ಏರ್‌ಟೆಲ್ 84 ದಿನಗಳ ವ್ಯಾಲಿಡಿಟಿ ಹೊಂದಿರುವ 719 ರೂ. ಪ್ಲಾನ್ ಬಿಡುಗಡೆ ಮಾಡಿದೆ. ಇದರಲ್ಲಿ ಅನ್‌ಲಿಮಿಟೆಡ್ ಕರೆ, ದಿನಕ್ಕೆ 1.5GB ಡೇಟಾ ಮತ್ತು 100 SMS ಸೌಲಭ್ಯಗಳಿವೆ. ಜಿಯೋ ಕೂಡ ಇದೇ ರೀತಿಯ 84 ದಿನಗಳ ಪ್ಲಾನ್ ಅನ್ನು ಕಡಿಮೆ ಬೆಲೆಗೆ ನೀಡುತ್ತಿದೆ.
ನವದೆಹಲಿ: ಟೆಲಿಕಾಂ ಜಗತ್ತು ಪ್ರತಿಯೊಬ್ಬರ ಜೀವನದ ಒಂದು ಭಾಗವಾಗಿದೆ. ಟೆಲಿಕಾಂ ಸೇವೆಗಳಲ್ಲಿ ಕೊಂಚ ವ್ಯತ್ಯಾಸ ಉಂಟಾದರೂ ಬಳಕೆದಾರರು ಚಡಪಡಿಸುತ್ತಾರೆ. ಇಂಟರ್‌ನೆಟ್ ಇಲ್ಲದ ಜೀವನವನ್ನು ಊಹಿಸಿಕೊಳ್ಳಲು ಟೀನೇಜರ್ಸ್ ಭಯಪಡ್ತಾರೆ. ಕಳೆದ ಎರಡು ತಿಂಗಳಿನಿಂದ ಟೆಲಿಕಾಂ ಅಂಗಳದಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ಖಾಸಗಿ ಕಂಪನಿಗಳಿಗೆ ಬಿಎಸ್‌ಎನ್‌ಎಲ್ ಟಕ್ಕರ್ ಕೊಡುತ್ತಿದೆ. ಬೆಲೆ ಏರಿಕೆಯಿಂದ ಗ್ರಾಹಕರನ್ನು ಕಳೆದುಕೊಳ್ಳುತ್ತಿರುವ ಖಾಸಗಿ ಟೆಲಿಕಾಂ ಕಂಪನಿಗಳು ಕಡಿಮೆ ಬೆಲೆಯ ಹೆಚ್ಚು ಅವಧಿಯ ರೀಚಾರ್ಜ್ ಪ್ಲಾನ್‌ಗಳನ್ನು (Recharge Plans) ಬಿಡುಗಡೆಗೊಳಿಸುತ್ತಿವೆ. ಅತಿ ಹೆಚ್ಚು ಗ್ರಾಹಕರನ್ನು ಕಳೆದುಕೊಳ್ಳುತ್ತಿರುವ ರಿಲಯನ್ಸ್ ಜಿಯೋ ದೀಪಾವಳಿ ಹಬ್ಬದ ಹೆಸರಿನಲ್ಲಿ ಹೊಸ ಯೋಜನೆಗಳನ್ನು ಘೋಷಣೆ ಮಾಡುತ್ತಿದೆ. ಇದೀಗ ಏರ್‌ಟೆಲ್ ಸಹ ಹೊಸ ಪ್ಲಾನ್ ಬಿಡುಗಡೆಗೊಳಿಸಿದೆ.
ಏರ್‌ಟೆಲ್ 84 ದಿನ ವ್ಯಾಲಿಡಿಟಿಯ ಪ್ಲಾನ್ ಹೊರ ತಂದಿದೆ. ಏರ್‌ಟೆಲ್ ಬಳಕೆದಾರರು 719 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ ಈ ಪ್ಲಾನ್ ಆಕ್ಟಿವೇಟ್ ಆಗುತ್ತದೆ. ಈ ಯೋಜನೆಯಡಿ ಗ್ರಾಹಕರಿಗೆ ಅನ್‌ಲಿಮಿಟೆಡ್ ಕಾಲ್, ಪ್ರತಿದಿನ 1.5GB ಡೇಟಾ ಮತ್ತು 100 SMS ಸೌಲಭ್ಯ ಸಿಗುತ್ತದೆ. ಇಡೀ ಪ್ಲಾನ್‌ನಲ್ಲಿ ಗ್ರಾಹಕರಿಗೆ ಒಟ್ಟು 126GB ಡೇಟಾ ಸಿಗುತ್ತದೆ.
undefined
ಇದನ್ನೂ ಓದಿ: ಜಿಯೋ-ಏರ್‌ಟೆಲ್ ಟೆಲಿಕಾಂ ಏಕಸ್ವಾಮ್ಯಕ್ಕೆ ಮಸ್ಕ್ 'ಸ್ಟಾರ್‌ಲಿಂಕ್' ಎಂಟ್ರಿ ಖಚಿತ, ಅಂಬಾನಿಗೆ ಶುರು ತಳಮಳ!
ಇದು 84 ದಿನಗಳ ದೀರ್ಘಾವಧಿಯ ಪ್ಲಾನ್ ಆಗಿರುವ ಕಾರಣ ಪದೇ ಪದೇ ರೀಚಾರ್ಜ್ ಮಾಡೋದು ತಪ್ಪಲಿದೆ. 126 GB ಡೇಟಾ ಬಳಸಿ ವಿಡಿಯೋ ಸ್ಟ್ರೀಮಿಂಗ್, ಗೇಮಿಂಗ್ ಸೇರಿದಂತೆ ಆನ್‌ಲೈನ್ ಸೇವೆಗಳನ್ನು ಪಡೆದುಕೊಳ್ಳಬಹುದು. ಯಾವುದೇ ನೆಟ್‌ವರ್ಕ್ ಸಂಖ್ಯೆಗೆ ಕರೆ ಮಾಡಿ ಅನಿಯಮಿತ ಅವಧಿಯವರೆಗೆ ಮಾತನಾಡಬಹುದು.
ಏರ್‌ಟೆಲ್‌ಗಿಂತ ಕಡಿಮೆ ಬೆಲೆಯಲ್ಲಿ ಜಿಯೋ ಆಫರ್
84 ದಿನ ವ್ಯಾಲಿಡಿಟಿಯ ಆಫರ್ ನ್ನು ಏರ್‌ಟೆಲ್‌ಗಿಂತ ಕಡಿಮೆ ಬೆಲೆಯಲ್ಲಿ ರಿಲಯನ್ಸ್ ಜಿಯೋ ನೀಡುತ್ತಿದೆ. ರಿಲಯನ್ಸ್ ಜಿಯೋ ಬಳಕೆದಾರರು 666 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ 84 ದಿನ ವ್ಯಾಲಿಡಿಟಿಯ ಪ್ಲಾನ್ ಆಕ್ಟಿವೇಟ್ ಆಗುತ್ತದೆ. ಏರ್‌ಟೆಲ್ ನೀಡುವ ಎಲ್ಲಾ ಸೌಲಭ್ಯಗಳನ್ನು ಜಿಯೋ ನೀಡುತ್ತಿದೆ.
ಇದನ್ನೂ ಓದಿ: 3 ತಿಂಗಳು Free ಇಂಟರ್‌ನೆಟ್, 18 OTT, 150 ಚಾನೆಲ್ ಆಕ್ಸೆಸ್; Jio, Airtelಗೆ ಟಕ್ಕರ್ ಕೊಡ್ತಿರೋದು ದೇಶಿ ಕಂಪನಿ