KSRTC ಸ್ಲೀಪರ್‌ ಬಸ್‌ನ ಯುವತಿ ಸೀಟಿನ ಮೇಲೆ ಮೂತ್ರ ವಿಸರ್ಜನೆ: ಪ್ರಯಾಣಿಕರಿಂದ ಯವಕನಿಗೆ ಧರ್ಮದೇಟು

By Sathish Kumar KH  |  First Published Feb 23, 2023, 11:42 AM IST

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಹ ಪ್ರಯಾಣಿಕಳಾದ ಹುಡುಗಿಯ ಸೀಟಿನ ಮೇಲೆ ಮದ್ಯಪಾನ ಮಾಡಿದ್ದ ಯುವಕ ಮೂತ್ರ ವಿಸರ್ಜನೆ ಮಾಡಿ ಕಿಡಿಗೇಡಿತನ ಮೆರೆದಿದ್ದಾನೆ. ಯುವಕನಿಗೆ ಸಹ ಪ್ರಯಾಣಿಕರು ಧರ್ಮದೇಟು ನೀಡಿ, ಬಸ್‌ನಿಂದ ಕೆಳಗೆ ಇಳಿಸಿದ್ದಾರೆ.


ಹುಬ್ಬಳ್ಳಿ (ಫೆ.23): ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಹ ಪ್ರಯಾಣಿಕಳಾದ ಹುಡುಗಿಯ ಸೀಟಿನ ಮೇಲೆ ಮದ್ಯಪಾನ ಮಾಡಿದ್ದ ಯುವಕ ಮೂತ್ರ ವಿಸರ್ಜನೆ ಮಾಡಿ ಕಿಡಿಗೇಡಿತನ ಮೆರೆದಿದ್ದಾನೆ. ಈ ವಿಕೃತ ಕೃತ್ಯ ಎಸಗಿದ ಯುವಕನಿಗೆ ಸಹ ಪ್ರಯಾಣಿಕರು ಧರ್ಮದೇಟು ನೀಡಿ, ಬಸ್‌ನಿಂದ ಕೆಳಗೆ ಇಳಿಸಿದ್ದಾರೆ. 

ದೂರದ ಪ್ರದೇಶಗಳಿಗೆ ರಾತ್ರಿ ಪ್ರಯಾಣವೇ ಸುಖಕರ ಹಾಗೂ ನೆಮ್ಮದಿ ಎಂದು ಬಹುತೇಕರು ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌, ರೈಲುಗಳಲ್ಲಿ ಪ್ರಯಾಣ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಅದರಂತೆ ನಿನ್ನೆ ರಾತ್ರಿಯೂ ಕೂಡ ವಿಜಯಪುರದಿಂದ ಮಂಗಳೂರಿಗೆ ಕೆಎಸ್‌ಆರ್‌ಟಿಸಿಯ ನಾನ್‌ ಎಸಿ ಸ್ಲೀಪರ್‌ ಕೋಚ್‌ ಬಸ್‌ ಹೊರಟಿದೆ. ಈ ಬಸ್‌ನಲ್ಲಿ 20 ವರ್ಷದ ಯುವತಿ ವಿಜಯಪುರದಿಂದಲೇ ಸೀಟ್‌ ರಿಸರ್ವೇಷನ್‌ ಮಾಡಿಕೊಂಡು ಹೋಗುತ್ತಿದ್ದಾರೆ. ಈ ಬಸ್‌ ವಿಜಯಪುರದಿಂದ ಹುಬ್ಬಳ್ಳಿ ಬಳಿಯ ಕಿರೇಸೂರ್‌ ಡಾಬಾದ ಬಳಿ ಊಟ, ತಿಂಡಿಗೆಂದು ನಿಲ್ಲಿಸಿದೆ. ಈ ವೇಳೆ ಎಲ್ಲರೂ ಕೆಳಗಿಳಿದಾಗ ಮದ್ಯಪಾನ ಮಾಡಿದ್ದ 30 ವರ್ಷದ ಯುವಕ, ಪಕ್ಕದಲ್ಲಿದ್ದ ಯುತಿಯ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ.

Tap to resize

Latest Videos

ನಾನು ಮಾಡಿಲ್ಲ, ಮಹಿಳೆಯೇ ಆಕೆ ಮೇಲೆ ಮೂತ್ರ ಮಾಡಿಕೊಂಡಿದ್ದಾಳೆ, ಶಂಕರ್ ಮಿಶ್ರಾ ಟೂ ಟರ್ನ್!

ಪ್ರತಯಾಣಿಕರಿಂದ ಯುವಕನಿಗೆ ಧರ್ಮದೇಟು:
ವಿಜಯಪುರ - ಮಂಗಳೂರಿಗೆ ನಿನ್ನೆ ರಾತ್ರಿ ಹೊರಟಿದ್ದ ಮಂಗಳೂರು-2ನೇ ಘಟಕಕ್ಕೆ‌ ಸೇರಿದ್ದ ನಾನ್ ಎಸಿ ಸ್ಲೀಪರ್ ಬಸ್‌ನಲ್ಲಿ ಘಟನೆ ನಡೆದಿದೆ. ಹುಬ್ಬಳ್ಳಿ ತಾಲೂಕಿನ ಕಿರೇಸೂರ್ ಡಾಬಾದ ಬಳಿ ಬಸ್‌ ನಿಲ್ಲಿಸಿದಾಗ ಸಹ ಪ್ರಯಾಣಿಕನಾಗಿ ಬಸ್‌ನಲ್ಲಿ ಹೋಗುತ್ತಿದ್ದ ಎಲ್ಲರೂ ಕೆಳಗೆ ಇಳಿದಾಗ ತಾನೂ ಕೂಡ ಕೆಳಗೆ ಹೋಗದೇ ಪಕ್ಕದಲ್ಲಿದ್ದ ಯುವತಿಯ ಸೀಟಿನ ಮೇಲೆ ಯುವಕ ಮೂತ್ರ ಮಾಡಿದ್ದಾನೆ. ಊಟ ಮುಗಿಸಿ ವಾಪಸ್‌ ಬಂದ ಯುವತಿ ಮೂತ್ರ ಮಾಡಿರುವುದನ್ನು ನೋಡಿದ್ದಾಳೆ. ಈ ವೇಳೆ ಪಕ್ಕದ ಸೀಟಿನಲ್ಲಿ ಈ ವ್ಯಕ್ತಿ ಒಬ್ಬನೇ ಇರುವುದು ತಿಳಿದಿದೆ. ನಂತರ, ಚಾಲಕ ಮತ್ತು ನಿರ್ವಾಹಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾಳೆ. ಇದನ್ನು ಕಂಡು ಕೋಪಗೊಂಡ ಸಹ ಪ್ರಯಾಣಿಕರು ಕುಡಿದ ಮತ್ತಿನಲ್ಲಿ ಮೂತ್ರ ಮಾಡಿದ ಯುವಕನಿಗೆ ಧರ್ಮದೇಟು ನೀಡಿ ಬಸ್‌ನಿಂದ ಕೆಳಗೆ ಇಳಿಸಿದ್ದಾರೆ. 

ಬಸ್‌ನಿಂದ ಇಳಿದು ಬೇರೆ ಬಸ್‌ಗೆ ಹೋದ ಯುವತಿ: ಇನ್ನು ಡಾಬಾದ ಬಳಿ ಸಹ ಪ್ರಯಾಣಿಕನಿಂದ ಸ್ಲೀಪರ್‌ ಕೋಚ್‌ ಬಸ್‌ನ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರಿಂದ ಅಲ್ಲಿ ಮಲಗಲು ಸಾಧ್ಯವೇ ಇರಲಿಲ್ಲ. ಇನ್ನು ಚಾಲಕ ಮತ್ತು ನಿರ್ವಾಹಕ ಸೇರಿ ಸೀಟಿನ ಮೇಲೆ ನೀರು ಹಾಕಿ, ಬಟ್ಟೆಯಿಂದ ಸ್ವಚ್ಛಗೊಳಿಸಿದರೂ ಅಲ್ಲಿ ಬೇರೊಬ್ಬರು ಮಲಗಲು ಆಗುತ್ತಿರಲಿಲ್ಲ. ಇದರಿಂದ ಬಸ್‌ ಅನ್ನು ಹುಬ್ಬಳ್ಳಿಯ ಬಸ್‌ ನಿಲ್ದಾಣದ ಕಡೆಗೆ ತಿರುಗಿಸಿ, ಅಲ್ಲಿ ಬಸ್‌ ನಿಲ್ಲಿಸಿದ್ದಾರೆ. ಅಲ್ಲಿಂದ ಯುವತಿ ಹಾಗೂ ಅಕ್ಕಪಕ್ಕದ 6 ಸೀಟುಗಳಲ್ಲಿನ ಸಹ ಪ್ರಯಾಣಿಕರು ಆ ಬಸ್‌ನಿಂದ ಇಳಿದು ಬೇರೊಂದು ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ.

ಪಾರ್ಶ್ವವಾಯು ಪೀಡಿತ ತಂದೆ ಹಾಸಿಗೆಯಲ್ಲಿ ಮೂತ್ರ ಮಾಡಿದ್ದಕ್ಕೆ ಸಿಟ್ಟಿಗೆದ್ದ ಮಗನಿಂದ ಕತ್ತು ಹಿಸುಕಿ ಕೊಲೆ!

ದೂರು ನೀಡದ ಯುವತಿ:  ಇನ್ನು ವಿಜಯಪುರದಿಂದ ಮಂಗಳೂರಿಗೆ ಹೊರಟಿದ್ದ ಯುವಕ ಯಾರೆಂಬುದು ಪರಿಚಯ ಇಲ್ಲದ ಹಿನ್ನೆಲೆಯಲ್ಲಿ ಆತನ್ನು ಡಾಬಾದ ಬಳಿಯೇ ಬಸ್‌ನಿಂದ ಕೆಳಗೆ ಇಳಿಸಲಾಗಿದೆ. ಆದರೆ, ಈ ಕೃತ್ಯದಿಂದ ಆತನ ಬಗ್ಗೆ ಯಾರೂ ವಿಚಾರಿಸಿಲ್ಲ. ಹೀಗಾಗಿ, ಯುವಕನ ಬಗ್ಗೆ ಯಾವುದೇ ಮಾಹಿತಿ ಇಲ್ಲದ್ದರಿಂದ ಯುವತಿ ಪೊಲೀಸ್‌ ಠಾಣೆ ಅಥವಾ ಸಂಚಾರ ವಿಭಾಗಕ್ಕೆ ದೂರು ನೀಡಿಲ್ಲ. ಇನ್ನು ಯುವತಿಯೇ ಬಸ್‌ನಿಂದ ಇಳಿದು ಹೋಗಿದ್ದರಿಂದ ಚಾಲಕ ಮತ್ತು ನಿರ್ವಾಹಕರು ಉಳಿದ ಪ್ರಯಾಣಿಕರನ್ನು ಕರೆದುಕೊಂಡು ಮಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಆದರೆ, ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದ ಯುವಕನಿಗೆ ಈ ಪ್ರಕರಣದಲ್ಲಿ ಯಾವುದೇ ಶಿಕ್ಷೆ ಆಗಲಿಲ್ಲ.

click me!