
ಬೆಂಗಳೂರು (ಜೂ.19): ರಾಜ್ಯದಲ್ಲಿ ಈ ಹಿಂದೆ ಕೋಮು ಗಲಭೆಯಿಂದ ಮೃತಪಟ್ಟವರ ಕುಟುಂಬಕ್ಕೆ ಸೋಮವಾರ ತಲಾ 25 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಂತ್ರಸ್ತ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಬಿಜೆಪಿ ಸರ್ಕಾರವಿದ್ದಾಗ ಕೋಮ ಗಲಭೆಯಲ್ಲಿ ಸಾವನ್ನಪಿದ್ದವರಿಗೆ 25 ಲಕ್ಷ ರೂಪಾಯಿ ಕೊಟ್ಟಿದ್ದರು. ಕೇವಲ ಹಿಂದುಗಳಿಗೆ ಮಾತ್ರ 25 ಲಕ್ಷ ಕೊಟ್ಟಿದ್ದಾರೆ. ಮುಸ್ಲಿಂನವರು ಸಾವನ್ನಪಿದ್ದರೂ ಅವರಿಗೆ ಕೊಟ್ಟಿರಲಿಲ್ಲ. ಸರ್ಕಾರ ಎಲ್ಲರನ್ನೂ ಸಮನಾವಾಗಿ ನೋಡಬೇಕು. ಇದರ ಬಗ್ಗೆ ನಾನು ಸದನದಲ್ಲಿ ಪ್ರಸ್ತಾಪ ಮಾಡಿದ್ದೆನು. ಅವರು ನೋಡ್ತೀವಿ ಅದು ಇದು ಅಂತ ಹೇಳಿದ್ರು ಅಷ್ಟೇ. ಪರಿಹಾರ ಕೊಡುವಾಗ ಸರಿಸಮಾನಗಿ ನೋಡಬೇಕು. ಪ್ರವೀಣ್ ನೆಟ್ಟಾರು, ಹರ್ಷ ಅವರಿಗೆ ಮಾತ್ರ ಪರಿಹಾರ ನೀಡಿದ್ದರು ಎಂದರು.
ಇಂದಿರಾ ಕ್ಯಾಂಟೀನ್ ಊಟದ ಮೆನು ಬದಲಾವಣೆ: ಹೊಸ ಸೇರ್ಪಡೆ ಪಟ್ಟಿ ಇಲ್ಲಿದೆ ನೋಡಿ
ಆರು ಜನರಲ್ಲಿ ಇಬ್ಬರಿಗೆ ಮಾತ್ರ ಪರಿಹಾರ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಸೂದ್, ಪ್ರವೀಣ್, ಫಾಸೀಲ್, ಅಬ್ದುಲ್ ಜಲಿಲ್, ದೀಪಕ್ ರಾವ್ ಒಟ್ಟು ಆರು ಜನರಕ್ಕೆ ಪರಿಹಾರವನ್ನು ಕೊಡಬೇಕಿತ್ತು. ಆದರೆ, ಇಬ್ಬರಿಗೆ ಮಾತ್ರ ಕೊಇಟ್ಟು ನಾಲ್ವರಿಗೆ ಕೊಡಲಿಲ್ಲ. ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಹಾಕಬಾರದು. ಸತ್ತವರ ಕುಟುಂಬಕ್ಕೆ ಎಲ್ಲರಿಗೂ ಕೊಡಬೇಕು. ಸಾಂತ್ವನ ಕೂಡ ಹೇಳೋಕೆ ಹೋಗಲಿಲ್ಲ. ಮಂಗಳೂರಿಗೆ ಹೋದರೂ ಇವರು ಮನೆಗಳಿಗೆ ಹೋಗಲಿಲ್ಲ. ಅವರ ಕುಟುಂಬಗಳಿಗೆ ಪರಿಹಾರ ಕೆಲಸ ಎಲ್ಲಾ ಕೊಟ್ಟಿದ್ದಾರೆ. ಹಾಗೇ ಎಲ್ಲರಿಗೂ ಕೊಡಬೇಕು ಅಲ್ವಾ..? ಈಗ ನಾನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 25 ಲಕ್ಷ ರೂಪಾಯಿ ನೀಡ್ತಿದ್ದೇನೆ. ಅಲ್ಲದೆ ಅವರ ಕುಟುಂಬ ಸದಸ್ಯರೊಬ್ಬರಿಗೆ ಕೆಲಸ ಸಹ ಕೋಡ್ತಿದ್ದೇನೆ ಎಂದು ಹೇಳಿದರು.
5 ವರ್ಷ ಸಿಎಂ ಹುದ್ದೆ ಬಗ್ಗೆ ಸಚಿವ ಮಹದೇವಪ್ಪನ ಕೇಳಿ: ಸಿಎಂ ಸಿದ್ದರಾಮಯ್ಯ
ಮತ್ತೊಮ್ಮೆ ಕಾನೂನು ತನಿಖೆ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಮು ಗಲಭೆಯಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ಪರಿಹಾರ ಕೊಟ್ಟು ಸುಮ್ಮನಾಗುವುದಿಲ್ಲ. ಈ ಕೊಲೆಗಳ ಬಗ್ಗೆ ಕಾನೂನು ಪ್ರಕಾರ ನಿಷ್ಪಕ್ಷಪಾತವಾಗಿ ತೆನಿಖೆ ಮಾಡುತ್ತೇವೆ. ಯಾರು ತಪ್ಪಿತಸ್ಥರಿರ್ತಾರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ರಾಜ್ಯದಲ್ಲಿ ಮಾರಲ್ ಪೊಲೀಸಿಂಗ್‌ಗೆ ಕಡಿವಾಣ ಹಾಕಲು ಸೂಚಿಸಿದ್ದೇನೆ. ಯಾರೇ ಆಗಲಿ ಕಾನೂನು ತಗೆದುಕೊಳ್ಳುವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ವಾರ್ನಿಂಗ್ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ