ದೇಶದ್ರೋಹಿ ಮುಲಾಯಂ ಸಿಂಗ್‌ಗೆ ನೀಡಿರುವ ಪದ್ಮ ಪ್ರಶಸ್ತಿ ಹಿಂಪಡೆಯಿರಿ: ಪ್ರಮೋದ್‌ ಮುತಾಲಿಕ್

By Sathish Kumar KH  |  First Published Jan 31, 2023, 5:31 PM IST

ಕೇಂದ್ರ ಸರ್ಕಾರರಿಂದ ಘೋಷಣೆ ಮಾಡಲಾಗಿರುವ ಮುಲಾಯಂ ಸಿಂಗ್ ಅವರಿಗೆ ಮರಣೋತ್ತರ ಪದ್ಮಪ್ರಶಸ್ತಿ ಹಿಂಪಡೆಯುವಂತೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಒತ್ತಾಯ ಮಾಡಿದ್ದಾರೆ. 


ಉಡುಪಿ (ಜ.31): ಕೇಂದ್ರ ಸರ್ಕಾರರಿಂದ ಘೋಷಣೆ ಮಾಡಲಾಗಿರುವ ಮುಲಾಯಂ ಸಿಂಗ್ ಅವರಿಗೆ ಮರಣೋತ್ತರ ಪದ್ಮಪ್ರಶಸ್ತಿ ಹಿಂಪಡೆಯುವಂತೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಒತ್ತಾಯ ಮಾಡಿದ್ದಾರೆ. 

ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಲಾಯಂ ಸಿಂಗ್‌ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಿರುವುದು ಅತ್ಯಂತ ಕೆಟ್ಟ ಹಾಗೂ ಹೇಯ ಪರಂಪರೆ ಆಗಿದೆ. ಕೇಂದ್ರ ಸರ್ಕಾರದ ಪ್ರಶಸ್ತಿ ಆಯ್ಕೆ ಸಮಿತಿಯ ನಡೆಗೆ ಮುತಾಲಿಕ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 1989-91ರ ಅವಧಿಯಲ್ಲಿ ಮುಲಾಯಂ ಸಿಂಗ್‌ ಅವರು ಅಯೋಧ್ಯೆಯ ಶ್ರೀರಾಮ ಕರಸೇವಕರಿಗೆ ಹಿಂಸೆ ನೀಡಿದ್ದಾರೆ. ಶಾಂತಿಯುತ ಪ್ರತಿಭಟನೆಗಾಗಿ ಅಯೋಧ್ಯೆಗೆ ಬಂದಿದ್ದ ಶ್ರೀರಾಮ ಭಕ್ತರ ಮೇಲೆ ಗುಂಡು ಹಾರಿಸಿದ ಕ್ರೂರಿ ಅವರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

Tap to resize

Latest Videos

undefined

ಶೂಟೌಟ್‌ ಪ್ರಕರಣ ಮುಚ್ಚಿ ಹಾಕುವ ಹುನ್ನಾರ: ಪ್ರಮೋದ್‌ ಮುತಾಲಿಕ್‌

ಶ್ರೀರಾಮ ವಿರೋಧಿ ಹಾಗೂ ಧರ್ಮ ವಿರೋಧಿ: ಮುಲಾಯಂ ಸಿಂಗ್‌ ಅವರು ಕೇವಲ ಶ್ರೀರಾಮ ವಿರೋಧಿ ಹಾಗೂ ಧರ್ಮ ವಿರೋಧಿ ಮಾತ್ರವಲ್ಲ. ದೇಶದ್ರೋಹಿಯೂ ಆಗಿದ್ದಾರೆ. ಅಂಥವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡುವುದೆಂದರೆ ಆ ಪ್ರಶಸ್ತಿಗಳಿಗೆ ದೊಡ್ಡ ಕಳಂಕ ಆದಂತಾಗಲಿದೆ. ಅತ್ಯಂತ ಶ್ರೇಷ್ಠ ಪ್ರಶಸ್ತಿಗೆ ಇದೊಂದು ಕಪ್ಪು ಚುಕ್ಕೆ ಆಗಿದೆ. ಪ್ರತಿಷ್ಠಿತ ಪ್ರಶಸ್ತಿಗೆ ಮುಲಾಯಂ ಅವರನ್ನು ಆಯ್ಕೆ ಮಾಡಿದ ಪ್ರಶಸ್ತಿ ಆಯ್ಕೆ ಸಮಿತಿಗೆ ಧಿಕ್ಕಾರ. ಕೂಡಲೇ ಮರಣೋತ್ತರವಾಗಿ ಮುಲಾಯಂ ಸಿಂಗ್‌ ಅವರಿಗೆ ಘೋಷಣೆ ಮಾಡಲಾದ ಪದ್ಮ ಪ್ರಶಸ್ತಿಯನ್ನು ವಾಪಸ್‌ ಪಡೆದು ಪ್ರಶಸ್ತಿಯ ಗೌರವವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಯೋಗಿಯನ್ನು ಎನ್ಕೌಂಟರ್ ಯತ್ನ:
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಜೈಲಿಗೆ ತಳ್ಳಲು ಯತ್ನಿಸಿದ್ದ ಮುಲಾಯಂ ಕುತಂತ್ರ ಮಾಡಿದ್ದರು. ಮುಖ್ಯವಾಗಿ ಯೋಗಿ ಅವರನ್ನು ಎನ್ಕೌಂಟರ್ ಮಾಡಲು ಹೊರಟ ವ್ಯಕ್ತಿ ಇವರಾಗಿದ್ದಾರೆ. ಜೊತೆಗೆ, ಯೋಗಿ ಆದಿತ್ಯನಾಥ ಅವರನ್ನು ಸಂಸತ್ ಭವನದಲ್ಲಿ ಕಣ್ಣೀರು ಹಾಕಿಸಿದ್ದಾರೆ. ಇಂತಹಾ ವ್ಯಕ್ತಿಗೆ ಪದ್ಮವಿಭೂಷಣ ನೀಡಿರುವುದು ಅಕ್ಷಮ್ಯವಾಗಿದೆ ಎಂದು ಕಿಡಿಕಾರಿದ್ದಾರೆ.

ಗೋಹತ್ಯೆ, ಮತಾಂತರ ತಡೆಗೆ ಹೋರಾಟ ಅವಶ್ಯಕ: ಪ್ರಮೋದ್‌ ಮುತಾಲಿಕ್‌

click me!