Hijab Row ವಿದೇಶಿ ಪ್ರವಾಸದಲ್ಲಿರುವ ಮುಸ್ಕಾನ್‌ ವಿರುದ್ಧ ತನಿ​ಖೆಗೆ ಗೃಹಸಚಿ​ವ​ರಿಗೆ ದೂರು!

By Kannadaprabha NewsFirst Published May 14, 2022, 5:54 AM IST
Highlights
  • ವಿದೇಶಿ ಪ್ರವಾಸದಲ್ಲಿ ಮಂಡ್ಯದ ಮಸ್ಕಾನ್ ಹಾಗೂ ಕುಟುಂಬ
  • ವಿದೇಶದಲ್ಲಿ ಭೇಟಿಯಾದ ವ್ಯಕ್ತಿಗಳ ಕುರಿತು ತನಿಖೆಗೆ ಆಗ್ರಹ
  • ರಾಜ್ಯದಲ್ಲಿ ಮತ್ತೆ ಮಂಡ್ಯದ ಮುಸ್ಕಾನ್ ಸದ್ದು

ಮಂಡ್ಯ(ಮೇ.14): ಹಿಜಾಬ್‌-ಕೇಸರಿ ಶಾಲು ಸಮರದ ವೇಳೆ ‘ಅಲ್ಲಾ ಹು ಅಕ್ಬರ್‌’ ಘೋಷಣೆ ಕೂಗಿ ರಾಷ್ಟ್ರಮಟ್ಟದಲ್ಲಿ ಗಮನಸೆಳೆದಿದ್ದ ಮಂಡ್ಯದ ಮುಸ್ಕಾನ್‌ ವಿರುದ್ಧ ತನಿಖೆ ನಡೆ​ಸು​ವಂತೆ ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರಿಗೆ ಹಿಂದೂ ಪರ ಕಾರ್ಯಕರ್ತ ಅನಿಲ್‌ ದೂರು ನೀಡಿದ್ದಾರೆ. ಮುಸ್ಕಾನ್‌ ಕುಟುಂಬ ಸದ್ಯ ವಿದೇಶ ಪ್ರವಾಸದಲ್ಲಿದ್ದು, ಅಲ್ಲಿ ಭೇಟಿಯಾದ ವ್ಯಕ್ತಿಗಳು, ಸಂಘಟನೆಗಳ ಕುರಿತು ತನಿಖೆ ನಡೆಸುವಂತೆ ಬೆಂಗಳೂರಿನಲ್ಲಿ ಆರಗ ಜ್ಞಾನೇಂದ್ರ ಭೇಟಿಯಾಗಿ ದೂರು ಸಲ್ಲಿಸಿದ ಹಿಂದೂ ಕಾರ್ಯಕರ್ತರು ಆಗ್ರಹಿಸಿ​ದ್ದಾ​ರೆ.

ಹಿಜಾಬ್‌ ಗದ್ದಲ ವೇಳೆ ‘ಅಲ್ಲಾ ಹು ಅಕ್ಬರ್‌’ ಘೋಷಣೆ ಕೂಗಿ ಸುದ್ದಿಯಾಗಿದ್ದ ಮುಸ್ಕಾನ್‌, ದೇಶಾದ್ಯಂತ ಚರ್ಚೆಗೆ ಕಾರ​ಣ​ರಾ​ಗಿ​ದ್ದ​ರು. ರಾಜ್ಯ, ಹೊರ ರಾಜ್ಯದ ಮುಸ್ಲಿಂ ಮುಖಂಡರಿಂದ ಮುಸ್ಕಾನ್‌ಗೆ ಪ್ರಶಂಸೆ ವ್ಯಕ್ತವಾಗಿತ್ತಲ್ಲದೆ, ಮಹಾರಾಷ್ಟ್ರ ಶಾಸಕರೊಬ್ಬರು ಐಫೋನ್‌ವೊಂದನ್ನು ಉಡುಗೊರೆಯಾಗಿಯೂ ನೀಡಿದ್ದರು.

ಪೊಲೀಸರಿಗೆ ಮಾಹಿತಿ ನೀಡದೆ ವಿದೇಶಕ್ಕೆ ಹಾರಿದ ಹಿಜಾಬ್ ಹುಡುಗಿ ಮುಸ್ಕಾನ್!

ಅಲ್ಲದೆ, ಅಲ್‌ಖೈದಾ ಉಗ್ರ ಸಂಘಟನೆ ಮುಖ್ಯಸ್ಥ ಅಲ್‌ ಜವಾಹಿರಿ ಕೂಡ ಮುಸ್ಕಾನ್‌ನನ್ನು ಹಾಡಿ ಹೊಗಳಿದ್ದಲ್ಲದೆ, ಆಕೆ ಮೇಲೆ ಕವನವನ್ನೂ ರಚಿಸಿದ್ದ. ಉಗ್ರನ ಹೊಗಳಿಕೆ ಬಳಿಕ ಮುಸ್ಕಾನ್‌ ಕುಟುಂಬ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿ ಮಂಡ್ಯ ಎಸ್ಪಿ ಎನ್‌.ಯತೀಶ್‌ ಅವರಿಗೆ ಅನಿಲ್‌ ದೂರು ನೀಡಿದ್ದರು. ಆ ದೂರಿನ ಕುರಿತು ಯಾವುದೇ ಕ್ರಮ ಕೈಗೊ​ಳ್ಳದ ಕಾರಣ ಇದೀಗ ಗೃಹಸಚಿವರನ್ನು ಭೇಟಿ​ಯಾಗಿ ದೂರು ಸಲ್ಲಿಸಿದ್ದಾರೆ.

ಮಂಡ್ಯದ ಮುಸ್ಕಾನ್‌ ಬಗ್ಗೆ ಹೊಗಳಿದ್ದ ಖೈದಾ ವಿಡಿಯೋ ತನಿಖೆ 
ಹಿಜಾಬ್‌ ಗಲಾಟೆ ವೇಳೆ ‘ಅಲ್ಲಾ ಹು ಅಕ್ಬರ್‌’ ಘೋಷಣೆ ಕೂಗಿದ್ದ ಮಂಡ್ಯದ ಯುವತಿ ಮಸ್ಕಾನ್‌ ಬಗ್ಗೆ ಜಗತ್ತಿನ ಕುಖ್ಯಾತ ಉಗ್ರ ಸಂಘಟನೆ ಅಲ್‌ಖೈದಾ ಮೆಚ್ಚುಗೆ ವ್ಯಕ್ತ​ಪ​ಡಿ​ಸಿದ ವಿಡಿ​ಯೋಗೆ ಸಂಬಂಧಿ​ಸಿ ತನಿಖೆಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನೆಲದ ಮತ್ತು ಕಾನೂನಿನ ವಿರುದ್ಧ ನಿರಂತರ ಷಡ್ಯಂತ್ರ ನಡೆದಿವೆ. ಈ ಬಗ್ಗೆ ತನಿಖೆಗೆ ಪೊಲೀಸರಿಗೆ ಸೂಚಿಸಿದ್ದೇನೆ, ವರದಿ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಅಲ್‌ಖೈದಾ ಹೇಳಿಕೆ ಹಿಂದೆ ಆರ್‌ಎಸ್‌ಎಸ್‌ ಕೈವಾಡವಿದೆ ಎಂಬ ಪ್ರತಿ​ಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಮುಖ್ಯ​ಮಂತ್ರಿ ಬೊಮ್ಮಾಯಿ ತೀಕ್ಷ$್ಣವಾಗಿ ಪ್ರತಿ​ಕ್ರಿ​ಯಿ​ಸಿ​ದ​ರು. ಅಲ್‌ಖೈದಾ ಹೇಳಿಕೆ ನೀಡಿದರೆ ಸಿದ್ದರಾಮಯ್ಯಗೆ ಯಾಕೆ ಗಲಿಬಿಲಿ? ಸಿದ್ದರಾಮಯ್ಯರದು ಆಧಾರವಿಲ್ಲದ, ಹೋಲಿಕೆಯಾಗದ ಹೇಳಿಕೆ ಎಂದು ಕುಟುಕಿದರು.

ಹಿಜಾಬ್ ವಿವಾದಕ್ಕೆ ಉಗ್ರ ಸಂಘಟನೆ ಬಹಿರಂಗ ಎಂಟ್ರಿ, ಮಂಡ್ಯದ ಮುಸ್ಕಾನ್ ಬೆಂಬಲಕ್ಕೆ ಅಲ್ ಖೈದಾ!

ಮುಸ್ಕಾನ್‌ ನಿವಾಸಕ್ಕೆ ರೋಷನ್‌ ಬೇಗ್‌ ಭೇಟಿ
ಕೇಸರಿ ಶಾಲು-ಹಿಜಾಬ್‌ ಸಮರದ ವೇಳೆ ಅಲ್ಲಾಹು ಅಕ್ಬರ್‌ ಎಂದು ಘೋಷಣೆ ಕೂಗಿದ ವಿದ್ಯಾರ್ಥಿನಿ ಮುಸ್ಕಾನ್‌ ಮನೆಗೆ ಶನಿವಾರ ಮಾಜಿ ಸಚಿವ ರೋಷನ್‌ ಬೇಗ್‌ ಭೇಟಿ ನೀಡಿದರು. ಮಂಡ್ಯದ ಗುತ್ತಲು ಬಡಾವಣೆಯಲ್ಲಿರುವ ಮುಸ್ಕಾನ್‌ ನಿವಾಸಕ್ಕೆ ಆಗಮಿಸಿದ ಬೇಗ್‌, ಮುಸ್ಕಾನ್‌ ಹಾಗೂ ಕುಟುಂಬದವರೊಂದಿಗೆ ಮಾತುಕತೆ ನಡೆಸಿದರು. ಈಗಾಗಲೇ ಹಲವು ಮುಸ್ಲಿಂ ಮುಖಂಡರು ಮುಸ್ಕಾನ್‌ ನಿವಾಸಕ್ಕೆ ಭೇಟಿ ಕೊಟ್ಟು ಉಡುಗೊರೆ, ಹಣ ನೀಡಿದ್ದಾರೆ.

ಮುಸ್ಕಾನ್‌ಗೆ ಮದನಿ 5 ಲಕ್ಷ, ಬಿಬಿಎಂಪಿ ಸದಸ್ಯ ಇಮ್ರಾನ್‌ 1 ಲಕ್ಷ!
ಬುರ್ಖಾ ಧರಿಸಿ ಕಾಲೇಜು ಪ್ರವೇಶಿಸುವ ವೇಳೆ ವಿದ್ಯಾರ್ಥಿಯನ್ನು ತಡೆದ ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳ ಗುಂಪಿನೊಡನೆ ದಿಟ್ಟವಾಗಿ ವರ್ತಿಸಿದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್‌ಗೆ ತಮಿಳುನಾಡು ಮೂಲದ ಮುಸ್ಲಿಂ ಸಂಘಟನೆ ಫಾತೀಮ ಶೇಖ್‌ ಪ್ರಶಸ್ತಿ ನೀಡಿದೆ. ತಮಿಳುನಾಡು ಮುಸ್ಲಿಂ ಮುನ್ನೇತ್ರ ಕಳಗಂ(ಟಿಎಂಎಂಕೆ) ಸಂಘಟನೆ ಈ ಪ್ರಶಸ್ತಿ ಘೋಷಿಸಿದೆ. ಈ ನಡುವೆ ದೆಹಲಿ ಮೂಲದ ಜಮಾಯಿತ್‌ ಉಲೇಮಾ ಇ ಹಿಂದ್‌ ಸಂಘಟನೆಯ ಅಧ್ಯಕ್ಷ ಮೌಲಾನಾ ಮಹಮೂದ್‌ ಮದನಿ ಫಾತಿಮಾಗೆ 5 ಲಕ್ಷ ರು. ಬಹುಮಾನ ಘೋಷಿಸಿದ್ದಾರೆ. ಇತ್ತ, ಬಿಬಿಎಂಪಿ ಸದಸ್ಯ ಇಮ್ರಾನ್‌ ಪಾಷಾ ಅವರು ಮುಸ್ಕಾನ್‌ ಮನೆಗೆ ಬುಧವಾರ ಭೇಟಿ ನೀಡಿ ಬಹುಮಾನದ ರೂಪದಲ್ಲಿ ಒಂದು ಲಕ್ಷ ರು. ಮೌಲ್ಯದ ಚೆಕ್‌ ನೀಡಿದ್ದಾರೆ.

click me!