ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿಯನ್ನು ಸ್ವತಃ ಬಾವಿಗೆ ಇಳಿದು ರಕ್ಷಿಸಿದ ಘಟನೆ ನಡೆದಿದೆ. ದೇವದ ದರ್ಶನದ ನಿಮಿತ್ತ ಉಡುಪಿ ಸಮೀಪದ ಮುಚ್ಲುಕೋಡು ಶ್ರೀ ಸುಬ್ರಮಣ್ಯ ದೇವಾಲಯಕ್ಕೆ ಸ್ವಾಮೀಜಿ ಭೇಟಿ ನೀಡಿದ್ದರು.
ಉಡುಪಿ (ಜೂ.19): ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿಯನ್ನು ಸ್ವತಃ ಬಾವಿಗೆ ಇಳಿದು ರಕ್ಷಿಸಿದ ಘಟನೆ ನಡೆದಿದೆ. ದೇವದ ದರ್ಶನದ ನಿಮಿತ್ತ ಉಡುಪಿ ಸಮೀಪದ ಮುಚ್ಲುಕೋಡು ಶ್ರೀ ಸುಬ್ರಮಣ್ಯ ದೇವಾಲಯಕ್ಕೆ ಸ್ವಾಮೀಜಿ ಭೇಟಿ ನೀಡಿದ್ದರು. ಈ ಸಂದರ್ಭ ಬಾವಿಗೆ ಬೆಕ್ಕೊಂದು ಬಿದ್ದಿರುವ ಬಗ್ಗೆ ದೇವಾಲಯದ ಸಿಬ್ಬಂದಿ ಮಾಹಿತಿ ನೀಡಿದರು. ತಕ್ಷಣ ಸ್ವಾಮೀಜಿ ಅವರು ಬಾವಿಯ ನೀರು ಸೇದುವ ಹಗ್ಗವನ್ನು ಹಿಡಿದುಕೊಂಡು ಸುಮಾರು 40 ಅಡಿ ಆಳದ, 4-5 ಅಡಿ ಅಗಲದ ಕಲ್ಲು ಕಟ್ಟಿರುವ ಬಾವಿಗೆ ಇಳಿದೇಬಿಟ್ಟರು.
ನಂತರ ಕೈಗೆ ಬಟ್ಟೆಯೊಂದನ್ನು ಗ್ಲೌಸ್‌ನಂತೆ ಸುತ್ತಿಕೊಂಡರು. ಜೀವದಾಸೆಗೆ ಬಾವಿಯೊಳಗೆ ಕಲ್ಲಿನ ಅಟ್ಟೆಮೇಲೆ ಕುಳಿತಿದ್ದ ಬೆಕ್ಕನ್ನು ಜಾಗ್ರತೆಯಿಂದ ಹಿಡಿದು ಹಗ್ಗಕ್ಕೆ ಕಟ್ಟಿದ್ದ ಬಕೆಟ್‌ಗೆ ಹಾಕಿದರು. ಸಿಬ್ಬಂದಿ ಬಕೆಟ್‌ನ್ನು ಅರ್ಧಕ್ಕೆ ಎಳೆಯುವಷ್ಟರಲ್ಲಿ ಬೆಕ್ಕು ಹೆದರಿ ಪುನಃ ಬಾವಿಗೆ ಹಾರಿತು. ಪುನಃ ಒಂದು ಕೈಯಲ್ಲಿ ಬೆಕ್ಕನ್ನು ಹಿಡಿದು, ಇನ್ನೊಂದು ಕೈಯಲ್ಲಿ ಹಗ್ಗವನ್ನು ಹಿಡಿದ ಸರ್ಕಸ್‌ನಂತೆ ಸಾಹಸದಿಂದ ಬಾವಿಯಿಂದ ಮೇಲಕ್ಕೆ ಬಂದು, ಬೆಕ್ಕನ್ನು ರಕ್ಷಿಸಿದರು. ಪೇಜಾವರ ಶ್ರೀಗಳ ಈ ಮಾನವೀಯ ಸಾಹಸದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಪ್ರಚಾರ ಪಡೆದಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ ವಾರ ಸರಸರನೇ ಹಲಸಿನ ಮರವನ್ನು ಏರಿ ಹಣ್ಣುಗಳನ್ನು ಕೊಯ್ದು ಕತ್ತರಿಸಿ ಗೋವುಗಳಿಗೆ ಉಣಬಡಿಸಿದ ಸ್ವಾಮೀಜಿ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆ ವ್ಯಕ್ತವಾಗುತ್ತಿದೆ.
undefined
ಹೃದಯಾಘಾತದಿಂದ ಶೇ.36ರಷ್ಟು ಸಾವು: ಡಾ.ಮಂಜುನಾಥ್ ಕಳವಳ
ಸರಸರನೆ ಮರ ಹತ್ತಿ ಹಲಸಿನ ಹಣ್ಣು ಕೊಯ್ದ ಪೇಜಾವರ ಶ್ರೀಗಳು: ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಬುಧವಾರ ಶ್ರೀ ಮಠದ ಗೋಶಾಲೆಯ ಆವರಣದಲ್ಲಿರುವ ಸುಮಾರು 30 - 35 ಅಡಿ ಎತ್ತರದ ಹಲಸಿನ ಮರವನ್ನು ಏರಿ, ಪಕ್ವಗೊಂಡಿದ್ದ ಹಲಸಿನ ಹಣ್ಣುಗಳನ್ನು ಕೊಯ್ದು, ಗೋವುಗಳಿಗೆ ತಿನ್ನಿಸಿ ಸಂತಸಪಟ್ಟರು. ಗೋಶಾಲೆಗೆ ಭೇಟಿ ನೀಡಿದ ಶ್ರೀಗಳು, ಮರದಲ್ಲಿ ಹಲಸಿನ ಹಣ್ಣು ಪಕ್ವವಾಗಿರುವುದನ್ನು ಕಂಡು ಪಾದುಕೆಗಳನ್ನು ಕೆಳಗೆ ಬಿಟ್ಟು, ಹೆಗಲ ಮೇಲಿದ್ದ ಶಲ್ಯವನ್ನು ತಲೆಗೆ ಸುತ್ತಿ, ಕಾವಿಪಂಚೆಯನ್ನು ಕಚ್ಚೆಯಂತೆ ಬಿಗಿದು, ಕೈಯಲ್ಲೊಂದು ಕತ್ತಿ ಹಿಡಿದುಕೊಂಡು, ಏಣಿ, ಹಗ್ಗ ಇತ್ಯಾದಿ ಯಾವುದರ ಸಹಾಯವಿಲ್ಲದೆ ಸರಸರನೆ ಮರವನ್ನೇರಿಯೇ ಬಿಟ್ಟರು. ಅವರ ಶಿಷ್ಯರು ಅಚ್ಚರಿಯಿಂದ ತಮ್ಮ ಗುರುಗಳ ಅನಿರೀಕ್ಷಿತ ಸಾಹಸವನ್ನು ನೋಡುತ್ತಾ ನಿಂತುಬಿಟ್ಟರು.
ಸಾಂಸ್ಕೃತಿಕ, ಚಾರಿತ್ರಿಕ, ಬೌದ್ಧಿಕ ನೆಲೆಗಟ್ಟಿನಲ್ಲಿ ಮೈಸೂರು ಅಭಿವೃದ್ಧಿ: ಸಚಿವ ಮಹದೇವಪ್ಪ
ಮರದ ಮೇಲಿದ್ದ ಹಲಸಿನಹಣ್ಣಗಳನ್ನು ಬೆರಳಿನಿಂದ ಹೊಡೆದು ಹಣ್ಣಾಗಿರುವುದನ್ನು ಖಚಿತಪಡಿಸಿಕೊಡು ಸುಮಾರು 8 - 10 ಕಿತ್ತು ಕೆಳಗೆ ಹಾಕಿದರು. ಎರಡೋ ಮೂರು ಹಣ್ಣುಗಳನ್ನು ತಮ್ಮ ಶಿಷ್ಯರಿಗೆ, ಗೋಶಾಲೆಯ ಸಹಾಯಕರಿಗೆ ಹಂಚಿದರು. ಮತ್ತುಳಿದವನ್ನು ಕೊಯ್ದು ಗೋವುಗಳಿಗೆ ತಿನ್ನಿಸಿ ಖುಷಿಪಟ್ಟರು. ಸದಾ ಕ್ರಿಯಾಶೀಲರೂ, ಉತ್ತಮ ಈಜುಪಟು, ಯೋಗಪಟುವೂ ಆಗಿರುವ ಶ್ರೀಗಳು ಪರಿಸರ ಪ್ರೇಮಿಯಾಗಿದ್ದಾರೆ. ನೂರಾರು ಬೀಡಾಡಿ, ಗಾಯಗೊಂಡ, ವಯಸ್ಸಾದ ಗೋವುಗಳನ್ನು ಸಾಕುವ ಗೋಪ್ರೇಮಿ. ಅವರು ಹಿಂದೆ ಮಠದ ಪರಿಸರಕ್ಕೆ ಬರುವ ವಿಷಕಾರಿ ಹಾವುಗಳನ್ನೂ ರಕ್ಷಿಸಿ ದೂರದ ಕಾಡಿಗೆ, ಗಾಯಗೊಂಡ ಪಕ್ಷಿಗಳನ್ನು ಆರೈಕೆ ಮಾಡಿ ಪ್ರಕೃತಿಗೆ ಬಿಟ್ಟದುಂಟು. ರೈತರ ಗದ್ದೆಯಲ್ಲಿ ಬೆಳೆದ ಹುಲ್ಲನ್ನು ಶ್ರೀಗಳು ತಾವೇ ಕೊಯ್ದು ತಂದ ಉದಾಹರಣೆಗಳೂ ಇವೆ.