Karnataka Politics: ನಾವೇನು ರಾಜಕೀಯ ಸನ್ಯಾಸಿಗಳಲ್ಲ, ಬಿಜೆಪಿ ಸರ್ಕಾರ ಕಿತ್ತೊಗೆಯಲು ಹೋರಾಟ: ಸಿದ್ದು

By Kannadaprabha News  |  First Published Mar 4, 2022, 8:15 AM IST

*  ರಾಜಕೀಯ, ಜನಪರ ಎರಡೂ ಹೋರಾಟ ಮಾಡುತ್ತೇವೆ
*  ಇದು ಹೇಡಿಗಳ ಸರ್ಕಾರ
*  ಮೋದಿ ಹತ್ತಿರ ನಿಂತು ಕೇಳುವ ಧಂ ಇವರಿಗಿಲ್ಲ 


ಬೆಂಗಳೂರು(ಮಾ.04):  ಮೇಕೆದಾಟು ಪಾದಯಾತ್ರೆಯಿಂದ(Mekedatu Padayatra) ನಮ್ಮ ಹೋರಾಟ ಮುಗಿದಿಲ್ಲ. ರಾಜ್ಯದಲ್ಲಿರುವ ಕೋಮುವಾದಿ, ಭ್ರಷ್ಟ, ನಿಷ್ಕ್ರೀಯ ಹಾಗೂ ಜನ ವಿರೋಧಿ ಸರ್ಕಾರವನ್ನು ಕಿತ್ತೊಗೆಯಲು ರಾಜಕೀಯ ಹೋರಾಟವನ್ನು ಬಹಿರಂಗವಾಗಿಯೇ ಮಾಡುತ್ತೇವೆ. ರಾಜಕೀಯ ಹಾಗೂ ಜನಪರ ಎರಡೂ ಹೋರಾಟಗಳಿಗೂ ಚಾಲನೆ ನೀಡುತ್ತೇವೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ.

ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆದ ಮೇಕೆದಾಟು ಪಾದಯಾತ್ರೆ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಾವೇನೂ ಸನ್ಯಾಸಿಗಳೇನಲ್ಲ. ರಾಜಕೀಯ(Politics) ಹಾಗೂ ಜನಪರ ಎರಡೂ ಹೋರಾಟ ಮಾಡುತ್ತೇವೆ. ಬಿಜೆಪಿ ಸರ್ಕಾರಕ್ಕೆ(BJP Government) ಜನರಿಂದ ಛೀಮಾರಿ ಹಾಕಿಸುತ್ತೇವೆ’ ಎಂದರು.

Latest Videos

undefined

Karnataka Politics: ಸಿದ್ದರಾಮಯ್ಯನವರೇ, ನಿಮ್ಮಪ್ಪನಾಣೆಗೂ ನೀವು ಅಧಿಕಾರಕ್ಕೆ ಬರುವುದಿಲ್ಲ: ಸಿ.ಟಿ. ರವಿ

ಮೇಕೆದಾಟು ಪಾದಯಾತ್ರೆ ಯಶಸ್ವಿಯಾಗಿದೆ. ಇಷ್ಟೊಂದು ಪ್ರೀತಿ, ಅಭಿಮಾನವನ್ನು ನಿರೀಕ್ಷಿಸಿರಲಿಲ್ಲ. ಬೆಂಗಳೂರಿನಲ್ಲೂ(Bengaluru) ಸ್ವಯಂ ಪ್ರೇರಿತವಾಗಿ ಅದರಲ್ಲೂ ಶಿವರಾತ್ರಿ ದಿನವೂ ಅತಿ ಹೆಚ್ಚು ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಇದರಿಂದ ರಾಜ್ಯದ ಜನತೆ ಜತೆಗೆ ಬಿಜೆಪಿಗೂ ಹೋರಾಟದ ಮಹತ್ವ ಅರ್ಥವಾಗಿದೆ. ಬಿಜೆಪಿ ಎಂಬುದು ಸುಳ್ಳು ತಯಾರಿಸುವ ಫ್ಯಾಕ್ಟರಿ. ಇವರಿಗೆ ಸತ್ಯ ಹೇಳುವುದೇ ಗೊತ್ತಿಲ್ಲ. ಅವರ ಸುಳ್ಳು ಜಾಹಿರಾತುಗಳಿಗೆ ಜನ ಮರುಳಾಗದೆ ಸತ್ಯದ ಪರ ನಿಂತು ನಮ್ಮ ಹೋರಾಟವನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು.

ಮೇಕೆದಾಟು ಯೋಜನೆಗೆ ಪರಿಸರ ಇಲಾಖೆ(Department of the Environment) ಅನುಮೋದನೆ ತಂದು ಚಾಲನೆ ನೀಡಿ ಎಂದು ಒತ್ತಾಯ ಮಾಡಿದರೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಇದೆ ಎಂದು ಸುಳ್ಳು ನೆಪ ಹೇಳುತ್ತಿದ್ದಾರೆ ಎಂದರು.

ತಮಿಳುನಾಡಿನವರು(Tamil Nadu) ಸುಪ್ರೀಂ ಕೋರ್ಟ್‌ನಲ್ಲಿ(Supreme Court) ಅರ್ಜಿ ಸಲ್ಲಿಸಿದ್ದರೂ ಕೋರ್ಟ್‌ ಯಾವುದೇ ತಡೆಯಾಜ್ಞೆ ನೀಡಿಲ್ಲ. ಹೀಗಾಗಿ ಯೋಜನೆಗೆ ಯಾವುದೇ ತಡೆಯಿಲ್ಲ. ಯೋಜನೆ ಜಾರಿಯಾದರೆ ತಮಿಳುನಾಡಿಗೂ ಸಹಕಾರಿಯಾಗುತ್ತದೆ. 3 ವರ್ಷದಿಂದ ಡಬಲ್‌ ಎಂಜಿನ್‌ ಸರ್ಕಾರ ಇದ್ದರೂ ಒಂದು ಪರಿಸರ ಇಲಾಖೆ ಅನುಮೋದನೆ ಪಡೆಯಲಾಗಲಿಲ್ಲ. ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಕಿಡಿ ಕಾರಿದರು.

ಹೇಡಿಗಳ ಸರ್ಕಾರ:

ಇದು ಹೇಡಿಗಳ ಸರ್ಕಾರ. ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಹತ್ತಿರ ನಿಂತು ಕೇಳುವ ಧಂ ಇವರಿಗೆ ಇಲ್ಲ. ಇವರಿಂದ ರಾಜ್ಯದ(Karnataka) ಜನತೆಗೆ ನ್ಯಾಯ ಸಿಗಲು ಸಾಧ್ಯವಿಲ್ಲ. ಹೀಗಾಗಿ ಇವರ ವಿರುದ್ಧ ಹೋರಾಟ ಮಾಡಿ ಅಧಿಕಾರದಿಂದ ಕಿತ್ತೊಗೆಯುತ್ತೇವೆ ಎಂದು ಹೇಳಿದರು.

Russia-Ukraine Crisis: ಕೇಂದ್ರದ ನಿರ್ಲಕ್ಷ್ಯದಿಂದಲೇ ನವೀನ್‌ ಸಾವು: ಸಿದ್ದರಾಮಯ್ಯ 

ಬಿಜೆಪಿಗೆ ಆಗದಿದ್ರೆ ಹೇಳಲಿ, ನಾವು ಮಾಡ್ತೇವೆ: ಸಿದ್ದರಾಮಯ್ಯ

ಮೇಕೆದಾಟು ಯೋಜನೆ(Mekedatu Project) ಜಾರಿಗೊಳಿಸಲು ಕೇಂದ್ರ ಮತ್ತು ರಾಜ್ಯದಲ್ಲಿರುವ ಡಬಲ್‌ ಎಂಜಿನ್‌ ಬಿಜೆಪಿ ಸರ್ಕಾರಗಳ(BJP Government) ಕೈಯಲ್ಲಿ ಆಗದಿದ್ದರೆ ಹೇಳಲಿ. ಮುಂದಿನ ಚುನಾವಣೆಯಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಆಗ ನಾವೇ ಈ ಯೋಜನೆ ಜಾರಿಗೊಳಿಸಿ ತೋರಿಸುತ್ತೇವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಸವಾಲು ಹಾಕಿದ್ದರು. 

ರಾಜ್ಯದಲ್ಲಿ(Karnataka) ನನ್ನ ನೇತೃತ್ವದ ಕಾಂಗ್ರೆಸ್‌ ಸರ್ಕಾರ(Congress Government) ಅಧಿಕಾರದಲ್ಲಿದ್ದಾಗ ಮೇಕೆದಾಟು ಯೋಜನೆಗೆ ಸಮಗ್ರ ಯೋಜನಾ ವರದಿ (DPR) ಸಿದ್ಧಪಡಿಸಲಾಗಿತ್ತು. ಸಮ್ಮಿಶ್ರ ಸರ್ಕಾರದಲ್ಲಿ(Coalition Government) ಡಿ.ಕೆ.ಶಿವಕುಮಾರ್‌(DK Shivakumar) ಅವರು ಜನಸಂಪನ್ಮೂಲ ಸಚಿವರಾದಾಗ ಡಿಪಿಆರ್‌ಅನ್ನು ಪರಿಷ್ಕೃತಗೊಳಿಸಲಾಗಿತ್ತು. ಸಮ್ಮಿಶ್ರ ಸರ್ಕಾರವನ್ನು ವಾಮಮಾರ್ಗದಿಂದ ಕೆಡವಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಮೂರು ವರ್ಷ ಕಳೆದರೂ ಮೇಕೆದಾಟು ಯೋಜನೆಗೆ ಕೇಂದ್ರ ಅರಣ್ಯ ಇಲಾಖೆಯಿಂದ ನಿರಾಕ್ಷೇಪಣ ಪತ್ರ ಪಡೆದಿಲ್ಲ. ಕೇಂದ್ರದಲ್ಲೂ ತಮ್ಮದೇ ಸರ್ಕಾರ ರಾಜ್ಯದಲ್ಲೂ ತಮ್ಮದೇ ಸರ್ಕಾರ ಅಧಿಕಾರದಲ್ಲಿದ್ದರೂ ಬೆಂಗಳೂರಿನ ಜನರಿಗೆ ಹಾಗೂ ಕಾವೇರಿ ಜಲಾನಯನ ಪ್ರದೇಶದ ಜನರ ಕುಡಿಯುವ ನೀರು ಯೋಜನೆಗೆ ಮಹತ್ವಾಕಾಂಕ್ಷಿ ಯೋಜನೆಯಾದ ಮೇಕೆದಾಟು ಯೋಜನೆ ಆರಂಭಿಸಲು ಎಳ್ಳಷ್ಟೂ ಪ್ರಯತ್ನ ನಡೆಸದೆ ರಾಜ್ಯದ ಜನರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. 
 

click me!