Mekedatu Politics: ಡಿ.ಕೆ.ಶಿವಕುಮಾರ್‌ ಫೋಟೋ ಶೂಟ್ ಬಗ್ಗೆ ವ್ಯಂಗ್ಯವಾಡಿದ ಶ್ರೀರಾಮುಲು

Suvarna News   | Asianet News
Published : Jan 01, 2022, 02:46 PM IST
Mekedatu Politics: ಡಿ.ಕೆ.ಶಿವಕುಮಾರ್‌ ಫೋಟೋ ಶೂಟ್ ಬಗ್ಗೆ ವ್ಯಂಗ್ಯವಾಡಿದ ಶ್ರೀರಾಮುಲು

ಸಾರಾಂಶ

ಮೇಕೆದಾಟು ಯೋಜನೆಗೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್ ಜನವರಿ 9 ರಿಂದ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ. ಈ ಕುರಿತಾಗಿ ಮಾತನಾಡಿರುವ ಸಾರಿಗೆ ಸಚಿವ ಶ್ರೀರಾಮುಲು ಡಿಕೆಶಿ ಫೋಟೋ ಶೂಟ್ ಬಗ್ಗೆ ವ್ಯಂಗ್ಯವಾಡಿದ್ದಾರೆ. ಮೇಕೆದಾಟು ಪಾದಯಾತ್ರೆ ಮಾಡಬೇಕು ಅಂತ ಪಾಪ ಎಲ್ಲೋ ಶೂಟಿಂಗ್ ಮಾಡ್ತಿದ್ದರಂತೆ.

ಬಾಗಲಕೋಟೆ (ಜ. 1): ಮೇಕೆದಾಟು (Mekedatu) ಯೋಜನೆಗೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್ ಜನವರಿ 9 ರಿಂದ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ. ಈ ಕುರಿತಾಗಿ ಮಾತನಾಡಿರುವ ಸಾರಿಗೆ ಸಚಿವ ಶ್ರೀರಾಮುಲು (Sriramulu) ಡಿಕೆಶಿ ಫೋಟೋ ಶೂಟ್ ಬಗ್ಗೆ ವ್ಯಂಗ್ಯವಾಡಿದ್ದಾರೆ. ಮೇಕೆದಾಟು ಪಾದಯಾತ್ರೆ ಮಾಡಬೇಕು ಅಂತ ಪಾಪ ಎಲ್ಲೋ ಶೂಟಿಂಗ್ ಮಾಡ್ತಿದ್ದರಂತೆ. ಫೇಸ್ಬುಕ್ ವಾಟ್ಸಾಪ್ ನಲ್ಲಿ ಟ್ರೋಲ್ ಮಾಡ್ಕೊಂಡು ಲಾಭ ಪಡಿಬೇಕು ಅಂತ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾನೆ. ಕೆಲಸ ಇಲ್ಲದ ಟೈಮ್ ನಲ್ಲಿ 2023ಕ್ಕೆ ಅಧಿಕಾರಕ್ಕೆ ಬರಬೇಕು ಅಂತ ಹಗಲು ಕನಸು ಕಾಣುತ್ತಿದ್ದಾರೆ. ಒಂದು ಕಡೆ ಶೂಟಿಂಗ್ ಮಾಡೋರು ಶೂಟಿಂಗ್ ಮಾಡ್ತಿದ್ದಾರೆ. ಇನ್ನೊಬ್ಬರು ಮುಖ್ಯಮಂತ್ರಿ ಆಗ್ತೀನಿ ಅನ್ನೋರು ಯೋಜನೆಗಳ ಮೇಲೆ ಯೋಜನೆ ಘೋಷಣೆ ಮಾಡ್ತಿದ್ದಾರೆ.

ಅದು ಮಾಡ್ತೀವಿ, ಇದು ಮಾಡ್ತೀವಿ ಅಂತ ಮುಖ್ಯಮಂತ್ರಿ ಆಗಿದಿವಿ ಅಂತಲೇ ತಿಳಿದಿದ್ದಾರೆ. ಅವರು ಭ್ರಮೆಯಲ್ಲಿ ಇದ್ದಾರೆ. ಏನೇ ನಾಟಕ ಮಾಡಿದ್ರೂ ಕೂಡ ಎಲ್ಲ ವ್ಯರ್ಥ ಆಗುತ್ತೇವೆ. ಪ್ರದೇಶ್ ಕಾಂಗ್ರೆಸ್ ಪಕ್ಷ ಅಲ್ಲ  ಈಗ ಪರದೇಸಿ ಕಾಂಗ್ರೆಸ್ ಆಗಿದೆ. ಪರದೇಸಿ ಕಾಂಗ್ರೆಸ್ ಪಕ್ಷಕ್ಕೆ ನಾಯಕ ಯಾರು.? ಒಂದು ಕಡೆ ದುಡ್ಡು ಇರೋ ಡಿಕೆಶಿ,  ಆತ ಕೇವಲ ಫೋಸ್ ಕೊಟ್ಟು, ಅಲ್ಲೆಲ್ಲೋ ರೈತರ ಜೊತೆ ಫೋಟೋ ತಗಿಸಿ, ಅಲ್ಲಿಂದ ಪಬ್ಲಿಸಿಟಿ ಮಾಡಿಸ್ತಾರೆ. ಯಾವುದೋ ಒಂದು ಕಂಪನಿ ತಂದಿದ್ದಾರಂತೆ. ಪಂಜಾಬ್‌ನಿಂದ ಮ್ಯಾಜಿಕ್ ಕಂಪನಿ ಅಂತೆ. ಅವರು ಹೇಳ್ತಾರೆ, ಒಂದು ಲುಂಗಿ ಉಟ್ಕೋ, ನದಿ ಹತ್ರ ಓಡಾಡು ಹಂಗೆ ಮಾಡು ಹಿಂಗೆ ಮಾಡು ಅಂತ ಹೇಳ್ತಾರಂತೆ. ಇನ್ನೊಬ್ಬ ಮುಖ್ಯಮಂತ್ರಿ ಆಗಿದ್ದೀನಿ ಅಂತ ಯೋಜನೆ ಘೋಷಣೆ ಮಾಡ್ತಿದ್ದಾರೆ ಎಂದು ಶ್ರೀರಾಮುಲು ಹೇಳಿದ್ದಾರೆ.

ಎಸ್.ಆರ್.ಪಾಟೀಲ್ ಪರ ಶ್ರೀರಾಮುಲು ಭರ್ಜರಿ ಬ್ಯಾಟಿಂಗ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಲಕೋಟೆ ಜಿಲ್ಲೆಯ ಎಲ್ಲ ನಾಯಕರನ್ನ ಮುಗಿಸುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಜನರು ಯಾವತ್ತು ಎದ್ದು ನಿಲ್ತಾರೋ ಗೊತ್ತಿಲ್ಲ, ಬಿಟ್ಟು ತೊಲಗಬೇಕು ಅನ್ನೋ ಪರಿಸ್ಥಿತಿ ಸಿದ್ದರಾಮಯ್ಯನವರಿಗೆ ಬರಬಹುದು. ಕಾಂಗ್ರೆಸ್ ಪಕ್ಷದ ಭೀಷ್ಮ ಎಸ್ ಆರ್ ಪಾಟೀಲ್, ಜಿಲ್ಲೆಯಲ್ಲಿ ಕಾಂಗ್ರೆಸ್ ಉಳಿದಿದ್ದರೆ ಅದು ಎಸ್ ಆರ್ ಪಾಟೀಲ್ ಕಾರಣ. ಅವರಿಗೆ ಟಿಕೆಟ್ ಸಿಗದಂತೆ ಷಡ್ಯಂತ್ರ ಮಾಡಿದ್ದು ಸಿದ್ದರಾಮಯ್ಯ. ಮತ್ತೊಂದು ಕಡೆ ಚಿಮ್ಮನಕಟ್ಟಿ ಅವರನ್ನ ಕಾಂಗ್ರೆಸ್ ಪಕ್ಷದಿಂದ ಹೊರಗೆ ಕಳಿಸುವ ಕೆಲಸ ಮಾಡ್ತಿದ್ದಾರೆ. 

Mekedatu Politics: ಹೋಂ ಮಿನಿಸ್ಟರ್‌ಗೆ ಅನುಭವ ಇಲ್ಲವೆಂದ ಡಿ.ಕೆ.ಶಿವಕುಮಾರ್‌

ಸಿದ್ದರಾಮಯ್ಯ ಅವರಿಗೆ ಇನ್ನು ಮುಂದೆ ಇಲ್ಲಿ ನಿಲ್ಲೋದು ಬೇಡ ಅಂತ ಚಿಮ್ಮನಕಟ್ಟಿ ಹೇಳಿದ್ದನ್ನು ಮಾಧ್ಯಮದಲ್ಲಿ ನೋಡಿದ್ದೇನೆ. ಈ ಜಿಲ್ಲೆಗೆ ಅನ್ಯಾಯ ಮಾಡುವ ಕೆಲಸ ಮಾಡಿದ್ದಾರೆ. ಬನಶಂಕರಿ ತಾಯಿ ಕೂಡ ಇಲ್ಲಿ ಅವರಿಗೆ ಮನೆಗೆ ಕಳಿಸುತ್ತಾರೆ ಅಂತ ತಿಳಿದಿದ್ದೀವಿ. ಬೇರೆ ಬೇರೆ ಕಾರಣದಿಂದ ಇಲ್ಲಿ ಗೆದ್ದು, ಜನರ ಕೈಗೆ ಸಿಗದ ವಸ್ತುವಾಗಿದ್ದಾರೆ. ನನಗೆ ಮಾತನಾಡೋಕೆ ಬರುತ್ತೆ ಅಂತ ಯಾರಿಗೆ ಬೇಕಾದರೂ ಏಕವಚನದಲ್ಲಿ ಮಾತನಾಡಿದ, ಟೀಕೆ ಮಾಡ್ತೀನಿ, ನನಗೆ ಯಾರು ಸಾಟಿಯಿಲ್ಲ, ನಾನು ಮಾತನಾಡಿದ್ದೇವೆ ವೇದವಾಕ್ಯ ಅಂತ ತಿಳಿದ್ದಿದ್ದಾರೆ. ಈಗಾಗಲೇ ಸಿದ್ದರಾಮಯ್ಯಗೆ ವಿರೋಧ ವ್ಯಕ್ತವಾಗುತ್ತಿದೆ. ಶೀಘ್ರದಲ್ಲೇ ಜಿಲ್ಲೆಯನ್ನ ಬಿಡಬೇಕು ಅಂತ ಪ್ರತಿಭಟನೆ ಕೂಡ ಆಗಬಹುದು. ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.

ಡಿಸಿಎಂ ಹುದ್ದೆ ಕೈ ತಪ್ಪುತ್ತಿರೋ ವಿಚಾರ: ನೋಡೋಣ ಅದೆಲ್ಲಾ ಅಗ್ನಿ ಪರೀಕ್ಷೆ, ನೋಡೋಣ ಏನಾಗುತ್ತೇ. ದೊಡ್ಡ ನಾಯಕರೆಂದು ನಿಮ್ಮನ್ನು ಬಿಂಬಿಸಿದ್ರು ಎಂಬ ಪತ್ರಕತ೯ರ ಪ್ರಶ್ನೆಗೆ ನಸುನಕ್ಕ ಶ್ರೀರಾಮುಲು. ನಾವು ಈಗಲೂ ದೊಡ್ಡ ನಾಯಕರೇ ಎಂದ ರಾಮುಲು. ನಿಮ್ಮೆಲ್ಲರ ಇಚ್ಚೇ ಇದ್ದರೆ ಆಗೋಣ ಎಂದು ರಾಮುಲು ತಿಳಿಸಿದ್ದಾರೆ.

ರಮೇಶ ಜಾರಕಿಹೊಳಿಗೆ ಸಂಪುಟದಲ್ಲಿ ಮತ್ತೇ ಸ್ಥಾನಮಾನ: ಈ ಬಗ್ಗೆ ನಾನು ಹೇಳೋಕಾಗಲ್ಲ. ಅವರು ಕೂಡ ಮಂತ್ರಿಗಳಾಗಿ ಕೆಲಸ ಮಾಡಿದಂತವರು..ಈಗ ಮಾಜಿ ಸಚಿವರಿದ್ದಾರೆ. ನಾನೀಗ ಪ್ರಸೆಂಟ್ ಮಿನಿಸ್ಟರ್ ಇದ್ದೀನಿ. ರಮೇಶ್ ಕೂಡ ನಮ್ಮ ನಾಯಕರೇ ಇದ್ದಾರೆ. ಅವರನ್ನು ನಂಬಿ ನಂದವರಿಗೂ ಪಾಟಿ೯ಯಲ್ಲಿ ಸ್ಥಾನಮಾನ ನೀಡಲಾಗಿದೆ. ಏನಾದ್ರೂ ಸಣ್ಣಪುಟ್ಟ ಸಮಸ್ಯೆ ಇದ್ದರೆ ಪಾಟಿ೯ ಬಗೆ ಹರಿಸುವ ಕೆಲಸ ಮಾಡುತ್ತೇ. ಹೀಗಾಗಿ ಪಾಟಿ೯ ಬಿಟ್ಟು ಹೊರಗಡೆ ಹೋಗುವಂತವರು ಯಾರೂ ಇಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆ ಚಚೆ೯: ಈಗಾಗಲೇ ನಮ್ಮ ನಾಯಕರು ತಮ್ಮ ಹುಬ್ಬಳ್ಳಿ ಕಾಯ೯ಕಾರಿಣಿ ಸಭೆಯಲ್ಲೇ ಸ್ಫಷ್ಟವಾಗಿ ಹೇಳಿದ್ದಾರೆ. ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ. ಸೋ ಕಾಲ್ಡ್ ಬುದ್ದಿವಂತರು ಬಹಳ ಜನ ಇತಾ೯ರೆ, ಅವರು ನಮ್ಮನ್ನು ಮಾನಸಿಕವಾಗಿ ಕುಗ್ಗಿಸಲು ನೋಡ್ತಾರೆ. ನಮ್ಮ ಸ್ಫೀಡ್ ಕಟ್ ಅಪ್ ಮಾಡಬೇಕಂತ ಮಾಡ್ತಾರೆ. ಈಶ್ವರಪ್ಪ ಮತ್ತು ಯತ್ನಾಳ ಅವರದ್ದು ಅವರ ವೈಯಕ್ತಿಕ ವಿಚಾರ. ಅದೇನು ಪಾಟಿ೯ ನಿಧಾ೯ರ ಅಲ್ಲ. ನಮ್ಮಲ್ಲಿ ಪಾಟಿ೯ ಏನು ಹೇಳುತ್ತೋ ಅದೇ ಫೈನಲ್ ಎಂದ ರಾಮುಲು ತಿಳಿಸಿದ್ದಾರೆ.

Karnataka Transport Department: 4 ವಾರದೊಳಗೆ ಸಾರಿಗೆ ನೌಕರರ ಮರುನೇಮಕ

ಮತಾಂತರ ಕಾಯ್ದೆ ಜಾರಿ: ಸಿದ್ದರಾಮಯ್ಯ ಒಬ್ಬ ಭಂಡ. ಡಬಲ್ ಸ್ಟ್ಯಾಂಡರ್ಡ್ ವ್ಯಕ್ತಿ. ಈ ಹಿಂದೆ ಅದೇ ಮಸೂದೆಗೆ ಸಹಿ ಹಾಕಿದ್ದೇ ಸಿದ್ದರಾಮಯ್ಯ. ಈಗ ಸಹಿ ಮಾಡಿಲ್ಲ ಅಂತ ಹೇಳಿ ಮಾಡಿದ್ದೇನಿ ಏನು ಮಾಡ್ತೀರಿ ಅಂತಾರೆ. ನಾವೇನು ಅವರೊಂದಿಗೆ ಜಗಳಾ ಮಾಡ್ತೀವಾ? ಹೀಗಾಗಿ ಬೇಕಾಬಿಟ್ಟಿ ಮಾತನಾಡೋ ಸಿದ್ದರಾಮಯ್ಯ ಒಬ್ಬ ಭಂಡ ವ್ಯಕ್ತಿ. ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಿಗೆ ಹೋದ್ರು ಅಲ್ಲಿ ವಿರೋಧವೇ, ಸಿದ್ದರಾಮಯ್ಯನವರ ಪರ ಯಾರು ಇರಲ್ಲ,ಅವರಿಗೆ ವಿರೋಧವೇ ಹೆಚ್ಚು. ಸಿದ್ದರಾಮಯ್ಯ ಯಾರ ಜೊತೆಗೂ ನಂಬಿಕಸ್ತರಾಗಿಲ್ಲ. ಅವರಿಗೆ ಅಧಿಕಾರಬೇಕು, ಆವತ್ತು ಚಿಮ್ಮನಕಟ್ಟಿ,ಎಸ್ ಆರ್ ಪಾಟೀಲ್ ಬೇಕಿದ್ರು. ಪಾಪ ಅವರನ್ನ ಬಳಸಿಕೊಂಡ್ರು, ಇವತ್ತು ಗಾಳಿಗೆ ತೂರಿ ಬಿಟ್ರು. ಮತ್ತೆ ಬಾದಾಮಿ ಕ್ಷೇತ್ರದಿಂದ ರಾಮುಲು ಸ್ಪರ್ಧೆ ವಿಚಾರ.‌ ನೋಡೋಣಾ ಅದು ಪಾರ್ಟಿ ನಿರ್ಧಾರ. ರಾಜಕಾರಣದಲ್ಲಿ ನಾನು ಯಾವುದನ್ನು ಅಂದುಕೊಳ್ಳಲ್ಲ.ಬಿಜೆಪಿ ಆರ್ಟಿಯಲ್ಲಿ ನಾನೊಬ್ಬ ಶಿಸ್ತಿನ ಸಿಪಾಯಿ ಇದ್ದಂಗೆ. ಪಕ್ಷ ತಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ. ಪಕ್ಷ ಹೇಳಿದ್ರೆ ನಾ ರೆಡಿ,ನಾವು ಸೊಲ್ಜರರ್ಸ್ ಇದ್ದಂಗೆ ಎಸ್ ಅಂದ್ರೆ ಬ್ಯಾಗ್ ಎತ್ತಿಕೊಂಡು ಹೋಗೋದೆ. ಪಾರ್ಟಿ ತೀರ್ಮಾಣಕ್ಕೆ ನಾವು ಬದ್ಧವಾಗಿದ್ದೇವೆ ಎಂದು ರಾಮುಲು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್