Uttara Kannada ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಕಾಳಿ ನೀರು ಪೂರೈಸುವ ಯೋಜನೆಗೆ ಆಕ್ಷೇಪ

Kannadaprabha News   | Asianet News
Published : Mar 05, 2022, 04:30 AM IST
Uttara Kannada ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಕಾಳಿ ನೀರು ಪೂರೈಸುವ ಯೋಜನೆಗೆ ಆಕ್ಷೇಪ

ಸಾರಾಂಶ

ನಮಗೆ ನೀರು ಕೊಟ್ಟ ಬಳಿಕ ಇತರರಿಗೆ ಕೊಡಿ ಎಂದು ಧ್ವನಿ ಎತ್ತಿದ ಜನತೆ ಬೇಸಿಗೆಯಲ್ಲಿ ಜೊಯಿಡಾದ ರಾಮನಗರದಲ್ಲಿ ತಿಂಗಳಿಗೊಮ್ಮೆ ನೀರು ಕಾಳಿ ನದಿಯಿಂದ ಉತ್ತರ ಕರ್ನಾಟಕದ ಐದು ಜಿಲ್ಲೆಗಳಿಗೆ ನೀರು ನೀಡುವ ಬಗ್ಗೆ ಬಜೆಟ್ ನಲ್ಲಿ ಘೋಷಣೆ  

ಜೋಯಿಡಾ (ಮಾ. 5): ಕಳೆದ 40 ವರ್ಷಗಳಿಂದ ತಾಲೂಕಿನ ಜನತೆ ಕುಡಿಯುವ ನೀರಿಗಾಗಿ (Drinking water) ಸತತ ಬೇಡುತ್ತಿದ್ದರೂ ಇಲ್ಲಿ ನೀರು ಕೊಡದೆ ಹೊರ ಜಿಲ್ಲೆಗಳಿಗೆ ನೀರು ಕೊಡುವ ಸರ್ಕಾರದ ಯೋಜನೆಗೆ ತಾಲೂಕಿನಲ್ಲಿ ತೀವ್ರ ಆಕ್ಷೇಪ ಕೇಳಿ ಬಂದಿದೆ. ಉತ್ತರ ಕರ್ನಾಟಕದ (Uttara Karnataka) 5 ಜಿಲ್ಲೆಗಳಿಗೆ ನೀರು ಕೊಡುವ ಬಗ್ಗೆ ಮುಖ್ಯಮಂತ್ರಿಗಳು ಬಜೆಟ್‌ (Budget) ಮಂಡನೆ ವೇಳೆ ಘೋಷಿಸುತ್ತಿದ್ದಂತೆ ಕೆರಳಿ ಕೆಂಡವಾದ ತಾಲೂಕಿನ ಜನತೆ ‘ನಮಗೆ ಮೊದಲು ನೀರು ಕೊಡಿ, ಆಮೇಲೆ ಆ ವಿಚಾರ ಮಾಡಿ’ ಎನ್ನುತ್ತಿದ್ದಾರೆ.

ನದಿ ನೀರು ಕಣ್ಣಿಗೆ ಕಂಡರೂ ನೀರು ಕೊಡುತ್ತಿಲ್ಲ. ಪ್ರತಿ ವರ್ಷ ನೂರಾರು ಕೋಟಿ ಹಣವನ್ನು ಕುಡಿಯುವ ನೀರಿಗೆ ಎಂದು ತಾಲೂಕಿನಲ್ಲಿ ಖರ್ಚು ತೋರಿಸಲಾಗುತ್ತಿದೆ. ಬೇಸಿಗೆಯಲ್ಲಿ ರಾಮನಗರಕ್ಕೆ (Ramanagar) ತಿಂಗಳಿಗೆ ಒಂದು ಅಥವಾ ಎರಡು ದಿನ ನೀರು ಬಿಡಲಾಗುತ್ತದೆ. ಆದರೆ ಹೊರ ಜಿಲ್ಲೆಗಳಿಗೆ ಈಗಾಗಲೇ ಸಾಕಷ್ಟುಕುಡಿಯುವ ನೀರಿನ ಯೋಜನೆ ಇದೆ. ಈಗ ಕಾಳಿ ನದಿ ನೀರನ್ನು ಅವರಿಗೆ ನೀಡುವುದಾದರೆ ಹೇಗೆ ಸಹಿಸುವುದು? ನಮಗೆ ಕೊಟ್ಟು ಇತರರಿಗೂ ಕೊಡಲಿ ಎಂಬ ಧ್ವನಿ ತಾಲೂಕಿನಾದ್ಯಂತ ಕೇಳಿ ಬಂದಿದೆ.

ಸರಕಾರ ಅಥವಾ ಪ್ರತಿನಿಧಿಗಳಿಗೆ ತಾಲೂಕಿನ ಮುಗ್ಧ ಜನರಿಗೆ ನೀರು ಕೊಡುವ ಮನಸ್ಸಿದ್ದರೆ, ಸುಪಾ ಡ್ಯಾಂ (supa dam) ನಿರ್ಮಾಣದ ವೇಳೆಯೇ ವ್ಯವಸ್ಥಿತ ಯೋಜನೆ ಮಾಡಬೇಕಿತ್ತು. ನಂತರವಾದರೂ ಎದುರಿಗೆ ಇರುವ ನೀರನ್ನು ಪೂರೈಸದೆ ಕೊಳವೆಬಾವಿ ತೆಗೆಯುವ ನಾಟಕ ಮಾಡುತ್ತಾ 40 ವರ್ಷ ಕಳೆದರು. ಸುಪಾ ಜಲಾಶಯಕ್ಕೆ ಭೂಮಿ ದಾನ ಮಾಡಿದ ಸಾಕಷ್ಟುಜನರು ಈಗಾಗಲೇ ನೀರಿಲ್ಲದೇ ಮಸಣ ಸೇರಿದ್ದಾರೆ. ಅವರ ಕುಟುಂಬದ ಕುಡಿಗಳ ಆಸರೆಗಾದರೂ ಜೋಯಿಡಾ (Joida), ರಾಮನಗರಕ್ಕೆ ನಿರಂತರ ಕುಡಿಯುವ ನೀರಿನ ಯೋಜನೆ ಮಾಡಬಹುದಿತ್ತು. ಮಾಡಲಿಲ್ಲ.

ತಾಲೂಕಿನಲ್ಲಿ ಧ್ವನಿ ಇಲ್ಲ: ತಾಲೂಕಿನಲ್ಲಿ ಸರಿಯಾದ ಮಾರ್ಗದರ್ಶನ ಮಾಡಬೇಕಾದ ಮುಖಂಡರೇ ಇಲ್ಲ. ಗಟ್ಟಿಧ್ವನಿ ಇಲ್ಲ, ರಾಜಕಾರಣಿಗಳು ಕುಡಿಯುವ ನೀರಿಗೆ ಯಾಕೆ ಸರಿಯಾದ ವ್ಯವಸ್ಥೆ ಮಾಡುತ್ತಿಲ್ಲ. ಯಾವುದೇ ಆಡಳಿತವಿದ್ದರೂ, ಆಡಳಿತ, ವಿರೋಧ ಪಕ್ಷದವರು ಒಳಗಿಂದ ಶಾಮೀಲಾಗುತ್ತಿರುವುದೆ ಇದಕ್ಕೆಲ್ಲಾ ಕಾರಣ ಎಂಬ ಮಾತು ಕೇಳಿ ಬರುತ್ತಿದೆ.

Haveri ಬೇಡ್ತಿ-ವರದಾ ಜೋಡಣೆಗೆ ಅನುದಾನ ನೀಡಿ
ಕ್ಷತ್ರಿಯ ಮರಾಠಾ ಪರಿಷತ್‌ ತೀವ್ರ ಖಂಡನೆ: ತಾಲೂಕು ಮರಾಠಾ ಪರಿಷತ್‌ ಅಧ್ಯಕ್ಷ ವಿ.ಜಿ. ದೇಸಾಯಿ, ಉಪಾಧ್ಯಕ್ಷ ದೇವಿದಾಸ ದೇಸಾಯಿ, ಕಾರ್ಯದರ್ಶಿ ಮಲ್ಹಾರ ರಾಣೆ ಅವರು ಹೇಳಿಕೆ ನೀಡಿ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ. ಕಳೆದ 40 ವರ್ಷಗಳಿಂದ ನಾವು ಎಲ್ಲವನ್ನೂ ತ್ಯಾಗ ಮಾಡಿ ದೇಶದ ಯೋಜನೆ ಎಂದು ಭೂಮಿ ಬದುಕನ್ನು ಬಿಟ್ಟು ಕೊಟ್ಟಿದ್ದೇವೆ. ನಮಗೆ ಕೃಷಿಗೆ ನೀರು ಕೊಡಲಿಲ್ಲ. ಕೃಷಿ ಭೂಮಿ ಬಂಜರಾಗಿದೆ. ಕುಡಿಯಲೂ ನೀರು ಕೊಡುತ್ತಿಲ್ಲ ಎಂದರೆ ಹೇಗೆ? ಇಷ್ಟುವರ್ಷ ಎಲ್ಲ ಸರ್ಕಾರಗಳ ಮಾತು ಕೇಳುತ್ತಾ ಮುಂದೆ ನಮಗೆ ನೀರು ಕೊಡಬಹುದೆಂದು ನಂಬಿದೆವು. ಆದರೆ ಎಲ್ಲರೂ ನಮಗೆ ಮೋಸ ಮಾಡಿದರು. ದೇಶದಲ್ಲಿ ಎಲ್ಲಾ ನದಿಗಳಿಂದ ರೈತರಿಗೆ ಎಂದೇ ಯೋಜನೆ ಮಾಡಿ ನೀರು ಕೊಡುತ್ತಿದ್ದಾರೆ. ಆದರೆ ಕಾಳಿನದಿ ಹರಿಯುವ ಸುಪಾ, ದಾಂಡೇಲಿ, ಹಳಿಯಾಳ, ಕಾರವಾರ ಈ 4 ತಾಲೂಕಿನ ಯಾವ ರೈತರಿಗೂ ನೀರನ್ನು ಕೊಟ್ಟಿಲ್ಲ. ಇಂಥ ಅನ್ಯಾಯ ಬೇರೆಲ್ಲೂ ನಡೆದಿಲ್ಲ. ಹಾಗಾಗಿ ನಾವು ಸರಕಾರದ ಈ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇವೆ. ನಮಗೆ ಇನ್ನಾದರೂ ನೀರು ಕೊಡಿ ಎಂದು ಕೇಳುತ್ತೇವೆ. ಜೊತೆಗೆ ಜಿಲ್ಲೆಯ ಪ್ರಜ್ಞಾವಂತ ಜನರು ಈ ಬಗ್ಗೆ ಗಮನ ಹರಿಸುವುದು ಒಳ್ಳೆಯದು ಎಂದು ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

Karnataka Politics: 2023ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೇರೋದು ಫಿಕ್ಸ್‌: ಮಧು ಬಂಗಾರಪ್ಪ
ಜನಪ್ರತಿನಿಧಿಗಳ ಮೇಲೆ ಆಕ್ರೋಶ: ಹಿಂದೆ ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ನಾವಿದ್ದಾಗಲೂ ಜೋಯಿಡಾಕ್ಕೆ ಅನ್ಯಾಯವಾಗಿದೆ. ಈಗ ಹಳಿಯಾಳ ವಿಧಾನಸಭಾ ಕ್ಷೇತ್ರದ ಹಾಲಿ, ಮಾಜಿ ಶಾಸಕರುಗಳಿಗೆ ಇದು ಗೊತ್ತಿಲ್ಲದ ವಿಷಯವಲ್ಲ. ಆದರೆ ಅಳ್ನಾವರಕ್ಕೆ ನೀರು ಒಯ್ದಂತೆ ಉತ್ತರ ಕರ್ನಾಟಕಕ್ಕೆ ನೀರು ಒಯ್ದರೂ ಈ ಹಾಲಿ, ಮಾಜಿಗಳು ಜೋಯಿಡಾ ಜನರಿಗೆ ನೀರು ಕೊಡಬೇಕೆಂಬ ಬಗ್ಗೆ ವಿಚಾರ ಮಾಡದಿರುವುದಕ್ಕೆ ಮುಂದಿನ ದಿನಗಳಲ್ಲಿ ಸಾರ್ವಜನಿಕರಾದ ನಾವು ತಕ್ಕ ಉತ್ತರ ಕೊಡುತ್ತೇವೆ ಎನ್ನುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ