ಫೆ.27ಕ್ಕೆ ಬೆಳಗಾವಿಯಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್‌ ಶೋ

Published : Feb 23, 2023, 09:48 AM ISTUpdated : Feb 23, 2023, 10:51 AM IST
ಫೆ.27ಕ್ಕೆ ಬೆಳಗಾವಿಯಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್‌ ಶೋ

ಸಾರಾಂಶ

ವಿವಿಧ ಕಾರ್ಯ​ಕ್ರ​ಮ​ಗಳ ಉದ್ಘಾ​ಟ​ನೆ​ಗಾಗಿ ಫೆ.27ರಂದು ಬೆಳ​ಗಾ​ವಿಗೆ ಆಗ​ಮಿ​ಸ​ಲಿ​ರುವ ಪ್ರಧಾನಿ ಮೋದಿ ಅವರು ನಗ​ರ​ದಲ್ಲಿ ರೋಡ್‌ ಶೋ ನಡೆ​ಸ​ಲಿ​ದ್ದಾ​ರೆ. 

ಬೆಳಗಾವಿ (ಫೆ.23): ವಿವಿಧ ಕಾರ್ಯ​ಕ್ರ​ಮ​ಗಳ ಉದ್ಘಾ​ಟ​ನೆ​ಗಾಗಿ ಫೆ.27ರಂದು ಬೆಳ​ಗಾ​ವಿಗೆ ಆಗ​ಮಿ​ಸ​ಲಿ​ರುವ ಪ್ರಧಾನಿ ಮೋದಿ ಅವರು ನಗ​ರ​ದಲ್ಲಿ ರೋಡ್‌ ಶೋ ನಡೆ​ಸ​ಲಿ​ದ್ದಾ​ರೆ. ಸುಮಾರು 8 ರಿಂದ 10 ಕಿ.ಮೀ. ರೋಡ್‌ ಶೋಗಾಗಿ ಯೋಜನೆ ಹಾಕಿ​ಕೊಂಡಿದ್ದು, ಎಸ್‌​ಪಿ​ಜಿ​ಯ​ವರ ಅನು​ಮತಿ ಅಷ್ಟೇ ಬಾಕಿ ಇದೆ. ವಿಧಾನ ಪರಿಷತ್‌ ಸದಸ್ಯ ಕೇಶವಮೂರ್ತಿ ಮಾತನಾಡಿ, ಫೆ. 27 ರಂದು ಬೆಳಗಾವಿಗೆ ಭೇಟಿ ನೀಡುತ್ತಿದ್ದಾರೆ. ಈ ಬಾರಿ ನರೇಂದ್ರ ಮೋದಿ ಅವರ ಅದ್ಧೂರಿ ರೋಡ್‌ ಶೋ ನಡೆಯಲಿದೆ. ಈ ಕಾರ್ಯಕ್ರಮ ಅವಿಸ್ಮರಣೀಯವಾಗಲಿದೆ. ಬೆಳಗಾವಿ ನಗರದಲ್ಲಿ ಪ್ರಧಾನಿ ಮೋದಿ ಅವರ ರೋಡ್‌ ಶೋ ನಡೆಯಲಿರುವುದರಿಂದ ಬಿಜೆಪಿ ಹಾಗೂ ಜನರಲ್ಲಿ ಉತ್ಸಾಹ ಮೂಡಿದೆ. ನಗರದಲ್ಲಿ ಆಯೋಜಿಸಿರುವ ವಿವಿಧ ಲೋಕಾರ್ಪಣೆ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. 

ಈ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಫಲಾನುಭವಿಗಳು ಹಾಗೂ ಮೋದಿಯವರ ಅಭಿಮಾನಿಗಳು ಭಾಗವಹಿಸುವ ಸಾಧ್ಯತೆ ಇದೆ. ಈ ಕಾರ್ಯಕ್ರಮದ ಬಗ್ಗೆ ಕಾರ್ಯಕರ್ತರೂ ಆಸಕ್ತಿ ತೋರಿದ್ದಾರೆ. ರಾಜ್ಯ ಸರ್ಕಾರ ಹಾಗೂ ಪ್ರಧಾನಿ ಕಚೇರಿಯಿಂದ ರೋಡ್‌ ಶೋಗೆ ಅನುಮತಿ ಸಿಕ್ಕಿದೆ. ಸ್ಥಳೀಯ ಶಾಸಕರು ಹಾಗೂ ಪಕ್ಷದ ಮುಖಂಡರು ಸಿದ್ಧತೆ ನಡೆಸಿದ್ದಾರೆ. ಇದಕ್ಕೆ ಬೆಳಗಾವಿ ಜಿಲ್ಲೆಯ ಎಲ್ಲ ಕ್ಷೇತ್ರಗಳ ಜನಪ್ರತಿನಿಧಿಗಳ ಸಹಕಾರ ದೊರೆಯುತ್ತಿದೆ. ಈ ರೋಡ್‌ ಶೋವನ್ನು ವಿಭಿನ್ನ ರೀತಿಯಲ್ಲಿ ಆಯೋಜಿಸಲಿದ್ದಾರೆ ಎಂದು ತಿಳಿಸಿದರು.

ಅಧಿವೇಶನದಲ್ಲಿ ಬಿಎಸ್‌ವೈ ವಿದಾಯ ಭಾಷಣ: ವಿಧಾನಸಭೆಯಲ್ಲಿ ಮಾಜಿ ಸಿಎಂ ಭಾವುಕ ನುಡಿ

ಶಾಸಕ ಅಭಯ ಪಾಟೀಲ ಮಾತನಾಡಿ, ಪ್ರಧಾನಿ ಮೋದಿ ಆಗಮನದಿಂದ ಬೆಳಗಾವಿ ಅಷ್ಟೇ ಅಲ್ಲ ಇಡೀ ಉತ್ತರ ಕರ್ನಾಟಕದ ಮೇಲೆ ಪರಿಣಾಮ ಬೀರಲಿದೆ. ಇಡೀ ದೇಶದಲ್ಲಿ ಎಲ್ಲೂ ಆಗದ ಐತಿಹಾಸಿಕ ರೋಡ್‌ ಶೋ ನಡೆಸಲು ನಾವು ನಿರ್ಧರಿಸಿದ್ದೇವೆ. ಇಡೀ ದೇಶದ ಸಂಸ್ಕೃತಿ ಬಿಂಬಿಸುವ ಯತ್ನವನ್ನು ನಡೆಸಲಾಗುವುದು. ನಾವು 8 ರಿಂದ 10 ಕಿ.ಮೀ. ರೋಡ್‌ ಶೋಗೆ ಅನುಮತಿ ಕೇಳಿದ್ದೇವೆ. ಎಸ್‌ಪಿಜಿಯವರು ಎಷ್ಟುಕಿ.ಮೀ. ರೋಡ್‌ ಶೋಗೆ ಒಪ್ಪಿಗೆ ನೀಡುತ್ತಾರೆ ನೋಡಬೇಕು ಎಂದರು. ಮೋದಿಯವರು ಅಂದು ಕಿಸಾನ್‌ ಸಮ್ಮಾನ್‌ ಯೋಜನೆ, ಜಲಜೀವನ್‌ ಮಿಷನ್‌, ಆಸ್ಪತ್ರೆಗಳು, ರೈಲ್ವೆ ನಿಲ್ದಾಣವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಮಹದಾಯಿ ಐತೀರ್ಪು ಜಾರಿಗೆ ಕೇಂದ್ರ ಪ್ರಾಧಿಕಾರ:‘ಪ್ರವಾಹ್‌’ ಪ್ರಾಧಿಕಾರ ರಚನೆ

ಹೀಗಿರಲಿದೆ ರೋಡ್‌ ಶೋ: ಬೆಳಗಾವಿ ಚನ್ನಮ್ಮ ವೃತ್ತದಿಂದ ಮಾಲಿನಿ ಸಿಟಿವರೆಗೆ ರೋಡ್‌ ಶೋಗೆ ಚಿಂತನೆ ಮಾಡಲಾಗಿದೆ. ಈ ವೇಳೆ ಹತ್ತು ಸಾವಿರ ಮಹಿಳೆಯರು ಭಗವಾ ಪೇಟ ಧರಿಸಿ ಪೂರ್ಣಕುಂಭ ಹೊತ್ತು ಪ್ರಧಾನಿ ಮೋದಿ ಸ್ವಾಗತಿಸಲಿದ್ದಾರೆ. ಮೋದಿರವರು ಪ್ರಧಾನಿ ಆಗುವ ಮೊದಲು ಇದ್ದ ಭಾರತ ಬಳಿಕ ಆದ ಭಾರತದ ಕಲ್ಪನೆ ಕಟ್ಟಿ​ಕೊ​ಡ​ಲಾ​ಗು​ವುದು. ರೋಡ್‌ ಶೋ ನಡೆಯುವ ರಸ್ತೆಯ ಅಕ್ಕಪಕ್ಕದಲ್ಲಿ ನೇರ ಕಾರ್ಯಕ್ರಮಕ್ಕೆ ಚಿಂತನೆ ನಡೆಸಲಾಗಿದೆ. ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳಿಂದ 4 ರಿಂದ 5 ಲಕ್ಷ ಜನ ಸೇರುವ ನಿರೀಕ್ಷೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್