2018ರಲ್ಲಿ ಚೀನಾದಲ್ಲಿ ಸ್ಮಾರ್ಟ್‌ಫೋನ್ ಮಾರಾಟ ಪ್ರಮಾಣ ಇಳಿಕೆಯಾಗಿದ್ದರೆ, ಅಮೆರಿಕಾ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ಆದರೆ ಭಾರತದಲ್ಲಿ 2017ರಲ್ಲಿ 134 ಮಿಲಿಯನ್ ಯೂನಿಟ್ಸ್ ಸ್ಮಾರ್ಟ್‌ಫೋನ್ ಮಾರಾಟವಾಗಿದ್ದರೆ, ಆ ಸಂಖ್ಯೆ 2018ರಲ್ಲಿ 150 ಮಿಲಿಯನ್‌ಗೇರಿದೆ. ಮುಂದಿನ ವರ್ಷವೂ ಅದರಲ್ಲಿ 12% ಏರಿಕೆಯಾಗಿ 160 ಮಿಲಿಯನ್‌ಗೆ ತಲುಪಬಹುದೆಂದು ಮಾರುಕಟ್ಟೆ ಅಧ್ಯಯನಗಳು ಅಂದಾಜಿಸಿವೆ.
ಮೊಬೈಲ್ ಕಂಪನಿಗಳಿಗೆ ಭಾರತ ಪ್ರಮುಖ ಮಾರುಕಟ್ಟೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಸುಮಾರು 50 ಕೋಟಿ ಮಂದಿ ಇಂಟರ್ನೆಟ್ ಸಂಪರ್ಕದಲ್ಲಿದ್ದಾರೆ. ಹಾಗೂ, ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ 450 ಮಿಲಿಯನ್ ದಾಟಿದೆ.
ಸಾಮಾನ್ಯ ಮೊಬೈಲ್ ಫೋನ್‌ನಿಂದ ಹಿಡಿದು ದುಬಾರಿ ಐ-ಫೋನ್‌ಗಳವರೆಗೂ ಭಾರತದಲ್ಲಿ ಭಾರೀ ಬೇಡಿಕೆಯಿದೆ. ಈ ಹಿನ್ನೆಲೆಯಲ್ಲಿ ಡಜನ್ ಗಟ್ಟಲೇ ಮೊಬೈಲ್ ಫೋನ್ ತಯಾರಕರು ಒಂದರ ಹಿಂದೆ ಒಂದು ಹೊಸ ಮಾದರಿಯ ಫೋನ್‌ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತಾರೆ.
ಮೊಬೈಲ್ ಯುಗ ಆರಂಭವಾದಾಗ ಮೊಮೈಲ್ ಖರೀದಿಸುವುದು ಸುಲಭವಾಗಿತ್ತು. ಬೆರಳಣಿಕೆಯಷ್ಟಿದ್ದ ಮಾದರಿಗಳಲ್ಲಿ ತಮಗೆ ಬೇಕಾದ ಮೊಬೈಲನ್ನು ಆಯ್ಕೆ ಮಾಡಬಹುದಿತ್ತು. ಆದರೆ ಮೊಬೈಲ್ ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ, ಮಾರುಕಟ್ಟೆ ವಿಸ್ತರಿಸಿದಂತೆ ಲೆಕ್ಕವಿಲ್ಲದಷ್ಟು ಮೊಬೈಲ್‌ಗಳು ಸ್ಟೋರ್‌ಗಳಿಗೆ ಹರಿದು ಬಂದಿವೆ.
ಒಂದು ಮೊಬೖಲ್ ಖರೀದಿಸಬೇಕಾದರೆ ಸರಿಸುಮಾರು ಪಿಎಚ್‌ಡಿ ಸಂಶೋಧನೆ ನಡೆಸುವ ಅನುಭವ. ತಯಾರಕ ಕಂಪನಿ, ವಿನ್ಯಾಸ, ಹಾರ್ಡ್‌ವೇರ್, ಸಾಫ್ಟ್‌ವೇರ್, ಮತ್ತು ಬೆಲೆ.... ಹೀಗೆ ಖರೀದಿಯ ಮಾನದಂಡ ಬದಲಾಗುತ್ತದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.