ಪಾಕ್​ ವಿರುದ್ಧ ಪ್ರತಿಭಟನೆ ವೇಳೆ ಹೀಗೆ ದೇಶಪ್ರೇಮ ಮೆರೆದ್ರಾ ಕರ್ನಾಟಕದ ಮಹಿಳೆಯರು? ವಿಡಿಯೋ ನೋಡಿ!

Published : Apr 27, 2025, 06:19 PM ISTUpdated : Apr 27, 2025, 06:37 PM IST
 ಪಾಕ್​ ವಿರುದ್ಧ ಪ್ರತಿಭಟನೆ ವೇಳೆ ಹೀಗೆ ದೇಶಪ್ರೇಮ ಮೆರೆದ್ರಾ ಕರ್ನಾಟಕದ ಮಹಿಳೆಯರು? ವಿಡಿಯೋ ನೋಡಿ!

ಸಾರಾಂಶ

ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ೨೬ ಹಿಂದೂಗಳ ಹತ್ಯೆ ಖಂಡನೀಯ. ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಕಲಬುರಗಿಯಲ್ಲಿ ಪ್ರತಿಭಟನೆಯ ವೇಳೆ ರಸ್ತೆಯಲ್ಲಿದ್ದ ಪಾಕಿಸ್ತಾನದ ಧ್ವಜವನ್ನು ಮುಸ್ಲಿಂ ಮಹಿಳೆಯರು ತೆಗೆದ ಘಟನೆ ವಿವಾದ ಸೃಷ್ಟಿಸಿದೆ. ದಾಳಿಯಲ್ಲಿ ಧಾರ್ಮಿಕ ತಾರತಮ್ಯ ಇಲ್ಲ ಎಂಬ ವಾದವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಈ ವಿಡಿಯೋ ಚರ್ಚೆಗೆ ಗ್ರಾಸವಾಗಿದೆ.

ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳನ್ನು ಗಡಿಪಾರು ಮಾಡುವ ಗಡುವು ಮುಗಿದಿದೆ. ಆದರೆ ಇದುವರೆಗೆ ಅಸಂಖ್ಯ ಮಂದಿ ಇನ್ನೂ ಎಲ್ಲೆಲ್ಲಿಯೋ ಅಡಗಿ ಕುಳಿತುಕೊಂಡಿದ್ದು, ಅವರ ಪತ್ತೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅದರ ನಡುವೆಯೇ ಇದೀಗ ಕಲಬುರಗಿಯಲ್ಲಿ ನಡೆದ ಘಟನೆಯೊಂದರ ವಿಡಿಯೋ ವೈರಲ್​ ಆಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಅಷ್ಟಕ್ಕೂ ಕಾಶ್ಮೀರದಲ್ಲಿ ಉಗ್ರರು ನಡೆಸಿರುವ 26 ಮಂದಿಯ ನರಮೇಧಕ್ಕೆ ನಿಜವಾದ ಭಾರತೀಯರೆಲ್ಲರೂ ಕೊತಕೊತ ಕುದಿಯುತ್ತಿದ್ದಾರೆ. ಹಿಂದೂಗಳ ಮೇಲೆ ನಡೆದಿರುವ ಈ ಹತ್ಯಾಕಾಂಡಕ್ಕೆ ನಿಜವಾದ ದೇಶಪ್ರೇಮಿಗಳ ಮನದಲ್ಲಿ ಕಿಚ್ಚು ಹೊತ್ತಿ ಉರಿದಿದೆ.  ಉಗ್ರರನ್ನು, ಅವರಿಗೆ ರಕ್ಷಣೆ ನೀಡುತ್ತಿರುವವರನ್ನು ಮಟ್ಟ ಹಾಕುವವರೆಗೂ ನಿಜವಾದ ಭಾರತೀಯರಿಗೆ ನೆಮ್ಮದಿ ಇಲ್ಲ. ಹೆಂಡತಿ- ಮಕ್ಕಳ ಎದುರಿನಲ್ಲಿಯೇ ಹಿಂದೂ ಗಂಡಸರನ್ನು ಕೊಲೆ ಮಾಡಿರುವ ಪಾತಕಿಗಳಿಗೆ ಏಳೇಳು ಜನ್ಮದಲ್ಲಿಯೂ ನಡುಕು ಹುಟ್ಟಿಸುವಂಥ ಶಿಕ್ಷೆ ಆಗಬೇಕು ಎಂದೇ ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲಿ ಸತ್ತಿರುವ ಪ್ರತಿಯೊಬ್ಬ ಹಿಂದೂ ಪುರುಷರ ಪತ್ನಿಯರು ಹೇಳಿದ್ದು ಏನೆಂದರೆ, ನೀವು ಯಾವ ಧರ್ಮದವರು ಎಂದು ಕೇಳಿದರು. ಹಿಂದೂಗಳು ಎಂದ ತಕ್ಷಣ ಗುಂಡು ಹಾರಿಸಿದರು ಎಂದು ಕರಾಳ ಘಟನೆಯನ್ನು ತೆರೆದಿಟ್ಟಿದ್ದಾರೆ. ಹೇಗೋ ಜೀವ ಉಳಿಸಿಕೊಂಡು ಬಂದಿರುವವರೂ ಅದನ್ನೇ ಸಾರಿ ಸಾರಿ ಹೇಳಿದ್ದಾರೆ. 

ಭಾರತೀಯರಿಗೆ ಪಾಕಿಗಳ ವಿರುದ್ಧ ರೋಷ ಉಕ್ಕಿ ಹರಿಯುತ್ತಿದೆ. ಇದೇ ಕಾರಣಕ್ಕೆ ಹಲವು ಕಡೆಗಳಲ್ಲಿ ಪಾಕಿಸ್ತಾನದ ವಿರುದ್ಧ ಪ್ರತಿಭಟನೆ ಮಾಡಲಾಗುತ್ತಿದೆ. ಪಾಕಿಸ್ತಾನದ ಧ್ವಜವನ್ನು ಇಟ್ಟು ಅದನ್ನು ಸುಡುವುದು, ಹರಿದು ಹಾಕುವುದು, ರಸ್ತೆಯ ಮೇಲೆ ಇಡುವುದು ಹೀಗೆಲ್ಲಾ ವಿಭಿನ್ನ ರೀತಿಯಲ್ಲಿ ಆಕ್ರೋಶ ಹೊರಹಾಕಲಾಗುತ್ತಿದೆ. ಆದರೆ ಕಲಬುರಗಿಯಲ್ಲಿ ನಡೆದಿರುವ ಘಟನೆ ಮಾತ್ರ ಶಾಕಿಂಗ್​ ಎನ್ನುವಂತಿದೆ. ಇಲ್ಲಿ ಪ್ರತಿಭಟನೆಯ ಸಮಯದಲ್ಲಿ ಪಾಕಿಸ್ತಾನದ ಧ್ವಜವನ್ನು ರಸ್ತೆಯ ಮೇಲೆ ಇಡಲಾಗಿತ್ತು. ಅದಕ್ಕೆ ಯಾವುದೇ ಹಾನಿಯಾಗುವುದನ್ನು ನಾವು ನೋಡಲು ಆಗುವುದಿಲ್ಲ ಎಂದಿರುವ ಮುಸ್ಲಿಂ ಮಹಿಳೆಯರಿಬ್ಬರು ಅದನ್ನೆಲ್ಲಾ ಆರಿಸಿ ಆರಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ. ಇದರ ವಿಡಿಯೋ ಮಾಡುತ್ತಿರುವವರ ಮೇಲೂ ಕಿಡಿ ಕಾರಿರುವ ಅವರು, ವಿಡಿಯೋ ಮಾಡ್ತೀರಾ ಮಾಡಿ ಎಂದು ಗದರಿಸಿದ್ದಾರೆ. ಇದರಲ್ಲಿ ಇವರ ತಪ್ಪು ಏನೂ ಇಲ್ಲ, ದೇಶಪ್ರೇಮ ಮೆರೆಯುತ್ತಿದ್ದಾರೆ ಅಷ್ಟೇ ಎಂದು ಜಾಲತಾಣದಲ್ಲಿ ಕಮೆಂಟ್​ಗಳ ಸುರಿಮಳೆ ಆಗುತ್ತಿದೆ. 

ಪಾಕಿಸ್ತಾನದ​ ಟಿವಿಯಲ್ಲೂ ಸಿದ್ದರಾಮಯ್ಯ ಫೇಮಸ್​: ಸುದ್ದಿಯ ವಿಡಿಯೋ ವೈರಲ್​- ನಿರೂಪಕಿ ಹೇಳಿದ್ದೇನು ಕೇಳಿ...

ಕಾಶ್ಮೀರಕ್ಕೆ ಹೋಗಿರುವ ಪ್ರವಾಸಿಗರು ಹಿಂದೂಗಳು ಹೌದೋ ಅಲ್ಲೋ ಎಂದು ತಿಳಿಯುವುದಕ್ಕಾಗಿ ಅವರ ಖಾಸಗಿ ಅಂಗ ಪರೀಕ್ಷಿಸಿ ಸುನ್ನತ ಮಾಡಿಕೊಂಡಿಲ್ಲ ಎಂದು ತಿಳಿದ ಮೇಲೆ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಇದಾಗಲೇ ಕಾಶ್ಮೀರದ ತನಿಖಾಧಿಕಾರಿಗಳೂ ಹೇಳಿದ್ದಾರೆ. ಆದರೆ ಹಿಂದೂ-ಮುಸ್ಲಿಂ ಎನ್ನುವ ಭೇದಭಾವ ಈ ಉಗ್ರರು ಮಾಡಿಯೇ ಇಲ್ಲ ಎಂದು ಇದಾಗಲೇ ಭಾರತದಲ್ಲಿ ಇರುವ ಕೆಲವು 'ದೇಶಪ್ರೇಮಿಗಳು' ಸಾರಿ ಸಾರಿ ಹೇಳುತ್ತಿದ್ದಾರೆ. ಸಾಲದು ಎನ್ನುವುದಕ್ಕೆ ಯುವತಿಯೊಬ್ಬಳು  ಘಂಟಾಘೋಷವಾಗಿ ಭಾರತದಲ್ಲಿ ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ ಎಂದಿದ್ದಳು.  ನಾನು ಕೂಡ ಆ ಸಂದರ್ಭದಲ್ಲಿ ಕಾಶ್ಮೀರದಲ್ಲಿಯೇ ಇದ್ದೆ. ವಿನಾ ಕಾರಣ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಉಗ್ರರು ಸಾಯಿಸುವ ಮುನ್ನ ನೀನು ಹಿಂದೂನೋ, ಮುಸ್ಲಿಮೋ ಎಂದು ಕೇಳಿಯೇ ಇಲ್ಲ ಎಂದಿದ್ದಳು.

ಎಲ್ಲವೂ ಸುಳ್ಳು ಸುದ್ದಿ. ಇಲ್ಲಿರುವ ಮುಸ್ಲಿಮರು ಎಲ್ಲರಿಗೂ ಸಹಾಯ ಮಾಡಿದ್ದಾರೆ. ವಿನಾ ಕಾರಣ ಸುಳ್ಳು ಸುದ್ದಿ ಹರಡಲಾಗುತ್ತಿದೆ. ನನ್ನ ಡ್ರೈವರ್​ ಕೂಡ ಮುಸ್ಲಿಂ. ನನ್ನ ಜೀವವನ್ನಾದರೂ ಬೇಕಾದರೆ ಕೊಡುತ್ತೇನೆ, ಹಿಂದೂಗಳಿಗೆ ಏನೂ ಮಾಡಲು ಬಿಡುವುದಿಲ್ಲ ಎಂದರು. ಅಷ್ಟು ಒಳ್ಳೆಯವರು ಮುಸ್ಲಿಂ ಸಮುದಾಯವರು. ಆದರೆ ಹಿಂದೂ-ಮುಸ್ಲಿಂ ಎಂದು ಕೇಳುವ ಮೂಲಕ ಉಗ್ರರು ಸಾಯಿಸಿದ್ದಾರೆ ಎನ್ನುವ ಅಪಪ್ರಚಾರ ಮಾಡಲಾಗುತ್ತಿದೆ ಎಂದಿದ್ದಾಳೆ ಈಕೆ. ಇಲ್ಲಿ ಧರ್ಮ- ಧರ್ಮದ ನಡುವೆ ಏನೂ ಇಲ್ಲ. ಇಲ್ಲಿ ಇರುವುದು ಮಾನವೀಯತೆಯೇ ಎಂದು ಹೇಳಿದ್ದಳು. ಕುತೂಹಲದ ಸಂಗತಿ ಎಂದರೆ ಕೊನೆಗೆ ಈಕೆ ರಾಹುಲ್ ಗಾಂಧಿಯ ಜೊತೆ ಫೋಟೋದಲ್ಲಿ ಕಾಣಿಸಿಕೊಂಡಿದ್ದಳು. ಈಗಾಗಲೇ ಪಾಕ್​ ಜೊತೆ ಭಾರತ ಯುದ್ಧ ಮಾಡುವುದು ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದಾಗಿ ಪಾಕಿಸ್ತಾನದ ಟಿವಿಯಲ್ಲಿ ಹೇಳಲಾಗುತ್ತಿವೆ. ಇವೆಲ್ಲವುಗಳ ನಡುವೆಯೇ, ಇಂಥ ಒಂದು ವಿಡಿಯೋ ಕಾಣಿಸಿಕೊಂಡಿರುವುದು ಬಹಳಷ್ಟು ಮಂದಿಗೆ ಸಹಿಸಲು ಅಸಾಧ್ಯವಾಗುತ್ತಿದೆ. 
 

ಉಗ್ರರು ಸಾಯಿಸುವ ಮುನ್ನ 'ನೀವು ಹಿಂದೂನಾ' ಕೇಳಿದ್ದೇ ಸುಳ್ಳಂತೆ! ರಾಹುಲ್​ ಗಾಂಧಿ ಜೊತೆಗಿರುವ ಈ ಯುವತಿ ಮಾತು ಕೇಳಿ... ಯಾರೀಕೆ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌