ಬ್ರಹ್ಮಚಾರಿಗಳ ನಡೆ ಮಾದಪ್ಪನ ಬೆಟ್ಟದ ಕಡೆ: ಅವಿವಾಹಿತರ ಪಾದಯಾತ್ರೆಗೆ ಚಾಲನೆ ನೀಡಿದ ಡಾಲಿ ಧನಂಜಯ್

By Govindaraj SFirst Published Feb 23, 2023, 9:02 AM IST
Highlights

30 ವರ್ಷ ದಾಟಿದರೂ ಮದುವೆ ಆಗದ ಹಿನ್ನೆಲೆಯಲ್ಲಿ ನೊಂದ ಬ್ರಹ್ಮಚಾರಿ ಯುವಕರು ದೇವರ ಮೊರೆ ಹೋಗಿ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದಾರೆ. ಸ್ಯಾಂಡಲ್​ವುಡ್​ ನಟ, ನಿರ್ಮಾಪಕ ಡಾಲಿ ಧನಂಜಯ್​ ಈ ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ.

ಮಂಡ್ಯ (ಫೆ.23): 30 ವರ್ಷ ದಾಟಿದರೂ ಮದುವೆ ಆಗದ ಹಿನ್ನೆಲೆಯಲ್ಲಿ ನೊಂದ ಬ್ರಹ್ಮಚಾರಿ ಯುವಕರು ದೇವರ ಮೊರೆ ಹೋಗಿ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದಾರೆ. ಸ್ಯಾಂಡಲ್​ವುಡ್​ ನಟ, ನಿರ್ಮಾಪಕ ಡಾಲಿ ಧನಂಜಯ್​ ಈ ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ. ಹೌದು! ಪ್ರಸ್ತುತ ಕಾಲದಲ್ಲಿ ಯುವಕರಿಗೆ ಸರಿಯಾದ ಹುಡುಗಿಯರು ಸಿಗುತ್ತಿಲ್ಲ. ಅದರಲ್ಲೂ ರೈತರ ಮಕ್ಕಳಿಗೆ ಯಾರು ಹೆಣ್ಣು ಕೊಡುತ್ತಿಲ್ಲ. ಇದರಿಂದ ನೊಂದ ಯುವಕರು ವಧು ಸಿಗಲಿ ಎಂದು ಪ್ರಾರ್ಥನೆ ಮಾಡಿ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆ ಹೊರಟಿದ್ದಾರೆ. ಮಂಡ್ಯದ ಕೆ.ಎಂ.ದೊಡ್ಡಿ ಗ್ರಾಮದ ವೆಂಕಟೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಆರಂಭಿಸಿದ್ದಾರೆ. 

ಬಹ್ಮಚಾರಿ ಯುವಕರ ಗುಂಪು ಸೇರಿಕೊಂಡು 'ಬ್ರಹ್ಮಚಾರಿಗಳ ನಡೆ ಮಾದಪ್ಪನ ಬೆಟ್ಟದ ಕಡೆ' ಎಂಬ ಘೋಷ ವಾಕ್ಯದೊಂದಿಗೆ ಕಾಲ್ನಡಿಗೆ ಹೊರಟಿದ್ದಾರೆ. ಅವಿವಾಹಿತ ಯುವಕರ ಪಾದಯಾತ್ರೆಗೆ ನಟ, ನಿರ್ಮಾಪಕ ಡಾಲಿ ಧನಂಜಯ್ ಚಾಲನೆ ನೀಡಿದ್ದು, ಸ್ವಲ್ಪ ದೂರ ಪಾದಯಾತ್ರಿಗಳೊಂದಿಗೆ ಹೆಜ್ಜೆ ಹಾಕಿದ್ದಾರೆ. ಜೊತೆಗೆ ಬ್ರಹ್ಮಚಾರಿಗಳು ಮುಂದಿನ ವರ್ಷದೊಳಗೆ ಮದುವೆ ಆಗಲಿ ಅಂತ ಡಾಲಿ ಶುಭ ಹಾರೈಸಿದ್ದಾರೆ. ಇನ್ನು ಟಗರು ಪಲ್ಯ ಚಿತ್ರದ ನಾಯಕ ನಟ ನಾಗಭೂಷಣ ಕೂಡ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದು, ಇಂದು ಮಧ್ಯಾಹ್ನದವೆಗೂ ಪಾದಯಾತ್ರೆಯಲ್ಲಿ ಭಾಗವಹಿಸಿ ಅನಿವಾಹಿತರಿಗೆ ಆತ್ಮಸ್ಥೈರ್ಯ ತುಂಬಲಿದ್ದಾರೆ. 

Latest Videos

ಬಡವರ ಮಕ್ಕಳು ಬೆಳಿಬೇಕ್'​ ಎನ್ನುತಾ ಪ್ರೇಮ್ ಮಗಳಿಗೆ ಅವಕಾಶ ಕೊಟ್ಟಿದ್ದೀರಾ? ನೆಟ್ಟಿಗರಿಗೆ ಡಾಲಿ ಖಡಕ್ ಉತ್ತರ

ಇಂದಿನಿಂದ ಮೂರು ದಿನ ನಡೆಯಲಿರುವ ಪಾದಯಾತ್ರೆಗೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದ್ದು, ಕೇರಳ, ಆಂಧ್ರಪ್ರದೇಶದಿಂದಲೂ ಪಾದಯಾತ್ರೆಗೆ ಇಬ್ಬರು ಅವಿವಾಹಿತರು ಬಂದಿದ್ದಾರೆ. ಪಾದಯಾತ್ರೆಯಲ್ಲಿ ಪಾಲ್ಗೊಂಡವರಲ್ಲಿ ಬಹುತೇಕರು ಯುವ ರೈತರಾಗಿದ್ದು, ರೈತರ ಮಕ್ಕಳಿಗೆ ಹೆಣ್ಣು ಕೊಡ್ತಿಲ್ಲ ಅಂತ ಬೇಸರದಲ್ಲೇ ದೇವರ ಮೊರೆ ಹೋಗಿದ್ದಾರೆ. ರೈತರ ಮಕ್ಕಳಿಗೂ ದೇವರು ಹೆಣ್ಣು ಕೊಡುವ ಬುದ್ಧಿ ಕೊಡಲಿ ಎಂದು ಪಾರ್ಥನೆ ಮಾಡಿರುವ ಕೆ.ಎಂ.ದೊಡ್ಡಿ ಗ್ರಾಮದ ಅವಿವಾಹಿತರ ತಂಡ ಮೂರು ಷರತ್ತು ಹಾಕಿ ಪಾದಯಾತ್ರೆ ಆಯೋಜಿಸಿದ್ದಾರೆ. 

ಈ ಪಾದಯಾತ್ರೆಯಲ್ಲಿ ಭಾಗಿಯಾಗುವವರಿಗೆ ಕಡ್ಡಾಯವಾಗಿ 30 ವರ್ಷ ದಾಟಿರಬೇಕು. ವಿವಾಹಿತರಿಗೆ ಪಾದಯಾತ್ರೆಗೆ ಅವಕಾಶ ಇಲ್ಲ. ನಿಶ್ಚಿತಾರ್ಥ ಆದವರೂ ಪಾದಯಾತ್ರೆಗೆ ಬರುವಂತಿಲ್ಲ. ಅವಿವಾಹಿತರನ್ನು ಸಂಘಟಿಸಿ ಆತ್ಮಸ್ಥೈರ್ಯ ತುಂಬುವ ಉದ್ದೇಶ ಪಾದಯಾತ್ರೆ. ಮೂರು ದಿನ ಪಾದಯಾತ್ರೆಯಲ್ಲಿ ತೆರಳಿ ಮಾದಪ್ಪನ ದರ್ಶನ ನಡೆಯಲಿರುವ ಅವಿವಾಹಿತರು. ಪಾದಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಊಟ, ಪಾನೀಯ, ರಾತ್ರಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಕೆಎಂ ದೊಡ್ಡಿ, ಮಳವಳ್ಳಿ, ಕೊಳ್ಳೆಗಾಲ, ಹನೂರು ಮಾರ್ಗವಾಗಿ ಯುವಕರು ಮಹದೇಶ್ವರ ಬೆಟ್ಟವನ್ನು ತಲುಪಲಿದ್ದಾರೆ.

ನಿಜಕ್ಕೂ ಗಂಭೀರವಾದ ವಿಚಾರ: ಮದುವೆ ಆಗಿಲ್ಲ ಅಂತ ಪಾದಯಾತ್ರೆ ನಡೆಸುತ್ತಿರೋದನ್ನ ಕೇಳಿದ್ದು ಫಸ್ಟ್ ಟೈಮ್. ಫ್ರೆಂಡ್ಸ್ ವಾಟ್ಸಪ್ ಗ್ರೂಪ್ ಗಳಲ್ಲಿ ಪಾದಯಾತ್ರೆ ವಿಚಾರ ನೋಡಿದಾಗ ತಮಾಷೆ ಅನಿಸ್ತು. ಇಲ್ಲಿ ಬಂದಾಗಲೂ ತಮಾಷೆ ಅನಿಸ್ತು ಎಂದು ಅವಿವಾಹಿತರ ಪಾದಯಾತ್ರೆಗೆ ಚಾಲನೆ ನೀಡಿದ ಬಳಿಕ ಮಂಡ್ಯದ ಕೆ.ಎಂ.ದೊಡ್ಡಿಯಲ್ಲಿ ನಟ ಡಾಲಿ ಧನಂಜಯ್ ತಿಳಿಸಿದ್ದಾರೆ. ಪಾದಯಾತ್ರೆ ಯಾಕೆ ಹೊಟಿದ್ದೀರಿ ಅಂತ ಕೇಳಿದಾಗ ರೈತರ ಮಕ್ಕಳಿಗೆ ಹೆಣ್ಣು ಕೊಡ್ತಿಲ್ಲ ಅಂದ್ರು. ಇದು ನಿಜಕ್ಕೂ ಗಂಭೀರವಾದ ವಿಚಾರ. ನಾನು ಹಳ್ಳಿಯಿಂದಲೇ ಬಂದಿರೋದು. ಹಳ್ಳಿಗಳಿಗೆ ಹೋದಾಗಲೆಲ್ಲ ಯುವಕರನ್ನ ಮಾತನಾಡಿಸಿದಾಗ ಹೆಣ್ಣು ಸಿಕ್ತಿಲ್ಲ ಅಂತ ಹೇಳ್ತಾರೆ. ಇತ್ತೀಚೆಗೆ ಆದಿಚುಂಚನಗಿರಿಯಲ್ಲಿ ವಧು-ವರರ ನೋಂದಣಿಯಲ್ಲಿ ಪಾಲ್ಗೊಂಡಿದ್ದ ಯುವಕರ ಸಂಖ್ಯೆ ನೋಡಿದ್ರೆ ಲಿಂಗಾನುಪಾತ ಗೊತ್ತಾಗುತ್ತೆ. 

ನಾವು ಚಿಕ್ಕವನಿದ್ದಾಗನಿಂದಲೂ ಗಂಡು ಮಕ್ಕಳೇ ಬೇಕು ಅಂತಿದ್ರು. ಹೆಣ್ಣು ಮಕ್ಕಳು ಹುಟ್ಟಿದ್ರೆ ತಾತ್ಸಾರದಿಂದ ನೋಡ್ತಿದ್ರು.  ಅದರ ರಿಸಲ್ಟ್ ಈಗ ಗೊತ್ತಾಗುತ್ತಿದೆ. ಹೆಣ್ಣು-ಗಂಡಿನ ನಡುವೆ ಲಿಂಗಾನುಪಾತ ಏರುಪೇರಾಗಿದೆ ಅನ್ನೋದು ತಿಳಿಯುತ್ತದೆ. ಸಿಟಿಗಳಿಗೆ ಹೆಣ್ಣು ಕೊಡಬೇಕು ಅಂತ ಹಳ್ಳಿಗಳಲ್ಲಿ ಯೋಚನೆ ಮಾಡ್ತಾರೆ. ಅದು ತಪ್ಪು ಅಂತ ಹೇಳೋದಕ್ಕೆ ಆಗಲ್ಲ. ತಂದೆ, ತಾಯಿ ಹಾಗೂ ಹೆಣ್ಣು ಮಕ್ಕಳಿಗೆ ಅವರದ್ದೇ ಆದ ಕನಸ್ಸುಗಳಿವೆ. ಅದಕ್ಕೂ ಮೀರಿ ಖಂಡಿತವಾಗಿಯೂ ಇಲ್ಲೊಂದು ಸಮಸ್ಯೆ ಇದೆ. ರೈತರಿಗೆ ಹೆಣ್ಣು ಸಿಗಲ್ಲ ಅಂತ ಪಾದಯಾತ್ರೆ ಹೊರಟ್ಟಿದ್ದಾರೆ. ಇದು ಕೇವಲ ಪಾದಯಾತ್ರೆ ಮಾತ್ರ ಅಲ್ಲ ಜಾಗೃತಿ ಕಾರ್ಯಕ್ರಮ. ಪಾದಯಾತ್ರೆ ಹೊರಟಿರುವವರು ಮುಂದಿನ ವರ್ಷ ಮದುವೆಯಾಗಿ ಬೆಟ್ಟಕ್ಕೆ ಹೋಗಲಿ ಅಂತ ಶುಭ ಹಾರೈಸುತ್ತೇನೆ. 

ಡಾಲಿ ಧನಂಜಯ್‌ 'ಉತ್ತರಕಾಂಡ' ಚಿತ್ರಕ್ಕೆ ರಮ್ಯಾ ನಾಯಕಿ: ಸರಳವಾಗಿ ನೆರವೇರಿದ ಮುಹೂರ್ತ

ಗಂಡು ಮಕ್ಕಳೇ ಬೇಕು ಎಂದು ಹೇಳುವ ಮನಸ್ಥಿತಿ ಇಂದಿಗೂ ಇದೆ. ಹೆಣ್ಣು ಮಕ್ಕಳಿಗೆ ತುಂಬಾ ಡಿಮ್ಯಾಂಡಿದೆ. ರೈತರಿಗೆ ತುಂಬಾ ಸಮಸ್ಯೆಗಳಿವೆ. ಹಾಗಾಗಿ ಹೆಣ್ಣು ಕೊಡೋದಕ್ಕೆ ಯೋಚನೆ  ಮಾಡ್ತಾರೆ. ರೈತರಾಗಿಯೂ ತುಂಬಾ ಚೆನ್ನಾಗಿದೆ ಬದುಕುತ್ತಿರುವವರ ಉದಾಹರಣೆಗಳು ತುಂಬಾ ಇದ್ದಾವೆ. ಹಳ್ಳಿಗಳಲ್ಲೂ ಉತ್ತಮ ಬದುಕು ಕಟ್ಟಿಕೊಳ್ಳಬಹುದು. ಹಾಗಂತ ಯಾರನ್ನೂ ಬಲವಂತ ಮಾಡೋದಕ್ಕೆ ಆಗಲ್ಲ. ಇವನ್ಯಾಕೆ ಸಿನಿಮಾ ಮಾಡ್ತಿದ್ದಾನೆ, ವಾಪಸ್ ಹೋಗು ಅಂದ್ರೆ ಕಷ್ಟ. ನಾನು ಎಲ್ಲೋದ್ರೂ ಮದುವೆ ಯಾವಾಗ ಅಂತ ಕೇಳ್ತಿದ್ದಾರೆ. ನನ್ನ ಮದುವೆಗೂ ಪಾದಯಾತ್ರಿಗಳಿಗೆ ಶುಭ ಹೇಳೋದಕ್ಕೆ ಬಂದಿರೋದಕ್ಕೂ ಲಿಂಕ್ ಇಲ್ಲ. ಇಲ್ಲಿಗೆ ಬಂದ ಮೇಲೆ ಮದುವೆ ಆದ್ರೆ ಆಗಲಿ. ಮದುವೆಗಾಗಿ ಯಾವುದೇ ಹರಕೆ ಕಟ್ಟಿಕೊಂಡಿಲ್ಲ.  ನನಗೆ ಅನಿಸಿದಾಗ ಖಂಡಿತ ಮದುವೆ ಆಗ್ತೀನಿ ಎಂದು ನಟ ಧನಂಜಯ್ ಹೇಳಿದರು.

click me!