ಮಾರುಕಟ್ಟೆಗೆ ಬರ್ತಿದೆ ಬಿಎಸ್‌ಎನ್‌ಎಲ್ 5G ಸ್ಮಾರ್ಟ್‌ಫೋನ್: ಏನಿದರ ವಿಶೇಷ? ಬೆಲೆ ಎಷ್ಟು?

By Mahmad RafikFirst Published Oct 28, 2024, 7:25 PM IST
Highlights

ಬಿಎಸ್‌ಎನ್‌ಎಲ್ 200MP ಕ್ಯಾಮೆರಾ ಹೊಂದಿರುವ 5G ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಜ್ಜಾಗಿದೆ. ಒಂದು ವರ್ಷದ ಉಚಿತ ರೀಚಾರ್ಜ್‌ನೊಂದಿಗೆ ಬರಲಿರುವ ಈ ಫೋನ್, ಟೆಲಿಕಾಂ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವ ನಿರೀಕ್ಷೆಯಿದೆ.

ನವದೆಹಲಿ: ಸರ್ಕಾರಿ ಟೆಲಿಕಮ್ಯುನಿಕೇಷನ್ ಕಂಪನಿ ಬಿಎಸ್‌ಎನ್‌ಎಲ್ (ಭಾರತ ಸಂಚಾರ ನಿಗಮ ಲಿಮಿಟೆಡ್) ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಗ್ಗೆ ಇರಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಬಗ್ಗೆ ವರದಿಗಳು ಪ್ರಕಟವಾಗಿವೆ. ಅಡ್ವಾನ್ಸ್ ಫೀಚರ್ ಹೊಂದಿರುವ 5G ಸ್ಮಾರ್ಟ್‌ಫೋನ್ ಸುಧಾರಿತ ವೈಶಿಷ್ಟ್ಯವುಳ್ಳ ನಂಬಿಕೆ ಅರ್ಹ ಎರಡು ವಿಶ್ವಾಸಾರ್ಹ  ಬ್ರ್ಯಾಂಡ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಬಿಎಸ್‌ಎನ್ಎಲ್ ಪ್ಲಾನ್ ಮಾಡಿಕೊಂಡಿದೆ. ಈ ಮೂಲಕ 5G ಸ್ಮಾರ್ಟ್‌ಫೋನ್ ತಯಾರಿಕೆ ವಲಯಕ್ಕೆ ಬಿಎಸ್‌ಎನ್‌ಎಲ್ ಎಂಟ್ರಿ ಕೊಡ್ತಿದೆ ಎಂದು ವರದಿಯಾಗಿದೆ.

ಮಾರುಕಟ್ಟೆಗೆ ಬರುವ ಬಿಎಸ್‌ಎನ್ಎಲ್  5G ಸ್ಮಾರ್ಟ್‌ಫೋನ್ ಉನ್ನತ ಗುಣಮಟ್ಟದ ಫೋಟೋಗ್ರಾಫಿಯ ವೈಶಿಷ್ಟ್ಯವುಳ್ಳ ಕಟಿಂಗ್-ಎಡ್ಜ್ ಕ್ಯಾಮೆರಾ ಸಿಸ್ಟಂ ಒಳಗೊಂಡಿರುತ್ತದೆ.  ಹಿಂಬದಿಯ ಕ್ಯಾಮೆರಾ 200-ಮೆಗಾಪಿಕ್ಸಲ್ ಮತ್ತು ಮುಂಬದಿಯ ಕ್ಯಾಮೆರಾ 32-ಮೆಗಾಪಿಕ್ಸಲ್ ಹೊಂದಿರುತ್ತದೆ. ಎರಡೂ ಕ್ಯಾಮೆರಾ ಮೂಲಕ ಫೋಟೋ ಮತ್ತು ವಿಡಿಯೋ ಮಾಡಬಹುದಾಗಿದೆ. ಇನ್ನುಳಿದಂತೆ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಹೊಂದಿರುವ ಫೀಚರ್ ಒಳಗೊಂಡಿರುತ್ತವೆ. ಇದರ ಜೊತೆಯಲ್ಲಿ ಲಾರ್ಜ್ ಬ್ಯಾಟರಿ ಕೆಪಾಸಿಟಿ (6000mAh battery capacity) ಮತ್ತು ಫಾಸ್ಟ್ ಚಾರ್ಜಿಂಗ್ (100W fast charging) ಒಳಗೊಂಡಿರುತ್ತದೆ. ಕಡಿಮೆ ಸಮಯದಲ್ಲಿ ಬ್ಯಾಟರಿ ಫುಲ್ ಆಗುವ ತಂತ್ರಜ್ಞಾನವನ್ನು ಬಿಎಸ್‌ಎನ್‌ಎಲ್ 5G ಸ್ಮಾರ್ಟ್‌ಫೋನ್ ಒಳಗೊಂಡಿರುತ್ತದೆ.

Latest Videos

ವಿಶೇಷ ಆಫರ್‌ಗಳು 
ಬಿಎಸ್‌ಎನ್‌ಎಲ್ 5G ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ 1 ವರ್ಷದ ಸ್ಪೆಷಲ್ ರೀಚಾರ್ಜ್ ಲಭ್ಯವಾಗುತ್ತದೆ. ಈ ಪ್ಲಾನ್‌ ಅನಿಯಮಿತ ಕರೆ ಮತ್ತು ಸೀಮಿತ ಉಚಿತ ಎಸ್‌ಎಂಎಸ್ ಸೌಲಭ್ಯವನ್ನು ಸಹ ಒಳಗೊಂಡಿರುತ್ತದೆ. ಈ ಆಫರ್ ಸ್ಮಾರ್ಟ್‌ಫೋನ್ ಖರೀದಿ ಮಾಡಿದ ಮೊದಲ ವರ್ಷ ಮಾತ್ರ ಇರುತ್ತದೆ. ಈ ಮೂಲಕ ಗ್ರಾಹಕರ ಹಣ ಉಳಿಸಲು ಬಿಎಸ್‌ಎನ್ಎಲ್ ಮುಂದಾಗಿದೆಯಂತೆ.

ಮಾಧ್ಯಮಗಳ ವರದಿ ಪ್ರಕಾರ, ಏಪ್ರಿಲ್-2025ರ ವೇಳೆಗೆ ಬಿಎಸ್‌ಎನ್‌ಎಲ್  5G ಸ್ಮಾರ್ಟ್‌ಫೋನ್ ಬಿಡುಗಡೆಯಾಗುವ ಸಾಧ್ಯತೆಗಳಿವೆ. 5ಜಿ ನೆಟ್‌ವರ್ಕ್ ಅಳವಡಿಕೆ ಪೂರ್ಣಗೊಂಡ ನಂತರವೇ ಸ್ಮಾರ್ಟ್‌ಪೋನ್ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಮೇಡ್‌ ಇನ್ ಇಂಡಿಯಾ ಥೀಮ್ ಅಡಿಯಲ್ಲಿ ಟಾಟಾ ಜೊತೆ ಕೈ ಜೋಡಿಸಿರುವ ಬಿಎಸ್‌ಎನ್‌ಎಲ್ ಭಾರತದಾದ್ಯಂತ 5ಜಿ ನೆಟ್‌ವರ್ಕ್ ಅಳವಡಿಕೆಯನ್ನು ಮಾಡುತ್ತಿದೆ. ಕಳೆದ ಮೂರು ತಿಂಗಳಿನಿಂದ ಬಿಎಸ್‌ಎನ್‌ಎಲ್ ಬಳಕೆದಾರರ ಸಂಖ್ಯೆಯಲ್ಲಿಯೂ ಏರಿಕೆ ಕಂಡು ಬಂದಿದೆ. ಇದೆಲ್ಲದರೊಂದಿಗೆ ಟಾಟಾ ಬೆಂಬಲದಿಂದಾಗಿ ಬಿಎಸ್‌ಎನ್ಎಲ್ ಬಲ ಮತ್ತಷ್ಟು ಹೆಚ್ಚಳವಾಗಿದೆ ಎಂದು ಹೇಳಬಹುದು. 

ಇದನ್ನೂ ಓದಿ: ಗ್ರಾಹಕರಿಗಾಗಿ ಹೊಸ 7 ಸೇವೆ ಬಿಡುಗಡೆಗೊಳಿಸಿದ ಬಿಎಸ್‌ಎನ್‌ಎಲ್: ಪತರಗುಟ್ಟಿದ ಜಿಯೋ, ಏರ್‌ಟೆಲ್

ಮಾರುಕಟ್ಟೆ ಮೇಲೆ ಪರಿಣಾಮ
ಬಿಎಸ್‌ಎನ್‌ಎಲ್ ಸ್ಮಾರ್ಟ್‌ಪೋನ್ ತಯಾರಿಕೆಗೆ ಎಂಟ್ರಿ ಕೊಡೋದರಿಂದ ಟೆಲಿಕಾಂ ಮತ್ತು ಆಟೋಮೊಬೈಲ್ ಮೇಲೆ ನೇರ ಪರಿಣಾಮ ಬೀರಲಿದೆ. ಮೇಡ್ ಇನ್ ಇಂಡಿಯಾ ಕಾನ್ಸೆಪ್ಟ್ ಬಳಕೆ ಮಾಡುತ್ತಿರೋದರಿಂದ ಗ್ರಾಹಕರನ್ನು ಸುಲಭವಾಗಿ ಸೆಳೆಯಬಹುದು. ಬಿಎಸ್‌ಎನ್‌ಎಲ್ ಬಿಡುಗಡೆ ಮಾಡುವ ಸ್ಮಾರ್ಟ್‌ಫೋನ್ ಬೆಲೆಗಳು ಬಹಿರಂಗವಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಬಹುದೊಡ್ಡ ಬದಲಾವಣೆಯನ್ನು ಕಾಣಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. 

5G ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆಗೆ ಕಾರಣವಾಗುವ ಎಲ್ಲಾ ಸಾಧ್ಯತೆಗಳಿವೆ. ಫೋನ್ ಖರೀದಿಸುವ ಬಳಕೆದಾರರಿಗೆ ಒಂದು ವರ್ಷದವರೆಗಿನ ವಿಶೇಷ ರೀಚಾರ್ಜ್ ಘೋಷಣೆ ಮಾಡುತ್ತಿರೋದರಿಂದ ಗ್ರಾಹಕರನ್ನು ಸೆಳೆಯುವಲ್ಲಿ ಬಿಎಸ್‌ಎನ್ಎಲ್ ಯಶಸ್ವಿಯಾಗಬಹುದು. ಇದರೊಂದಿಗೆ ಟೆಲಿಕಾಂ ಅಂಗಳದಲ್ಲಿ ಹೊಸ ಉದ್ಯೋಗ ಸೃಷ್ಟಿಗೂ ಈ ಬೆಳವಣಿಗೆಗೆ ಕಾರಣವಾಗಬಹುದು. ಅಂತಿಮ ಬೆಲೆ, ಸ್ಮಾರ್ಟ್‌ಫೋನ್ ಗುಣಮಟ್ಟ ಮತ್ತು ಕಾರ್ಯಕ್ಷಮತೆ, ಸರ್ವಿಸ್ ಮತ್ತು ಗ್ರಾಹಕರ ನಂಬಿಕೆಯನ್ನು ಎಷ್ಟರಮಟ್ಟಿಗೆ ಉಳಿಸಿಕೊಳ್ಳುತ್ತೆ ಎಂಬಿತ್ಯಾದಿ ಅಂಶಗಳು ಬಿಎಸ್‌ಎನ್ಎಲ್ ಬಿಡುಗಡೆಗೊಳಿಸುವ 5G ಸ್ಮಾರ್ಟ್‌ಫೋನ್ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತವೆ. 

ಇದನ್ನೂ ಓದಿ: ಜಿಯೋ, ಏರ್‌ಟೈಲ್, ವಿಐ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ್ರೆ, ಇತ್ತ 2 ತಿಂಗಳಲ್ಲಿ ಹೊಸ ದಾಖಲೆ ನಿರ್ಮಿಸಿದ ಬಿಎಸ್‌ಎನ್‌ಎಲ್

click me!