ಕರ್ನಾಟದಲ್ಲಿ ಮತ್ತೆ ಯಶಸ್ವಿನಿ: ಬಡಜನರಿಗೆ ಉಪಯುಕ್ತ ಆರೋಗ್ಯ ವಿಮೆ

Published : Mar 27, 2022, 04:43 AM IST
ಕರ್ನಾಟದಲ್ಲಿ ಮತ್ತೆ ಯಶಸ್ವಿನಿ: ಬಡಜನರಿಗೆ ಉಪಯುಕ್ತ ಆರೋಗ್ಯ ವಿಮೆ

ಸಾರಾಂಶ

*   5 ವರ್ಷ ಹಿಂದೆ ಸ್ಥಗಿತ ಆಗಿದ್ದ ವಿಮೆಗೆ ಕೇಂದ್ರ ಸಚಿವ ಅಮಿತ್‌ ಶಾ ಚಾಲನೆ *   ಕ್ಷೀರ ಸಮೃದ್ಧಿ ಬ್ಯಾಂಕ್‌ ಲಾಂಛನ ಅನಾವರಣ *  ಹೈನು​ಗಾ​ರಿ​ಕೆ​ ಕ್ಷೇತ್ರ​ದ​ಲ್ಲಿ ಆರ್ಥಿಕ ಕ್ರಾಂತಿ ಮಾಡಲಾಗುವುದು: ಬೊಮ್ಮಾಯಿ   

ಬೆಂಗಳೂರು(ಮಾ.27):  ತವರು ಜಿಲ್ಲೆ ಹಾವೇರಿಗೆ(Haveri) ಶನಿವಾರ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಿಎಂ ಅವರನ್ನು ಸ್ವಾಗತಿಸಿದ ಲಂಬಾಣಿ ಸಾಂಪ್ರದಾಯಿಕ ಪೋಷಾಕು ಧರಿಸಿದ್ದ ಮಕ್ಕಳು ಪೋಸು ನೀಡಿದ್ದು ಹೀಗೆ. ಹಿಂದೆ ಇದ್ದಂತೆಯೇ ಯೋಜನೆ ಮರುಜಾರಿ. ಆದರೆ, ಪ್ರೀಮಿಯಂ, ಚಿಕಿತ್ಸಾ ವೆಚ್ಚ ಮೊತ್ತ ಹೆಚ್ಚಳ ಸಾಧ್ಯತೆ. ರಾಜ್ಯ​ದಲ್ಲಿ ಐದು ವರ್ಷ​ಗಳ ಹಿಂದೆ ಸ್ಥಗಿ​ತ​ಗೊಂಡಿದ್ದ ಜನ​ಪ್ರಿಯ ‘ಯಶಸ್ವಿನಿ ಆರೋಗ್ಯ ವಿಮಾ ಯೋಜನೆ’ಗೆ(Yeshasvini Health Insurance  Scheme) ಕೇಂದ್ರ ಗೃಹ ಹಾಗೂ ಸಹ​ಕಾರ ಸಚಿವ ಅಮಿತ್‌ ಶಾ(Amit Shah) ಅವರು ಏ.1ರಂದು ಮತ್ತೆ ಚಾಲನೆ ನೀಡ​ಲಿ​ದ್ದಾ​ರೆ.

ಅಂದು ಬೆಂಗ​ಳೂ​ರಿ​ನಲ್ಲಿ(Bengaluru) ನಡೆ​ಯ​ಲಿ​ರುವ ಕಾರ್ಯ​ಕ್ರ​ಮ​ದಲ್ಲಿ ಅಮಿತ್‌ ಶಾ ಅವರು ಯಶ​ಸ್ವಿನಿ ಯೋಜ​ನೆಗೆ ಚಾಲನೆ ನೀಡು​ವುದು ಮಾತ್ರ​ವ​ಲ್ಲದೆ, ಹಾಲು ಉತ್ಪಾ​ದ​ಕ​ರ ಅನು​ಕೂ​ಲ​ಕ್ಕಾಗಿ ದೇಶ​ದಲ್ಲೇ ಮೊದಲ ಬಾರಿಗೆ ರಾಜ್ಯ​ದಲ್ಲಿ ಸ್ಥಾಪ​ನೆ​ಯಾ​ಗು​ತ್ತಿ​ರುವ ‘ಕ್ಷೀರ​ಸ​ಮೃದ್ಧಿ ಸಹ​ಕಾರ ಬ್ಯಾಂಕ್‌’ನ ಲಾಂಛನವನ್ನೂ ಬಿಡು​ಗ​ಡೆ ಮಾಡ​ಲಿ​ದ್ದಾ​ರೆ.

ಸ್ಟಾರ್ಟ್‌ಅಪ್ ಉದ್ದಿಮೆಗಳ ಸ್ಥಾಪನೆಯಲ್ಲಿ ರಾಜ್ಯ ಮಂಚೂಣಿ: ಸಿಎಂ ಬೊಮ್ಮಾಯಿ

ಸಹಕಾರಿ ರಂಗದಲ್ಲಿ ಹಲವು ಸುಧಾರಣೆ ತರಬೇಕೆಂಬ ಉದ್ದೇಶವಿದೆ. ಈ ನಿಟ್ಟಿ​ನಲ್ಲಿ ರಾಜ್ಯ​ದಲ್ಲಿ ಕ್ಷೀರ ಸಮೃದ್ಧಿ ಸಹ​ಕಾರ ಬ್ಯಾಂಕ್‌ ಪ್ರಾರಂಭಿಸಲು ನಿರ್ಧ​ರಿ​ಸ​ಲಾ​ಗಿದೆ. ಈ ಬ್ಯಾಂಕ್‌ನ ಲಾಂಛನ ಉದ್ಘಾಟನೆ ಹಾಗೂ ಯಶ​ಸ್ವಿನಿ ಯೋಜ​ನೆಗೆ ಚಾಲ​ನೆ ನೀಡುವ ಕಾರ್ಯ​ಕ್ರ​ಮ​ಕ್ಕಾಗಿ ಬೃಹತ್‌ ಸಭೆ ಏರ್ಪಾಡು ಮಾಡಲಾಗುತ್ತಿದೆ. ಕ್ಷೀರ​ಸ​ಮೃದ್ಧಿ ಬ್ಯಾಂಕ್‌​ನಿಂದ ರೈತರ ಆದಾಯ ಹೆಚ್ಚ​ಳ​ವಾ​ಗುವ ನಿರೀಕ್ಷೆ ಇದ್ದು, ಹೈನು​ಗಾ​ರಿ​ಕೆ​ ಕ್ಷೇತ್ರ​ದ​ಲ್ಲಿ ಆರ್ಥಿಕ ಕ್ರಾಂತಿ ಮಾಡಲಾಗುವುದು ಎಂದು ಬೊಮ್ಮಾಯಿ ಶನಿ​ವಾರ ಹುಬ್ಬ​ಳ್ಳಿ​ಯಲ್ಲಿ ತಿಳಿ​ಸಿ​ದ​ರು.

ರಾಜ್ಯ​ದಲ್ಲಿ ಜನ​ಪ್ರಿ​ಯ​ವಾ​ಗಿದ್ದ, ಗ್ರಾಮೀಣ(Rural Area) ಜನರ ಆರೋಗ್ಯ ಹಾಗೂ ಆರ್ಥಿಕ ಹಿತ​ಕಾ​ಪಾ​ಡು​ವಲ್ಲಿ ಯಶ​ಸ್ವಿ​ಯಾ​ಗಿದ್ದ ‘ಯಶ​ಸ್ವಿನಿ’ ಯೋಜನೆ ಸ್ಥಗಿ​ತ​ಗೊಂಡು ಐದು ವರ್ಷ ಕಳೆ​ದಿ​ದೆ. ಇದೀಗ ರೈತರ(Farmers) ಒತ್ತಾ​ಸೆ​ಯಂತೆ ಈ ಯೋಜ​ನೆ​ಯನ್ನು ಪರಿ​ಷ್ಕ​ರಿಸಿ ಮರು ಜಾರಿ​ಗೊ​ಳಿ​ಸಲು ರಾಜ್ಯ ಸರ್ಕಾರ(Government of Karnataka) ನಿರ್ಧ​ರಿ​ಸಿದ್ದು, ಇದ​ಕ್ಕಾಗಿ 300 ಕೋಟಿ ಮೀಸ​ಲಿ​ಟ್ಟಿದೆ. ಈ ಯೋಜ​ನೆ​ಯಿಂದ ಗ್ರಾಮೀಣ ರೈತ ಕುಟುಂಬ​ಗ​ಳಿಗೆ ಅತ್ಯು​ತ್ತಮ ವೈದ್ಯ​ಕೀಯ ಸೌಲ​ಭ್ಯ​ಗಳು ಉಚಿ​ತ​ವಾಗಿ ಅಥವಾ ಕಡಿಮೆ ದರ​ದಲ್ಲಿ ದೊರ​ಕ​ಲಿ​ವೆ.

ಸಿಎಂ ಬಸವರಾಜ್‌ ಬೊಮ್ಮಾಯಿ ಟ್ವೀಟರ್‌ ಖಾತೆ ಹ್ಯಾಕ್?‌

ಯಶಸ್ವಿನಿ’ ವಿಮೆ ಕಂತು, ಚಿಕಿತ್ಸೆ ಮೊತ್ತ ಹೆಚ್ಚಳ?

ವಿಶೇಷವಾಗಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿನ ಸಹಕಾರ ಸಂಘಗಳ ಸದಸ್ಯರು ಎಷ್ಟುಮೊತ್ತದ ವಂತಿಗೆ ಭರಿಸಬೇಕು ಎಂಬುದು ನಿರ್ಧಾರವಾಗಬೇಕಾಗಿದೆ. ಗ್ರಾಮೀಣ ಮತ್ತು ನಗರ ಸಹಕಾರ ಸಂಘಗಳ ಸದಸ್ಯರಿಗೆ ಬೇರೆ ಬೇರೆ ರೀತಿ ವಂತಿಗೆ ನಿಗದಿ ಮಾಡಲಾಗಿತ್ತು. ಪರಿಶಿಷ್ಟರು, ಸಾಮಾನ್ಯ ವರ್ಗದವರಿಗೆ ಬೇರೆ ಬೇರೆ ಮೊತ್ತವನ್ನು ನಿಗದಿಗೊಳಿಸಲಾಗಿತ್ತು. ಈಗ ಮೊತ್ತವನ್ನು ಹೊಸದಾಗಿ ನಿಗದಿ ಮಾಡಬೇಕಾಗಿದೆ. ಈಗಾಗಲೇ ಆಯುಷ್ಮಾನ್‌ ಭಾರತ- ಆರೋಗ್ಯ ಕರ್ನಾಟಕ’ (ಎಬಿ-ಎಕೆ) ಯೋಜನೆ ಜಾರಿಯಲ್ಲಿರುವಾಗ ಸರಿಸಮನಾಗಿ ಮತ್ತೊಂದು ಯೋಜನೆ ಜಾರಿಯಿಂದ ಆಗುವ ಸಾಧಕ-ಬಾಧಕಗಳ ಬಗ್ಗೆ ಗಂಭೀರವಾದ ಸಮಾಲೋಚನೆ ನಡೆಯಬೇಕಾಗಿದೆ. ಈ ಹಿಂದೆ ಯೋಜನೆಯ ಸದಸ್ಯರಾದವರಿಗೆ ಗರಿಷ್ಠ 2 ಲಕ್ಷದವರೆಗಿನ ವೆಚ್ಚವನ್ನು ಸರ್ಕಾರವೇ ಭರಿಸುತ್ತಿತ್ತು. ಈಗ ಎಬಿ-ಎಕೆ ಯೋಜನೆಯಡಿ ಇದಕ್ಕಿಂತ ಹೆಚ್ಚು ವೆಚ್ಚವನ್ನು ಭರಿಸಲಾಗುತ್ತಿದೆ. ಹೀಗಾಗಿ ಈ ಗೊಂದಲ ನಿವಾರಿಸಿಕೊಳ್ಳಬೇಕಾಗಿದೆ ಎಂದು ಸಹಕಾರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಯೋಜನೆಯಡಿ ಈ ಹಿಂದೆ ಚಿಕಿತ್ಸೆಗೆ ಗುರುತಿಸಲಾಗಿದ್ದ ಕಾಯಿಲೆಗಳನ್ನು ಬಹುತೇಕ ಯಥಾವತ್ತಾಗಿ ಮುಂದುವರೆಸುವ ಸಾಧ್ಯತೆ ಇದೆ. ಚಿಕಿತ್ಸೆ ನೀಡುವ ಆಸ್ಪತ್ರೆಗಳ ಪಟ್ಟಿಯನ್ನು ಇನ್ನಷ್ಟುಹೆಚ್ಚಿಸುವ ಸಾಧ್ಯತೆ ಇದೆ. ಜೊತೆಗೆ ಯೋಜನೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಟ್ರಸ್ಟನ್ನು ಹೊಸದಾಗಿ ರಚಿಸಬೇಕಾಗಿದೆ ಎಂದು ಅವರು ಹೇಳಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು - Shiva Rajkumar