ ಈ ಯೋಜನೆ ಲಭ್ಯವಿದೆ. ಸ್ಟೋರ್‌ಗೆ ಭೇಟಿ ನೀಡುವಾಗ KYC ದಾಖಲೆಗಳನ್ನು [PAN ಕಾರ್ಡ್, ವೋಟರ್ ಐಡಿ ಕಾರ್ಡ್, ಆಧಾರ್ ಕಾರ್ಡ್ ಇತ್ಯಾದಿ] ಕೊಂಡೊಯ್ಯಿರಿ.
ಸ್ಟೋರ್‌ನಲ್ಲಿ ನಿಮಗೆ ಬೇಕಾದ ಪೋನನ್ನು ಆಯ್ದುಕೊಳ್ಳಿರಿ. ₹101 ಪಾವತಿಸಿ, ನಿಮ್ಮ ದಾಖಲೆಗಳನ್ನು ಸಲ್ಲಿಸಿ ಈ ಆಫರ್‌ನ ಸದುಪಯೋಗ ಪಡೆದುಕೊಳ್ಳಿ.
ಇದನ್ನೂ ಓದಿ: OnePlusನ ಮೊದಲ 5G ಸ್ಮಾರ್ಟ್‌ಫೋನ್ ಫೋಟೋ ಲೀಕ್! ಹೀಗಿದೆ 'OnePlus 7'
ಭಾರತದ ಮೊಬೈಲ್ ಮಾರುಕಟ್ಟೆಗೆ 2014ರಲ್ಲಿ ಪದಾರ್ಪಣೆ ಮಾಡಿದ Vivo, ವಿಶಿಷ್ಟವಾದ ಕ್ಯಾಮೆರಾ ಮತ್ತು ಮ್ಯೂಸಿಕ್ ಫೀಚರ್‌ಗಳಿಗೆ ಪ್ರಸಿದ್ಧವಾಗಿದೆ. ಭಾರತದಲ್ಲೇ ಸಿದ್ಧವಾಗುವ ಈ Vivo ಫೋನ್ ದೇಶಾದ್ಯಂತ ಲಭ್ಯವಿದ್ದು, ಸುಮಾರು 550 ಸರ್ವಿಸ್ ಸೆಂಟರ್‌ಗಳನ್ನು ಹೊಂದಿದೆ.