
ಕೊಟ್ಟೂರು(ಮೇ.14): ಸಾಹಿತಿ ಕುಂ. ವೀರಭದ್ರಪ್ಪಗೆ ಚಿತ್ರದುರ್ಗದಿಂದ ಶುಕ್ರವಾರ ಮತ್ತೊಂದು ಬೆದರಿಕೆ ಪತ್ರ(Threat Letter) ಬಂದಿದೆ. ಕುಂ.ವೀ. ಸೇರಿದಂತೆ 61 ಜನರಿಗೆ ಈ ರೀತಿಯ ಬೆದರಿಕೆ ಪತ್ರ ಬಂದಿರುವುದಾಗಿ ಗೊತ್ತಾಗಿದೆ.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah), ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ(HD Kumaraswamy), ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ(DK Shivakumar), ನಿಜಗುಣಾನಂದ ಸ್ವಾಮೀಜಿ, ನಿಡುಮಾಮಿಡಿ ಸ್ವಾಮೀಜಿ, ನಟ ಪ್ರಕಾಶ ರೈ, ಡಿ.ಕೆ. ಹರಿಪ್ರಸಾದ್, ದಿನೇಶ ಗುಂಡೂರಾವ್ ಮತ್ತಿತರ 60 ಜನರಿಗೆ ಈ ರೀತಿಯ ಕೂಡಾ ರವಾನಿಸಲಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.
‘ನೀವು (ಕುಂ.ವೀ) ಸೇರಿದಂತೆ 61 ಜನರು ಬರೀ ಪೇಪರ್ ಹಿರೋ ಆಗಲು ಹೊರಟಿದ್ದೀರಿ. ಮುಸ್ಲಿಮರ ಪರವಾಗಿ ನೀವುಗಳು ನಮ್ಮ ಪವಿತ್ರ ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳುತಿದ್ದೀರಿ. ಮೊನ್ನೆ ಮೊನ್ನೆ ರಾಮನವಮಿ, ಹನುಮ ಜಯಂತಿ ಸಂದರ್ಭದಲ್ಲಿ 12 ರಾಜ್ಯಗಳಲ್ಲಿ ದೇವರುಗಳ ಮೇಲೆ ಶೋಭಯಾತ್ರೆಗಳ ಮೇಲೆ ರಾಕ್ಷಸ ರೀತಿಯಲ್ಲಿ ಏಕಾಏಕಿ ಕಲ್ಲುಗಳನ್ನು ತೂರಿ ದಾಳಿ ಮಾಡಿದ ದುರಾತ್ಮರ ಬಗ್ಗೆ ಈ ವರೆಗೂ ಏನನ್ನು ಹೇಳದ ನೀವು ಬರೀ ಸಂಪ್ರದಾಯವಾದಿಗಳು, ಅದರಲ್ಲೂ ಹಿಂದೂಗಳ(Hindu) ಬಗ್ಗೆ ಟೀಕೆ ಮಾಡುತ್ತಿದ್ದೀರಿ. ನಿಮ್ಮ ನಡೆ ಈ ನೆಲದ ಸಂಸ್ಕಾರವನ್ನು ಹಾಳು ಮಾಡುವುದು ಹಾಗೂ ಮತಾಂಧ ಕ್ರೂರಿಗಳನ್ನು, ಆ ಮುಸ್ಲಿಮರನ್ನು(Muslim) ತಲೆ ಮೇಲೆ ಕೂರಿಸಿಕೊಳ್ಳುವುದನ್ನು ಮುಂದುವರೆಸಿದ್ದೀರಿ. ನೀವು ಬೇಗ ಕ್ಷಮೆ ಕೇಳಿ, ಇಲ್ಲವಾದರೆ ಸಾಯಲು ಸಿದ್ದರಾಗಿ, ಜೈ ಹಿಂದೂ ರಾಷ್ಟ್ರ, ಸಹಿಷ್ಣು ಹಿಂದು’ ಎಂದು 4 ಪುಟಗಳ ಪತ್ರ ಬಂದಿದೆ.
ಕಣಿವೆ ಬಿಡಿ, ಇಲ್ಲಾ ಸಾಯಲು ಸಜ್ಜಾಗಿ: ಕಾಶ್ಮೀರಿ ಪಂಡಿತರಿಗೆ ಉಗ್ರರ ಜೀವ ಬೆದರಿಕೆ!
ಸಾಹಿತಿ ಕುಂವೀಗೆ ತಿಂಗಳ ಹಿಂದೆ ಇದೇ ರೀತಿ ಬೆದರಿಕೆ ಪತ್ರ ಬಂದಾಗ ವಿಜಯನಗರ ಎಸ್.ಪಿ. ಡಾ. ಅರುಣ್ ಬಳಿ ತೆರಳಿ ರಕ್ಷಣೆ ಕೋರಿ ಮನವಿ ಸಲ್ಲಿಸಿದ್ದರು.
2ನೇ ಬೆದರಿಕೆ ಪತ್ರ ಬಂದ ಕುರಿತು ಕುಂ.ವೀ.ಯೊಂದಿಗೆ ಕನ್ನಡಪ್ರಭ ಮಾತನಾಡಿದಾಗ ಇಂತಹ ಬೆದರಿಕೆ ಪತ್ರಗಳು ಬಂದ ತಕ್ಷಣ ಹೆದರುವ ಅವಶ್ಯಕತೆ ಇಲ್ಲ. ನನ್ನ ಪತ್ನಿ ಅನ್ನಪೂರ್ಣಾ ಈ ಪತ್ರ ಬಂದ ಕುರಿತು ಬಳ್ಳಾರಿಯಲ್ಲಿರುವ ನನಗೆ ಪೋನ್ ಮೂಲಕ ತಿಳಿಸಿದರು. ಸಂವಿಧಾನ ಮತ್ತು ದೇಶದ ಪರ ನಮ್ಮ ನಡೆ, ಮಾತುಗಳು ಇದ್ದೆ ಇರುತ್ತವೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ