
ಇಂದಿನ ಪ್ರಮುಖ ಸುದ್ದಿಗಳು: ಇಂದು ಬೆಳಗ್ಗೆಯೇ ರಾಜ್ಯ ಬಿಜೆಪಿ ನಾಯಕರು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ನಡೆಯನ್ನು ಡಿಸಿಎಂ ಡಿಕೆ ಶಿವಕುಮಾರ್ ಟೀಕಿಸಿದ್ದಾರೆ. ವೈರಿ ದೇಶ ಪಾಕಿಸ್ತಾನಕ್ಕೆ ಚೀನಾ ಜಲಂತರ್ಗಾಮಿ ನೀಡಿದೆ. ಆಗಸ್ಟ್ 17, 2025ರ ಈವರೆಗಿನ ಪ್ರಮುಖ 5 ಸುದ್ದಿಗಳು ಇಲ್ಲಿವೆ.
1.ಧರ್ಮಸ್ಥಳದಲ್ಲಿ ಬಿಜೆಪಿ ನಿಯೋಗ; ಯುಟ್ಯೂಬರ್ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಸಿದ್ಧತೆ
ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎಂದು ಬಿಜಪಿ ಆರೋಪ ಮಾಡಿದೆ. ಈ ಸಂಬಂಧ ಧರ್ಮಸ್ಥಳ ಪರವಾಗಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ವಿಪಕ್ಷ ನಾಯಕ ಛಲವಾಧಿ ನಾರಾಯಣಸ್ವಾಮಿ ನಿಯೋಗ ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥ ಸ್ವಾಮಿಯ ದರ್ಶನ ಪಡೆದುಕೊಂಡರು. ಈ ವೇಳೆ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ವೇದವ್ಯಾಸ ಕಾಮತ್, ಗುರುರಾಜ್ ಗಂಟಹೊಳೆ, ಪ್ರತಾಪ್ ಸಿಂಹ ನಾಯಕ್, ಶಾಸಕ ಎಸ್ ಆರ್ ವಿಶ್ವನಾಥ್, ಶಾಸಕ ಹರೀಶ್ ಪೂಂಜಾ ಸೇರಿದಂತೆ ಹಲವಾರು ಬಿಜೆಪಿ ಶಾಸಕರು, ಪರಿಷತ್ ಸದಸ್ಯರಿದ್ದರು.
2.ಪ್ರೇಯಸಿ ಜೊತೆ ಸೇರಿ ಪತ್ನಿ ಪ್ರಾಣ ತೆಗೆದು ಗಳಗಳನೇ ಅತ್ತಿದ್ದ ಬಿಜೆಪಿ ನಾಯಕ ಅರೆಸ್ಟ್
ರಾಜಸ್ಥಾನದ ಅಜ್ಮೀರ್‌ನಲ್ಲಿ (Ajmer, Rajasthan) ಪತ್ನಿಯನ್ನು ಕೊ*ಲೆ ಮಾಡಿದ ಪ್ರಕರಣದಲ್ಲಿ ಬಿಜೆಪಿ ನಾಯಕ (BJP Leader) ಮತ್ತು ಅವರ ಪ್ರೇಯಸಿಯನ್ನು ಬಂಧಿಸಲಾಗಿದೆ. ಪತ್ನಿ ಸಂಜುಳನ್ನು ಕೊ*ಲೆ ಮಾಡಿದ ಆರೋಪದ ಮೇಲೆ ಬಿಜೆಪಿ ನಾಯಕ ರೋಹಿತ್ ಸೈನಿ (Rohit Saini) ಮತ್ತು ಪ್ರೇಯಸಿ ರಿತು ಸೈನಿಯನ್ನು ಬಂಧಿಸಲಾಗಿದೆ. ಆಗಸ್ಟ್ 10 ರಂದು ಈ ಕೊ*ಲೆ ನಡೆದಿದೆ. ಕೆಲವು ಕಳ್ಳರು ಮನೆಗೆ ಪ್ರವೇಶಿಸಿ, ಸಂಜುನನ್ನು ಕೊಂದು ಅಮೂಲ್ಯ ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮುಂದೆ ಪ್ರಾಥಮಿಕ ಹೇಳಿಕೆಯನ್ನು ದಾಖಲಿಸಿದ್ದನು.
3.ಧರ್ಮಸ್ಥಳ ಪ್ರಕರಣ ಬಿಜೆಪಿ ರಾಜಕೀಯ, ಹಿಂದೂತ್ವವನ್ನ ತಮ್ಮ ಆಸ್ತಿ ಎಂದುಕೊಂಡಿದ್ದಾರೆ..' ಡಿಕೆ ಶಿವಕುಮಾರ ಗರಂ
ಬಿಜೆಪಿ ನಾಯಕರಿಗೆ ಧರ್ಮಸ್ಥಳದ ಮೇಲೆ ಪ್ರೀತಿಯಿಲ್ಲ. ಕೇವಲ ರಾಜಕೀಯಕ್ಕಾಗಿ ಧರ್ಮಸ್ಥಳ ಬಳಸಿಕೊಳ್ಳುತ್ತಿದ್ದಾರೆ. ಈಗ ಇಷ್ಟೆಲ್ಲ ಮಾತನಾಡುವ ಬಿಜೆಪಿಗರು ಮುಸುಕುಧಾರಿ ನ್ಯಾಯಾಲಯದಲ್ಲಿ ದೂರು ನೀಡಿದಾಗ ಏನನ್ನೂ ಮಾತನಾಡಲಿಲ್ಲ, ಈಗ ರಾಜಕೀಯ ಮಾಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
4.ಸಾವಿಗೆ ಹಂಬಲಿಸಿ ಕಟ್ಟಡದಿಂದ ಹಾರಲು ಮುಂದಾದವಳ ಸ್ಪೈಡರ್‌ಮ್ಯಾನ್‌ಗಳಂತೆ ರಕ್ಷಿಸಿದ SCDF ಪಡೆ
ಕೆಳಗೆ ಬೀಳುವುದಕ್ಕಾಗಿ ಆಕೆ ಅಂಚಿನಲ್ಲಿ ನಿಂತಿದ್ದಳು. ಆದರೆ SCDF ಹಿಂಜರಿಯಲಿಲ್ಲ. ಯಾವುದೇ ಸೈರನ್‌ಗಳಿಲ್ಲ. ನಾಟಕವಿಲ್ಲ. ಕೇವಲ ಶುದ್ಧ ಧೈರ್ಯ, ಶಾಂತತೆ ಮತ್ತು ಸಹಾನುಭೂತಿಯಿಂದ ಆಕೆಯನ್ನು ರಕ್ಷಿಸಿದರು. ಇದು ಕೇವಲ ರಕ್ಷಣೆಯಲ್ಲ, ಇದು ಒಂದು ಜ್ಞಾಪನೆ. ನಮ್ಮ ಕರಾಳ ಕ್ಷಣಗಳಲ್ಲಿಯೂ ಸಹ ಸಹಾಯವು ಹರಿದು ಬರುತ್ತದೆ. ಮೌನವಾಗಿ ಮಾನಸಿಕ ಸಮಸ್ಯೆಯ ವಿರುದ್ಧ ಹೋರಾಡುವ ಪ್ರತಿಯೊಬ್ಬನಿಗೂ, ನೀವು ಮುಖ್ಯ. ಸಮವಸ್ತ್ರದಲ್ಲಿರುವ ನಮ್ಮ ದೈನಂದಿನ ವೀರರನ್ನು ನಾವು ನಿಮ್ಮನ್ನು ನೋಡುತ್ತೇವೆ. ಸಿಂಗಾಪುರದ ನಿಜವಾದ ವೀಡಿಯೋವಿದು ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ದಸರಾದಲ್ಲಿ ಅಂಬಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿರುವ ಆನೆಗಳಿಗೆ ಒಟ್ಟು 630ಕ್ಕೂ ಹೆಚ್ಚು ಟನ್ ಆಹಾರ ನೀಡಲಾಗುತ್ತದೆ. ಹೌದು ಪ್ರತಿ ಆನೆಗೂ ಅದರ ತೂಕದ ಆಧಾರದಲ್ಲಿ ಸೊಪ್ಪು, ಹಸಿ ಹುಲ್ಲು, ಒಣ ಹುಲ್ಲು ಸೇರಿದಂತೆ ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ. ಒಟ್ಟು 14 ಆನೆಗಳು ಅರಮನೆ ಆವರಣದಲ್ಲಿ ಬೀಡು ಬಿಟ್ಟಿದ್ದು ಅವುಗಳ ಪೋಷಣೆಗೆ ಟನ್ ಗಟ್ಟಲೇ ಆಹಾರ ನೀಡಲಾಗುತ್ತಿದೆ. ಪ್ರತಿ ಆನೆಗೂ ನೂರಾರು ಕೆ.ಜಿ. ಹಸಿ ಸೊಪ್ಪು, ಹಸಿ ಹುಲ್ಲು, ಭತ್ತ, ಭತ್ತದ ಒಣ ಹುಲ್ಲನ್ನು ನೀಡಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ