48 ಮೆಗಾಪಿಕ್ಸೆಲ್ Redmi Note 7S ಭಾರತಕ್ಕೆ ಎಂಟ್ರಿ ದಿನಾಂಕ ಫಿಕ್ಸ್!

Published : May 17, 2019, 06:09 PM IST
48 ಮೆಗಾಪಿಕ್ಸೆಲ್ Redmi Note 7S ಭಾರತಕ್ಕೆ ಎಂಟ್ರಿ ದಿನಾಂಕ ಫಿಕ್ಸ್!

ಸಾರಾಂಶ

ಭಾರತದ ಮಾರುಕಟ್ಟೆಗೆ ಹೆಚ್ಚೆಚ್ಚು ಮೆಗಾಪಿಕ್ಸಲ್ ಕ್ಯಾಮೆರಾವುಳ್ಳ ಸ್ಮಾರ್ಟ್‌ಫೋನನ್‌ ಎಂಟ್ರಿಯ ಸರಣಿ ಮುಂದುವರಿದಿದೆ. 48 ಮೆಗಾಪಿಕ್ಸೆಲ್ ಕ್ಯಾಮೆರಾ ಮೂಲಕ ಸದ್ದು ಮಾಡಿದ್ದ Xiaomi, ಈಗ ಮತ್ತೊಂದು ಫೋನ್ ಬಿಡುಗಡೆ ಮಾಡಲು ಸಿದ್ಧವಾಗಿದೆ.   

48 ಮೆಗಾಪಿಕ್ಸೆಲ್ ಕ್ಯಾಮೆರಾ ಮೂಲಕ ಭಾರೀ ಸುದ್ದಿ ಮಾಡಿರುವ Xiaomi ಕಂಪನಿಯ Redmi Note 7S ಕೊನೆಗೂ ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿದೆ.

ಕಳೆದ ಫೆಬ್ರವರಿಯಲ್ಲಿ 48 ಮೆಗಾ ಪಿಕ್ಸೆಲ್ ಕ್ಯಾಮೆರಾವುಳ್ಳ Redmi Note 7 Proವನ್ನು Xiaomi ಬಿಡುಗಡೆ ಮಾಡಿತ್ತು. ಮೊತ್ತ ಮೊದಲಬಾರಿಗೆ ಇಷ್ಟೊಂದು ಮೆಗಾ ಪಿಕ್ಸೆಲ್ ಸಾಮರ್ಥ್ಯದ ಫೋನ್, ಮೊಬೈಲ್ ಮತ್ತು ಫೋಟೋ ಪ್ರಿಯರಲ್ಲಿ ಸಂಚಲನ ಹುಟ್ಟು ಹಾಕಿತ್ತು.

ಇದನ್ನೂ ಓದಿ | ಕೊನೆಗೂ 48 ಮೆಗಾಪಿಕ್ಸೆಲ್ ಕ್ಯಾಮೆರಾದ Redmi Note 7 Pro ಬಿಡುಗಡೆ; ಹೆಂಗೈತೆ? ಎಷ್ಟು ರೊಕ್ಕಾ ?

Redmi Note 7S ಸ್ಮಾರ್ಟ್‌ಫೋನ್ Redmi Note 7 Pro ರೀತಿಯಲ್ಲಿ ಡ್ಯುಯಲ್ ಕ್ಯಾಮೆರಾ ಹೊಂದಿದೆಯೆನ್ನಲಾಗುತ್ತಿದೆ.Redmi Note 7S ಬಗ್ಗೆ ಹೆಚ್ಚಿನ ಗುಟ್ಟನ್ನು Xiaomi ಕಂಪನಿಯು ಇನ್ನೂ ಬಿಟ್ಟುಕೊಟ್ಟಿಲ್ಲ. 

Xiaomi India ಮುಖ್ಯಸ್ಥ ಮನು ಕುಮಾರ್ ಜೈನ್ ಹೊಸ ಫೋನ್ ಬಿಡುಗಡೆ ದಿನಾಂಕವನ್ನು ಟ್ವೀಟ್ ಮಾಡಿದ್ದು,  ಮೇ 20ರಂದು Redmi Note 7S ಮಾರುಕಟ್ಟೆಗೆ ಪದಾರ್ಪಣೆ ಮಾಡಲಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ. 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ