ಕೋವಿಡ್ ನಂತರದಲ್ಲಿ ಭಾರತ ಎಲ್ಲ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದ್ದು ಮುಂದಿನ ದಿನಗಳಲ್ಲಿ ಭಾರತವೇ ಜಗತ್ತನ್ನು ಮುನ್ನಡೆಸಲಿದೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಭರವಸೆ ವ್ಯಕ್ತಪಡಿಸಿದರು.
ಧಾರವಾಡ (ಆ.29) : ಕೋವಿಡ್ ನಂತರದಲ್ಲಿ ಭಾರತ ಎಲ್ಲ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದ್ದು ಮುಂದಿನ ದಿನಗಳಲ್ಲಿ ಭಾರತವೇ ಜಗತ್ತನ್ನು ಮುನ್ನಡೆಸಲಿದೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಭರವಸೆ ವ್ಯಕ್ತಪಡಿಸಿದರು.
ಧಾರವಾಡ ಐಐಟಿ 4ನೇ ಘಟಿಕೋತ್ಸವ(IIT Dharwad 4th Convocation)ದಲ್ಲಿ ಮಾತನಾಡಿ, ಭಾರತ ಈಗ 5ನೇ ಆರ್ಥಿಕ ಶಕ್ತಿಯಾಗಿದ್ದು, ಕೆಲವೇ ವರ್ಷಗಳಲ್ಲಿ 3ನೇ ಸ್ಥಾನಕ್ಕೆ ಬರಲಿದ್ದೇವೆ. ಈ ಮೊದಲು ಬೇರೆ ದೇಶಗಳನ್ನು ನಾವು ಅನುಸರಿಸಬೇಕಿತ್ತು. ಆದರೆ, ಅಭಿವೃದ್ಧಿ ಹೊಂದಿರುವ ರಷ್ಯಾದಂತಹ ದೊಡ್ಡ ದೇಶಗಳೂ ಭಾರತವನ್ನು ಅನುಸರಿಸುವಂತಾಗಿದೆ. ಮೇಕ್ ಇನ್ ಇಂಡಿಯಾ(Make in india) ಬಗ್ಗೆ ಹಾಸ್ಯ ಮಾಡಲಾಗಿತ್ತು. ಆದರೆ, ಅದೇ ಇವತ್ತು ಭಾರತವನ್ನು ಮುನ್ನಡೆಸುತ್ತಿದೆ. ಇಲ್ಲಿಯ ಜಾಣ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಜಗತ್ತಿನ ಅವಶ್ಯತೆಗಳನ್ನು ಪೂರೈಸಲು ಸಿದ್ಧರಾಗುತ್ತಿದ್ದಾರೆ. ನಮ್ಮಲ್ಲಿ ಕೆಲಸ ಮಾಡಲು ಅದ್ಭುತ ಎಂಜಿನಿಯರ್, ವೈದ್ಯರಿದ್ದಾರೆ. ಬುದ್ಧಿವಂತ ವರ್ಗ ದೇಶದಲ್ಲಿದ್ದು ಜಗತ್ತಿಗೆ ದಾರಿ ತೋರುವ ದೇಶವಾಗುವ ಸಮಯ ದೂರವಿಲ್ಲ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಅಭಿವೃದ್ಧಿಯೇ ಇಲ್ಲ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಚಂದ್ರಯಾನ-3(Chandrayan3) ಯಶಸ್ವಿಯಾಗಿದ್ದು ಇಸ್ರೋ(ISRO)ದ ಸಾಧನೆಯನ್ನು ನಾವ್ಯಾರು ತೆಗೆದುಕೊಳ್ಳುವುದಿಲ್ಲ. ಈ ವಿಷಯದಲ್ಲಿ ರಾಜಕೀಯ ಬೇಡ. ಆದರೆ, 114 ರಾಕೆಟ್‌ಗಳನ್ನು ಒಮ್ಮೆಲೆ ಹಾರಿಸಿದೆವು. 2014ರ ಮುಂಚೆ ಹೀಗಿರಲಿಲ್ಲ. ಭಾರತ ಈ ಮುಂಚೆ ಗ್ಲೋಬಲ್ ಇಂಡೆಕ್ಸನಲ್ಲಿ 81ರ ಸ್ಥಾನದಲ್ಲಿತ್ತು. ಇವತ್ತು 46ನೇ ಸ್ಥಾನಕ್ಕೆ ಜಿಗಿತ ಕಂಡಿದೆ ಎಂದ ಪ್ರಹ್ಲಾದ ಜೋಶಿ(Pralhad joshi union minister), ಜಗತ್ತಿನಲ್ಲಿ ಕೆಲಸ ಮಾಡುವ ಕೈ ಗಳು ಕಡಿಮೆಯಾಗುತ್ತಿವೆ. ಬುದ್ಧಿವಂತಿಕೆಯೂ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದ ಐಐಟಿ ಪದವೀಧರರು ಅದ್ಭುತ ಅವಕಾಶ ಗಿಟ್ಟಿಸಿಕೊಂಡು ಭಾರತದ ಯಶಸ್ಸಿಗೆ ಕೊಡುಗೆ ನೀಡಬೇಕು ಎಂದರು.
ಈ ಮೊದಲು ಕಲ್ಲಿದ್ದಲನ್ನು ನಾವು ಆಮದು ಮಾಡಿಕೊಳ್ಳುತ್ತಿದ್ದೇವು. ಬೇಸರ ಎಂದರೆ ನಮ್ಮಲ್ಲಿಯೇ ಇನ್ನೂ 300 ವರ್ಷಗಳಿಗೆ ಆಗುವಷ್ಟುಕಲ್ಲಿದ್ದಲು ಇದೆ. ಇಷ್ಟಾದರೂ ಆಮದು ಏತಕ್ಕೆ ಎಂದು ಪ್ರಶ್ನಿಸಿದೆ. ಅಧಿಕಾರಿಗಳು ಕಾನೂನಿನ ಸಮಸ್ಯೆ ಎಂದು ಉತ್ತರ ನೀಡಿದರು. ಕೂಡಲೇ ಕಾನೂನು ತಿದ್ದುಪಡಿ ತಂದು ಕಲ್ಲಿದ್ದಲು ಆಮದು ನಿಲ್ಲಿಸಲಾಗಿದ್ದು 2025ರ ಹೊತ್ತಿಗೆ ಸಂಪೂರ್ಣ ಆಮದು ನಿಲ್ಲುತ್ತದೆ ಎಂದು ಜೋಶಿ ಹೇಳಿದರು.
ಪುತ್ತೂರು ಗ್ರಾಪಂ ಉಪ ಚುನಾವಣಾ ಸ್ಪರ್ಧೆಗೆ ಇಳಿದ 'ಪುತ್ತಿಲ ಪರಿವಾರ; ಬಿಜೆಪಿಗೆ ಮತ್ತೊಮ್ಮೆ ಸೆಡ್ಡು?