ದೇಶದಲ್ಲೇ ಸಂಚಲನ ನಿರ್ಮಿಸಿದ್ದ ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮೈದಾನದಲ್ಲಿ ಇಂದು ಎಲ್ಲಾ ಅಡೆತಡೆಗಳನ್ನು ಮೀರಿ ಕಾನೂನಿನ ಮೂಲಕವೇ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ನೇತೃತ್ವದಲ್ಲಿ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಲಾಗಿದೆ.
ಹುಬ್ಬಳ್ಳಿ (ಆ.31): ದೇಶದಲ್ಲೇ ಸಂಚಲನ ನಿರ್ಮಿಸಿದ್ದ ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮೈದಾನದಲ್ಲಿ ಇಂದು ಎಲ್ಲಾ ಅಡೆತಡೆಗಳನ್ನು ಮೀರಿ ಕಾನೂನಿನ ಮೂಲಕವೇ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ನೇತೃತ್ವದಲ್ಲಿ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಲಾಗಿದೆ. ಈ ಐತಿಹಾಸಿಕ ಮೈದಾನದಲ್ಲಿ ಅಂದು ರಾಷ್ಟ್ರ ಧ್ವಜ ಹಾರಿಸಲು ಅನೇಕರು ಜೀವ ಬಲಿದಾನಗೈದ ಘಟನೆ ಅಚ್ಚಳಿಯದಂತೆ ಸ್ಮೃತಿ ಪಟಲದಲ್ಲಿ ಉಳಿದಿದೆ. ಇಂತಹ ಐತಿಹಾಸಿಕ ಮೈದಾನದಲ್ಲಿ ಇಂದು ಅದ್ಧೂರಿಯಾಗಿ ಗಣೇಶೋತ್ಸವ ಆಚರಣೆ ನಡೆದಿರುವುದು ಮತ್ತೊಂದು ಇತಿಹಾಸ.
ಈ ಅದ್ಧೂರಿ ಗಣೇಶೋತ್ಸವ ಆಚರಣೆಯ ಸಂಧರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಶ್ರೀ ಜಗದೀಶ್ ಶೆಟ್ಟರ್, ಸಚಿವರಾದ ಶ್ರೀ ಶಂಕರಪಾಟೀಲ್ ಮುನೇನಕೊಪ್ಪ, ಶ್ರೀ ಹಾಲಪ್ಪ ಆಚಾರ್, ಶಾಸಕರಾದ ಶ್ರೀ ಅರವಿಂದ ಬೆಲ್ಲದ್, ಶ್ರೀ ಸಿಎಂ ನಿಂಬಣ್ಣವರ್, ಹು-ಧಾ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಮಹೇಶ್ ಟೆಂಗಿನಕಾಯಿ, ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀ ಸಂತೋಷ್ ಚೌಹಾನ್, ಶ್ರೀ ಶಿವು ಮೆಣಸಿನಕಾಯಿ ಹಾಗೂ ಗಣೇಶೋತ್ಸವ ಸಮಿತಿಯ ಪ್ರಮುಖರು ಸಹ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರಿಗೆ ಸಾಥ್ ನೀಡಿದರು.
ಗಜೇಂದ್ರಗಡದಲ್ಲಿ ಎಗ್ಗಿಲ್ಲದೆ ನಡೆದಿದೆ ಅಕ್ರಮ ಪಟಾಕಿ ಮಾರಾಟ
ಇದೇ ಮೊದಲ ಬಾರಿಗೆ ಗಣೇಶನ ಪ್ರತಿಷ್ಠಾಪನೆ: 90ರ ದಶಕದಲ್ಲಿ ರಾಷ್ಟ್ರಧ್ವಜ ಹಾರಿಸುವ ವಿಷಯದಿಂದ ನಡೆದ ಹೋರಾಟ ದೇಶಾದ್ಯಂತ ಸದ್ದು ಮಾಡಿತ್ತು. ಇದೀಗ ಈ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಬೇಕೆಂಬ ಬೇಡಿಕೆ ಕಳೆದ ಒಂದು ತಿಂಗಳಿಂದ ಹಿಂದೂಪರ ಸಂಘಟನೆಗಳಿಂದ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯೂ ಸದನ ಸಮಿತಿ ರಚಿಸಿ ಅದರ ವರದಿ ಆಧಾರದ ಮೇಲೆ ಅನುಮತಿಯನ್ನೂ ನೀಡಿತ್ತು.
ಮಹಾಮಂಡಳಿಗೆ ಅನುಮತಿ: 6 ಸಂಘಟನೆಗಳು ಗಣೇಶನ ಪ್ರತಿಷ್ಠಾಪನೆಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದವು. ಗಣೇಶನ ಪ್ರತಿಷ್ಠಾಪನೆಗೆ ಯಾವ ಸಂಘಟನೆಗೆ ಅನುಮತಿಕೊಡಬೇಕು ಎಂಬುದನ್ನು ನಿರ್ಧರಿಸಲು ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಹಾಗೂ ಅಧಿಕಾರಿ ವರ್ಗ ಪಾಲಿಕೆಯಲ್ಲಿ ಆರು ಸಂಘಟನೆಗಳೊಂದಿಗೆ ಸಭೆ ನಡೆಸಿದರು. ಕೊನೆಗೆ ಸಂಜಯ ಬಡಸ್ಕರ್ ಅಧ್ಯಕ್ಷತೆಯ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಕ್ಕೆ ಅನುಮತಿ ನೀಡಲಾಗಿದೆ. ಈ ಸಂಘಟನೆಯೂ 3 ದಿನಗಳ ಕಾಲ ಇಲ್ಲಿ ಗಣೇಶನ ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಿದೆ. ಉಳಿದ ಸಂಘಟನೆಗಳು ಈ ಸಂಘಟನೆಗೆ ಸಹಕಾರ ನೀಡಲಿವೆ ಎಂದು ಮೇಯರ್ ಈರೇಶ ಅಂಚಟಗೇರಿ ತಿಳಿಸಿದರು. ಉಳಿದ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಯಾವ್ಯಾವ ನಿಯಮಗಳು ಅನ್ವಯಿಸುತ್ತದೆಯೋ ಅದೇ ನಿಯಮಗಳು ಇದಕ್ಕೂ ಅನ್ವಯಿಸಲಿವೆ.
ಹುಬ್ಬಳ್ಳಿ: ಉಕ್ಕಿದ ಬೆಣ್ಣೆಹಳ್ಳ, 32 ಜನರ ರಕ್ಷಣೆ ಓರ್ವ ನಾಪತ್ತೆ
ಭಾರೀ ಭದ್ರತೆ: ಇದೇ ಮೊದಲ ಬಾರಿಗೆ ಈದ್ಗಾ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡುತ್ತಿರುವುದು ಭಾರಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಈದ್ಗಾ ಮೈದಾನವನ್ನು ಎರಡು ಭಾಗಗಳನ್ನಾಗಿ ಮಾಡಲಾಗಿದೆ. ಬ್ಯಾರಿಕೇಡ್ ಅಳವಡಿಸಿ ಇನ್ನೊಂದು ಭಾಗಕ್ಕೆ ತೆರಳಲು ಅವಕಾಶವಿಲ್ಲದಂತೆ ಬಂದ್ ಮಾಡಲಾಗಿದೆ. ಮೈದಾನದ ಸುತ್ತಲೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ರ್ಯಾಪಿಡ್ ಪ್ರೊಟೆಕ್ಷನ್ ಪೋರ್ಸ್, ಸಿಎಆರ್, ಕೆಎಸ್‌ಆರ್‌ಪಿ ದಳಗಳನ್ನು ಬಂದೋಬಸ್‌್ತ ನಿಯೋಜಿಸಲಾಗಿದೆ. 100 ಜನ ಗೃಹ ರಕ್ಷಕ ಸಿಬ್ಬಂದಿ, 50 ಜನ ಪೊಲೀಸ್ ಪ್ರಶಿಕ್ಷಣಾರ್ಥಿ, 50 ಜನ ಪಿಎಸ್‌ಐ ತರಬೇತಿ ಪಡೆಯುತ್ತಿರುವ ಪ್ರಶಿಕ್ಷಣಾರ್ಥಿಗಳು ಸೇರಿದಂತೆ 500ಕ್ಕೂ ಅಧಿಕ ಸಿಬ್ಬಂದಿಗಳನ್ನು ಮೈದಾನದ ಸುತ್ತ ಭದ್ರತೆಗೆ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.