ಬೆಂಗಳೂರು(ಏ.16): ಒಂದು ಕಿ.ಮೀ.ಗೆ ಎಷ್ಟು ಮೈಲು ಎಂದು ಕೇಳಿದ್ರೆ ಉತ್ತರಿಸಲು ನಮ್ಮಲ್ಲಿ ಬಹುತೇಕರು ತಡಬಡಾಯಿಸುತ್ತಾರೆ. ಅಂತದ್ದರಲ್ಲಿ ಮಕ್ಕಳು ಬಂದು ಒಂದು ಜ್ಯೋತಿರ್ವರ್ಷ ಅಂದ್ರೆ ಎಷ್ಟು ದೂರ ಅಂತ ಕೇಳಿದ್ರೆ ಏನ್ಮಾಡೋದು?.

ಗೊತ್ತಿಲ್ಲ ಅನ್ನಲು ಅವಮಾನ. ಮಕ್ಕಳು ಏನಂತಾರೋ ಎಂಬ ಅನುಮಾನ. ಹಾಗಿದ್ರೆ ಒಂದು ಜ್ಯೋತಿರ್ವರ್ಷ ಅಂದ್ರೆ ಎಷ್ಟು ದೂರ ಎಂಬುದರ ಕುರಿತು ಖುದ್ದು ನಾಸಾ ಮಾಹಿತಿ ನೀಡಿದೆ.

ನಮ್ಮ ಹಾಲು ಹಾದಿ ಗ್ಯಾಲಕ್ಸಿಯ ದೂರ ಅಳೆದಿರುವ ನಾಸಾ, ಜ್ಯೋತಿರ್ವರ್ಷದ ಸಂಪೂರ್ಣ ಮಾಹಿತಿ ನೀಡಿದೆ. ಈ ಮೂಲಕ ನಾವು ಭೂಮಿ ಮತ್ತು ಬ್ರಹ್ಮಾಂಡದ ಇತರ ಗ್ರಹಕಾಯಗಳ ದೂರವನ್ನು ಜ್ಯೋತಿರ್ವರ್ಷದ ಮಾನದಲ್ಲಿ ಅಳೆಯಬಹುದಾಗಿದೆ.

ಜ್ಯೋತಿರ್ವರ್ಷ ಅಂದರೇನು?:

ಜ್ಯೋತಿರ್ವರ್ಷ ಅಂದರೆ ಬೆಳಕು ಒಂದು ವರ್ಷದಲ್ಲಿ ಕ್ರಮಿಸುವ ಒಟ್ಟು ದೂರವಾಗಿದ್ದು, ಈ ದೂರವನ್ನು ಅಳೆಯುವ ಮೂಲಕ ಮತ್ತೊಂದು ನಕ್ಷತ್ರ ಅಥವಾ ಬೇರೆ ಗ್ರಹಕಾಯ ನಮ್ಮಿಂದ ಎಷ್ಟು ದೂರ ಇದೆ ಎಂಬುದನ್ನು ತಿಳಿಯಬಹುದಾಗಿದೆ. ಬೆಳಕು ಅತ್ಯಂತ ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ಅದು ಒಂದು ಸೆಕೆಂಡ್‌ಗೆ ಬರೋಬ್ಬರಿ ಮೂರು ಲಕ್ಷ ಕಿ.ಮೀ. ದೂರ ಕ್ರಮಿಸುತ್ತದೆ.

ಒಂದು ಜ್ಯೋತಿರ್ವರ್ಷ ಅಂದರೆ ಎಷ್ಟು ದೂರ?:

ಈ ಮೇಲೆ ಹೇಳಿದಂತೆ ಬೆಳಕು ಒಂದು ಸೆಕೆಂಡ್‌ಗೆ 3 ಲಕ್ಷ ಕಿ.ಮೀ. ದುರ ಕ್ರಮಿಸುತ್ತದೆ. ಹೀಗೆ ಬೆಳಕು ಒಂದು ವರ್ಷದ ಅವಧಿಯಲ್ಲಿ ಕ್ರಮಿಸುವ ದೂರವನ್ನು ಒಂದು ಜ್ಯೋತಿರ್ವರ್ಷ ಎಂದು ಕೆಯುತ್ತಾರೆ.

1 ಲೈಟ್ ಸೆಕೆಂಡ್:

186,000 ಮೈಲು(300,000 ಕಿ.ಮೀ)

1 ಲೈಟ್ ಮಿನಟ್:

11,160,000 ಮೈಲು(18,000,000 ಕಿ.ಮೀ)

ಸೂರ್ಯನ ಬೆಳಕು ಭೂಮಿಯನ್ನು ತಲುಪಲು 8.3 ಲೈಟ್ ಮಿನಟ್ ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಸೂರ್ಯ ಮತ್ತು ಭೂಮಿಯ ದೂರವನ್ನು ಕರಾರುವಕ್ಕಾಗಿ ಅಳೆಯಬಹುದಾಗಿದೆ.

ಅದರಂತೆ ಸೂರ್ಯನ ಬೆಳಕು ಗುರು ಗ್ರಹವನ್ನು ತಲುಪಲು 43.2 ಲೈಟ್ ಮಿನಟ್ ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಸೂರ್ಯ ಮತ್ತು ಗುರು ಗ್ರಹದ ದೂರವನ್ನು ಕರಾರುವಕ್ಕಾಗಿ ಅಳೆಯಬಹುದಾಗಿದೆ.

1 ಲೈಟ್ ಆವರ್:

671 ಮಿಲಿಯಮ್ ಮೈಲು(1.08 ಬಿಲಿಯನ್ ಕಿ.ಮೀ)

ಸೂರ್ಯನ ಬೆಳಕು ನೆಪ್ಚೂನ್ ಗ್ರಹವನ್ನು ತಲುಪಲು 4.1 ಲೈಟ್ ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಸೂರ್ಯ ಮತ್ತು ನೆಪ್ಚೂನ್ ಗ್ರಹದ ದೂರವನ್ನು ಕರಾರುವಕ್ಕಾಗಿ ಅಳೆಯಬಹುದಾಗಿದೆ.

1 ಲೈಟ್ ಡೇ:

16.1 ಬಿಲಿಯನ್ ಮೈಲು(25.09 ಬಿಲಿಯನ್ ಕಿ.ಮೀ)

1 ಲೈಟ್ ಇಯರ್:(ಒಂದು ಜ್ಯೋತಿರ್ವರ್ಷ)

5.8 ಟ್ರಿಲಿಯನ್ ಮೈಲು(9.4 ಟ್ರಿಲಿಯನ್ ಕಿ.ಮೀ)

ನಮ್ಮ ಸೌರಮಂಡಲದ ಅತ್ಯಂತ ಹತ್ತಿರದ ನಕ್ಷತ್ರವಾದ ಪ್ರಾಕ್ಸಿಮಾ ಸೆಂಟಾರಿ ಮತ್ತು ಪ್ರಾಕ್ಸಿಮಾ ಬಿ ನಮ್ಮಿಂದ 4.25 ಜ್ಯೋತಿರ್ವರ್ಷ ದೂರದಲ್ಲಿದೆ.

100 ಲೈಟ್ ಇಯರ್ಸ್:

588 ಟ್ರಿಲಿಯನ್ ಮೈಲು(946 ಟ್ರಿಲಿಯನ್ ಕಿ.ಮೀ)

ಇನ್ನು ನಮ್ಮ ಹಾಲು ಹಾದಿ ಗ್ಯಾಲಕ್ಸಿ ಒಟ್ಟು 100,000 ಜ್ಯೋತಿರ್ವರ್ಷ ಸುತ್ತಳತೆ ಹೊಂದಿದೆ.

100,000 ಲೈಟ್ ಇಯರ್:

588 ಕ್ವಾಡ್ರಿಲಿಯನ್ ಮೈಲು(946 ಕ್ವಾಡ್ರಿಲಿಯನ್ ಕಿ.ಮೀ)