ಕರ್ನಾಟಕಕ್ಕೆ ಇಂದು ಯೋಗಿ ಆದಿತ್ಯನಾಥ್, ಹಾಸನ ರೂಟ್‌ನಲ್ಲಿ ಬರೋರಿಗೆ ಪೊಲೀಸರ ಮಾರ್ಗಸೂಚಿ

By Gowthami KFirst Published Sep 1, 2022, 8:29 AM IST
Highlights

ನೆಲಮಂಗಲದಲ್ಲಿ  ಧರ್ಮಸ್ಥಳ ಶಿಕ್ಷಣ ಸಂಸ್ಥೆ ನೂತನವಾಗಿ ನಿರ್ಮಿಸಿರುವ, ಪ್ರಕೃತಿ ಚಿಕಿತ್ಸೆ ಕಲ್ಪಿಸುವ ‘ಕ್ಷೇಮವನ’ವನ್ನು ಸೆ.1ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಉದ್ಘಾಟಿಸಲಿದ್ದು, ರಾಜ್ಯಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಭಾರೀ ಭದ್ರತೆ ವಹಿಸಲಾಗಿದೆ.

ಬೆಂಗಳೂರು (ಸೆ.1):  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ  ಧರ್ಮಸ್ಥಳ ಶಿಕ್ಷಣ ಸಂಸ್ಥೆ ನೂತನವಾಗಿ ನಿರ್ಮಿಸಿರುವ, ಪ್ರಕೃತಿ ಚಿಕಿತ್ಸೆ ಕಲ್ಪಿಸುವ ‘ಕ್ಷೇಮವನ’ವನ್ನು ಸೆ.1ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಯೋಗಿ ಆದಿತ್ಯನಾಥ್‌  ರಾಜ್ಯಕ್ಕೆ ಆಗಮಿಸುತ್ತಿದ್ದು, ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಆದಿಚುಂಚನಗಿರಿ ಮಹಾಸಂಸ್ಥಾನದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಸಚಿವರಾದ ಡಾ.ಕೆ. ಸುಧಾಕರ್‌, ಆನಂದ ಸಿಂಗ್‌ ಸೇರಿದಂತೆ  ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕ್ಷೇಮವನ ಕೇಂದ್ರ ನೆಲಮಂಗಲದ 20 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗಿದೆ. ನಿಸರ್ಗದತ್ತ ಆರೋಗ್ಯ ಸುಸ್ಥಿರತೆ ಕಾಯ್ದುಕೊಳ್ಳಲು 5 ಬಗೆಯ ಶುಶ್ರೂಷಾ ವಿಧಾನದ ಸೇವೆ ಇಲ್ಲಿ ಇರಲಿದೆ. ನಿಸರ್ಗ ರಮ್ಯತೆ ಉಳಿಸಿಕೊಂಡು ಪ್ರಕೃತಿ ತತ್ವದ ಆಧಾರದಲ್ಲಿ ಜೀವನ ಕ್ರಮಕ್ಕೆ ಆರೋಗ್ಯದಾಯಕ ಆಯಾಮವನ್ನು ಈ ಕೇಂದ್ರ ನೀಡಲಿದೆ. 400 ಮಂದಿಗೆ ಆರಾಮದಾಯಕವಾದ ಶುಶ್ರೂಷೆ ನೀಡುವ ವ್ಯವಸ್ಥೆಯಿದೆ. 86 ವಿಶೇಷ ಕೊಠಡಿ, 30 ಡಿಲಕ್ಸ್‌ ವಿಂಗ್‌ ಹಾಗೂ 16 ಕಾಟೇಜ್‌ಗಳಿವೆ. 

ಭಾರೀ ಭದ್ರತೆ: ಇಂದು ರಾಜ್ಯಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಆಗಮಿಸುತ್ತಿರುವ ಹಿನ್ನೆಲೆ ಭಾರೀ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ. ಕೇಂದ್ರ ವಲಯ ಐಜಿಪಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್  ಮಾಡಲಾಗಿದೆ.  9 ಡಿವೈಎಸ್ಪಿ, 28 ಇನ್ಸ್ಪೆಕ್ಟರ್, 68 ಎಸ್ಐ, 111 ಎಎಸ್ಐ ಸೇರಿದಂತೆ 1000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯ ನಿಯೋಜನೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ 3000 ಜನ ಭಾಗಿಯಾಗೋ ಸಾಧ್ಯತೆ: ಇನ್ನು ಯೋಗಿ ಆದಿತ್ಯನಾಥ್ ಭಾಗಿಯಾಗೋ ಈ ಕಾರ್ಯಕ್ರಮದಲ್ಲಿ 3000 ಜನ ಸೇರುವ ಸಾಧ್ಯತೆ ಇದೆ. 1 ಸಾವಿರ ವಿಐಪಿ ಪಾಸ್ (VIP Pass) ನೀಡಲಾಗಿದೆ. 600 ಜನ ಸಿಬ್ಬಂದಿ, 1500 ಸಾವಿರ ಸಾರ್ವಜನಿಕರಿಗೆ ಎಂಟ್ರಿ ಪಾಸ್  (Entry Pass) ವಿತರಣೆ ಮಾಡಲಾಗಿದೆ.

ವಿವಾದಿತ ಹೇಳಿಕೆ ಪ್ರಕರಣ, ಸಿಎಂ ಯೋಗಿ ಆದಿತ್ಯನಾಥ್‌ಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್!

ಮೊದಲು ಬೆಂಗಳೂರಿನ HALಗೆ ಆಗಮಿಸಲಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಬಳಿಕ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ನೆಲಮಂಗಲಕ್ಕೆ (Nelamangala) ಆಗಮಿಸಲಿದ್ದಾರೆ. ನೆಲಮಂಗಲ ಸಮೀಪದ ಬಾವಿಕೆರೆಯಲ್ಲಿರುವ ಹೆಲಿಪ್ಯಾಡ್ ನಲ್ಲಿ ಇಳಿದು ಬಳಿಕ  ರಸ್ತೆ ಬೆಂಗಳೂರು ಹಾಸನ ರಸ್ತೆ ಮೂಲಕ ಕ್ಷೇಮವನಕ್ಕೆ ಆಗಮಿಸಲಿದ್ದಾರೆ. 

ಜಲ​ಪ್ರ​ಳ​ಯ: ರಾಮನಗರದಲ್ಲಿ ಎಲ್ಲಿ ನೋಡಿದ್ರೂ ಬರೀ ಅವಶೇಷಗಳೇ..!

ಬೆಂಗಳೂರಿಗರಿಗೆ ಟ್ರಾಫಿಕ್ ಬಿಸಿ:  ಯೋಗಿ ಆಗಮನ ಹಿನ್ನೆಲೆ ಬೆಂಗಳೂರು- ಹಾಸನ ಹೆದ್ದಾರಿ (Hassan Road)  ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಹೆಚ್ಚಿದೆ. ಬೆಂಗಳೂರು-ಹಾಸನ ಪ್ರಯಾಣಿಕರು ಈ ಬಗ್ಗೆ ಗಮನಹರಿಸಬೇಕಿದೆ.  ಬೆಂಗಳೂರು ನೆಲಮಂಗಲ ಹಾಸನ ಹೆದ್ದಾರಿ ಬಳಸುವವರು ಮಾರ್ಗ ಬದಲಾಯಿಸುವುದು ಉತ್ತಮ. ಹಾಸನ ಮಾರ್ಗದಿಂದ ಬೆಂಗಳೂರಿಗೆ ಬರುವವರಿಗೆ ಪೊಲೀಸರು ಮಾರ್ಗಸೂಚಿಯನ್ನು ಕೂಡ ಬಿಡುಗಡೆ ಮಾಡಿದ್ದು, ಹಾಸನ, ಮಂಗಳೂರಿನಿಂದ ಬೆಂಗಳೂರಿಗೆ ಬರುವವರು ಹಾಸನ ರಸ್ತೆ - ಕುಣಿಗಲ್ ಜಾನ್ಸ್ಸನ್ ಫ್ಯಾಕ್ಟರಿ (ಕೆಎಸ್ ರೋಡ್) - ಮಾಗಡಿ - ತಾವರೆಕೆರೆ - ಮಾಗಡಿ ರೋಡ್ (ನೈಸ್ ರೋಡ್ - Nice road) ಬೆಂಗಳೂರು. ಹಾಗೇಯೇ ಬೆಂಗಳೂರಿನಿಂದ ಹಾಸನ, ಮಂಗಳೂರು ಹೋಗುವವರು ಮಾಗಡಿ ರಸ್ತೆ - ತಾವರೆಕೆರೆ - ಮಾಗಡಿ ಜಂಕ್ಷನ್ - ಕುಣಿಗಲ್ ಜಾನ್ಸ್ಸನ್ ಫ್ಯಾಕ್ಟರಿ - ಹಾಸನ್ ರಸ್ತೆ ಮೂಲಕ ಪ್ರಯಾಣಿಸಬಹುದು.

click me!