ಶುಕ್ರ ಗ್ರಹದತ್ತ ಇಸ್ರೋ ಚಿತ್ತ: ಗಮನಹರಿಸಿ ಬತ್ತಳಿಕೆಯತ್ತ!

Published : May 18, 2019, 04:17 PM ISTUpdated : May 18, 2019, 04:19 PM IST
ಶುಕ್ರ ಗ್ರಹದತ್ತ ಇಸ್ರೋ ಚಿತ್ತ: ಗಮನಹರಿಸಿ ಬತ್ತಳಿಕೆಯತ್ತ!

ಸಾರಾಂಶ

ಚಂದ್ರಯಾನ-2 ಯೋಜನೆಗೆ ಇಸ್ರೋ ಬರದ ಸಿದ್ಧತೆ| ಭವಿಷ್ಯದ ಯೋಜನೆಗಳ ಮಾಹಿತಿ ಬಿಚ್ಚಿಟ್ಟ ಇಸ್ರೋ| ಯುವಿಕಾ ಸಮಾವೇಶದಲ್ಲಿ ಇಸ್ರೋ ಮುಖ್ಯಸ್ಥ ಡಾ.ಕೆ. ಸಿವಾನ್ ಮಾಹಿತಿ| ಶುಕ್ರ ಗ್ರಹದ ಅಧ್ಯಯನಕ್ಕೆ ಇಸ್ರೋ ಯೋಜನೆ| ಚಂದ್ರಯಾಣ-3 ಯೋಜನೆಗೂ ಇಸ್ರೋ ಪ್ಲ್ಯಾನ್| ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್-1 ಯೋಜನೆ|

ಶ್ರೀಹರಿಕೋಟಾ(ಮೇ.18): ಚಂದ್ರಯಾನ-2 ಯೋಜನೆಗೆ ಭರದ ಸಿದ್ಧತೆ ನಡೆಸುತ್ತಿರುವ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಭವಿಷ್ಯದ ಯೋಜನೆಗಳ ಕುರಿತೂ ಮಾಹಿತಿ ನೀಡಿದೆ.

ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ನಡೆದ ಯುವ ವಿಜ್ಞಾನ ಸಮಾವೇಶ(ಯುವಿಕಾ) ಉದ್ದೇಶಿಸಿ ಮಾತನಾಡಿದ ಇಸ್ರೋ ಮುಖ್ಯಸ್ಥ ಡಾ. ಕೆ.ಸಿವಾನ್, ಸಂಸ್ಥೆ ಒಟ್ಟು ಏಳು ಅಂತರಗ್ರಹ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಚಂದ್ರಯಾನ-2 ಬಳಿಕ ಭವಿಷ್ಯದಲ್ಲಿ ಇಸ್ರೋ ಹಲವು ಮಹತ್ವದ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಪ್ರಮುಖವಾಗಿ ಸೌರವ್ಯೂಹದ ಇತರ ಗ್ರಹಗಳಾದ ಶುಕ್ರ ಗ್ರಹ, ಮಂಗಳ ಗ್ರಹ, ಚಂದ್ರಯಾನ-3 ಯೋಜನೆಗಳು ಸೇರಿವೆ ಎಂದು ಸಿವಾನ್ ಹೇಳಿದರು.

ಇದೇ ವೇಳೆ ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್-1 ಯೋಜನೆಯನ್ನೂ ಕೂಡ ಇಸ್ರೋ ಹಮ್ಮಿಕೊಂಡಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಆಧಾರ್​ ಕಾರ್ಡ್​ ಕಳೆದು ನಂಬರ್​ ಮರೆತಿರುವಿರಾ? ಹಾಗಿದ್ರೆ ಈ ಸ್ಟೆಪ್​ ಫಾಲೋ ಮಾಡಿ ವಾಪಸ್​ ಪಡೆಯಿರಿ