ಫ್ರೀ ಫ್ರೀ ಫ್ರೀ, ದೀಪಾವಳಿಗೆ ಜಿಯೋದಿಂದ ಮೂರು ತಿಂಗಳು ಉಚಿತ ಸಬ್‌ಸ್ಕ್ರಿಪ್ಷನ್; ಕೋಟ್ಯಂತರ ಬಳಕೆದಾರರಿಗೆ ಗಿಫ್ಟ್

By Mahmad Rafik  |  First Published Oct 29, 2024, 11:58 AM IST

ದೀಪಾವಳಿ ಹಬ್ಬಕ್ಕೆ ಬಳಕೆದಾರರಿಗೆ 3 ತಿಂಗಳ ಉಚಿತ ಪ್ರೊ ಸಬ್‌ಸ್ಕ್ರಿಪ್ಷನ್ ಘೋಷಿಸಿದೆ. ಈ ಆಫರ್ ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ಹೈ ಕ್ವಾಲಿಟಿ ಆಡಿಯೋ ಮತ್ತು ಜಾಹೀರಾತು ರಹಿತ ಸಂಗೀತವನ್ನು ಆನಂದಿಸಬಹುದು.


ಮುಂಬೈ: ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಮುಕೇಶ್ ಅಂಬಾನಿ ಒಡೆತದ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತನ್ನ ಶೇರುದಾರರು, ಉದ್ಯೋಗಿಗಳು ಮತ್ತು ಗ್ರಾಹಕರಿಗೆ ಸಾಲು ಸಾಲು ಗಿಫ್ಟ್‌ಗಳನ್ನು ನೀಡುತ್ತಿದೆ. ಇದೀಗ ಮ್ಯೂಸಿಕ್-ಸ್ಟ್ರೀಮಿಂಗ್ ಪ್ಲಾಟ್‌ಫಾರಂ ಜಿಯೋ ಸಾವನ್‌ನಿಂದ ಹಬ್ಬಕ್ಕೂ ಮೊದಲೇ ಗಿಫ್ಟ್ ಘೋಷಣೆ ಮಾಡಿದೆ. ಯಾವುದೇ ಶುಲ್ಕವಿಲ್ಲದೇ ಉಚಿತವಾಗಿ ಬಳಕೆದಾರರು ಮೂರು ತಿಂಗಳು  JioSaavn Pro ಸಬ್‌ಸ್ಕ್ರಿಪ್ಷನ್ ಪಡೆದುಕೊಳ್ಳಬಹುದಾಗಿದೆ. ಈ ಉಚಿತ ಸಬ್‌ಸ್ಕ್ರಿಪ್ಷನ್‌ನಿಂದಾಗಿ ಬಳಕೆದಾರರು ಹೈ ಕ್ವಾಲಿಟಿಯಲ್ಲಿ ಅನ್‌ಲಿಮಿಟೆಡ್ ಮ್ಯೂಸಿಕ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ವಿಶೇಷ ಆಫರ್ ಕೇವಲ ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದೆ ಎಂದು ಜಿಯೋ ಸಾವನ್ ಮಾಹಿತಿ ನೀಡಿದೆ. 

ಜಿಯೋಸಾವನ್ ಹೇಳಿಕೆ ಪ್ರಕಾರ, ಭಾರತದಲ್ಲಿನ ಬಳಕೆದಾರರು ಹಬ್ಬದ ಸಂಭ್ರಮದಲ್ಲಿ ಆಡ್ ಫ್ರೀ ಸಂಗೀತ ಕೇಳಬಹುದು. ಈ ಆಫರ್ Android, iOS, JioPhone ಮತ್ತು ವೆಬ್‌ ಸೇರಿದಂತೆ ಎಲ್ಲಾ ಡಿವೈಸ್‌ ಮತ್ತು ಇತರೆ ಪ್ಲಾಟ್‌ಫಾರಂನಲ್ಲಿ ಲಭ್ಯವಿದೆ. ಹೊಸ ಬಳಕೆದಾರರಿಗೆ ವಿಭಿನ್ನ ಮತ್ತು ಉತ್ತಮ ಗುಣಮಟ್ಟದ ಅನುಭವವನ್ನು ನೀಡುವುದು ಈ ಆಫರ್ ಉದ್ದೇಶವಾಗಿದೆ. ಈ ಆಫರ್ JioSaavn Pro ಇಂಡಿವ್ಯೂಸಲ್ ಸಬ್‌ಸ್ಕ್ರಿಪ್ಷನ್ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದೆ. 

Latest Videos

undefined

JioSaavn Pro ಇಂಡಿವ್ಯೂಸಲ್ ಸಬ್‌ಸ್ಕ್ರಿಪ್ಷನ್ ಬೆಲೆ ಕೇವಲ 15 ರೂ.ಗಳಿಂದ ರಿಂದ ಪ್ರಾರಂಭವಾಗುತ್ತದೆ. ಇದರ ಜೊತೆಗೆ ಕಂಪನಿಯು ಪ್ರೋ ಲೈಟ್ ಪ್ಲಾನ್ ಸಹ ನೀಡಿದೆ. ಪ್ರೋ ಲೈಟ್ ಪ್ಲಾನ್‌ಗೆ ದಿನಕ್ಕೆ 5 ರೂ. ಮತ್ತು ವಾರಕ್ಕೆ 19 ರೂ. ರೀಚಾರ್ಜ್ ಮಾಡಬೇಕಾಗುತ್ತದೆ. ಪ್ರೊ ಸ್ಟುಡೆಂಟ್ ಪ್ಲಾನ್ ಪ್ರಯೋಜನಗಳನ್ನು ಪಡೆಯಲು ವಿದ್ಯಾರ್ಥಿಗಳು ತಮ್ಮ ಗುರುತನ್ನು ಪರಿಶೀಲಿಸಬೇಕಾಗುತ್ತದೆ.

ಇದನ್ನೂ ಓದಿ: ಜಿಯೋ ದೀಪಾವಳಿ ಧಮಾಕಾ, ಒಂದೇ ಒಂದು ರೀಚಾರ್ಜ್‌‌ಗೆ ಪಡೆಯಿರಿ 3,350 ರೂ ಗಿಫ್ಟ್!

ಇಂಡಿವ್ಯೂಸಲ್ ಪ್ಲಾನ್ ಜೊತೆಯಲ್ಲಿ JioSaavn ಡ್ಯುಯಲ್ ಮತ್ತು ಫ್ಯಾಮಿಲಿ ಪ್ಲಾನ್ ಸಹ ಒಳಗೊಂಡಿದೆ. ಡ್ಯೂಯಲ್ ಪ್ಲಾನ್‌ನಲ್ಲಿ ಒಂದು ಅಕೌಂಟ್‌ನಲ್ಲಿ ಇಬ್ಬರು ಮೆಂಬರ್‌ಶಿಪ್ ಪಡೆಯಬಹುದು. ಫ್ಯಾಮಿಲಿ ಪ್ಲಾನ್‌ನಲ್ಲಿ ಕುಟುಂಬದ ಐವರು ಸದಸ್ಯರು ಸಬ್‌ಸ್ಕ್ರಿಪ್ಷನ್ ಪಡೆದುಕೊಂಡು ಮನರಂಜನೆಯನ್ನು ಆನಂದಿಸಬಹುದಾಗಿದೆ. ಇದರಲ್ಲಿ ಐವರಿಗೂ ಪರ್ಸನಲ್ ಪ್ರೋ ಅಕೌಂಟ್ ಇರಲಿದೆ. ಈ ಎರಡೂ ಪ್ಲಾನ್‌ಗಳ ಬೆಲೆ ಕ್ರಮವಾಗಿ 149 ರೂಪಾಯಿ ಮತ್ತು 179 ರೂಪಾಯಿ ಆಗಿರುತ್ತದೆ.

JioSaavn ಪ್ರೊ ಸಬ್‌ಸ್ಕ್ರಿಪ್ಷನ್‌ನಲ್ಲಿ ಜಾಹೀರಾತುಗಳ ಅಡೆತಡೆಯಿಲ್ಲದ ಸಂಗೀತವನ್ನು ಆನಂದಿಸಬಹುದು. ಆಪ್‌ನಲ್ಲಿ ಹಾಡುಗಳನ್ನು ಡೌನ್‌ಲೋಡ್ ಮಾಡಿಕೊಂಡು, ಇಂಟರ್‌ನೆಟ್ ಇಲ್ಲದೇ ಕೇಳುವ ಅವಕಾಶವೂ ಲಭ್ಯವಿದೆ. MP3 ಫೈಲ್‌ಗಳಿಗೆ ಹೆಚ್ಚಿನ ಬಿಟ್ರೇಟ್ ಆಗಿರುವ 320kbps ನಲ್ಲಿ ಉತ್ತಮ ಗುಣಮಟ್ಟದ ಸಂಗೀತ ಸ್ಟ್ರೀಮಿಂಗ್ ಅನ್ನು ಸಹ ಸಕ್ರಿಯಗೊಳಿಸುತ್ತದೆ. ನಿಮ್ಮ ಜಿಯೋ ಸಂಖ್ಯೆಗೆ ಅನಿಯಮಿತ JioTunes ಅನ್ನು ಸಹ ನೀವು ಹೊಂದಿಸಬಹುದು.

ಇದನ್ನೂ ಓದಿ: ಮಾರುಕಟ್ಟೆಗೆ ಬರ್ತಿದೆ ಬಿಎಸ್‌ಎನ್‌ಎಲ್ 5G ಸ್ಮಾರ್ಟ್‌ಫೋನ್: ಏನಿದರ ವಿಶೇಷ? ಬೆಲೆ ಎಷ್ಟು?

click me!