Dec 23, 2018, 6:35 PM IST
ಬೆಳೆಯುತ್ತಿರುವ ನಗರೀಕರಣ, ಸಣ್ಣದಾಗುತ್ತಿರುವ ಕುಟುಂಬಗಳು, ಬದಲಾಗುತ್ತಿರುವ ಆದ್ಯತೆಗಳು... ಈ ನಡುವೆ ಮದುವೆಯಾಗ ಬಯಸುವ ಯುವಕ/ಯುವತಿಯರಿಗೆ ತಮಗೆ ಬೇಕಾದ ಜೀವನ ಸಂಗಾತಿಯನ್ನು ಕಂಡುಹುಡುಕುವುದು ಸುಲಭವಲ್ಲ. ವಧು-ವರಾಣ್ವೇಷಣೆಯ ಸಾಂಪ್ರದಾಯಿಕ ರೀತಿಗಳು ಸಾಲದಾದಾಗ ಪತ್ರಿಕೆಗಳು ಜನರ ನೆರವಿಗೆ ಬಂದುವು. ಇಂಟರ್ನೆಟ್ ತಂತ್ರಜ್ಞಾನ ಬೆಳೆದಂತೆ ಅವುಗಳನ್ನೂ ಬಳಸಿಯೂ ಸಂಗಾತಿಯ ಹುಡುಕಾಟ ನಡೆಸಿದ್ದಾಯಿತು. ಹುಡುಗ ಹೇಗಿದ್ದಾನೋ, ಹುಡುಗಿ ನನಗೆ ಅರ್ಥಮಾಡಿಕೊಳ್ಳುವವಳು ಹೌದೋ ಅಲ್ಲವೋ.... ಹೀಗೆ ಹತ್ತು ಹಲವು ವಿವಾಹ-ಪೂರ್ವ ಕಳವಳ-ಆತಂಕಗಳಿಗೆ ಈಗ ತಂತ್ರಜ್ಞಾನ ಪರಿಹಾರ ಒದಗಿಸುತ್ತಿದೆ! ಇದೀಗ ಭಾರತಕ್ಕೆ ಹೊಸತಾದ, Betterhalf.ai ಎಂಬ ಮ್ಯಾಟ್ರಿಮೋನಿ ಆ್ಯಪ್ ಕಾಲಿಟ್ಟಿದೆ. ಇದು ಅಂತಿತಹದ್ದಲ್ಲ! ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ನಿಮ್ಮ ಭಾವನಾತ್ಮಕ, ಮಾನಸಿಕ ಹಾಗೂ ಶಾರೀರಿಕ ಅವಶ್ಯಕತೆಗಳಿಗೆ ಅನುಗುಣವಾದ ಆಯ್ಕೆಗಳನ್ನು ನಿಮ್ಮ ಮುಂದಿಡುತ್ತದೆ. ಆ ಮೂಲಕ ನಿಮ್ಮ ಸಂಗಾತಿಯ ಹುಡುಕಾಟವನ್ನು ಸುಲಭಗೊಳಿಸುತ್ತದೆ. ಇಲ್ಲಿದೆ ಕಂಪ್ಲೀಟ್ ವಿವರ...