ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ‘ಅನುಭವ ಮಂಟಪ’ ರಚನೆ: ಎಸ್‌ ಆರ್‌ ಹಿರೇಮಠ

By Ravi Janekal  |  First Published Aug 29, 2023, 8:23 PM IST

ದೇಶದಲ್ಲಿ ಒಂದು ರೀತಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸೋಲಿಸಿದಂತೆ ಕೇಂದ್ರ ಬಿಜೆಪಿ ಸರ್ಕಾರ ಸೋಲಿಸಲು ರಾಷ್ಟ್ರ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ ಎಂದು ಸಮಾಜ ಪರಿವರ್ತನ ಸಮುದಾಯದ ಅಧ್ಯಕ್ಷ ಎಸ್‌.ಆರ್‌.ಹಿರೇಮಠ ಹೇಳಿದರು.


ಧಾರವಾಡ (ಆ.29) : ದೇಶದಲ್ಲಿ ಒಂದು ರೀತಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸೋಲಿಸಿದಂತೆ ಕೇಂದ್ರ ಬಿಜೆಪಿ ಸರ್ಕಾರ ಸೋಲಿಸಲು ರಾಷ್ಟ್ರ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ ಎಂದು ಸಮಾಜ ಪರಿವರ್ತನ ಸಮುದಾಯದ ಅಧ್ಯಕ್ಷ ಎಸ್‌.ಆರ್‌.ಹಿರೇಮಠ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಇದಕ್ಕಾಗಿ ಸಮಿತಿ ಕಾರ್ಯಾರಂಭವೂ ಮಾಡಿದೆ. 2024ರಲ್ಲಿ ಜರಗುವ ಲೋಕಸಭಾ ಚುನಾವಣೆ(Loksabha election)ಯಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಸೋಲಿಸಲಾಗುವುದು. ಈ ಉದ್ದೇಶಕ್ಕಾಗಿ ‘ಅಖಿಲ ಭಾರತ ಅನುಭವ ಮಂಟಪ ರಚನೆ’ ಮಾಡಲಾಗಿದೆ ಎಂದರು.

Tap to resize

Latest Videos

ಬಿಜೆಪಿ ನಾಯಕರ ಬಗ್ಗೆ ಅತೃಪ್ತಿ ಇದೆ: ಮುನೇನಕೊಪ್ಪ

ದೇಶದಲ್ಲಿ ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಮಣಿಪುರ(Manipur violence) ಸೇರಿ ಇತರೆಡೆ ಗಲಾಟೆಗಳು ನಡೆದರೂ, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಸಿಟಿಜನ್ಸ್‌ ಫಾರ್‌ ಡೆಮಾಕ್ರಸಿಯ (ಸಿಎಫ್‌ಡಿ) ಸುವರ್ಣ ಮಹೋತ್ಸವ ಅಂಗವಾಗಿ ಈ ‘ಅಖಿಲ ಭಾರತ ಅನುಭವ ಮಂಟಪ-2023’ ಸೆ. 23, 24ರಂದು ಎರಡು ದಿನಗಳ ವಿಶೇಷ ಕಾರ್ಯಕ್ರಮ ಬೆಂಗಳೂರಿನ ಗಾಂಧಿಭವನದಲ್ಲಿ ಆಯೋಜಿಸಿರುವುದಾಗಿ ತಿಳಿಸಿದರು.

ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ಉದ್ಘಾಟಿಸಲಿದ್ದು, ಜೆಎನ್‌ಯುನ ನಿವೃತ್ತ ಪ್ರಾಧ್ಯಾಪಕ ಪೊ›. ಆನಂದಕುಮಾರ, ಲಖನೌನ ಎಸ್‌.ಆರ್‌. ದಾರಾಪುರಿ, ಪುನಾದ ದತ್ತ ದೇಸಾಯಿ, ರೈತ ಮುಖಂಡ ಅಶೋಕ ದವಳೆ ಪಾಲ್ಗೊಳ್ಳಲಿದ್ದಾರೆ ಎಂದರು.

ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ: ದಿನೇಶ್ ಗುಂಡೂರಾವ್

ದೇಶದ ವಿವಿಧ ರಾಜ್ಯಗಳಿಂದ ಗಣ್ಯರು ಭಾಗವಹಿಸಲಿದ್ದಾರೆ. ಚಿಂತಕ ರಾಜೇಂದ್ರ ಚೆನ್ನಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಮಾವೇಶದ ಬಳಿಕ ಸೆ. 25ರಂದು ಮುಂದಿನ ಹೋರಾಟ ಹಾಗೂ ಇತರ ಕಾರ್ಯಗಳ ಬಗ್ಗೆ ಚಿಂತನಾ ಸಭೆ ಜರುಗಲಿದೆ ಎಂದರು.

click me!