ಮುಸ್ಲಿಂ ಮತಗಳನ್ನು ಪಡೆಯಲು ಸರ್ಕಾರ ಮತಾಂಧ ಶಕ್ತಿಗೆ ಕುಮ್ಮಕ್ಕು: ಪುತ್ತಿಲ ಕಿಡಿ

By Kannadaprabha News  |  First Published Oct 7, 2023, 1:24 PM IST

ರಾಗಿಗುಡ್ಡದಲ್ಲಿ ನಡೆದ ಗಲಭೆ ಪೂರ್ವನಿಯೋಜಿತ ಕೃತ್ಯವಾಗಿದೆ. ಇನ್ನು ತಡೆಯುವ ಬದಲಿಗೆ ಮುಸ್ಲಿಂ ಪುಷ್ಟೀಕರಣಕ್ಕೆ, ಮುಸ್ಲಿಂ ಮತಗಳನ್ನು ಓಲೈಸಲು ರಾಜ್ಯ ಸರ್ಕಾರ ಮತಾಂಧ ಶಕ್ತಿಗೆ ಕುಮ್ಮಕ್ಕು ಕೊಡುತ್ತಿದೆ ಎಂದು ಹಿಂದೂ ಮುಖಂಡ ಅರುಣ್‌ಕುಮಾರ್ ಪುತ್ತಿಲ ಹೇಳಿದರು.


 ಶಿವಮೊಗ್ಗ (ಅ.7) :  ರಾಗಿಗುಡ್ಡದಲ್ಲಿ ನಡೆದ ಗಲಭೆ ಪೂರ್ವನಿಯೋಜಿತ ಕೃತ್ಯವಾಗಿದೆ. ಇನ್ನು ತಡೆಯುವ ಬದಲಿಗೆ ಮುಸ್ಲಿಂ ಪುಷ್ಟೀಕರಣಕ್ಕೆ, ಮುಸ್ಲಿಂ ಮತಗಳನ್ನು ಓಲೈಸಲು ರಾಜ್ಯ ಸರ್ಕಾರ ಮತಾಂಧ ಶಕ್ತಿಗೆ ಕುಮ್ಮಕ್ಕು ಕೊಡುತ್ತಿದೆ ಎಂದು ಹಿಂದೂ ಮುಖಂಡ ಅರುಣ್‌ಕುಮಾರ್ ಪುತ್ತಿಲ ಹೇಳಿದರು.

ರಾಗಿಗುಡ್ಡದ ಗಲಭೆ ಹಿನ್ನೆಲೆ ರಾಗಿಗುಡ್ಡಕ್ಕೆಶುಕ್ರವಾರ ಭೇಟಿ ನೀಡಿ ಸಂತ್ರಸ್ತರನ್ನು ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದಲ್ಲಿ ಗಣೇಶೋತ್ಸವ ವಿಜೃಂಭಣೆಯಿಂದ ಮಾಡಲಾಗುತ್ತದೆ. ಇದರಿಂದ ಹಿಂದೂ ಸಮಾಜಕ್ಕೆ ದೊಡ್ಡ ಶಕ್ತಿ ಬರುತ್ತದೆ ಎಂಬ ಹೆದರಿಕೆಯಿಂದ ಈ ಘಟನೆ ನಡೆದಿವೆ. ರೋಹನ್ ಎನ್ನುವ ಯುವಕನ ಮನೆ, ಶಿಕ್ಷಕರೋರ್ವರ ಮನೆಗೆ ನುಗ್ಗಿದ ಮಸ್ಲಿಂ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ. ವಾಹನ ಜಖಂ ಆಗಿದೆ. ಘಟನೆ ಈಡಿ ನಾಗರೀಕ ಸಮುದಾಯ ತಲೆ ತಗ್ಗಿಸುವಂತಾಗಿದೆ. ಈ ರೀತಿಯ ಅನೇಕ ದಾಳಿ, ನೋವು ಅಪಮಾನದ ನಡುವೆ ಹಿಂದೂ ಸಮಾಜದ ರಕ್ಷಣೆ ಮಾಡಬೇಕಿದೆ ಎಂದರು.

Tap to resize

Latest Videos

ದಕ್ಷಿಣ ಕನ್ನಡಕ್ಕೆ ಪುತ್ತಿಲ್ಲ ಆಗ್ತಾರಾ ಬಿಜೆಪಿ ಅಭ್ಯರ್ಥಿ, ಟ್ರೆಂಡ್ ನೋಡಿದರೆ ಹಾಗನ್ಸುತ್ತೆ ಅಂತಾರೆ ನೆಟ್ಟಿಗರು!

ಶಿವಮೊಗ್ಗದ ರಾಗಿಗುಡ್ಡದಲ್ಲಿ ಮತಾಂಧ ಮುಸ್ಲಿಂ ಸಮುದಾಯದಿಂದ ಈ ಘಟನೆ ಆಗಿದೆ. ಘಟನೆಯಲ್ಲಿ ನೊಂದ ಹಿಂದೂ ಬಾಂಧವರಿಗೆ ಸಾಂತ್ವನ ಹೇಳಲು ಇಲ್ಲಿಗೆ ಆಗಮಿಸಿದ್ದೇನೆ. ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಭರವಸೆ ನೀಡಿದ್ದೇನೆ. ಶಾಂತಿ, ಸುವ್ಯವಸ್ಥೆ ನಡುವೆ ಬಹುಸಂಖ್ಯಾತರು ಬದುಕಲು ಕಷ್ಟ ಇದೆ. ಪೊಲೀಸರ ಮೇಲೆಯೂ ಹಲ್ಲೆ ನಡೆದಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

ಪೊಲೀಸರ ‌ಬಗ್ಗೆ ಗೌರವ ಇದೆ. ಆದರೆ, ಸರ್ಕಾರ ಪೊಲೀಸರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಇಲಾಖೆಗೆ ಪಾರದರ್ಶಕವಾಗಿ ಕೆಲಸ ಮಾಡಲು ಅವಕಾಶ ಕೊಡಬೇಕು. ಘಟನೆಯಿಂದ ಹಾನಿಯಾಗಿರುವ ಮನೆಗಳ ದುರಸ್ತಿಯ ಸಂಪೂರ್ಣ ಖರ್ಚು ಸರ್ಕಾರ ಭರಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿಗೆ ಮತ್ತೆ ಸೆಡ್ಡು ಹೊಡೆದ ಅರುಣ್ ಪುತ್ತಿಲ, ಕರಾವಳಿಯಲ್ಲಿ ತಣ್ಣಗಾಗದ ಬಂಡಾಯದ ಬೆಂಕಿ!

 

ಸರ್ಕಾರ ಇವತ್ತು ತಲ್ವಾರ್ ಹಿಡಿದು ಮೆರವಣಿಗೆಗೆ ಅವಕಾಶ ಕೊಡುತ್ತಾರೆಂದರೆ, ಮುಂದೆ ಮಾರಕಾಸ್ತ್ರ ಹಿಡಿದು ಹಿಂದೂ ಸಮಾಜದ ಮೇಲೆ, ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲು ಸಹಕಾರ ಕೊಡುತ್ತಾರೆ. ನಮ್ಮಲ್ಲಿಯೂ ತಲ್ವಾರ್, ಶಸ್ತ್ರಾಸ್ತ್ರ ಇವೆ. ಅಗತ್ಯ ಬಿದ್ದರೆ ಇದೇ ಶಸ್ತ್ರಾಸ್ತ್ರ ಮೂಲಕ ಪ್ರತಿಕ್ರಿಯೆ ಕೊಡಲು ಹಿಂದು ಸಮಾಜ ಸಿದ್ಧವಿದೆ ಎಂದು ಎಚ್ಚರಿಕೆ ನೀಡಿದ ಅವರು, ಹಿಂದುಗಳು ಆಯುಧ ಪೂಜೆಯಂದು ತಲ್ವಾರ್‌ಗಳಿಗೆ ಪೂಜೆ ಮಾಡಬೇಕು ಎಂದು ಕರೆ ನೀಡಿದರು.

click me!