
ಧಾರವಾಡ(ಆ.16): ಮತದಾನ ಸಹ ಭಾರತೀಯರ ಹಕ್ಕು. ಆ ಹಕ್ಕನ್ನು ಅಳಿಸಿ ಹಾಕುವುದು ಅಪರಾಧ. ನಮ್ಮ ನಾಯಕ ರಾಹುಲ್ ಗಾಂಧಿ ಪ್ರಸ್ತುತ ಮಾತನಾಡುತ್ತಿರುವುದು ಭಾರತೀಯರ ಹಕ್ಕಿನ ಬಗ್ಗೆ ಎಂದು ಸಚಿವ ಸಂತೋಷ ಲಾಡ್ ಶುಕ್ರವಾರ ಧಾರವಾಡದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಮತಗಳ್ಳತನ ಸಂಗತಿಯು ಸದ್ಯ ಸುಪ್ರೀಂ ಕೋರ್ಟ್ ವರೆಗೂ ಹೋಗಿದೆ. ಬಿಹಾರ್‌ನಲ್ಲಿ 65 ಲಕ್ಷ ಮತಗಳನ್ನು ಅಳಿಸಲಾಗಿದೆ. ಹೀಗಾಗಿ ರಾಹುಲ್ ಗಾಂಧಿ ಚುನಾವಣಾ ಆಯೋಗದ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿಯವರಿಗೆ ಈ ಬಗ್ಗೆ ಮಾಹಿತಿ ಇದೆಯಾ? ಎಂದ ಲಾಡ್, ಓರ್ವ ಮಹಿಳೆಗೆ 35 ವಯಸ್ಸಿದೆ. ಆದರೆ, ಮತದಾರ ಪಟ್ಟಿಯಲ್ಲಿ 124 ವಯಸ್ಸು ತೋರಿಸಿದ್ದಾರೆ. ನಾವು ಈ ಬಗ್ಗೆ ಚುನಾವಣಾ ಆಯೋಗವನ್ನು ಕೇಳಿದ್ದೇವೆ. ಆದರೆ ಬಿಜೆಪಿ ಅವರೇಕೆ ಮಧ್ಯೆ ಪ್ರವೇಶಿಸುತ್ತಿದ್ದಾರೆ? ಎಂದರು.
ಇದನ್ನೂ ಓದಿ: Voter List Row: ಮತದಾರರ ಪಟ್ಟಿಯಿಂದ ನನ್ನ ಹೆಸರೇ ಕೈಬಿಟ್ಟಿದ್ದರು: ಸಚಿವ ಕೃಷ್ಣ ಬೈರೇಗೌಡ ಗಂಭೀರ ಆರೋಪ!
ಚುನಾವಣಾ ಆಯೋಗ ತಪ್ಪು ಮಾಡಿಲ್ಲ ಎಂದು ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ದಾಖಲಾತಿ ನೀಡಬೇಕು. ರಾಹುಲ್ ಗಾಂಧಿ ಸಾರ್ವಜನಿಕರಿಗೆ ಅನೂಕೂಲವಾಗುವಂತೆ ಟೀಕೆ ಮಾಡುತ್ತಾರೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ