ಮೇಕೆದಾಟು ಯೋಜನೆಗೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್ ಜನವರಿ 9 ರಿಂದ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ. ಈ ಕುರಿತಾಗಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಹೋಂ ಮಿನಿಸ್ಟರ್‌ಗೆ ಅನುಭವ ಇಲ್ಲ ಎಂದಿದ್ದಾರೆ.
ಬೆಂಗಳೂರು (ಡಿ. 30): ಮೇಕೆದಾಟು (Mekedatu) ಯೋಜನೆಗೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್ ಜನವರಿ 9 ರಿಂದ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ. ಈ ಕುರಿತಾಗಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹೋಂ ಮಿನಿಸ್ಟರ್‌ಗೆ ಅನುಭವ ಇಲ್ಲ. ರೋಡ್ ನಲ್ಲಿ ನಾನು ನಡೆಯೋದಕ್ಕೆ ಇವರ ಅನುಮತಿ ಬೇಕಾ, ಇನ್ನೂ ಹೋಂ ಮಿನಿಸ್ಟರ್ ಎಳಸು, ಅವರು ವಯಸ್ಸಲ್ಲಿ ದೊಡ್ಡವರಿರಬಹದು, ಆದರೆ ರಾಜಕೀಯದಲ್ಲಿ ಇನ್ನೂ ಎಳಸು ಅವರು. ಹೋರಾಟ ಮಾಡೋದಕ್ಕೆ ಇವರ ಅನುಮತಿ ಕೇಳಬೇಕಾ. ಅಶೋಕಣ್ಣನಿಗೆ ಬೆಂಗಳೂರಿನ ಬಗ್ಗೆ ಕಾಳಜಿ ಇದ್ರೆ ತಾನೇ, ಆಫೀಸರ್‌ನ ಕೂರಿಸಿಕೊಂಡು ಕೇಳಲಿ. ಸಿದ್ದರಾಮಯ್ಯ (Siddaramaiah) ಇದ್ದಾಗ, ಎಂಬಿ ಪಾಟೀಲ್ ಇದ್ದಾಗ ಡಿಪಿಆರ್ ಮಾಡಿ ಕಳಿಸಿದ್ದು, ಪರಿಸರ ಕ್ಲಿಯರೆನ್ಸ್ ಕೊಡಬೇಕಾಗಿದ್ದು ಕೇಂದ್ರ ಸರ್ಕಾರವೇ ಹೊರತು ಸಿದ್ದರಾಮಯ್ಯ ಅಲ್ಲ ಎಂದು ಡಿಕೆಶಿ ಗುಡುಗಿದ್ದಾರೆ.
ನನಗೆ ವೈಯಕ್ತಿಕ ಏನೂ ಇಲ್ಲ, ನನ್ನಲ್ಲಿ ಹೋರಾಟದ ಸಣ್ಣ ಗುಣ ಇದ್ದಿದ್ದಕ್ಕೆ ತಾನೇ ದೇವೇಗೌಡರ ಎದುರು ಅವತ್ತು ಚುನಾವಣೆಗೆ ನಿಲ್ಲಿಸಿದ್ರು. ಸೋತಿರಬಹುದು, ಆದರೆ ಅಂಥ ಹೋರಾಟಗಾರರ ಮುಂದೆ ನನ್ನ ನಿಲ್ಲಿಸಬೇಕು ಅಂದರೆ ನನ್ನ ಹೋರಾಟದ ಗುಣ ಕೂಡ ಕಾರಣ ಅಲ್ವಾ. ಹೊಸ ವರ್ಷ ರಾಜ್ಯದ ಜನತೆಗೆ ಆರೋಗ್ಯ ಶಕ್ತಿ ಮಾನಸಿಕವಾಗಿ ಎಲ್ಲ ಜನ ಕುಗ್ಗಿ ಹೋಗಿದ್ದಾರೆ. ಸಾಮಾಜಿಕ ಮಕ್ಕಳ ವಿದ್ಯಭ್ಯಾಸ ಬಹಳ ಎಫೆಕ್ಟ್ ಆಗಿದೆ. ಹೊಸ ಕಾಯಿಲೆ ಕೂಡ ದೂರ ಹೋಗಬೇಕು.ಏರ್‌ಪೋರ್ಟ್‌ನಿಂದ ಬಂದವರಿಗೆ ದೊಡ್ಡ ದಂಧೆ ನಡೆಯುತ್ತಿದೆ. ನೆಗಡಿ ಬಂದವರಿಗೆ ಪಾಸಿಟಿವ್ ಕೊಡ್ತಿದ್ದಾರೆ. ಸಿಎಂ ಈ ಬಗ್ಗೆ ಗಮನ ಹರಿಸಬೇಕು.ಹೊರಗಡೆಯಿಂದ ಇಲ್ಲಿ ಬಂದವರಿಗೆಲ್ಲ ಪಾಸಿಟಿವ್ ರಿಪೋರ್ಟ್ ಕೊಟ್ಟು ಮೂರು ಮೂರು ಸಾವಿರ ವಸೂಲಿ ಮಾಡ್ತಿದ್ದಾರೆ ಎಂದು ಹೇಳಿದರು.
undefined
Karnataka Politics: ನನ್ನ ವಿರುದ್ಧ ಬಿಜೆಪಿ, ಜೆಡಿಎಸ್ ಷಡ್ಯಂತ್ರ: ಡಿ.ಕೆ. ಶಿವಕುಮಾರ್
ಸಿಎಂ ಇದನ್ನು ನಿಲ್ಲಿಸಬೇಕು: ಒಂದು ದಿನ ಬ್ಯುಸಿನೆಸ್ ಏಟಾದರೆ ತಿಂಗಳುಗಟ್ಟಲೆ ರಿಕವರಿ ಬೇಕಾಗುತ್ತದೆ. ಉದ್ಯೋಗ ನೀಡುವವರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನೋಡಿಕೊಳ್ಳಬೇಕು. ನಮ್ಮ ಪಾದಯಾತ್ರೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ನಾಲ್ಕೈದು ಅಂಬ್ಯುಲೆನ್ಸ್ ಪಾದಯಾತ್ರೆಯಲ್ಲಿ ಜೊತೆಯಲ್ಲಿ ಇರುತ್ತದೆ. ಸಾವಿರಾರು ಎಳನೀರು ಕೊಡುವುದಕ್ಕೆ ಮಂಡ್ಯ ಮದ್ದೂರು ಜನ ರೆಡಿ ಇದ್ದಾರೆ. ನೂರು ಜನ ಬರ್ತಾರೋ ಐದು ನೂರು ಜನ ಬರ್ತಾರೋ ಐದುಸಾವಿರ ಜನ ಬರ್ತಾರೋ. ಎಲ್ಲರಿಗೂ ಕೂಡ ಆಹ್ವಾನ ಕೊಡ್ತಿದ್ದೇವೆ. ಯಾರಿಗೂ ಬಲವಂತ ಇಲ್ಲ ಎಂದು ಡಿಕೆಶಿ ತಿಳಿಸಿದರು.
Mekedatu Politics: ಹೈಜಾಕ್ ಮಾಡೋಕೆ ಮೇಕೆದಾಟು ಎಚ್‌ಡಿಕೆ ಯೋಜನೆಯಾ?: ಸಿದ್ದರಾಮಯ್ಯ
ಅಶೋಕಣ್ಣ ಮೇಕೆ, ಬನ್ನೂರು ಕುರಿ, ನಾಟಿಕೋಳಿ ಎಲ್ಲ ರುಚಿಬಾಳ ಇದೆ. ಮೇಕೆ ಮಾಂಸ ತಿನ್ನಿಸೋಕೆ ನಾವು ಪ್ರಯತ್ನ ಮಾಡ್ತಿಲ್ಲ. ಅಶೋಕಣ್ಣನಿಗೆ ಬೆಂಗಳೂರಿನ ಬಗ್ಗೆ ಕಾಳಜಿ ಇದ್ರೆ ತಾನೇ, ಕಾವೇರಿ ಶುದ್ದ ನೀರು ಕೊಡಬೇಕು ಅಂತ ನಾವು ಪ್ರಯತ್ನ ಮಾಡ್ತಿದ್ದೇವೆ. ಇಡೀ ದೇಶದಲ್ಲಿ 37% ಟ್ಯಾಕ್ಸ್ ಬೆಂಗಳೂರಿನವರು ಕಟ್ಟುತ್ತಿದ್ದಾರೆ ಎನ್ನೋದು ಅಶೋಕಣ್ಣನಿಗೆ ಗೊತ್ತಿಲ್ಲ. ನನಗೆ ನನ್ನ ಪಕ್ಷ ಬೆಳಿಬೇಕು, ನಮ್ಮ ಜನ ಬೆಳಿಬೇಕು. ಜ್ಞಾನೇಂದ್ರ ಏನು ಹೇಳ್ತಾರೆ, ಅಶೋಕಣ್ಣ ಏನು ಹೇಳ್ತಾರೆ ಎಲ್ಲವನ್ನೂ ಗಮನಿಸ್ತೀದ್ದೀವಿ. ರಥ ಯಾತ್ರೆ ಅಂತಾನಾದ್ರೂ ಹೇಳಲಿ, ಮತಯಾತ್ರೆ ಅಂತಾನಾದ್ರೂ ಹೇಳಲಿ ಎಂದು ಈ ವೇಳೆ ಶಿವಕುಮಾರ್ ತಿಳಿಸಿದರು.