ಬೆಂಗಳೂರಿನಲ್ಲಿ ಏಸಸ್‌ ಹೊಸ ಮಳಿಗೆ; ಲ್ಯಾಪ್‌ಟಾಪ್‌ ಖರೀದಿಸಿ ಕ್ಷಣದೊಳಗೆ!

Published : Oct 08, 2019, 03:01 PM IST
ಬೆಂಗಳೂರಿನಲ್ಲಿ ಏಸಸ್‌ ಹೊಸ ಮಳಿಗೆ; ಲ್ಯಾಪ್‌ಟಾಪ್‌ ಖರೀದಿಸಿ ಕ್ಷಣದೊಳಗೆ!

ಸಾರಾಂಶ

ಇನ್ಮುಂದೆ ಲ್ಯಾಪ್‌ಟಾಪ್‌ಗಳನ್ನು ಖರೀದಿಸುವುದು ಇನ್ನಷ್ಟು ಸುಲಭವಾಗಲಿದೆ. ಲ್ಯಾಪ್‌ಟಾಪ್‌ಗಳಿಗೆ ಹೆಸರುವಾಸಿಯಾಗಿರುವ ಏಸಸ್ ಕಂಪನಿ ಬೆಂಗಳೂರಿನಲ್ಲಿ ಹೊಸತೊಂದು ಮಳಿಗೆ ಆರಂಭಿಸಿದ್ದು, ಇನ್ನೂ 100 ಮಳಿಗೆ ಆರಂಭಿಸುವ ಯೋಜನೆ ಹೊಂದಿದೆ.   

ಬೆಂಗಳೂರು (ಅ.08): ಅತ್ಯಾಧುನಿಕ ಲ್ಯಾಪ್‌ಟಾಪ್‌ಗಳನ್ನು ಜನತೆಗೆ ಅರ್ಪಿಸುತ್ತಿರುವ ಏಸಸ್‌ ಕಂಪನಿ ಜನರಿಗೆ ಮತ್ತಷ್ಟು ಹತ್ತಿರಾಗಲು ಯೋಜನೆ ಹಾಕಿಕೊಂಡಿದೆ. 

ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ಸುಮಾರು 100 ಹೊಸ ಏಸಸ್‌ ಮಳಿಗೆ ತೆರೆಯುವ ಉದ್ದೇಶ ಕಂಪನಿಗೆ ಇದೆ. ಅದರ ಭಾಗವಾಗಿ ಬೆಂಗಳೂರಿನ ಕೋರಮಂಗಲದಲ್ಲಿ ಮೆಗಾ ಐಟಿ ಸ್ಟೋರ್‌ ಅನ್ನು ಆರಂಭಿಸಲಾಗಿದೆ.

ಇದನ್ನೂ ಓದಿ: ಫಿಂಗರ್ ಪ್ರಿಂಟ್ ಆಯ್ತು, ಭಾರತದಲ್ಲೀಗ ಚಹರೆ ಗುರುತಿನ ವ್ಯವಸ್ಥೆ ಜಾರಿ!...

ಸಂಸ್ಥೆಯ ಉತ್ಪನ್ನಗಳಾದ ವಿವೋ ಬುಕ್‌, ಝೆನ್‌ ಬುಕ್‌, ಝೆನ್‌ ಬುಕ್‌-ಫ್ಲಿಪ್‌ ಮತ್ತು ರಿಪಬ್ಲಿಕ್‌ ಆಫ್‌ ಗೇಮರ್ಸ್‌ ಲ್ಯಾಪ್‌ಟಾಪ್‌ಗಳು ಮತ್ತಿತರ ಉತ್ಪನ್ನಗಳು ಇಲ್ಲಿ ಲಭ್ಯವಿದೆ. ಏಸಸ್‌ ಇಂಡಿಯಾ ಸಂಸ್ಥೆಯ ನ್ಯಾಷನಲ್‌ ಸೇಲ್ಸ್‌ ಹೆಡ್‌ ಜಿಗ್ನೆಶ್‌ ಭಾವ್ಸರ್‌ ಮತ್ತು ಗೌರವ್‌ ಡಿ ಜೈನ್‌ ಈ ಹೊಸ ಮಳಿಗೆಯನ್ನು ಉದ್ಘಾಟಿಸಿದರು.

‘ಬೆಂಗಳೂರಿನಲ್ಲಿ ಮಳಿಗೆ ತೆರೆಯುತ್ತಿರುವುದು ನಮಗೆ ಸಂತಸ ತಂದಿದೆ. ಗ್ರಾಹಕರು ಮಳಿಗೆಗೆ ಬಂದು ತಮಗೆ ಬೇಕಾದ ಏಸಸ್‌ ಸಂಸ್ಥೆಯ ಉತ್ಪನ್ನಗಳನ್ನು ಖರೀದಿಸಬಹುದು’ ಎಂದು ಏಸಸ್‌ ಸಂಸ್ಥೆಯ ನೋಟ್‌ ಬುಕ್‌ ವಿಭಾಗ ಮುಖ್ಯಸ್ಥ ಆರ್ನಲ್ಡ್‌ ಸು ಹೇಳಿದರು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ರಾತ್ರಿ ಮಲಗುವ ಮುನ್ನ ಟಿವಿ ಅನ್‌ಪ್ಲಗ್‌ ಮಾಡೋದಿಲ್ವಾ? ಶೇ. 99ರಷ್ಟು ಜನರಿಗೆ ಈ ವಿಚಾರವೇ ಗೊತ್ತಿಲ್ಲ..
ನಿಮ್ಮ ಪವರ್‌ ಬ್ಯಾಂಕ್‌ನಲ್ಲಿ ಈ 5 ಸಂಕೇತ ಕಂಡರೆ ಅದು ಟೈಂ ಬಾಂಬ್! ತಕ್ಷಣ ಈ ಕೆಲಸ ಮಾಡಿ, ದುರಂತ ತಪ್ಪಿಸಿ!