
ಬೆಂಗಳೂರು (ಜ. 1): ಕೊರೋನಾ ವೈರಸ್ (Coronavirus) ಪಾಸಿಟಿವ್ ಕೇಸ್ ಸಂಖ್ಯೆ ಹೆಚ್ಚಳವಾಗಿದೆ. ಇದರ ಮಧ್ಯೆ ಕೊರೋನಾ ರೂಪಾಂತರಿ ವೈರಸ್ ಒಮಿಕ್ರಾನ್ (Omicron) ಸಹ ಕರ್ನಾಟಕದಲ್ಲಿ ಸ್ಫೋಟವಾಗಿದೆ. ಈ ಹಿನ್ನಲೆಯಲ್ಲಿ 3ನೇ ಅಲೆ ಎದುರಿಸಲು ಸಿದ್ದತೆ ಪ್ರಾರಂಭ ಮಾಡಿದ್ದೇವೆ. ಹೀಗಾಗಿ 24 ಗಂಟೆ ಲಸಿಕೆ ಕೊಡುವ ಕೆಲಸ ಪ್ರಾರಂಭ ಮಾಡಿದ್ದೇವೆ ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ (Dr.CN.Ashwath Narayana) ಅವರು ಹೇಳಿದ್ದಾರೆ.
ಲಸಿಕೆ ನಮಲ್ಲಿ ಕೊರತೆ ಇಲ್ಲ. 15-18 ವರ್ಷ ಮಕ್ಕಳಿಗೆ ಸೋಮವಾರ ಲಸಿಕೆ ಅಭಿಯಾನ ಪ್ರಾರಂಭ ಆಗುತ್ತದೆ. 60 ವರ್ಷ ಮೇಲ್ಪಟ್ಟವರು ಮತ್ತು ಹೆಲ್ತ್ ವಾರಿಯರ್ಸ್‌ಗೆ ಬೂಸ್ಟರ್ ಡೋಸ್ ಕೊಡಲು ಸಿದ್ದತೆ ಮಾಡಿದ್ದೇವೆ. ವೈದ್ಯರು, ಔಷಧಿ, ಸಿಬ್ಬಂದಿ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ನಿತ್ಯ ಕೇಸ್ ಜಾಸ್ತಿ ಆಗ್ತಿದೆ. ಹಂತ ಹಂತವಾಗಿ ಕೇಸ್ ಹೆಚ್ಚಳ ಆಗ್ತಿದೆ. ಹೀಗಂತಾ 3 ನೇ ಅಲೆ ಬಂದಿದೆ ಅಂತ ಹೇಳೋದು ಸರಿಯಲ್ಲ. ಇನ್ನು ಕಾದು ನೋಡೋಣ ಏನ್ ಆಗುತ್ತೆ ಅಂತ. ಆದರೂ ನಾವು ಸಿದ್ಧತೆ ಪ್ರಾರಂಭ ಮಾಡಿದ್ದೇವೆ. ಬೂಸ್ಟರ್ ಡೋಸ್ ಕೊಡುವ ವ್ಯವಸ್ಥೆ ಮಾಡಲಾಗ್ತಿದೆ. ಎಲ್ಲಾ ವ್ಯವಸ್ಥೆ ಮಾಡುತ್ತಿದ್ದೇವೆ. ಮಕ್ಕಳಿಗೂ ಲಸಿಕೆ ಕೊಡ್ತಿದ್ದೇವೆ ಎಂದು ಸಚಿವ ಅಶ್ವಥ್ ನಾರಾಯಣ ತಿಳಿಸಿದ್ದಾರೆ.
ಸಿಎಂ ಬದಲಾವಣೆ ಹೇಳಿಕೆ ಅಶ್ವಥ್ ನಾರಾಯಣ ಮಹತ್ವದ ಪ್ರತಿಕ್ರಿಯೆ
ಅತಿಥಿ ಉಪನ್ಯಾಸಕ ಪ್ರತಿಭಟನೆ ವಿಚಾರ: ಅತಿಥಿ ಉಪನ್ಯಾಸಕರು ಯಾವುದೇ ನೊಟೀಸ್ ನೀಡದೇ ಪ್ರತಿಭಟನೆ ಮಾಡ್ತಿದ್ದಾರೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರು ಕಡಿಮೆ ಇರೋದಕ್ಕೆ ಅತಿಥಿ ಉಪನ್ಯಾಸಕರನ್ನ ನೇಮಕ ಮಾಡಿಕೊಳ್ಳಲಾಗಿದೆ. ನಮ್ಮ ಸರ್ಕಾರ ಸದಾ ಅತಿಥಿ ಉಪನ್ಯಾಸಕರ ಪರ ಇದೆ. ಕೊರೊನಾ ಸಮಯದಲ್ಲೂ ನಮ್ಮ ಸರ್ಕಾರ ಸಂಬಳ ನೀಡಿದೆ. ಅತಿಥಿ ಉಪನ್ಯಾಸಕರ ಸಂಬಳ ಹೆಚ್ಚಳದ ಬಗ್ಗೆ ಚರ್ಚೆ ಮಾಡಲಾಗ್ತಿದೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ. ನೇರವಾಗಿ ಹುದ್ದೆ ಖಾಯಂ ಮಾಡೋಕೆ ಸಾಧ್ಯವಿಲ್ಲ. ಉಮಾದೇವಿ ಪ್ರಕರಣದಿಂದಾಗಿ ನಮಗೆ ಅನೇಕ ನಿಯಮಗಳು ಅಡ್ಡ ಬರುತ್ತವೆ. ಆದರೂ ನಾವು ಅತಿಥಿ ಉಪನ್ಯಾಸಕರ ಪರವಾಗಿ ಅಗತ್ಯ ಕ್ರಮ ತೆಗೆದುಕೊಳ್ತೀವಿ. ಈಗಾಗಲೇ ಅತಿಥಿ ಉಪನ್ಯಾಸಕರ ಸಮಸ್ಯೆ ಪರಿಹಾರಕ್ಕೆ ಕಮಿಟಿ ನೇಮಕ ಮಾಡಲಾಗಿದೆ. ಸಮಿತಿ ವರದಿ ಬಂದ ಬಳಿಕ ಸರ್ಕಾರದಿಂದ ಏನು ಮಾಡಲು ಸಾಧ್ಯವೋ ಅದನ್ನು ಮಾಡಿಕೊಡುತ್ತೇವೆ ಎಂದು ಅಶ್ವಥ್ ಹೇಳಿದ್ದಾರೆ.
ಸಿಬಿಐ ತನಿಖೆ ಆಗ್ರಹಿಸಿದ ಕಾಂಗ್ರೆಸ್‌ಗೆ ನೋಟಿಸ್ ಎಚ್ಚರಿಕೆ ಕೊಟ್ಟ ಅಶ್ವಥ್ ನಾರಾಯಣ
ಮೇಕೆದಾಟು ಪಾದಯಾತ್ರೆಗೆ ಸಚಿವ ಅಶ್ವಥ್ ನಾರಾಯಣ ಲೇವಡಿ: ನಮ್ಮ ಸಿಎಂ ನೀರಾವರಿ ವಿಚಾರದಲ್ಲಿ ಎಕ್ಸ್ ಪರ್ಟ್. ಒಂದು ರೀತಿ ಭಗೀರಥ ಇದ್ದ ಹಾಗೆ. ನೀರಾವರಿ ಯೋಜನೆ ಬಗ್ಗೆ ಜ್ಞಾನ ಇರುವ ವ್ಯಕ್ತಿ ಬೊಮ್ಮಾಯಿ ಅವ್ರು. ಮೇಕೆದಾಟು ವಿಚಾರವಾಗಿ ಸರ್ಕಾರದ ನಿಲುವನ್ನ ಸದನದಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಕಾಂಗ್ರೆಸ್ ತನ್ನ ಅವಧಿಯಲ್ಲಿ ಯಾವುದೇ ಕೆಲಸ ಮಾಡಿಲ್ಲ. ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಈ ಪಾದಯಾತ್ರೆ ಮಾಡ್ತಿದೆ. ಜನರನ್ನ ದಿಕ್ಕು ತಪ್ಪಿಸುವ ಕೆಲಸ ಮತ್ತು ಅವಕಾಶವಾದಿ ರಾಜಕಾರಣ ಕಾಂಗ್ರೆಸ್ ಮಾಡ್ತಿದೆ. ಮೇಕೆದಾಟು ನಮ್ಮ ನಾಡಿಗೆ ಮುಖ್ಯ. ನಮ್ಮ ಬೆಂಗಳೂರಿಗೆ ಮುಖ್ಯ. ನಮ್ಮ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ. ಸಿಎಂ ಕೂಡ 3 ನೇ ತಾರೀಖು ರಾಮನಗರ ಪ್ರವಾಸ ಮಾಡ್ತಾರೆ. ಕುಡಿಯುವ ನೀರಿನ ಯೋಜನೆ ಮಾಡಲು ನಮ್ಮ ಸರ್ಕಾರ ಬದ್ದವಾಗಿದೆ. ಕಾಂಗ್ರೆಸ್ ಪಾದಯಾತ್ರೆ ರಾಜಕೀಯ ಲಾಭಕ್ಕೆ ಮಾತ್ರ ಎಂದು ಸಚಿವ ಅಶ್ವಥ್ ನಾರಾಯಣ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ