ಪ್ರಮುಖ ಫೀಚರ್‌ಗೆ ಕತ್ತರಿ ಹಾಕಿದ WhatsApp!

By Web Desk  |  First Published May 17, 2019, 6:18 PM IST

ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಫೀಚರ್ ಹಾಗೂ ಬೇಡವಾದ ಫೀಚರ್ ಗಳನ್ನು WhatsApp ತೆಗೆದು ಹಾಕುವುದು ಸಾಮಾನ್ಯ. ಈಗ ಪ್ರಮುಖ ಫೀಚರೊಂದಕ್ಕೆ WhatsApp ಕತ್ತರಿ ಹಾಕಿದೆ. 
 


ಜನಪ್ರಿಯ ಸಾಮಾಜಿಕ ಜಾಲತಾಣ WhatsApp ಹೊಸ ಫೀಚರ್‌ಗಳನ್ನು ನೀಡೋದರ ಜೊತೆಗೆ ಕೆಲವೊಂದು ಸೌಲಭ್ಯಗಳನ್ನು ಹಿಂಪಡೆಯುವುದು ಸಾಮಾನ್ಯ.ಈಗ ಅಂತಹದ್ದೇ ಬೆಳವಣಿಗೆಯೊಂದರಲ್ಲಿ, WhatsApp ಪ್ರೊಫೈಲ್ ಫೋಟೋವನ್ನು ಸೇವ್ ಮಾಡೋ ಸೌಲಭ್ಯವನ್ನು ತೆಗೆದು ಹಾಕಿದೆ ಎಂದು ವರದಿಯಾಗಿದೆ.

ಆದರೆ WhatsApp ಬಳಕೆದಾರರು, ತಮ್ಮ ಕಾಂಟಾಕ್ಟ್ ಲಿಸ್ಟ್‌ನಲ್ಲಿರುವವರ ಪ್ರೊಫೈಲ್ ಫೋಟೋಗಳನ್ನು ಸೇವ್ ಮಾಡಬಹುದಾಗಿತ್ತು. ಆದರೆ ಈಗ ಈ ಫೀಚರನ್ನು ತೆಗೆದು ಹಾಕಲು WhatsApp ಮುಂದಾಗಿದೆ.

Latest Videos

undefined

ಇದನ್ನೂ ಓದಿ | ತಕ್ಷಣ ನಿಮ್ಮ Whatsapp ಅಪ್ಡೇಟ್ ಮಾಡಿ, ಇಲ್ಲವೇ ಡೇಟಾ ಕಳವಾಗೋದು ಗ್ಯಾರಂಟಿ

WhatsApp ಬೀಟಾ ಆವೃತ್ತಿಯಲ್ಲಿ ಈ ಬದಲಾವಣೆಯನ್ನು ಈಗಾಗಲೇ ಗುರುತಿಸಲಾಗಿದ್ದು,  ಆ್ಯಂಡ್ರಾಯಿಡ್ ಫೋನ್ ಬಳಕೆದಾರರು ಇನ್ನುಂದೆ ಪ್ರೊಫೈಲ್ ಫೋಟೋವನ್ನು ಸೇವ್ ಮಾಡುವಂತಿಲ್ಲ.

ಆದರೆ ಗ್ರೂಪ್ ಪ್ರೊಫೈಲ್ ಫೋಟೋಗಳಿಗೆ ಹೊಸ ನಿಯಮ ಅನ್ವಯವಾಗಲ್ಲ ಎಂದು ಹೇಳಲಾಗಿದೆ. ಒಂದು ವೇಳೆ ಯಾವುದೇ ಪ್ರೊಫೈಲ್ ಫೋಟೋ ಸೇವ್ ಮಾಡಲೇಬೇಕೆಂದಿದ್ದರೆ, ಫೋನ್ ಗಳಲ್ಲಿರುವ ಮಾಮೂಲಿ ಸ್ಕ್ರೀನ್ ಶಾಟ್ ಸೌಲಭ್ಯವನ್ನೇ ನೆಚ್ಚಿಕೊಳ್ಳಬೇಕು.

click me!