ಮುರುಘಾ ಮಠಕ್ಕೆ ಹೊಸ ಪೀಠಾಧಿಪತಿ ನೇಮಕಕ್ಕೆ ವೀರಶೈವ ಮಹಾಸಭಾ ಆಗ್ರಹ: 30 ಜಿಲ್ಲೆಗಳಿಂದ ಪಾದಯಾತ್ರೆ ನಿರ್ಣಯ

Published : Dec 03, 2022, 06:28 PM ISTUpdated : Dec 03, 2022, 09:48 PM IST
ಮುರುಘಾ ಮಠಕ್ಕೆ ಹೊಸ ಪೀಠಾಧಿಪತಿ ನೇಮಕಕ್ಕೆ ವೀರಶೈವ ಮಹಾಸಭಾ ಆಗ್ರಹ: 30 ಜಿಲ್ಲೆಗಳಿಂದ ಪಾದಯಾತ್ರೆ ನಿರ್ಣಯ

ಸಾರಾಂಶ

ಮುರುಘಾ ಮಠಕ್ಕೆ ಹೊಸ ಪೀಠಾಧಿಪತಿ ನೇಮಕ ಮಾಡುವಂತೆ ಚಿತ್ರದುರ್ಗದಲ್ಲಿ ಮಾಜಿ ಸಚಿವ ಎಚ್. ಏಕಾಂತಯ್ಯ ನೇತೃತ್ವದಲ್ಲಿ ವೀರಶೈವ ಮಹಾಸಭಾದಿಂದ ಎರಡನೇ ಸಭೆ ಮಾಡಲಾಯಿತು. ಈ ಸಭೆಯಲ್ಲಿ ಎಲ್ಲ ಜಿಲ್ಲೆಗಳಿಂದ ಪಾದಯಾತ್ರೆ ಕೈಗೊಂಡು ಹೊಸ ಪೀಠಾಧಿಪತಿ ನೇಮಕ ಮಾಡುವಂತೆ ಆಗ್ರಹಿಸಿ ಧರಣಿ ಕೂಡಲು ತೀರ್ಮಾನ ಕೈಗೊಳ್ಳಲಾಯಿತು.  

ವರದಿ: ಕಿರಣ್ ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಡಿ.3):  ವೀರಶೈವ ಮಹಾಸಭಾದಿಂದ ಚಿತ್ರದುರ್ಗದ ಮುರುಘಾ ಮಠದ ಪೀಠಕ್ಕೆ ಹೊಸ ಪೀಠಾಧಿಪತಿಗಳನ್ನು ನೇಮಕ ಮಾಡುವಂತೆ ಆಗ್ರಹಿಸಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಚಿತ್ರದುರ್ಗಕ್ಕೆ ಪಾದಯಾತ್ರೆ ಮೂಲಕ ಬಂದು ಧರಣಿ ಮಾಡಲು ತೀರ್ಮಾನಿಸಲಾಗಿದೆ ಎಂದು ಮಾಜಿ ಸಚಿವ ಎಚ್.ಏಕಾಂತಯ್ಯ ತಿಳಿಸಿದರು.

ನಗರದಲ್ಲಿ ವೀರಶೈವ ಮಹಾಸಭಾದಿಂದ ಆಯೋಜಿಸಲಾಗಿದ್ದ 'ಚಿನ್ಮೂಲಾದ್ರಿ ಶ್ರೀ ಮುರುಘರಾಜೇಂದ್ರ ಪೀಠದ ಉಳಿವಿಗಾಗಿ ವೀರಶೈವ ಲಿಂಗಾಯತ ಸಮಾಜ ಬಾಂಧವರ ಸಮಾಲೋಚನಾ ಸಭೆ'ಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಮಠದ ಪೀಠಾಧಿಪತಿ ಮುರುಘಾ ಶ್ರೀಗಳು ಈಗಾಗಲೇ ಪೋಕ್ಸೋ ಪ್ರಕರಣದಡಿ ಬಂಧನವಾಗಿ ಮೂರು ತಿಂಗಳು ಕಳೆದಿವೆ. ಇದರಿಂದ ಮಠದ ಆಡಳಿತ, ಧಾರ್ಮಿಕ ಪೂಜಾ ಕೈಂಕರ್ಯಗಳನ್ನುಯ ನಡೆಸುವುದು ಮತ್ತು ಶೈಕ್ಷಣಿಕ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆಯಾಗಿದೆ. ಹೀಗಾಗಿ, ಮಠದ ಆಡಳಿತ ವ್ಯವಸ್ಥೆ ಸುಗಮವಾಗಿ ನಡೆಸಿಕೊಂಡು ಹೋಗುವ ಮೂಲಕ ವೀರಶೈವ ಸಮುದಾಯದ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮಠಕ್ಕೆ ಆಡಳಿತಾಧಿಕಾರಿ ನೇಮಕದ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುರುಘಾ ಮಠದಲ್ಲಿದ್ದ 11 ಅನಾಥ ಮಕ್ಕಳು ಏನಾದರು?: ಪರಶುರಾಮ್‌ ಕಳವಳ

30 ಜಿಲ್ಲೆಗಳಿಂದ ಪಾದಯಾತ್ರೆ: ರಾಜ್ಯ ಸರ್ಕಾರ ಆಡಳಿತಾಧಿಕಾರಿ ನೇಮಕ ಮತ್ತು ಹೊಸ ಪೀಠಾಧಿಪತರಿ ನೇಮಕದ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದ ಹಿನ್ನೆಲೆಯಲ್ಲಿ ಈಗ ಮಠದ ವೀರಶೈವ ಮಹಾಸಭಾದಿಂದ ರಾಜ್ಯದ ೩೦ ಜಿಲ್ಲೆಗಳಿಂದ ಪಾದಯಾತ್ರೆ ಬಂದು ಪೀಠಾಧ್ಯಕ್ಷರನ್ನು ಬದಲಿಸುವಂತೆ ಆಗ್ರಹಿಸಿ ಮಠದ ಮುಂದೆ ಧರಣಿ ಕೂರಲಾಗುತ್ತದೆ. ಜತೆಗೆ, ಮಠದ ಹಣಕಾಸಿನ ವೆಚ್ಚದ ಬಗ್ಗೆಯೂ ಸರ್ಕಾರ ಗಮನಹರಿಸುವುದು ಮತ್ತು ಮುರುಘಾ ಶರಣರ ಪೀಠತ್ಯಾಗಕ್ಕೆ ಒತ್ತಾಯಿಸಿ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ. ಈ ಹಿಂದಿನ ವೈಭವದಂತೆಯೇ ಮಠವನ್ನು ನಡೆಸಿಕೊಂಡುಹೋಗುವ ನಿಟ್ಟಿನಲ್ಲಿ ಸುಧಾರಣೆ ಆಗುವಂತೆ ಮಾಡಲಾಗುವುದು ಎಂದು ತಿಳಿಸಿದರು.

ಕಾನೂನು ಹೋರಾಟಕ್ಕೆ ತೀರ್ಮಾನ: ಮುರುಘಾ ಮಠ ಉಳಿಸಬೇಕು, ಮಠದ ಪರಂಪರೆ ದೊಡ್ಡದು. ಅದನ್ನು ಕಾಪಾಡಿಕೊಳ್ಳಬೇಕು. ಮಠಕ್ಕೆ ಹೊಸ ಪೀಠಾಧಿಪತಿಗಳ ನೇಮಕವಾಗಬೇಕು ಎಂಬುದು ಒಕ್ಕೊರಲಿನಿಂದ ಕೇಳಿ ಬಂದಿತು. ಐತಿಹಾಸಿಕ ಹಿನ್ನೆಲೆಯ ಮುರುಘಾಮಠದ ಹೊಸ ಪೀಠಾಧಿಪತಿಗಳು ಹೇಗಿರಬೇಕು ಎಂಬುದರ ಬಗೆಗೂ ಭಕ್ತರು ಅಭಿಪ್ರಾಯ ಹಂಚಿಕೊಂಡರು. ಜೊತೆಗೆ ಮಠಗಳು ಆರೋಗ್ಯಕರವಾಗಿ ಬೆಳೆಯಬೇಕು. ಹೊಸ ಪೀಠಾಧಿಪತಿ ನೇಮಕಕ್ಕೆ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗದಿದ್ದರೆ, ಕಾನೂನಾತ್ಮಕ ಹೋರಾಟ ನಡೆಸುವ ಕುರಿತು ಸಹ ತೀರ್ಮಾನಕ್ಕೆ ಸಭಿಕರು ಒಕ್ಕೊರಲಿನಿಂದ ಆಗ್ರಹಿಸಿದರು.

ಮುರುಘಾ ಶ್ರೀ ರೇಪ್‌ ಕೇಸ್ ಸಂತ್ರಸ್ತ ಬಾಲಕಿಯ ಆಡಿಯೋ ವೈರಲ್: ಸಂಭಾಷಣೆ ವಿವರ ಇಲ್ಲಿದೆ

ಸಭಿಕರಲ್ಲಿ ಗೊಂದಲ ಸೃಷ್ಟಿ: ಮಠಕ್ಕೆ ಆಡಳಿತಾಧಿಕಾರಿ ನೇಮಕ ಬೇಡ ಎಂದು ಸಭಿಕರಿಬ್ಬರು ವೇದಿಕೆ ಬಳಿ ಆಗಮಿಸಿದಾಗ ಕೆಲಹೊತ್ತು ಗದ್ದಲದ ವಾತಾವರಣ ನಿರ್ಮಾಣವಾಯಿತು. ಈ ವೇಳೆ ಆಯೋಜಕರು ಹಾಗೂ ಸಭಿಕರಿಬ್ಬರ ನಡುವೆ ವಾಗ್ವಾದ, ತಳ್ಳಾಟವು ನಡೆಯಿತು. ನಂತರ ಪೊಲೀಸರ ಮಧ್ಯಸ್ಥಿಕೆಯಿಂದ ವಾಗ್ವಾದ ತಣ್ಣಗಾಯಿತು. ನಂತರ ಸಭೆ ಮೊದಲಿನಂತೆ ಶುರುವಾಯಿತು. ಈಗ ಗಾಂಧಿವಾದ ನಡೆಯುವುದಿಲ್ಲ. ಸುಭಾಷ್ ಚಂದ್ರ ಭೋಸರ ರೀತಿ ಹೋರಾಟ ಮಾಡೋಣ. ಮಠದಿಂದ ಬಡಮಕ್ಕಳಿಗೆ ಸಹಾಯವಾಗಬೇಕಿದೆ. ಕೊಡಗಿನಲ್ಲಿದ್ದ ಮಠದ 2 ಸಾವಿರ ಎಕರೆ ಜಮೀನನ್ನು ಯಾರಿಗೋ ಬರೆದುಕೊಟ್ಟಿದ್ದಾರೆ. ಸದುಪಯೋಗಕ್ಕಾಗಿ ಮಠಕ್ಕೆ ಭಕ್ತರು ಹಣ ನೀಡಿದರೆ ಅದು ದುರುಪಯೋಗವಾಗಿದೆ. ಆ ಹಿನ್ನೆಲೆಯಲ್ಲಿ ಗಮನಹರಿಸಬೇಕಿದೆ ಎಂದು ಸಹ ಲಿಂಗಾಯತ ಮುಖಂಡರು ಅಭಿಪ್ರಾಯ ಹಂಚಿಕೊಂಡರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂದು 20,000 ರೈತರ ಜತೆ ಬಿಜೆಪಿ ಸುವರ್ಣಸೌಧ ಮುತ್ತಿಗೆ
ಡ್ರಗ್‌ ಪೆಡ್ಲರ್‌ಗಳಿಗೆ ಬೆಂಗಳೂರೇ ದೊಡ್ಡ ಟಾರ್ಗೆಟ್‌: ಚಾಕೋಲೆಟ್‌, ಕಾಫಿ ಪುಡಿ ಹೆಸರಲ್ಲಿ ಡ್ರಗ್ಸ್‌ ಸಾಗಾಟ