ಮಿಲ್ಕಿ ವೇ ಗ್ಯಾಲಕ್ಸಿಯಲ್ಲಿ ಸಂಭವಿಸಿದ ಭೀಕರ ಖಗೋಳಿಯ ವಿದ್ಯಮಾನ| ಹಾಲು ಹಾದಿ ನಕ್ಷತ್ರಪುಂಜದ ಮಧ್ಯದ ಕಪ್ಪುರಂಧ್ರ ಸ್ಪೋಟ| 3.5 ಮಿಲಿಯನ್ ವರ್ಷಗಳ ಹಿಂದೆ ಸ್ಫೋಟಗೊಂಡಿರುವ ಬೃಹತ್ ಕಪ್ಪುರಂಧ್ರ| ಇಡೀ ಗ್ಯಾಲಕ್ಸಿಯನ್ನು ಆವರಿಸುತ್ತಿರುವ ಸ್ಫೋಟದ ವಿಕಿರಣ| ಬೃಹತ್ ಪ್ರಮಾಣದ ಶಕ್ತಿ ಹೊರಸೂಸುತ್ತಿರುವ ಸ್ಫೋಟಗೊಂಡಿರುವ ಕಪ್ಪುರಂಧ್ರ| ಸ್ಫೋಟಗೊಂಡ ಸಮಯದಲ್ಲಿ ಭೂಮಿಯ ಮೇಲೆ ಅದಾಗಲೇ ಆದಿ ಮಾನವರ ಆಗಮನ|
ವಾಷಿಂಗ್ಟನ್(ಅ.08): 'ದುಷ್ಮನ್ ಕಹಾ ಹೇ ಅಂದ್ರೆ ಬಗಲ್ ಮೇ ಹೇ..' ಅಂದಂಗಾಯ್ತು ನಮ್ಮ ಪರಿಸ್ಥಿತಿ. ಇಡೀ ವಿಶ್ವದಾದ್ಯಂತ ಕಪ್ಪುರಂಧ್ರಗಳ ಹುಡುಕಾಟದಲ್ಲಿ ನಿರತವಾಗಿರುವ ಖಗೋಳ ವಿಜ್ಞಾನಿಗಳಿಗೆ, ನಮ್ಮದೇ ಹಾಲು ಹಾದಿ ನಕ್ಷತ್ರಪುಂಜದಲ್ಲಿರುವ ಬೃಹತ್ ಕಪ್ಪುರಂಧ್ರ ಸ್ಫೋಟಗೊಂಡಿರುವ ಸುದ್ದಿ ತಡವಾಗಿ ತಿಳಿದಿದೆ.
ಹೌದು, ನಮ್ಮ ಭೂಮಿ, ಸೌರಮಂಡಲವೂ ಸೇರಿದಂತೆ ಅಸಂಖ್ಯ ನಕ್ಷತ್ರಗಳು, ಗೃಹಕಾಯಗಳು ಹಾಗೂ ಇತರ ಆಕಾಶಕಾಯಗಳ ಆವಾಸ ಸ್ಥಾನವಾಗಿರುವ ಮಿಲ್ಕಿ ವೇ ಗ್ಯಾಲಕ್ಸಿಯಲ್ಲಿ ಭಾರೀ ಅವಘಢ ಸಂಭವಿಸಿದೆ. ಗ್ಯಾಲಕ್ಸಿಯ ಮಧ್ಯ ಭಾಗದಲ್ಲಿ ಉಸಿರಾಡುತ್ತಿದ್ದ ಬೃಹತ್ ಕಪ್ಪುರಂಧ್ರ ವಿಸ್ಫೋಟಗೊಂಡಿದ್ದು, ಅಗಾಧ ಪ್ರಮಾಣದಲ್ಲಿ ಶಕ್ತಿಯನ್ನು ಹೊರಸೂಸುತ್ತಿದೆ.
undefined
ಸುಮಾರು 3.5 ಮಿಲಿಯನ್ ವರ್ಷಗಳಷ್ಟು ಹಿಂದೆಯೇ ಈ ಕಪ್ಪುರಂಧ್ರ ವಿಸ್ಫೋಟಗೊಂಡಿದ್ದು, ಅದರ ವಿಕಿರಣಗಳು ಇಡೀ ಗ್ಯಾಲಕ್ಸಿಯನ್ನು ಆವರಿಸುತ್ತಿದೆ ಎಂದು ಖಗೋಳ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಸ್ಫೋಟದಿಂದಾಗಿ ಬೃಹತ್ ಪ್ರಮಾಣಧ ಶಕ್ತಿ ಹಂತ ಹಂತವಾಗಿ ಇಡೀ ಗ್ಯಾಲಕ್ಸಿಯನ್ನು ವ್ಯಾಪಿಸಲಿದೆ ಎನ್ನಲಾಗಿದೆ.
ಈ ಕುರಿತು ಸಂಶೋಧನೆ ಕೈಗೊಂಡಿರುವ ತಂಡದ ಸದಸ್ಯೆ ಲೀಸಾ ಕ್ವೆಲ್ಲಿ, ನಮ್ಮಿಂದ ಸುಮಾರು 2 ಲಕ್ಷ ಜ್ಯೋತಿರ್ವರ್ಷ ದೂರದಲ್ಲಿರುವ ಮಿಲ್ಕಿ ವೇ ಗ್ಯಾಲಕ್ಸಿಯ ಮಧ್ಯಭಾಗದಲ್ಲಿದ್ದ ಕಪ್ಪುರಂಧ್ರದ ಸ್ಫೋಟ ಗ್ಯಾಲಕ್ಸಿಯ ರಚನೆಯ ಕ್ರಮದಲ್ಲಿ ಬದಲಾವಣೆ ತರಬಹುದು ಎಂಬ ಆತಂಕ ಹೊರಹಾಕಿದ್ದಾರೆ.
ಈ ಖಗೋಳಿಯ ವಿದ್ಯಮಾನ ತೀರ ಇತ್ತಿಚೀಗೆ ಸಂಭವಿಸಿದ್ದು, ಕಪ್ಪುರಂಧ್ರ ಸ್ಫೋಟಗೊಂಡ ಸಮಯದಲ್ಲಿ ಭೂಮಿಯ ಮೇಲೆ ಅದಾಗಲೇ ಆದಿ ಮಾನವರ ಆಗಮನವಾಗಿತ್ತು ಎಂದು ಲೀಸಾ ಕ್ವೆಲ್ಲಿ ತಿಳಿಸಿದ್ದಾರೆ.