
ಮೈಸೂರು (ಜ.1): ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ ಬಳಿಕ ಇದೀಗ ಹಿಂದು ದೇಗುಲಗಳಿಗೆ ಸ್ವಾಯತ್ತೆ ನೀಡಲು ರಾಜ್ಯ ಬಿಜೆಪಿ ಸರ್ಕಾರ(BJP Government) ಮುಂದಾಗಿದೆ. ಈ ಬೆನ್ನಲ್ಲೇ ಮೈಸೂರಿನಲ್ಲಿ ಮಾತನಾಡಿರುವ ಶಾಸಕ ಎಸ್.ಎ. ರಾಮದಾಸ್ "ಮುಸ್ಲಿಂ ಕ್ರಿಶ್ಚಿಯನ್ (Muslim- Christian) ಧಾರ್ಮಿಕ ಕೇಂದ್ರದ ರಕ್ಷಣೆಗೆ ಬೋರ್ಡ್ ಇದೆ. ಇದೇ ರೀತಿಯ ಬೋರ್ಡ್ ಹಿಂದುಗಳಿಗೆ (Hindu) ಏಕೆ ಬೇಡ ?" ಎಂದು ಕಾಂಗ್ರೆಸ್‌ಗೆ ಪ್ರಶ್ನಿಸಿದ್ದಾರೆ. "ಯಾವುದೋ ಒಂದು ಓಟ್ ಬ್ಯಾಂಕ್ (Vote Bank) ಓಲೈಸಲು ಕಾಂಗ್ರೆಸ್ ಇದನ್ನು ವಿರೋಧಿಸುತ್ತಿದೆ. ಇದು ರಾಜಕೀಯ ಕಾರಣಕ್ಕಾಗಿ ಮಾಡುತ್ತಿರುವ ವಿರೋಧ. ಅವರದ್ದು ಯಾವಾಗಲೂ ರಾಜಕೀಯ ಲೆಕ್ಕಾಚಾರ. ನಾವು ಬಿಲ್ ತಂದೇ ತರುತ್ತೇವೆ" ಎಂದು ರಾಮದಾಸ್ (S A Ramadas) ಹೇಳಿದ್ದಾರೆ.
ಹಿಂದೂ ದೇಗುಲಗಳನ್ನು(Hindu Temples) ಕಾನೂನು ಕಟ್ಟಳೆಗಳಿಂದ ಮುಕ್ತಗೊಳಿಸಲು ಬಿಜೆಪಿ ಸರ್ಕಾರ ಸಿದ್ಧತೆ ನಡೆಸಿದೆ. ಈ ಸಂಬಂಧ ಬಜೆಟ್ ಅಧಿವೇಶನಕ್ಕೂ ಮೊದಲೇ ಕಾನೂನು ರೂಪಿಸುವುದಾಗಿಯೂ ತಿಳಿಸಿದೆ. ಅದರೆ ಈ ಬಗ್ಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದು ರಾಜ್ಯದ ದೇವಾಲಯಗಳು (Temples) ಜನರ ಆಸ್ತಿ. ಸರ್ಕಾರವು ಈ ಆಸ್ತಿಯನ್ನು ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರಿಗೆ (RSS) ವಹಿಸಲು ಮುಂದಾಗಿದ್ದು, ರಾಜ್ಯದ ಜನತೆ ಹಾಗೂ ದೇವರು ಇವರನ್ನು ಕ್ಷಮಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D K Shivakumar) ಎಚ್ಚರಿಕೆ ಹೇಳಿದ್ದಾರೆ.
2023ರವರೆಗೂ ಕನಸು ಕಾಣಲು ಯಾವುದೇ ಅಭ್ಯಂತರ ಇಲ್ಲ!
ಇನ್ನು ಬಸವರಾಜ್ ಬೊಮ್ಮಾಯಿ ಹಾಗೂ ಸಿಎಂ ಬದಲಾವಣೆ ಬಗ್ಗೆ ಮಾತನಾಡಿರುವ ಶಾಸಕ ರಾಮದಾಸ್ "ನುಡಿದಂತೆ ನಡೆಯುವ ವ್ಯಕ್ತಿ ಅಂದರೆ ಅದು ಸಿಎಂ ಬಸವರಾಜ ಬೊಮ್ಮಾಯಿ. ಸಂಕ್ರಾಂತಿ ನಂತರ ಕ್ರಾಂತಿಯಾಗಲಿದೆ ಆದರೆ ಸಿಎಂ ಬದಲಾಗವುದಿಲ್ಲ. ಸಂಘಟನೆ ಅಭಿವೃದ್ಧಿ ವಿಚಾರವಾಗಿ ಕ್ರಾಂತಿಯಾಗಲಿದೆ." ಎಂದು ಹೇಳಿದ್ದಾರೆ. ಇನ್ನು 2023ಕ್ಕೆ ಪಕ್ಷ ಅಧಿಕಾರಕ್ಕೆ ಬಂದರೆ ಕಾಯ್ದೆಗಳನ್ನು ಹಿಂಪಡೆಯುವ ಹೇಳಿಕೆ ನೀಡಿರುವ ಸಿದ್ದರಾಮಯ್ಯಗೆ ಟಾಂಗ್ ನೀಡಿರುವ ರಾಮದಾಸ್ "ಕಾಂಗ್ರೆಸ್ ಪಕ್ಷದವರು ಕನಸು ಕಾಣುತ್ತಿದ್ದಾರೆ. 2023ರವರೆಗೂ ಕನಸು ಕಾಣಲು ಯಾವುದೇ ಅಭ್ಯಂತರ ಇಲ್ಲ" ಎಂದು ಹೇಳಿದ್ದಾರೆ.
ಇದನ್ನೂ ಓದಿ: News Hour ಶೀಘ್ರದಲ್ಲೇ ಸರ್ಕಾರದ ಮುಷ್ಠಿಯಿಂದ ಹಿಂದು ದೇಗುಲಕ್ಕೆ ಮುಕ್ತಿ, ಬೊಮ್ಮಾಯಿ ಹೇಳಿಕೆ ಭಾರತದಲ್ಲಿ ಸಂಚಲನ!
ನಮ್ಮ ಸರ್ಕಾರ (Congress Govt) ಅಧಿಕಾರಕ್ಕೆ ಬಂದರೆ ಒಂದೇ ವಾರದಲ್ಲಿ ಮತಾಂತರ ವಿಧೇಯಕ ಹಿಂಪಡೆಯುತ್ತೇವೆ. ಮತಾಂತರ ನಿಷೇಧ ಕಾಯ್ದೆ ಕಿತ್ತೆಸೆಯುತ್ತೇವೆ ಎಂದು ವಿಪಕ್ಷ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದರು.
ಸರ್ಕಾರ ದೇವಾಲಯಗಳನ್ನು ಸಂಘ ಪರಿವಾರದ ಕಾರ‍್ಯಕರ್ತರಿಗೆ ಹಂಚಲು ಹೊರಟಿದೆ: ಡಿಕೆಶಿ
ರಾಜ್ಯದ ದೇವಾಲಯಗಳು (Temples) ಜನರ ಆಸ್ತಿ. ಸರ್ಕಾರವು ಈ ಆಸ್ತಿಯನ್ನು ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರಿಗೆ (RSS) ವಹಿಸಲು ಮುಂದಾಗಿದ್ದು, ರಾಜ್ಯದ ಜನತೆ ಹಾಗೂ ದೇವರು ಇವರನ್ನು ಕ್ಷಮಿಸುವುದಿಲ್ಲ. ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಹಿಂದೂ ವಿರೋಧಿ ಬಿಜೆಪಿ ಸರ್ಕಾರ ಸುಟ್ಟು ಭಸ್ಮವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D K Shivakumar) ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Hindu Temples : ದೇವಾಲಯಗಳನ್ನು ಹಿಂದುಗಳ ವಶಕ್ಕೆ ನೀಡಬೇಕು : ತೇಜಸ್ವಿ ಸೂರ್ಯ
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರು ಹಾಗೂ ದೇವಾಲಯಗಳನ್ನೇ ಮಾರಲು ಹೊರಟಿರುವ ನೀವು ಎಂತಹ ಕ್ರೂರ ಕೃತ್ಯಕ್ಕೆ ಕೈಹಾಕಿದ್ದೀರಿ ಎಂಬುದನ್ನು ನೋಡಿಕೊಳ್ಳಿ. ದೇವಾಲಯಗಳು ನೂರಾರು ವರ್ಷದ ಆಸ್ತಿ. ಇದನ್ನು ತಮ್ಮ ಕಾರ್ಯಕರ್ತರಿಗೆ ಹಂಚಲು ಬಿಜೆಪಿ ಸರ್ಕಾರ ಹೊರಟಿದೆ. ಈ ರೀತಿ ಮಾಡಿದರೆ ಜನ ತಮಗೆ ಮತ ನೀಡುತ್ತಾರೆ ಎಂಬ ಭ್ರಮೆಯಿಂದ ಮುಖ್ಯಮಂತ್ರಿಗಳು ಹೊರಬರಬೇಕು ಎಂದು ಕಿಡಿಕಾರಿದರು.
ಜನಪರವಾದ ಒಂದೇ ಒಂದು ಯೋಜನೆಯನ್ನು ನೀಡಲಿಲ್ಲ!
ನಾವು ಹಿಂದೂ ಧರ್ಮ ಹಾಗೂ ಸಂಸ್ಕೃತಿಯಲ್ಲಿ ನಂಬಿಕೆ ಇಟ್ಟಿರುವವರು. ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜನಪರವಾದ ಒಂದೇ ಒಂದು ಯೋಜನೆಯನ್ನು ನೀಡಲಿಲ್ಲ. ಈಗ ಚುನಾವಣೆಯಲ್ಲಿ ಸೋಲುತ್ತಿದ್ದೇವೆ ಎಂಬ ಕಾರಣಕ್ಕೆ ಇವರು ಗೋಹತ್ಯೆ, ಮತಾಂತರ ನಿಷೇಧ, ದೇವಾಲಯಗಳ ಸ್ವಾಯತ್ತತೆ ಕಾನೂನು ತರಲು ಮುಂದಾಗಿದ್ದಾರೆ. ಚುನಾವಣೆ ಸೋಲನ್ನು ಮರೆಮಾಚಲು ಹಾಗೂ ಜನರನ್ನು ಭಾವನಾತ್ಮಕವಾಗಿ ಹಿಡಿದಿಡಲು ಪ್ರಯತ್ನಿಸುತ್ತಿದ್ದು, ನಾವು ಇದಕ್ಕೆ ಅವಕಾಶ ನೀಡುವುದಿಲ್ಲ. ಜ.4ರಂದು ಪಕ್ಷದ ನಾಯಕರ ಸಭೆ ನಡೆಸಿ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ